For Quick Alerts
ALLOW NOTIFICATIONS  
For Daily Alerts

ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ನಡುವಿನ ವ್ಯತ್ಯಾಸವೇನು?

|

ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಎರಡನ್ನೂ ಸಾಮಾನ್ಯವಾಗಿ ಎಲ್ಲರೂ ಬಳಸುತ್ತಿದ್ದಾರೆ. ಶಾಪಿಂಗ್ ಮತ್ತು ಹಣ ಡ್ರಾ ಮಾಡಲು ಇವುಗಳನ್ನು ನೆಚ್ಚಿಕೊಂಡು ವರ್ಷಗಳೇ ಕಳೆದಿವೆ. ಹಾಗೆಯೇ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ನಡುವಿನ ಮೂಲಭೂತ ವ್ಯತ್ಯಾಸ ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.

ಡೆಬಿಟ್ ಕಾರ್ಡ್
ನಿಮ್ಮ ಖಾತೆಯಲ್ಲಿರುವ ಹಣದ ಬಳಕೆಗೆ ಅವಕಾಶ ನೀಡುವ ಕಾರ್ಡೇ ಡೆಬಿಟ್ ಕಾರ್ಡ್ ಎಂದು ಹೇಳಬಹುದು. ನಿಮ್ಮ ಬ್ಯಾಂಕ್ ಖಾತೆಯಲ್ಲಿರುವುದಕ್ಕಿಂತ ಹೆಚ್ಚಿನ ಹಣ ಬಳಕೆಗೆ ಇಲ್ಲಿ ಅವಕಾಶ ಇರುವುದಿಲ್ಲ.[ಅಂಚೆ ಇಲಾಖೆ ನೀಡುವ ಪ್ರಮುಖ 7 ವಿಮಾ ಯೋಜನೆಗಳು]

ಈ ಹಣ ಬಳಕೆಗೆ ಯಾವುದೇ ಬಡ್ಡಿ ತಗಲುವುದಿಲ್ಲ. ಪ್ರತಿ ತಿಂಗಳು ನಿಮ್ಮ ಡೆಬಿಟ್ ಕಾರ್ಡ್ ಹಣದ ರವಾನೆ ವಿವರವನ್ನು ಬ್ಯಾಂಕ್ ನಿಂದ ಪಡೆದುಕೊಳ್ಳುತ್ತೀರಿ. ಎಟಿಎಂ ಬಳಕೆಯ ಮಿತಿ ಮೀರಿದರೆ ನಿಗದಿತ ಶುಲ್ಕವನ್ನು ಭರಿಸಬೇಕಾಗುತ್ತದೆ.

ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ನಡುವಿನ ವ್ಯತ್ಯಾಸವೇನು?

ಕ್ರೆಡಿಟ್ ಕಾರ್ಡ್
ಇದೊಂದು ರೀತಿಯ ಸಾಲವೆಂದೇ ಹೇಳಬಹುದು. ನಿರ್ದಿಷ್ಟ ಪ್ರಮಾಣದ ಹಣವನ್ನು ನಿಮ್ಮ ಕ್ರೆಡಿಟ್ ಕಾರ್ಡ್ ಗೆ ನೀಡಲಾಗಿರುತ್ತದೆ. ನಿಮ್ಮ ಬಳಿ ಹಣವಿಲ್ಲದಿದ್ದರೂ ಇದನ್ನು ಬಳಸಿ ಅಗತ್ಯ ವಸ್ತು ಖರೀದಿ ಮಾಡಬಹುದು. ಆದರೆ ನಿಗದಿತ ಅವಧಿಯೊಳಗೆ ಸಂಬಂಧಿಸಿದ ಬ್ಯಾಂಕ್ ಗೆ ಮರುಪಾವತಿ ಮಾಡಬೇಕಾಗುತ್ತದೆ.

ವರ್ಷಕ್ಕೊಮ್ಮೆ ಇದಕ್ಕೆ ಸಂಬಂಧಿಸಿದ ಶುಲ್ಕವನ್ನು ಬ್ಯಾಂಕ್ ನವರು ನಿಮ್ಮ ಖಾತೆಯಿಂದಲೇ ಮುರಿದುಕೊಳ್ಳುತ್ತಾರೆ. ಬೇಜವಾಬ್ದಾರಿಯಿಂದ ಹಣ ಮರುಪಾವತಿ ವಿಳಂಬ ಮಾಡಿದರೆ ಹೆಚ್ಚಿನ ಬಡ್ಡಿ ತೆರಬೇಕಾಗುತ್ತದೆ.

ಪ್ರತಿ ತಿಂಗಳಿ ನಿಮ್ಮ ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿದ ಟ್ರಾನ್ಸಾಕ್ಷನ್ ಮಾಹಿತಿ ಪಡೆದುಕೊಳ್ಳಬಹುದು. ಒಟ್ಟಿನಲ್ಲಿ ಕಿಸೆಯಲ್ಲಿ ದುಡ್ಡಿಲ್ಲದಿದ್ದರೂ ಖರೀದಿ ಮಾಡುವ ಅವಕಾಶವನ್ನು ಈ ಕಾರ್ಡ್ ಒದಗಿಸುತ್ತದೆ.[ಕಳ್ಳತನ ವಿಮೆಗೆ ಒಳಪಡುವ ವಸ್ತುಗಳು ಯಾವವು?]

ಯಾವಾಗ ಬಳಕೆ ಮಾಡುವುದು ಉತ್ತಮ?
ಸಾಧ್ಯವಾದಷ್ಟು ಡೆಬಿಟ್ ಕಾರ್ಡ್ ಬಳಕೆ ಮಾ೨ಡುವುದು ಉತ್ತಮ . ಯಾಕೆಂದರೆ ಇದು ನಿಮ್ಮ ಹಣಕಾಸು ಸ್ಥಿತಿಗತಿಯನ್ನು ತಿಳಿಸುತ್ತದೆ. ಖಾತೆಯಲ್ಲಿ ಎಷ್ಟು ಹಣವಿದೆ? ಎಷ್ಟು ಖರ್ಚು ಮಾಡಬಹುದು ಎಂಬದನ್ನು ಮನವರಿಕೆ ಮಾಡಿ ನಿಮ್ಮನ್ನು ಜಾಗೃತರನ್ನಾಗಿರಿಸುತ್ತದೆ.

ಆದರೆ ಕ್ರೆಡಿಟ್ ಕಾರ್ಡ್ ಗೆ ನೀಡುವ ಆಫರ್ ಗಳನ್ನು ಬಳಸಿಕೊಂಡು ಕಡಿಮೆ ಬೆಲೆಯಲ್ಲಿ ನಿಮಗಿಷ್ಟವಾದ ವಸ್ತು ಖರೀದಿ ಮಾಡಬಹುದು. ಡಿಸ್ಕೌಂಟ್ ಯೋಜನೆಗಳನ್ನು, ಹಬ್ಬದ ವಿಶೆಷ ಆಫರ್ ಗಳನ್ನು ನಿಮ್ಮದಾಗಿಸಿಕೊಳ್ಳಬಹುದು.

ಒಟ್ಟಿನಲ್ಲಿ ನೀವು ಯಾವುದೇ ಕಾರ್ಡ್ ಹೊಂದಿದ್ದರೂ ಅವುಗಳನ್ನು ಯಾವ ರೀತಿ ಸದ್ಬಳಕೆ ಮಾಡಿಕೊಳ್ಳುತ್ತೀರಿ ಎಂಬುದರ ಮೇಲೆ ಹಣಕಾಸು ಸಮತೋಲನನ ಕಾಯ್ದುಕೊಂಡು ಹೋಗಬಹುದು(ಗುಡ್ ರಿಟರ್ನ್ಸ್. ಇನ್)

English summary

What is the Difference Between a Debit Card and Credit Card?

On daily basis we use credit and debit cards to make payments, shopping withdrawal of money. The main feature of these cards is to access money and make payments when needed. Let us understand the basic difference between debit and credit cards.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X