For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿರುವ ಬ್ಯಾಂಕ್ ಖಾತೆ ವಿಧಗಳು ಯಾವವು?

|

ಬ್ಯಾಂಕಿಂಗ್ ಕ್ಷೇತ್ರ ಆಧುನಿಕ ಬದಲಾವಣೆಗಳಿಗೆ ಒಗ್ಗಿಕೊಂಡಿದ್ದು ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಖಾತೆಗಳನ್ನು ತೆರೆಯುತ್ತಿದೆ. ಬ್ಯಾಂಕ್ ನಿಂದ ಬ್ಯಾಂಕ್ ಗೆ ಖಾತೆಗಳ ಸ್ವರೂಪ ಬದಲಾಗಬಹುದು.

ಪ್ರತಿಯೊಬ್ಬನಿಗೂ ಬ್ಯಾಂಕ್ ಖಾತೆ ಅಗತ್ಯವಾಗಿದ್ದು ಇಲ್ಲಿ ಕೆಲವು ಸರಳ ಮತ್ತು ಜನಪ್ರಿಯ ಬ್ಯಾಂಕ್ ಖಾತೆಗಳ ಪಟ್ಟಿ ನೀಡಲಾಗಿದೆ. ಎಲ್ಲರೂ ಬ್ಯಾಂಕಿಂಗ್ ಖಾತೆಗಳ ಬಗ್ಗೆ ಪ್ರಾಥಮಿಕ ಜ್ಞಾನವನ್ನು ಹೊಂದಿರಬೇಕಾಗುತ್ತದೆ.[ನಿಮಗೆ ಗೊತ್ತಿರದ ತೆರಿಗೆ ವಿನಾಯಿತಿ ತಂತ್ರಗಳು]

ಭಾರತದಲ್ಲಿರುವ ಬ್ಯಾಂಕ್ ಖಾತೆ ವಿಧಗಳು ಯಾವವು?

ಹಿರಿಯ ನಾಗರಿಕರ ಖಾತೆ
ಹೆಸರೆ ಸೂಚಿಸುವಂತೆ ಈ ಖಾತೆ 60 ವರ್ಷ ಮೇಲ್ಪಟ್ಟವರಿಗೆ ಮೀಸಲಾಗಿರುತ್ತದೆ. ಈ ಖಾತೆಗೆ ವಿಧಿಸುವ ಶುಲ್ಕ ಕಡಿಮೆಯಾಗಿದ್ದು ಸರ್ಕಾರದ ವಿವಿಧ ಸೌಲಭ್ಯಗಳನ್ನು ಕೊಡಮಾಡಲಾಗುತ್ತದೆ.

ಮಹಿಳಾ ಉಳಿತಾಯ ಖಾತೆ
ಕೆಲವು ಬ್ಯಾಂಕ್ ಗಳು ಮಹಿಳೆಯರಿಗೆಂದೇ ವಿಶೇಷ ಖಾತೆಗಳನ್ನು ತೆರೆದಿವೆ. ಮಹಿಳೆಯರ ಬಂಡವಾಳ ಹೂಡಿಕೆ, ಜೀವನ ಪದ್ಧತಿ, ಖರೀದಿ ಶಕ್ತಿ ಎಲ್ಲವನ್ನೂ ಆಧಾರವಾಗಿಟ್ಟುಕೊಂಡು ಖಾತೆ ನಿರ್ವಹಿಸಲಾಗುತ್ತದೆ. ಅಲ್ಲದೇ ವಿಶೇಷ ಕ್ಯಾಶ್ ಬ್ಯಾಕ್ ಆಫರ್ ಸಹ ನೀಡಲಾಗುತ್ತದೆ.

ಸಾಮಾನ್ಯ ಉಳಿತಾಯ ಖಾತೆ
ಈ ಖಾತೆಯನ್ನು ಯಾರೂ ಬೇಕಾದರೂ ಸುಲಭವಾಗಿ ತೆರೆಯಬಹುದು. ಬ್ಯಾಂಕ್ ಶುಲ್ಕದೊಂದಿಗೆ ನಿರ್ದಿಷ್ಟ ಪ್ರಮಾಣದ ಹಣವನ್ನು ಡಿಪಾಸಿಟ್ ಮಾಡಿ ಖಾತೆಯನ್ನು ಮುನ್ನಡೆಸಬೇಕಾಗುತ್ತದೆ. ಈ ಖಾತೆ ಪಾಸ್ ಬುಕ್, ನಟ್ ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್, ಚೆಕ್ ಬುಕ್ ಡೆಬಿಟ್ ಕಾರ್ಡ್ ಸೌಲಭ್ಯ ಒಳಗೊಂಡಿರುತ್ತದೆ.

ನೋ-ಫ್ರಿಲ್ ಉಳಿತಾಯ ಖಾತೆ
ಈ ಖಾತೆ ತೆರೆದವರು ಯಾವುದೇ ರೀತಿಯ ಡಿಪಾಸಿಟ್ ಹಣ ಇಡಬೇಕಾಗಿಲ್ಲ. ಕೆಲವೊಂದು ಬ್ಯಾಂಕ್ ಗಳು ಅತಿ ಕಡಿಮೆ ಬ್ಯಾಲೆನ್ಸ್ ಇಡಲು ತಿಳಿಸಿರುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನದಂತೆ ಈ ಖಾತೆ ಚಾಲ್ತಿಗೆ ಬಂದಿದೆ. ರಾಷ್ಟ್ರದ ಎಲ್ಲ ನಾಗರಿಕರಿಗೆ ಬ್ಯಾಂಕಿಂಗ್ ಸೌಲಭ್ಯ ನೀಡಲು ಇಂಥ ಖಾತೆ ತೆರೆಯುವಂತೆ ಆರ್ ಬಿಐ ಸ್ಪಷ್ಟ ನಿರ್ದೇಶವನ ನೀಡಿದೆ.

ಸ್ಟುಡೆಂಟ್ ಖಾತೆ
ಅತಿ ಕಡಿಮೆ ಡಿಪಾಸಿಟ್ ಇಟ್ಟುಕೊಂಡು ವಿದ್ಯಾರ್ಥಿ ಖಾತೆ ತೆರೆದು ಕೊಡಲಾಗುತ್ತದೆ. ಆದರೆ ಕೆಲವೊಂದು ಬ್ಯಾಂಕ್ ಗಳು ಮಾತ್ರ ಇಂಥ ಖಾತೆ ತೆರೆಯುವ ಪರಿಪಾಠ ಬೆಳೆಸಿಕೊಂಡು ಬಂದಿವೆ.

ಎನ್ ಆರ್ ಐ ಗೆ ಸಂಬಂಧಿಸಿದ ಖಾತೆಗಳು
ಭಾರತದಲ್ಲಿ ವಾಸವಿಲ್ಲದವರಿಗೆ ಕೊಡಮಾಡುವ ಖಾತೆಗಳಲ್ಲೂ ಅನೇಕ ವಿಧಗಳಿವೆ
ಎನ್ ಆರ್ ಇ ಸೆವಿಂಗ್ಸ್
ಭಾಋತದ ಕರೆನ್ಸಿ ಅಂದರೆ ರೂಪಾಯಿ ಮೂಲಕ ಮಾತ್ರ ಈ ಖಾತೆ ಚಲಾವಣೆ ಸಾಧ್ಯ. ಹಣ ಹೂಡಿಕೆ ಮತ್ತು ಚಲಾವಣೆ ರೂಪಾಯಿ ಮೂಲಕವೇ ನಡೆಯಬೇಕು. ಭಾರತ ಮೂಲದ ಎನ್ ಆರ್ ಐ ಖಾತೆಗೆ ಮುಖ್ಯ ವಾರಸುದಾರನಾಗಿರುತ್ತಾನೆ.

ಎನ್ ಆರ್ ಒ ಖಾತೆ
ಇಲ್ಲಿ ಎರಡೂ ದೇಶದ ಕರೆನ್ಸಿ ಚಲಾವಣೆ ಸಾಧ್ಯವಿದೆ. ನೀವು ಯಾವ ಖಾತೆಯಿಂದ ಬೇಕಾದರೂ ಎಬ್ ಆರ್ಒ ಅಕೌಂಟಿಗೆ ಹಣ ಹಾಕಬಹುದು. ಇಲ್ಲಿ ಅಡೆತಡೆಗಳು ಎದುರಾಗಲ್ಲ. ಕರೆಂಟ್, ಉಳಿತಾಯ, ಫಿಕ್ಸಡ್ ಅಕೌಂಟ್ ಗಳನ್ನು ಈ ಖಾತೆಯ ಅಡಿ ನೀಡಲಾಗುತ್ತದೆ.(ಗುಡ್ ರಿಟರ್ನ್ಸ್. ಇನ್)

English summary

What are Different Types of Bank Accounts?

With the advancement in banking technology, many banks are offering tailor made products to suit individual needs. While accounts may differ from bank to bank their purpose remain the same.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X