For Quick Alerts
ALLOW NOTIFICATIONS  
For Daily Alerts

ಸ್ಟೇಟ್ ಬ್ಯಾಂಕ್ ನ ಬಡಿ ಅಪ್ಲಿಕೇಶನ್ ಬಹುತ್ ಬಡಾ ಹೈ!

|

ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಹೊಸ ಮೊಬೈಲ್ ಅಪ್ಲಿಕೇಶನ್ ವೊಂದನ್ನು ಬಿಡುಗಡೆ ಮಾಡಿದೆ. 'ಸ್ಟೇಟ್ ಬ್ಯಾಂಕ್ ಬಡಿ' ಹೆಸರಿನಲ್ಲಿ ಅಪ್ಲಿಕೇಶನ್ ಹೊರತಂದಿದ್ದು ಗ್ರಾಹಕರಲ್ಲದವರಿಗೂ ಇದು ನೆರವಾಗಲಿದೆ.

ವಿಶೇಷವೇಂದರೆ ಅಪ್ಲಿಕೇಶನ್ ಕನ್ನಡ ಸೇರಿದಂತೆ 12 ಭಾಷೆಗಳಲ್ಲಿ ಲಭ್ಯವಿದೆ. ನಿಮ್ಮ ಫೋನ್ ಕಾಂಟಾಕ್ಟ್ ನಲ್ಲಿ ಇರುವ ಯಾವುದೇ ವ್ಯಕ್ತಿಗೆ ಹಣ ರವಾನೆ ಮಾಡುವ ಅಥವಾ ಪಡೆದುಕೊಳ್ಳುವ ಸೌಲಭ್ಯವನ್ನು ಅಪ್ಲಿಕೇಶನ್ ಕಲ್ಪಿಸಿಕೊಡುತ್ತದೆ.[ಏನಿದು ಕಾಂಟ್ಯಾಕ್ಟ್ ಲೆಸ್ ಡೆಬಿಟ್ ಕಾರ್ಡ್? ಬಳಕೆ ಹೇಗೆ?]

ಸ್ಟೇಟ್ ಬ್ಯಾಂಕ್ ನ ಬಡಿ ಅಪ್ಲಿಕೇಶನ್ ಬಹುತ್ ಬಡಾ ಹೈ!

ಅಪ್ಲಿಕೇಶನ್ ನೋಂದಾವಣಿ ಮಾಡಿಕೊಳ್ಳುವುದು ಹೇಗೆ?
ಗೂಗಲ್ ಆಪ್ ಸ್ಟೋರ್ ನಿಂದ ಮೊದಲು ಅಪ್ಲಿಕೇಶನ್ ನ್ನು ಡೌನ್ ಲೋಡ್ ಮಾಡಿಕೊಂಡು ಇನ್ ಸ್ಟಾಲ್ ಮಾಡಿಕೊಳ್ಳಿ.

ಗ್ರಾಹಕರು ಎರಡು ವಿಧದಲ್ಲಿ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳಬಹುದು. ಫೇಸ್ ಬುಕ್ ಅಥವಾ ಮೊಬೈಲ್ ನಂಬರ್ ಮೂಲಕ ಅಪ್ಲಿಕೇಶನ್ ಪಡೆದುಕೊಳ್ಳಲು ಸಾಧ್ಯವಿದೆ.

* ನೀವು ಫೇಸ್ ಬುಕ್ ಮೂಲಕ ಒಳ ಪ್ರವೇಶಿಸುತ್ತಿರುವವರಾದರೆ ನಿಮ್ಮ ಫೇಸ್ ಬುಕ್ ಖಾತೆ ಹೆಸರು ಮತ್ತು ಪಾಸ್ ವರ್ಡ್ ದಾಖಲು ಮಾಡಿ.[ಎಟಿಎಂ ಮೂಲಕ ಹಣ ಡಿಪಾಸಿಟ್ ಮಾಡೋದು ಹೇಗೆ?]

* ಒಂದು ವೇಳೆ ನೀವು ಸೈನ್ ಅಪ್ ಆಯ್ಕೆ ಮೂಲಕ ಒಳ ಪ್ರವೇಶ ಮಾಡಿದ್ದರೆ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ದಾಖಲು ಮಾಡಬೇಕಾಗುತ್ತದೆ. ಇಮೇಲ್ ಸಹ ಕಡ್ಡಾಯವಾಗಿ ನೀಡಬೇಕಾಗುತ್ತದೆ.

* ನೋಂದಣಿ ಯಶಸ್ವಿಯಾದ ಮೇಲೆ ನಿಮ್ಮ ಮೊಬೈಲ್ ಮೇಲೆ ನಿಮಗೆ ಸೌಲಭ್ಯ ಬಳಕೆ ಆಯ್ಕೆ ದೊರೆಯುತ್ತದೆ. ಮೊಬೈಲ್ ನಲ್ಲಿ ಈ ಬಗ್ಗೆ ಸಂದೇಶವೊಂದು ಸ್ವೀಕರಿಸಲ್ಪಡುತ್ತದೆ.
* ಈಗ ನೀವು ನಿಮ್ಮ ಹೊಸ ಪಿನ್ ಹೊಂದಾಣಿಕೆ ಮಾಡಿಕೊಳ್ಳಬಹುದು.

* ಇದಾದ ನಂತರ ನಿಮಗೊಂದು ಸ್ವಾಗತ ಸಂದೇಶ ಬರುತ್ತದೆ. ಜತೆಗೆ ಓಟಿಪಿಯೊಂದು ಜನರೇಟ್ ಆಗುತ್ತದೆ. ಇಮೇಲ್ ಸಹ ಬಂದಿರುತ್ತದೆ.

* ನಂತರ ಓಟಿಪಿಯನ್ನು ಸೂಚಿಸಿದ ಜಾಗದಲ್ಲಿ ದಾಖಲು ಮಾಡಬೇಕು. ಸುರಕ್ಷತೆಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೂ ಉತ್ತರ ನೀಡಬೇಕಾಗುತ್ತದೆ. (ಮೂರು ಬಾರಿ ಓಟಿಪಿ ದಾಖಲಿಸಲು ಅವಕಾಶ ಇರುತ್ತದೆ)

* ಓಟಿಪಿ ಬರದಿದ್ದರೆ ಇನ್ನೊಮ್ಮೆ ರೀ ಸೆಂಡ್ ಕೇಳಬಹುದು.

ನಿಮ್ಮ ನೋಂದಣಿ ಯಶಸ್ವಿಯಾದ ಮೇಲೆ ಅದರ ದೃಢೀಕರಣದ ಕುರಿತಾಗಿ ಸಂದೇಶವೊಂದು ನಿಮ್ಮ ಮೊಬೈಲ್ ಮತ್ತು ಇ ಮೇಲ್ ಗೆ ಬಂದಿರುತ್ತದೆ.

ಎಸ್ ಬಿಐ ಖಾತೆದಾರರಲ್ಲದವರಿಗೆ ಹಣ ರವಾನಿಸುವುದು ಹೇಗೆ?

ಎಸ್ ಬಿಐ ಖಾತೆದಾರ ಅಥವಾ ಖಾತೆದಾರ ಅಲ್ಲದವರಿಗೆ ಹಣ ರವಾನೆ ಮಾಡುವ ಮುನ್ನ ನಿಮ್ಮ ಡೆಬಿಟ್ ಕಾರ್ಡ್ ಇಲ್ಲವೇ ನೆಟ್ ಬ್ಯಾಂಕಿಂಗ್ ಮೂಲಕ ವಾಲೆಟ್ ಗೆ ಹಣ ರವಾನಿಸಿಕೊಳ್ಳಬೇಕಾಗುತ್ತದೆ.

ನಂತರ ಸೆಂಡ್ ಮನಿ ಆಯ್ಕೆಯನ್ನು ಬಳಸಿಕೊಳ್ಳಬೇಕು

* ಹಣ ಸ್ವೀಕಾರ ಮಾಡುವವರ ಮೊಬೈಲ್ ಸಂಖ್ಯೆ ಅಥವಾ ಫೇಸ್ ಬುಕ್ ಖಾತೆ ಆಯ್ಕೆ ಮಾಡಿಕೊಳ್ಳಿ

* ಹಣ ದಾಖಲು ಮಾಡಿ

* ವಿವರಣೆ ಬರೆಯಿರಿ

* ಹಣ ರವಾನೆಯನ್ನು ದೃಢಪಡಿಸಿಕೊಂಡು ಸಬ್ ಮಿಟ್ ಬಟನ್ ಒತ್ತಿ

* ನಂತರ ನಿಮಗೊಂದು ಪಾಸ್ ಕೋಡ್ ಬರುತ್ತದೆ. ಅದನ್ನು ದಾಖಲು ಮಾಡಿದಾಗ ಹಣ ರವಾನೆಯಾಗುತ್ತದೆ.

ಕೊನೆ ಮಾತು:ಸುರಕ್ಷತೆ ದೃಷ್ಟಿಯಿಂದ ವ್ಯವಸ್ಥೆ ಉತ್ತಮವಾದದ್ದು ಎಂದು ಪರಿಗಣಿಸಲಾಗಿದೆ. ಹೊಸ ಅಪ್ಲಿಕೇಶನ್ ಜಜನರ ಅಗತ್ಯಕ್ಕೆ ತಕ್ಕಂತೆ ತಯಾರು ಮಾಡಲಾಗಿದ್ದು ಗ್ರಾಹಕ ಸ್ನೇಹಿಯಾಗಿದೆ ಎಂದು ಎಸ್ ಬಿಐ ತಿಳಿಸಿದೆ.(ಗುಡ್ ರಿಟರ್ನ್ಸ್.ಇನ್)

English summary

SBI Buddy App: How To Register And Send Money Instantly?

State Bank of India (SBI) has launched a new app called State Bank Buddy, with which you can simply send or ask money from any of your contacts even if they do not have an SBI account. The main highlight of the app is that it is available in 12 languages and one can choose their preferred language.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X