For Quick Alerts
ALLOW NOTIFICATIONS  
For Daily Alerts

8 ಜನ ಇ ಕಾಮರ್ಸ್ ಉದ್ಯಮಿಗಳ ಯಶಸ್ಸಿನ ಗುಟ್ಟೇನು?

|

ಪ್ರತಿಯೊಬ್ಬರು ಸಾಧನೆ ಮಾಡಲು ಬಯಸುತ್ತಾರೆ. ಆ ಬಗೆಯ ಆಕಾಂಕ್ಷೆಯನ್ನು ಹೊಂದಿರುತ್ತಾರೆ. ಆ ಯಶಸ್ಸುನ ಬಹಳ ಸುಲಭವಾಗಿ ನಿಮ್ಮ ಬಳಿ ಬಂದರೆ ಹೇಗಿರುತ್ತದೆ? ಹೌದು ಇ ಕಾಮರ್ಸ್ ಕ್ಷೇತ್ರದ 8 ಜನ ಸಾಧಕರ ಸಾಧನೆಯ ಮೇಲೆ ಒಂದು ನೋಟ ಹರಿಸಿಕೊಂಡು ಬರೊಣ.

ಇ ಕಾಮರ್ಸ್ ಕ್ಷೇತ್ರದಲ್ಲಿ ಅವರು ಆಯ್ದುಕೊಂಡ ಮಾರ್ಗಗಳು ಯಾವವು? ಕಡಿಮೆ ಅವಧಿಯಲ್ಲಿ ಸಾಧನೆಯ ಶಿಖರವೇರಲು ಯಾವ ಬಗೆಯ ಪರಿಶ್ರಮ ಕಾರಣವಾಯಿತು ಎಂಬುದನ್ನು ಅರಿತರೆ ಆನ್ ಲೈನ್ ಮಾರುಕಟ್ಟೆಯ ಆಗು ಹೋಗುಗಳನ್ನು ತಿಳಿದುಕೊಳ್ಳಬಹುದು.[ಆನ್ ಲೈನ್ ತಾಣಗಳಿಂದ ಭರಪೂರ ಆಫರ್ ಗಳು]

8 ಜನ ಇ ಕಾಮರ್ಸ್ ಉದ್ಯಮಿಗಳ ಯಶಸ್ಸಿನ ಗುಟ್ಟೇನು?

* ಆರತಿ ಗೋಯಲ್
ತನ್ನ ಸ್ವ ಶ್ರಮದ ಮೇಲೆ ನಂಬಿಕೆ ಇರಿಸಿಕೊಂಡ ದೆಹಲಿಯ ಆರತಿ ಗೋಯಲ್ ಇಂದು ಇ ಕಾಮರ್ಸ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಪ್ರತಿಯೊಬ್ಬ ಗೃಹಿಣಿಗೂ ಇವರು ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ತಮ್ಮ ಕುಟುಂಬವನ್ನು ನೋಡಿಕೊಳ್ಳುವ ಸಲುವಾಗಿ ಆರಂಭಿಸಿದ ವ್ಯಾಪಾರ ಇಂದು ಕೈ ತುಂಬಾ ಹಣ ತಂದುಕೊಡುತ್ತಿದೆ.

ಗೃಹೋಪಯೋಗಿ ಪೀಠೋಪಕರಣಗಳು, ಸೋಫಾ, ಲ್ಯಾಪ್ ಟಾಪ್ ಸುರಕ್ಷಾ ಕವಚದ ತಯಾರಿಕೆ ಮತ್ತು ಮಾರಾಟವನ್ನು ಆನ್ ಲೈನ್ ನಲ್ಲಿ ಆರಂಭಿಸಿದರು. ಇಂದು ಪ್ರತಿದಿನ ಇವರ 800ಕ್ಕೂ ಅಧಿಕ ಉತ್ಪನ್ನಗಳು ಮಾರಾಟವಾಗುತ್ತಿವೆ.

* ಗೌರವ್ ಗೋಯೆಲ್
ಎಲೆಕ್ಟ್ರಾನಿಕ್ ಉತ್ಪನ್ನಗಳ ಮಾರಾಟಕ್ಕೆ ಆನ್ ಲೈನ್ ತಾಣಗಳನ್ನು ಆಯ್ಕೆ ಮಾಡಿಕೊಂಡ ಗೌರವ್ ಅದನ್ನು ಅಷ್ಟೇ ಉತ್ತಮವಾಗಿ ಬೆಳೆಸಿದ್ದಾರೆ. ಕೋಲ್ಕತ್ತಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರೇ ಹೇಳುವಂತೆ ವ್ಯಾಪಾರ ಒಂದು ವರ್ಷದಲ್ಲಿ ಶೇ.100ಕ್ಕೂ ಅಧಿಕ ಬೆಳವಣಿಗೆ ಸಾಧಿಸಿದೆ.

ಸದ್ಯ ಗೌರವ್ ಅವರು ಒಂದು ತಂಡವನ್ನೇ ಹೊಂದಿದ್ದು ತಮ್ಮ ವ್ಯಾಪಾರ ಬೆಳವಣಿಗೆಗೆ ಸ್ನ್ಯಾಪ್ ಡೀಲ್ ನೆರವನ್ನು ಪಡೆದುಕೊಂಡಿದ್ದಾರೆ.

* ಬಾಲಾಜಿ
ಐಟಿ ಕ್ಷೇತ್ರದಲ್ಲಿ ಮುಂದೆ ನುಗ್ಗುತ್ತಿದ್ದ ಬಾಲಾಜಿ ಆನ್ ಲೈನ್ ಮೂಲಕ ಸೀರೆ ವ್ಯಾಪಾರಕ್ಕೆ ತೊಡಗಿಕೊಂಡರು. ಸ್ನ್ಯಾಪ್ ಡೀಲ್ ನೆರವನ್ನು ಪಡೆದುಕೊಂಡ ಬಾಲಾಜಿ ಅತ್ಯುತ್ತಮ ಛಾಯಾಗ್ರಾಹಕರನ್ನು ಬಳಸಿಕೊಂಡು ತಮ್ಮ ಉತ್ಪನ್ನವನ್ನು ಆನ್ ಲೈನ್ ನಲ್ಲಿ ಮಾರಾಟಕ್ಕೆ ತೆರೆದಿಟ್ಟರು.

ಪ್ರತಿ ಮೂರು ತಿಂಗಳಿಗೊಮ್ಮೆ ಬದಲಾಗುವ ಟ್ರೆಂಡ್ ಗೆ ಹೊಂದಿಕೆಯಾಗುವಂತೆ ಬಾಲಾಜಿ ತಮ್ಮ ಉತ್ಪನ್ನಗಳನ್ನು ಪ್ರದರ್ಶನ ಮಾಡುತ್ತಿದ್ದಾರೆ. ಮಹಿಳೆಯರ ಮನದ ಇಂಗಿತವನ್ನು ಅರಿತಿರುವ ಬಾಲಾಜಿ ಅದಕ್ಕೆ ಅನುಗುಣವಾಗಿ ಯೋಜನೆಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ.

* ದರ್ಶನ್ ರಾಜ್ ಪಾರಾ
ಶಾಲೆಯನ್ನು ಅರ್ಧಕ್ಕೆ ತೊರೆದ ದರ್ಶನ್ ರಾಜ್ ಪಾರಾ ರಾಜ್ ಕೋಟ್ ನ ಚಿನ್ನದ ಹುಡುಗ ಎಂದೇ ಹೆಸರು ಮಾಡಿದ್ದಾರೆ. ತಾವೇ ಸ್ವತಃ ವಿವಿಧ ಬಗೆಯ ಡಿಸೈನ್ ಗಳನ್ನು ಬಿಡುಗಡೆ ಮಾಡುವುದರಲ್ಲೂ ಪ್ರೌಢಿಮೆ ಸಾಧಿಸಿದ್ದಾರೆ.

ಆಟೊಕ್ಯಾಡ್ ತಯಾರಿಕೆಲ್ಲಿ ಹಿಡಿತ ಸಧಿಸಿದ ದರ್ಶನ್ ನಂತರ ಸ್ನ್ಯಾಪ್ ಡೀಲ್ ಸಂಪರ್ಕಕ್ಕೆ ಬಂದರು. ಪ್ರತಿ ಮೂರು ತಿಂಗಳಿಗೊಮ್ಮೆ ತಮ್ಮ ಡಿಸೈನ್ ಬದಲಿಸುವುದನ್ನು ರೂಢಿಮಾಡಿಕೊಂಡ ದರ್ಶನ್ ಬಳಿ ಇದೀಗ 15 ಹೊಸ ಯೋಜನೆಗಳಿವೆ.

* ಪ್ರವಿಧಿ ಲಖೋಟಿಯ
ಮೊದಲಿನಿಂದಲೂ ಆನ್ ಲೈನ್ ಮಾರುಕಟ್ಟೆಯಲ್ಲಿ ತೊಡಗಿಕೊಂಡಿದ್ದ ಪ್ರವಿಧಿ ಲಖೋಟಿಯ 2012ರಲ್ಲಿ ಸ್ನ್ಯಾಪ್ ಡೀಲ್ ನೆರವು ಪಡೆದುಕೊಂಡರು. ಅವರು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವಸ್ತುಗಳಿಗೆ ಏಕಾಏಕಿ ಬೇಡಿಕೆ ಕುದುರಿತು. ಸ್ನ್ಯಾಪ್ ಡೀಲ್ ನ ಕ್ಯಾಪಿಟಲ್ ಅಸಿಟ್ ಕಾರ್ಯಕ್ರಮದ ಅಡಿ ನೋಂದಾವಣಿ ಮಾಡಿಕೊಂಡು ತಮ್ಮ ಮಾರ್ಕೆಟಿಂಗ್ ತಂತ್ರದ ಮೂಲಕ ಯಶಸ್ಸು ಕಂಡುಕೊಂಡಿದ್ದಾರೆ.

* ವಿ ಎಸ್ ಚಂದ್ರಿಕಾ ಕುಮಾರ್
ತಂತ್ರಜ್ಞಾನಕ್ಕೆ ಸಂಬಂಧಿಸಿದ ಹೊಸ ಉತ್ಪನ್ನಗಳನ್ನು ಆನ್ ಲೈನ್ ಮೂಲಕ ಜನರಿಗೆ ನೀಡುವುದರಲ್ಲಿ ಚಂದ್ರಿಕಾ ತೊಡಗಿಕೊಂಡಿದ್ದರು. ಇಂದು ಅವರ ಬಳಿ 32 ಜನರ ತಂಡ ಕೆಲಸ ಮಾಡುತ್ತಿದೆ. ಅಲ್ಲದೇ ಜನರಿಗೆ ಮತ್ತಷ್ಟು ಸುಲಭವಾಗಿ ಹತ್ತಿರವಾಗುವ ಸಾಫ್ಟ್ ವೇರ್ ಕಂಡುಹಿಡಿಯುವುದರಲ್ಲಿಯೂ ಸಂಶೋಧನೆ ಮಾಡುತ್ತಿದ್ದಾರೆ.

* ರಾಮಾನುಜ ಚಾರಿ
ಗ್ರಾಹಕರೇ ಮಾರುಕಟ್ಟೆಯ ರಾಜರು ಎಂದು ಅರಿತುಕೊಂಡ ರಾಮಾನುಜ ಅದಕ್ಕೆ ಅನುಗುಣವಾಗಿಯೇ ತಮ್ಮ ತಂತ್ರಗಳನ್ನು ರೂಪಿಸಿಕೊಳ್ಳುತ್ತ ಬಂದರು. ಕ್ಯಾಲಿಟಿಗೆ ವಿಶೇಷ ಗಮನ ನೀಡಿ ಅತ್ಯುತ್ತಮ ಉತ್ಪನ್ನಗಳನ್ನು ಜನರಿಗೆ ತಲುಪಿಸಿದರು. ಎಲ್ಲ ಕಂಪನಿಗಳ ಅತ್ಯುತ್ತಮ ಬ್ರಾಂಡ್ ಗಳ ಪಟ್ಟಿಯನ್ನು ನೀಡುವುದೇ ಇವರ ಮುಖ್ಯ ಉದ್ದೇಶವಾಗಿದೆ.

* ಅಂಶು ಅಗರ್ ವಾಲ್
ಅಜ್ಮೀರದ ಹುಡುಗಿ ಉತ್ಪನ್ನಗಳ ಕ್ರೂಢೀಕರಣ ಮಾಡಿ ಸ್ನ್ಯಾಪ್ ಡೀಲ್ ನಲ್ಲಿ ಮಾರಾಟ ಮಾಡಲು ಮುಂದಾದ ನಂತರ ತಮ್ಮ ವಹಿವಾಟಿನಲ್ಲಿ ಏಕಾಏಕಿ ಏರಿಕೆಯನ್ನು ಸಾಧಿಸಿದರು. 2013 ರಲ್ಲಿ ಸ್ನ್ಯಾಪ್ ಡೀಲ್ ಗೆ ಸೇರಿದ ಇವರ ಬಳಿ ಸದ್ಯ 100 ಕ್ಕೂ ಅಧಿಕ ಡಿಸೈನ್ ಗಳಿವೆ.

ಕೊನೆ ಮಾತು:
ನಿಮ್ಮದೇ ಉತ್ಪನ್ನವಿರಬಹುದು, ಇಲ್ಲಾ ಬೇರೆ ಕಂಪನಿಯ ಉತ್ಪನ್ನಗಳನ್ನು ನಿಮ್ಮದೇ ಚಿಂತನೆ ಅಡಿಯಲ್ಲಿ ಮಾರಾಟ ಮಾಡಲು ಮುಂದಾಗುವುದಿದ್ದರೆ ಸ್ನ್ಯಾಪ್ ಡೀಲ್ ಅದಕ್ಕೊಂದು ಉತ್ತಮ ವೇದಿಕೆಯನ್ನು ನಿರ್ಮಾಣ ಮಾಡಿ ಕೊಡುತ್ತದೆ(ಗುಡ್ ರಿಟರ್ನ್ಸ್.ಇನ್)

* ಸ್ನ್ಯಾಪ್ ಡೀಲ್ ನಲ್ಲಿ ಬಗೆಬಗೆಯ ಕೊಡುಗೆಗಳು

English summary

8 successful ecommerce sellers share their secrets to success

Do you have a dream? A desire to create something of your own? Are you wondering if there's a way to get there easier and faster, minus the struggle?Here are the stories of 8 Indians who believed that they had something unique to sell, something great to achieve, and someone inspiring to become - but never believed it would be this easy. So how did they crack Digital India? What were their secrets to success?
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X