For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಆಗಿದೆಯೇ ಪರಿಶೀಲಿಸಿ

|

ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ನ್ನು ಅನೇಕ ಸೌಲಭ್ಯಗಳಿಗೆ ಬಳಸಿಕೊಳ್ಳಬಹುದು ಎಂದು ತಿಳಿಸಿದೆ. ವಿಳಾಸ ದೃಢೀಕರಣ ಸೇರಿದಂತೆ ಹಲವೆಡೆ ಬಳಸಿಕೊಳ್ಳಬಹುದು.
ಆಧಾರ್ ಸಂಖ್ಯೆ ನಿಮ್ಮ ಬ್ಯಾಂಕಿಂಗ್ ವ್ಯವಹಾರಗಳಿಗೂ ಅಗತ್ಯ. ಆಧಾರ್ ಕಾರ್ಡ್ ನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿದಾಗ ಮಾತ್ರ ಸರ್ಕಾರ ನೀಡುವ ಸಬ್ಸಿಡಿ ಮತ್ತಿತರ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ.

 

ಇಡೀ ದೇಶದ ನಾಗರಿಕರಿಗೆಲ್ಲ ಏಕರೂಪದ ಗುರುತಿನ ಚೀಟಿ ನೀಡಿಕೆ ಉದ್ದೇಶದಿಂದ ಜಾರಿಗೆ ಬಂದ ಯೋಜನೆ ಅನೇಕ ಟೀಕೆ ಟಿಪ್ಪಣಿಗಳನ್ನು ಎದುರಿಸಿತ್ತು. ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿದೆಯೇ ಇಲ್ಲವೇ ಎಂಬುದನ್ನು ಸುಲಭವಾಗಿ ಪರಿಶೀಲನೆ ಮಾಡಬಹುದು.[ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಹೇಗೆ?]

 
ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಆಗಿದೆಯೇ ಪರಿಶೀಲಿಸಿ

ಪರಿಶೀಲನೆ ಮಾಡುವುದು ಹೇಗೆ?
* ನಿಮ್ಮ ಮೊಬೈಲ್ ನಿಂದ *99*99*# ಕ್ಕೆ ಡಯಲ್ ಮಾಡಿ
* ನಂತರ ಬರುವ ಸೂಚನೆಯಂತೆ 12 ಅಂಕೆಗಳ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ
* ನಂತರ ಸೆಂಡ್ ಬಟನ್ ಒತ್ತಿ
* ಸರಿಯಾಗಿದ್ದರೆ ಕನ ಫರ್ಮ್ ಬಟನ್ ಒತ್ತಿ, ಇಲ್ಲವಾದಲ್ಲಿ ಸಂಖ್ಯೆ 2 ನ್ನು ಒತ್ತಿ ಬದಲಾವಣೆ ಮಾಡಬಹುದು.
* ನಂತರ ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿದೆಯೇ ಇಲ್ಲವೇ ಎಂಬ ಸಂದೇಶ ಬರುತ್ತದೆ. ಲಿಂಕ್ ಆಗಿದ್ದರೆ ನಿಮ್ಮ ಆಧಾರ್ ಹೆಸರಿನೊಂದಿಗೆ ಬ್ಯಾಂಕ್ ಹೆಸರು ಸಹ ಡಿಸ್ಪ್ಲೇ ಆಗುವುದು.

ಒಂದು ವೇಳೆ ಇನ್ನು ನಿಮ್ಮ ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಯೊಂದಿಗೆ ನೋಂದಾವಣೆ ಆಗಿರದಿದ್ದರೆ ಇಲ್ಲಿ ಲಿಂಕ್ ಮಾಡಬಹುದು.(ಗುಡ್ ರಿಟರ್ನ್ಸ್.ಇನ್)

English summary

How to Know Whether Aadhaar Number is Linked to Bank Account Or Not?

Aadhaar is a 12 digit individual identification number which will serve as a proof of identity and address, anywhere in India. Aadhaar number will help you provide access to services like banking, mobile phone connections and other Govt and Non-Govt services in due course.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X