For Quick Alerts
ALLOW NOTIFICATIONS  
For Daily Alerts

ಹೂಡಿಕೆ ಮಾಡಲು ತೆರಿಗೆ ಮುಕ್ತ ಬಾಂಡ್ ಗಳು ಇವೆ

|

ಮೂಲ ಸೌಕರ್ಯ ಅಭಿವೃದ್ಧಿ, ರಸ್ತೆ ಮತ್ತು ಸಾರಿಗೆ ಸಂಪರ್ಕ ನಿರ್ಮಾಣಕ್ಕೆ ಸಂಬಂಧಿಸಿ ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತೆರಿಗೆ ವಿನಾಯಿತಿ ಬಾಂಡ್ ಗಳನ್ನು ಬಿಡುಗಡೆ ಮಾಡಿರುವುದು ತಿಳಿದೇ ಇದೆ. ಹೆಸರೇ ಸೂಚಿಸುವಂತೆ ಇಲ್ಲಿ ಹೂಡಿಕೆ ಮಾಡಿದ ಹಣಕ್ಕೆ ದೊರೆಯುವ ಬಡ್ಡಿಗೆ ತೆರಿಗೆ ವಿನಾಯಿತಿ ಸಿಗುತ್ತದೆ,

2015ರ ಪ್ರಮುಖ ಬಾಂಡ್ ಗಳ ಪಟ್ಟಿ

* ನ್ಯಾಶನಲ್ ಹೈವೇಸ್ ಅಥಾರಿಟಿ ಆಫ್ ಇಂಡಿಯಾ(ಎನ್ ಎಚ್ ಅಐ) (24 ಸಾವಿರ ಕೋಟಿ)

* ಇಂಡಿಯನ್ ರೈಲ್ವೇಸ್ ಫೈನಾನ್ಸ್ ಕಾರ್ಪೋರೇಶನ್(ಐಆರ್ ಎಫ್ ಸಿ) (6ಸಾವಿರ ಕೋಟಿ)

* ಹೌಸಿಂಗ್ ಆಂಡ್ ಅರ್ಬನ್ ಡೆವಲಪ್ ಮೆಂಟ್ ಕಾರ್ಪೋರೇಶನ್(ಹುಡ್ಕೋ) (5 ಸಾವಿರ ಕೋಟಿ)

ಹೂಡಿಕೆ ಮಾಡಲು ತೆರಿಗೆ ಮುಕ್ತ ಬಾಂಡ್ ಗಳು ಇವೆ

* ಇಂಡಿಯನ್ ರಿನೆವೆಬಲ್ ಎನರ್ಜಿ ಡೆವಲಪ್ ಮೆಂಟ್ ಏಜೆನ್ಸಿ(ಐಆರ್ ಇಡಿಎ) (2 ಸಾವಿರ ಕೋಟಿ)

* ಪವರ್ ಫೈನಾನ್ಸ್ ಕಾರ್ಪೋರೇಶನ್(ಪಿಎಫ್ ಸಿ) (ಸಾವಿರ ಕೋಟಿ)[ಮಹತ್ವದ ಉಳಿತಾಯ ಯೋಜನೆಗಳ ಪಟ್ಟಿ]

* ರೂರಲ್ ಎಲೆಕ್ಟ್ರಿಫಿಕೇಶನ್ ಕಾರ್ಪೋರೇಶನ್(ಆರ್ ಇಸಿ) (ಸಾವಿರ ಕೋಟಿ)

* ಎನ್ ಟಿ ಪಿಸಿ ಲಿಮಿಟೆಡ್(ಸಾವಿರ ಕೋಟಿ)

ತೆರಿಗೆ ವಿನಾಯಿತಿ ಬಾಂಡ್ ನ್ನು ಯಾರು ಖರೀದಿ ಮಾಡಬಹುದು?

* ರಿಟೈಲ್ ಮಾರುಕಟ್ಟೆಯಲ್ಲಿ ತೊಡಗಿಕೊಂಡಿರುವವರು(ಆರ್ ಐಐ)

* ಮಾನ್ಯತೆ ಪಡೆದ ಸಂಸ್ಥೆಯ ಬಂಡವಾಳ ಹೂಡಿಕೆ ದಾರರು(ಕ್ಯೂಬಿಎಸ್)

* ಕಾರ್ಪೋರೇಟ್, ಟ್ರಸ್ಟ್, ಒಪ್ಪಂದ ಸಂಸ್ಥೆಗಳು, ಕೋ ಆಪರೇಟಿವ್ ಬ್ಯಾಂಕ್ ಗಳು, ಪ್ರಾದೇಶಿಕ ಸಂಸ್ಥೆಗಳು,

* ಅತಿ ಹೆಚ್ಚಿನ ಆದಾಯ ಹೊಂದಿರುವ ವ್ಯಕ್ತಿಗಳು(ಬಾಂಡ್ ಖರೀದಿ ಮಾಡಲು ಪ್ಯಾನ್ ಕಾರ್ಡ್ ಕಡ್ಡಾಯವಾಗಿರುತ್ತದೆ.)

ತೆರಿಗೆ ವಿನಾಯಿತಿ ಬಾಂಡ್ ಮೇಲೆ ಬಡ್ಡಿ ದರ

ಇದು ಸಹ ಬದಲಾಗುತ್ತಿರುತ್ತದೆ.
* ಎಎಎ ಮಾನ್ಯತೆಯ ಕಂಪನಿ 55 ಬೆಸಿಸಿ ಪಾಂಯಿಟ್ಸ್ ಗಳಿಗಿಒಂತ ಕಡಿಮೆ ನೀಡುತ್ತದೆ. ಹೂಡಿಕೆ ಮಾಡುವವರು ಯಾರು ಎಂಬುವರ ಮೇಲೆ ಪಾಯಿಂಟ್ ತೀರ್ಮಾನವಾಗುತ್ತದೆ.

* ಎಎ+ ಕಂಪನಿ ಎಎಎ ನೀಡಿದಕ್ಕಿಂತ 10 ಅಂಕದಷ್ಟು ಕಡಿಮೆ ನೀಡುತ್ತದೆ. ಅಂದರೆ ನಿಮಗೆ ಇಲ್ಲಿ 45 ಬೆಸಿಸ್ ಪಾಂಯಿಟ್ಸ್ ಸಿಗಬಹುದು.

* ಎ ಅಥವಾ -ಎಎ ಕಂಪನಿಯ ಬಾಂಡ್ ಗಳನ್ನು ಖರೀದಿ ಮಾಡಿದರೆ 35 ಬೆಸಿಸ್ ಪಾಯಿಂಟ್ಸ್ ಸಿಗಬಹುದು.

ಈ ತೆರಿಗೆ ವಿನಾಯಿತಿ ಬಾಂಡ್ ಗಳ ಬಡ್ಡಿ ವಾರ್ಷಿಕವಾಗಿ ಸಂದಾಯವಾಗುತ್ತದೆ. ರಿಟೈಲ್ ಇಂಡಸ್ಟ್ರಿಯಿಂದ ಹೊರಗಿನವರಾಗಿದ್ದರೆ ದೊರೆಯುವ ಬಡ್ಡಿಯಲ್ಲಿ ಇಳಿತವಾಗಬಹುದು.

* ಬಾಂಡ್ ಗಳ ಅವಧಿ
ಸಾಮಾನ್ಯವಾಗಿ ಬಾಂಡ್ ಗಳ ಅವಧಿ 10 ರಿಂದ 15 ವರ್ಷಗಳಾಗಿರುತ್ತದೆ.

* ತೆರಿಗೆ ಪದ್ಧತಿ ಹೇಗೆ?
ಈ ತೆರಿಗೆ ವಿನಾಯಿತಿ ಬಾಂಡ್ ಗಳಿಗೆ 80 ಸಿ ರಕ್ಷಣೆ ಇಲ್ಲ. ಸೆಕೆಂಡರಿ ಮಾರುಕಟ್ಟೆಯಲ್ಲಿ ಖರೀದಿ ಮತ್ತು ಮಾರಾಟವನ್ನು ಮಾಡುವವರು ತೆರಿಗೆ ಆಕರಣೆ ಪದ್ಧತಿ ಲೆಕ್ಕ ಹಾಕಬೇಕಾಗುತ್ತದೆ.[ಲಾಭ ತರುವ ಮ್ಯೂಚುವಲ್ ಫಂಡ್ ಮೇಲೆ ಹೂಡಿಕೆ ಮಾಡ್ತಿರಾ?]

* ತೆರಿಗೆ ಮುಕ್ತ ಬಾಂಡ್ ಖರೀದಿ ಹೇಗೆ?
ನೀವು ಷೇರು ಖರೀದಿ ಮಾಡಿದಂತೆಯೇ ಇವನ್ನು ಖರೀದಿಸಲು ಸಾಧ್ಯವಿದೆ. ಅಥವಾ ನಿಮ್ಮ ದಲ್ಲಾಳಿ ಬಳಿ ಈ ಕುರಿತು ಮಾಹಿತಿ ಪಡೆದುಕೊಂಡು ನಿಮ್ಮ ಹೆಸರಿನಲ್ಲಿ ಖರೀದಿ ಮಾಡಲುಸಾಧ್ಯವಿದೆ.

ಕೊನೆ ಮಾತು
ಇಲ್ಲಿ ಹೂಡಿಕೆ ಮಾಡಲು ಇಚ್ಛಿಸುವವರು ಲಿಕ್ವಿಡಿಟಿ ಯಾವ ಪ್ರಮಾಣದಲ್ಲಿದೆ ಎಂಬುದನ್ನು ಅರಿತು ಮುಂದಕ್ಕೆ ಹೆಜ್ಜೆ ಇಡಬೇಕಾಗುತ್ತದೆ. ಹೆಚ್ಚಿನ ತೆರಿಗೆ ಸಲ್ಲಿಕೆ ಮಾಡುತ್ತಿರುವವರು ಇಂಥ ಕಡೆ ಹೂಡಿಕೆ ಮಾಡಿ ತೆರಿಗೆ ವಿನಾಯಿತಿ ಲಾಭ ಪಡೆದುಕೊಳ್ಳಬಹುದು.(ಗುಡ್ ರಿಟರ್ನ್ಸ್.ಇನ್)

English summary

List Of Tax-Free Bonds To Be Launched In 2015-16

In the Union Budget 2015-16, Finance Minister, Arun Jaitley announced unveiling of tax-free infra bonds for railways and roads. Tax-free bonds are bonds whose interest income are not taxable in the hand of the investors. In effect this means that the income from these bonds are tax-free and hence do not form part of the total income in computing income tax.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X