For Quick Alerts
ALLOW NOTIFICATIONS  
For Daily Alerts

ಎಟಿಎಂ ಮೂಲಕ ಹಣ ಡಿಪಾಸಿಟ್ ಮಾಡೋದು ಹೇಗೆ?

|

ಯಂತ್ರಗಳ ಮೂಲಕ ಹಣವನ್ನು ಡಿಪಾಸಿಟ್ ಮಾಡುವ ವ್ಯವಸ್ಥೆ ಬಂದು ಬಹಳ ದಿನಗಳೇ ಕಳೆದಿವೆ. ಎಟಿಎಂ ಯಂತ್ರದ ಮೂಲಕ ಹಣ ಡಿಪಾಸಿಟ್ ಮಾಡುವ ತಂತ್ರವನ್ನು ಪ್ರತಿಯೊಬ್ಬರು ತಿಳಿದುಕೊಂಡಿರಬೇಕಾಗುತ್ತದೆ.

ಈ ಕ್ರಮ ಅನುಸರಿಸುವುದರಿಂದ ಬ್ಯಾಂಕ್ ನ ಕಚೇರಿಗೆ ತೆರಳಿ ಸರತಿ ಸಾಲಿನಲ್ಲಿ ನಿಂತು ಸಮಯ ವ್ಯರ್ಥ ಮಾಡುವುದರಿಂದ ಮುಕ್ತಿ ಕಾಣಲು ಸಾಧ್ಯವಿದೆ. ಒಂದೇ ಸಾರಿಗೆ 49,900 ರೂ. ಡಿಪಾಸಿಟ್ ಮಾಡಲು ಅವಕಾಶವಿದೆ.[ಆನುವಂಶಿಕ ಆಸ್ತಿ ಪಡೆವ ಮುನ್ನ ಏಳು ಹೆಜ್ಜೆಗಳು]

ಎಟಿಎಂ ಮೂಲಕ ಹಣ ಡಿಪಾಸಿಟ್ ಮಾಡೋದು ಹೇಗೆ?

200 ಕ್ಕೂ ಅಧಿಕ ನೋಟುಗಳನ್ನು ಒಂದೇ ಬಾರಿಗೆ ತಂತ್ರಕ್ಕೆ ತುಂಬಹುದು. ಸಾವಿರ, ಐದು ನೂರು ಮತ್ತು ನೂರು ರೂ. ಮುಖಬೆಲೆಯ ನೋಟುಗಳನ್ನು ಯಂತ್ರದಲ್ಲಿ ಡಿಪಾಸಿಟ್ ಮಾಡಬಹುದು.

ಸಾಮಾನ್ಯವಾಗಿ ಎಲ್ಲ ಬಗೆಯ ಯಂತ್ರಗಳು ಒಂದೇ ಕಾರ್ಯತಂತ್ರದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತದೆ. ಎಸ್ ಬಿಐ ಬ್ಯಾಂಕ್ ಎಟಿಎಂನ ಉದಾಹರಣೆಯೊಂದಿಗೆ ವಿವರಿಸಿದರೆ ಮತ್ತಷ್ಟು ಸರಳವಾಗಿ ಅರ್ಥವಾಗುವುದು.[ಆದಾಯ ತೆರಿಗೆ ರಿಫಂಡ್ ಚೆಕ್ ಹಿಂದಕ್ಕೆ ಪಡೆಯುವುದು ಹೇಗೆ?]

ಎಸ್ ಬಿಐ ಎಟಿಎಂ ಯಂತ್ರದಲ್ಲಿ ಹಣ ಡಿಪಾಸಿಟ್ ಹೇಗೆ?
1. ನಿಮ್ಮ ಕಾರ್ಡ್ ಸೈಪ್ ಮಾಡಿ
2. ಭಾಷೆ ಆಯ್ಕೆ ಮಾಡಿಕೊಳ್ಳಿ
3. ಪಿನ್ ಎಂಟರ್ ಮಾಡಿ
4. ಡಿಪಾಸಿಟ್ ಐಕಾನ್ ಆಯ್ಕೆ ಪಡೆದುಕೊಳ್ಳಿ ಮತ್ತು ಆಧಾರಲ್ಲಿ ಕ್ಯಾಶ್ ಡಿಪಾಸಿಟ್ ಆಯ್ಕೆ ಮಾಡಿಕೊಳ್ಳಿ
5. ಕನ್ ಫರ್ಮ್ ಆಯ್ಕೆ ಮೇಲೆ ಕ್ಲಿಕ್ ಮಾಡಿ
6. ಯಾವ ಬಗೆಯ ಖಾತೆ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ(ಸೇವಿಂಗ್ಸ್ ಅಥವಾ ಕರೆಂಟ್)
7. ಎಟಿಎಂ ಮಶಿನ್ ಲ್ಲಿ ಹಣ ಇಡಿ
8. ಎಂಟರ್ ಬಟನ್ ಒತ್ತಿ
9. ನೀವು ಹಾಕಿರುವ ಹಣವನ್ನು ಯಂತ್ರ ಎಣಿಕೆ ಮಾಡುವುದು
10. ನೀವು ಹಾಕಿದ ಹಣದ ಒಟ್ಟು ಮುಖಬೆಲೆಯನ್ನು ಯಂತ್ರ ತೋರಿಸುತ್ತದೆ.
11. ಒಂದು ವೇಳೆ ನೀವು ಇನ್ನು ಹೆಚ್ಚಿಗೆ ಹಣ ಡಿಪಾಸಿಟ್ ಮಾಡಲು ಬಯಸುವುದಾದರೆ ಆಡ್ ಮೋರ್ ಆಯ್ಕೆ ನಮೂದಿಸಿಕೊಳ್ಳಿ
12. ಮತ್ತೆ ಕ್ಯಾಶ್ ಪ್ಲೇಸ್ ಮಾಡಿ.
13. ಮತ್ತೆ ಕನ್ ಫರ್ಮ್ ಬಟನ್ ಒತ್ತಿ

ಕ್ಯಾಶ್ ಡಿಪಾಸಿಟ್ ಮಾಡಲು ನೀವು ಯಂತ್ರ ಬಳಕೆ ಮಾಡುತ್ತಿದ್ದರೆ ಆಗಾಗ ಪಿನ್ ಬದಲಾವಣೆ ಮಾಡುತ್ತಿರಬೇಕು. ಅಲ್ಲದೇ ನಿಮ್ಮ ಖಾತೆಯ ಬ್ಯಾಲೆನ್ಸ್ ಚೆಕ್ ಮಾಡುತ್ತಿರುವುದು ಮುಖ್ಯ. ಮಿನಿ ಸ್ಟೇಟ್ ಮೆಂಟ್ ಮೂಲಕ ಖಾತೆಯ ಸಮಗ್ರ ಮಾಹಿತಿ ಪಡೆದುಕೊಳ್ಳಬಹುದು.

ನಕಲಿ ನೋಟುಗಳನ್ನು ಯಂತ್ರ ತಿರಸ್ಕಾರ ಮಾಡುತ್ತದೆ. ಡ್ಯಾಮೇಜ್ ಆದ ಅಥವಾ ಚಲಾವಣೆಗೆ ಅಯೋಗ್ಯವಾದ ನೋಟುಗಳನ್ನು ಯಂತ್ರ ಸ್ವೀಕರಿಸುವುದಿಲ್ಲ.

ಯಂತ್ರದ ಮೂಲಕಹಣ ಡಿಪಾಸಿಟ್ ಮಾಡಿದರೆ ಲಾಭವೇನು?
ಎಟಿಎಂ ಯಂತ್ರದ ಮೂಲಕ ಹಣ ಡಿಪಾಸಿಟ್ ಮಾಡಲು ಅನೇಕ ಕಾರಣಗಳಿರುತ್ತವೆ. ಸಮಯದ ಉಳಿತಾಯ ಬಹುಮುಖ್ಯ ಲಾಭ. ಬ್ಯಾಂಕ್ ನ ಶಾಖೆ ಹುಡುಕುತ್ತ, ಗಲಾಟೆಯಲ್ಲಿ ಸಾಲಲ್ಲಿ ನಿಂತು ಹಣ ಹಾಕುವುದರಿಂದ ಮುಕ್ತಿಕಾಣಬಹುದು.

ನಿಮ್ಮ ಹಣ ಡಿಪಾಸಿಟ್ ಆದ ಮಾಹಿತಿನ ಕೂಡಲೇ ನಿಮ್ಮ ಮೊಬೈಲ್ ಗೆ ಬರುತ್ತದೆ. ಇದೊಂದು ಅತ್ಯಂತ ಸುರಕ್ಷಿತ ಮಾರ್ಗ ಎಂದೇ ಗುರುತಿಸಿಕೊಂಡಿದೆ. (ಗುಡ್ ರಿಟರ್ನ್ಸ್.ಇನ್)

English summary

How To Deposit Cash In A Bank ATM?

Machines where we can deposit cash are called as Cash Deposit Machines or just like Automated Teller Machines which helps to deposit cash directly into the machine without much hassle.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X