For Quick Alerts
ALLOW NOTIFICATIONS  
For Daily Alerts

ಸ್ವಿಸ್ ಬ್ಯಾಂಕ್ ನಲ್ಲಿಯೇ ಹಣ ಇಡಲು ಕಾರಣವೇನು?

|

ಸ್ವಿಸ್ ಬ್ಯಾಂಕ್ ನಲ್ಲಿ ಹಣ ಇಡಲಾಗಿದೆ. ರಾಜಕಾರಣಿಗಳು ದುಡ್ಡು ಇಟ್ಟಿದ್ದಾರೆ. ಭಾರತದ ದುಡ್ಡು ಸ್ವಿಸ್ ಬ್ಯಾಂಕ್ ನಲ್ಲಿ ಇದೆ,,,, ಎಂಬ ಈ ಬಗೆಯ ಅನೇಕ ದೂರುಗಳನ್ನು ಪ್ರತಿದಿನ ಕೇಳುತ್ತಿರುತ್ತೇವೆ. ಈ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಯೂ ನಡೆಯುತ್ತಿರುತ್ತದೆ.

ಹಾಗಾದರೆ ಅಪಾರ ಪ್ರಮಾಣದ ಹಣವನ್ನು ಸ್ವಿಸ್ ಬ್ಯಾಂಕ್ ನಲ್ಲಿಯೇ ಯಾಕೆ ಇಡಬೇಕು? ಅಲ್ಲಿ ಸಿಗುವ ಭದ್ರತೆ ಎಂಥಹದು? ಹೊಸ ಖಾತೆ ತೆರೆಯಲು ಏನು ಮಾಡಬೇಕು? ಎಂಬ ವಿಚಾರಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಲು ಹೊಗುವುದಿಲ್ಲ. ಸ್ವಿಸ್ ಬ್ಯಾಂಕ್ ಖಾತೆಯ ಬಗ್ಗೆ ಈ 6 ವಿಚಾರಗಳನ್ನು ತಿಳಿದುಕೊಂಡಿರಬೇಕಾಗುತ್ತದೆ.[ಸರ್ಕಾರಿ-ಖಾಸಗಿ ಬ್ಯಾಂಕ್ ಗಳ ನಡುವಿನ ವ್ಯತ್ಯಾಸವೇನು?]

ಸ್ವಿಸ್ ಬ್ಯಾಂಕ್ ನಲ್ಲಿಯೇ ಹಣ ಇಡಲು ಕಾರಣವೇನು?

* ಯಾರು ಸ್ವಿಸ್ ಬ್ಯಾಂಕ್ ಖಾತೆ ತೆರೆಯಬಹುದು?
18 ವರ್ಷ ತುಂಬಿದ ವ್ಯಕ್ತಿಗಳು ಖಾತೆ ತೆರೆಯಲು ಅರ್ಹರಾಗಿರುತ್ತಾರೆ. ನಿಮ್ಮ ಅರ್ಜಿಯಲ್ಲಿ ಅನುಮಾನಗಳಿದ್ದರೆ ಬ್ಯಾಂಕ್ ಅರ್ಜಿ ತಿರಸ್ಕಾರ ಮಾಡಬಹುದು. ವ್ಯಕ್ತಿಗಳು ತಮ್ಮ ಆದಾಯದ ಮೂಲವನ್ನು ಬಹಿರಂಗ ಮಾಡಲೇಬೇಕು ಎಂದು ಬ್ಯಾಂಕ್ ಹೇಳುವುದಿಲ್ಲ.[ಸ್ಯಾಲರಿ ಅಕೌಂಟ್-ಉಳಿತಾಯ ಖಾತೆ ನಡುವಿನ ವ್ಯತ್ಯಾಸವೇನು?]

* ಕಾಗದ ಪತ್ರಗಳು
ಇದು ಸಾಮಾನ್ಯ ಬ್ಯಾಂಕ್ ನಲ್ಲಿ ಖಾತೆ ತೆರೆದಂತೆಯೇ. ವಿಶೇಷ ಕಾಗದ ಪತ್ರಗಳನ್ನೇನೂ ಬ್ಯಾಂಕ್ ಕೇಳುವುದಿಲ್ಲ. ಕೆಲವೊಂದು ಸಂದರ್ಭದಲ್ಲಿ ನಿಮ್ಮ ಎಲ್ಲ ಅಸಲಿ ದಾಖಲೆಗಳನ್ನು ಮತ್ತು ಪಾಸ್ ಪೋರ್ಟ್ ಸಹ ನೀಡಬೇಕಾಗುತ್ತದೆ.

* ಆನ್ ಲೈನ್ ಮೂಲಕ ಖಾತೆ ತೆರೆಯಲು ಅವಕಾಶವಿಲ್ಲ
ಉಳಿದ ಬ್ಯಾಂಕ್ ಗಳಂತೆ ದಾಖಲೆ ನೀಡಿ ಆನ್ ಲೈನ್ ಮೂಲಕ ಖಾತೆ ತೆರೆಯಲು ಇಲ್ಲಿ ಅವಕಾಶವಿಲ್ಲ. ಕೆಲವೊಂದು ಕಡ್ಡಾಯ ಕ್ರಮಗಳಿಗೆ ನೀವು ಒಳಪಡಬೇಕಾಗಿದ್ದು ಖುದ್ದಾಗಿ ಹಾಜರಾಗಬೇಕು.[ಫಿಕ್ಸೆಡ್ ಡಿಪಾಸಿಟ್ ಕಾಲಾವಧಿ ಬಗ್ಗೆ ನಿಮಗೆಷ್ಟು ಗೊತ್ತು?]

* ಭದ್ರತೆ ವ್ಯಾಪ್ತಿ ಎಷ್ಟು?
ವಿಶ್ಚದಲ್ಲಿಯೇ ಅತಿ ಹೆಚ್ಚಿನ ಭದ್ರತೆ ನೀಡುವ ಬ್ಯಾಂಕ್ ಎಂದು ಸ್ವಿಸ್‌ ಬ್ಯಾಂಕ್ ನ್ನು ಕರೆಯಲಾಗುತ್ತದೆ. ತಮ್ಮ ಗ್ರಾಹಕರ ವಿವರವನ್ನು ಬ್ಯಾಂಕ್ ಎಂದಿಗೂ ಬಿಟ್ಟುಕೊಟ್ಟಿಲ್ಲ. ಹಾಗಂದ ಮಾತ್ರಕ್ಕೆ ಬ್ಯಾಂಕ್ ಲೂಟುಕೋರರ ಹಣ ಸಂಗ್ರಹ ತಾಣ ಎಂದು ತಿಳಿದುಕೊಳ್ಳಬಾರದು.[ಆಪತ್ಕಾಲದಲ್ಲಿ ಪಡೆಯಬಹುದಾದ ಸಾಲಗಳು ಯಾವವು?]

* ನಂಬರ್ ಆಧಾರದಲ್ಲಿ ಖಾತೆ
ಸ್ವಿಸ್ ಬ್ಯಾಂಕ್ ನಲ್ಲಿ ನಿಮ್ಮ ಹೆಸರಿನ ಆಧಾರದಲ್ಲಿ ಖಾತೆ ತೆರೆಯಲು ಅವಕಾಶವಿಲ್ಲ. ನಿಮ್ಮ ಖಾತೆಗೆ ನಿರ್ದಿಷ್ಟ ಸಂಖ್ಯೆಯನ್ನು ನೀಡಲಾಗುತ್ತದೆ. ನಿಮ್ಮ ಎಲ್ಲ ಹಣಕಾಸಿನ ವ್ಯವಹಾರಗಳನ್ನು ಈ ನಂಬರ್ ಆಧಾರದಲ್ಲಿಯೇ ನಿಭಾಯಿಸಬೇಕಾಗಯತ್ತದೆ.

* ಖಾತೆ ಕ್ಲೋಸ್ ಮಾಡೋದು ಹೇಗೆ?
ಯಾವಾಗ ಬೇಕಿದ್ದರೂ ಯಾವುದೇ ವಿಶೇಷ ಶುಲ್ಕ ನೀಡದೆ ಖಾತೆಯನ್ನು ಕ್ಲೋಸ್ ಮಾಡಬಹುದು. ಖಾತೆ ಕ್ಲೋಸ್ ಮಾಡಲು ಬ್ಯಾಂಕ್ ಯಾವುದೇ ನಿರ್ಬಂಧಗಳನ್ನು ವಿಧಿಸುವುದಿಲ್ಲ.(ಗುಡ್ ರಿಟರ್ನ್ಸ್.ಇನ್)

English summary

Swiss Bank Accounts: 6 Must Know Facts

Opening any form of accounts in Swiss Bank is considered and counted amongst the safest in the world as they maintain high level of privacy with both their domestic and foreign customers. We often hear politicians, millionaires, criminals or government officials holding money in Swiss Banks. This is because of the high-security feature of the Swiss Bank. They might refuse to divulge information of account holders.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X