For Quick Alerts
ALLOW NOTIFICATIONS  
For Daily Alerts

ಡಿಜಿಟಲ್ ಇಂಡಿಯಾ: ಪಿಎಫ್ ತಾಣದಲ್ಲಿ ಹೊಸತೇನಿದೆ?

|

ಡಿಜಿಟಲ್ ಇಂಡಿಯಾ ಸಪ್ತಾಹದ ಪ್ರಯುಕ್ತ ಎಂಪ್ಲಾಯ್ ಪ್ರಾವಿಡೆಂಟ್ ಫಂಡ್ (ಇಪಿಎಫ್ ಒ) ತನ್ನ ನೂತವ ವೆಬ್ ತಾಣಕ್ಕೆ ಚಾಲನೆ ನೀಡಿದೆ. ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ, ಕಾರ್ಮಿಕ ಇಲಾಖೆ ವ್ಯವಹಾರಗಳ ಕಾರ್ಯದರ್ಶಿ ಶಂಕರ್ ಅಗರ್ ವಾಲ್, ಆಡಳಿತ ಸುಗಮ ಮಾಡುವಲ್ಲಿ ಇಂಥ ತಾಣಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ ಎಂದು ಹೇಳಿದರು. ಗ್ರಾಹಕರ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಅನೇಕ ಕೊಡುಗೆಗಳನ್ನು ನೀಡಲಾಗಿದೆ.

ಡಿಜಿಟಲ್ ಇಂಡಿಯಾ: ಪಿಎಫ್ ತಾಣದಲ್ಲಿ ಹೊಸತೇನಿದೆ?

ಯುನಿವರ್ಸಲ್ ಅಕೌಂಟ್ ನಂಬರ್(ಯುಎಎನ್)
ಯುಎಎನ್ ಸಂಖ್ಯೆ ಪಡೆದುಕೊಂಡ ನಂತರ ಉದ್ಯೋಗಿಗಳು ಹಲವಾರು ಸೌಲಭ್ಯಗಳನ್ನು ಕುಳಿತಲ್ಲೇ ಪಡೆದುಕೊಳ್ಳಬಹುದು. ಹಣದ ರವಾನೆ, ಪಿಎಫ್ ಮೊತ್ತ, ನಿಮ್ಮ ದಾಖಲೆಗಳು ಎಲ್ಲವನ್ನು ವೀಕ್ಷಣೆ ಮಾಡಬಹುದು. ಮೊಬೈಲ್ ನಂಬರ್ ದಾಖಲಿಸಿದರೆ ಅಲರ್ಟ್ ಗಳನ್ನು ಪಡೆದುಕೊಳ್ಳಬಹುದು.[ಷೇರು ಪೇಟೆಯಲ್ಲಿ ಪಿಎಫ್ ಹಣ ಹೂಡಿಕೆ]

ಹೆಲ್ಪ್ ಡೆಸ್ಕ್
ಹೆಲ್ಪ್ ಡೆಸ್ಕ್ ನ ಮೂಮಕ ನಿಮ್ಮ ಹಳೆಯ ನಂಬರ್ ನ್ನು ಸುಲಭವಾಗಿ ಪತ್ತೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. ಈಗಾಗಲೇ ಹೆಲ್ಪ್ ಡೆಸ್ಕ್ ನಲ್ಲಿ ಸುಮಾರು 42 ಸಾವಿರ ಪ್ರಕರಣಗಳು ದಾಖಲಾಗಿದ್ದು ಒಂದೊಂದಾಗಿ ಬಗೆಹರಿಸಲಾಗುತ್ತಿದೆ.

ಸೆಂಟ್ರಲೈಜ್ಡ್ ಸಾಫ್ಟ್ ವೇರ್ ವ್ಯವಸ್ಥೆ
ಸೆಂಟ್ರಲೈಜ್ಡ್ ಸಾಫ್ಟ್ ವೇರ್ ವ್ಯವಸ್ಥೆ ಅಳವಡಿಕೆ ಮಾಡಿಕೊಂಡಿರುವುದರಿಂದ ಅಂತಾರಾಷ್ಟ್ರೀಯ ಮಟ್ಟದ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯವಿದೆ. ಎಲ್ಲ ಬಗೆಯ ಪ್ರಮಾಣ ಪತ್ರಗಳು ಇಲ್ಲಿಯೇ ಲಭ್ಯವಿರುತ್ತದೆ.[ಉಚಿತವಾಗಿ ಡಿಜಿಟಲ್ ಲಾಕರ್ ತೆರೆಯುವುದು ಹೇಗೆ?]

ಆನ್ ಲೈನ್ ಟ್ರಾನ್ಸ್ ಫರ್
ಆನ್ ಲೈನ್ ಮೂಲಕವೇ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಪಿಎಫ್ ಹಣ ರವಾನೆ ಮಾಡಿಕೊಳ್ಳಬಹುದು. ಅರ್ಜಿದಾರ ಆನ್ ಲೈನ್ ಮೂಲಕವೇ ಎಲ್ಲ ವ್ಯವಹಾರ ನಡೆಸಬಹುದಾಗಿದ್ದು 5.71 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. ಕೇಂದ್ರ ಕಚೇರಿ ಅಥವಾ ಶಾಖಾ ಕಚೇರಿಯಿಂದ ಆನ್ ಲೈನ್ ಮುಖಾಂತರವೇ ನಿಮ್ಮ ಅನುಮಾನಗಳಿಗೆ ಪರಿಹಾರ ಕಲ್ಪಿಸಿಕೊಡಲಾಗುತ್ತದೆ.

ಆನ್ ಲೈನ್ ನೋಂದಣಿ
ಆನ್ ಲೈನ್ ನೋಂದಣಿ ಮತ್ತು ಮಾಹಿತಿ ಪಡೆದುಕೊಳ್ಳುವುದು ಸುಲಭವಾಗಿದೆ. 53 ಸಾವಿರ ಜನ ಈ ವ್ಯವಸ್ಥೆ ಮೂಲಕವೇ ತಮ್ಮ ಪಿಎಫ್ ಕೋಡ್ ಪಡೆದುಕೊಂಡಿದ್ದಾರೆ. ಎಸ್‌ ಎಂಎಸ್ ಮೂಲಕವೂ ಮಾಹಿತಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕ್ರೆಡಿಟ್, ವಿಥ್ ಡ್ರಾ ,ಮಾಹಿತಿಗಳು ಲಭ್ಯವಾಗುತ್ತದೆ.[ಡಿಜಿಟಲ್ ಇಂಡಿಯಾ ಎಂದರೇನು? ಉದ್ದೇಶಗಳೇನು?]

ಸದಸ್ಯರ ಆಟೋ ಅಪ್ ಡೇಟ್
ಕಳೆದ ಒಂದು ವರ್ಷದ ಅವಧಿಯಲ್ಲಿ ಸುಮಾರು 14.5 ಕೋಟಿ ಹೊಸ ಪಿಎಫ್ ಖಾತೆ ತೆರೆಯಲಾಗಿದೆ. ಈ ಎಲ್ಲ ಮಾಹಿತಿಗಳನ್ನು ವೆಬ್ ತಾಣದ ಮೂಲಕ ಪಡೆದುಕೊಳ್ಳಬಹುದು.

ಕೊನೆ ಮಾತು: ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ವೆಬ್ ತಾಣಗಳ ಮೂಲಕವೇ ಪಡೆದುಕೊಳ್ಳಬಹುದು. ಅಲ್ಲದೇ ಬಿಡುಗಡೆ ಮಾಡಿರುವ ಹೊಸ ಸೌಲಭ್ಯಗಳ ವಿವರಗಳು ಲಭ್ಯವಿದೆ.(ಗುಡ್ ರಿಟರ್ನ್ಸ್.ಇನ್)

English summary

EPFO Unveils New Website; Celebrates Digital India Week

The Employees' Provident Fund Organisation (EPFO) launched its new revamped website as a part of ‘Digital India Week'. EPFO is on way of becoming a centre for excellence in governance, was stated by Shri Shankar Aggarwal, Secretary, Labour & Employment here while inaugurating.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X