For Quick Alerts
ALLOW NOTIFICATIONS  
For Daily Alerts

ಹೊಸ 1000, 500 ರು. ನೋಟು ಗುರುತು ಮಾಡೋದು ಹೇಗೆ?

|

ಭಾರತೀಯ ರಿಸರ್ವ್ ಬ್ಯಾಂಕ್ ಸದ್ಯದಲ್ಲಿಯೇ ಹೊಸ ಮಾದರಿಯ 1000 ಮತ್ತು 500 ರು. ನೋಟುಗಳನ್ನು ಚಲಾವಣೆಗೆ ಬಿಡುಗಡೆ ಮಾಡಲಿದೆ. ನಕಲಿ ನೋಟು ಚಲಾವಣೆ ತಡೆ ಮತ್ತು ಭದ್ರತೆ ಇದರ ಹಿಂದಿರುವ ಪ್ರಮುಖ ಉದ್ದೇಶ.

ಹೊಸ ನೋಟುಗಳಲ್ಲಿ ಅನೇಕ ಮಾರ್ಪಾಡುಗಳನ್ನು ಮಾಡಲಾಗುತ್ತಿದೆ. ಬಲ ಮತ್ತು ಎಡ ಮೂಲೆಗಳಲ್ಲಿ ಹೊಸದಾಗಿ ಗೆರೆಗಳು ಕಾಣಿಸಿಕೊಳ್ಳಲಿವೆ. ಹಾಗಾದರೆ ಹೊಸ ನೋಟುಗಳಲ್ಲಿ ಮಾಡಲಿರುವ ಮಾರ್ಪಾಡುಗಳೇನು? ಅವುಗಳನ್ನು ಗುರುತು ಮಾಡುವುದು ಹೇಗೆ? ಎಂಬುದನ್ನು ನೋಡಿಕೊಂಡು ಬರೋಣ....[ಬದಲಾದ ಆರ್ ಬಿಐ ಆದ್ಯತಾ ವಲಯ ಸಾಲದ ನೀತಿ]

ಹೊಸ 1000, 500 ರು. ನೋಟು ಗುರುತು ಮಾಡೋದು ಹೇಗೆ?

ಹೊಸ ನೋಟು ಗುರುತಿಸುವ ಮೂರು ವಿಧಾನಗಳು

* ಆರೋಹಣ ರೀತಿಯಲ್ಲಿ ಅಂಕಿಗಳು

ಹೊಸ ನೋಟಿನಲ್ಲಿ ಕ್ರಮಸ೦ಖ್ಯೆಗೂ ಮೊದಲು ಭಾರತೀಯ ರುಪಾಯಿಯ ಚಿಹ್ನೆ ಇರಲಿದೆ. ಅಲ್ಲದೆ ಆ೦ಗ್ಲ ಭಾಷೆಯ "ಎಲ್' ಅಕ್ಷರ ಇರಲಿದೆ. ಕ್ರಮಸ೦ಖ್ಯೆ ಗಾತ್ರವನ್ನು ಆರೋಹಣ ಕ್ರಮದಲ್ಲಿ ನಮೂದಿಸಲಾಗಿರುತ್ತದೆ.

* ಬ್ಲೀಡ್ ಗೆರೆಗಳು
500 ನೋಟಿನಲ್ಲಿ ಬಲ ಮತ್ತು ಎಡ ಮೂಲೆಯಲ್ಲಿ 5 ಗೆರೆಗಳನ್ನು ಕಾಣಬಹುದಾಗಿದೆ. 2-1-2 ರೀತಿಯಲ್ಲಿ 5 ಬ್ಲೀಡ್ ಗೆರೆಗಳನ್ನು ಮುದ್ರಣ ಮಾಡಲಾಗಿರುತ್ತದೆ. ಸಾವಿರ ರು. ನೋಟಿನಲ್ಲಿ 1-2-2-1 ಮಾದರಿಯಲ್ಲಿ ಗೆರೆಗಳನ್ನು ನೀಡಲಾಗುತ್ತಿದ್ದು ಎರಡು ಕಡೆಯಿಂದ ವೀಕ್ಷಣೆ ಮಾಡಬಹುದಾಗಿದೆ. ಅಲ್ಲದೇ ಅಂಧರು ಸಹ ಇದನ್ನು ಸುಲಭವಾಗಿ ಗುರುತಿಸಬಲ್ಲರು.

* ಗುರುತಿನ ಚಿಹ್ನೆ ಮತ್ತಷ್ಟು ವಿಸ್ತಾರ
500 ಎಂದು ತಿಳಿಸುವ ಅಂಕಿಗಳ ಗುರುತು ಮತ್ತಷ್ಟು ದೊಡ್ಡದಾಗಿ ಗೋಚರವಾಗಲಿದೆ. ಅಲ್ಲದೇ ಡೈಮಂಡ್ ಮಾರ್ಕ್ ನ್ನು ಸಹನ ದೊಡ್ಡದಾಗಿ ಮುದ್ರಣ ಮಾಡಲಾಗುತ್ತಿದೆ.

ಕೊನೆ ಮಾತು:
ಖೋಟಾ ನೋಟು ಹಾವಳಿ ತಡೆಗೆ ಆರ್ ಬಿಐ ನಿರಂತರವಾಗಿ ವಿನೂತನ ಕ್ರಮಗಳನ್ನು ತರುತ್ತಲೇ ಇರುತ್ತದೆ. ದೇಶದ ಆರ್ಥಿಕ ಭ್ರದತೆ ಕಾಪಾಡಲು ಇಂಥ ಕ್ರಮಗಳು ನೆರವಾಗುವುದರಲ್ಲಿ ಅನುಮಾನವಿಲ್ಲ.(ಗುಡ್ ರಿಟರ್ನ್ಸ್.ಇನ್)

English summary

3 Ways To Identify New Rs 500 And Rs 1000 Banknotes

The Reserve Bank of India (RBI) will soon start circulating notes of Rs 500 and Rs 1000 with new enhanced security features which will also aid visually impaired in easy identification of banknotes and protect them from counterfeiting. Recently, the Reserve Bank put into circulation of Rs 500 banknotes with numerals in ascending size in number panels but without bleed lines and enlarged identification mark.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X