For Quick Alerts
ALLOW NOTIFICATIONS  
For Daily Alerts

ಹಣ ಹೂಡಲು ಕಾರ್ಪೋರೇಟ್ ಡಿಪಾಸಿಟ್ ಉತ್ತಮ ತಾಣವೇ?

|

ಹಣವನ್ನು ಷೇರು ಮಾರುಕಟ್ಟೆಯಲ್ಲಿ, ಬ್ಯಾಂಕ್ ಡಿಪಾಸಿಟ್ ಗಳಲ್ಲಿ, ಮ್ಯೂಚುವಲ್ ಫಂಡ್ ಗಳಲ್ಲಿ ತೊಡಗಿಸಬಹುದು. ಅದಕ್ಕೆ ಅನುಗುಣವಾಗಿ ಬಡ್ಡಿ ಪಡೆಯಬಹುದು. ಕಾರ್ಪೋರೇಟ್ ಡಿಪಾಸಿಟ್ ಗಳಲ್ಲೂ ಸಹ ಹಣ ಹೂಡಿಕೆ ಮಾಡಲು ಅವಕಾಶವಿದೆ.

ಬ್ಯಾಂಕ್ ಡಿಪಾಸಿಟ್ ಗಳು ಎಲ್ಲರಿಗೂ ಗೊತ್ತು. ಇದೇ ವಿಧಾನದಲ್ಲಿ ಹಣ ಹೂಡಿಕೆ ಮಾಡಲು ಮತ್ತೊಂದು ಜಾಗವಿದೆ ಅದುವೇ ಕಾರ್ಪೋರೇಟ್ ಡಿಪಾಸಿಟ್. ಕಾರ್ಪೋರೇಟ್ ಡಿಪಾಸಿಟ್ ಸಹ ಬ್ಯಾಂಕ್ ಡಿಪಾಸಿಟ್ ನಂತೆಯೇ, ಆದರೆ ಇಲ್ಲಿ ಹಣವನ್ನು ಬ್ಯಾಂಕ್ ನಲ್ಲಿ ಹೂಡಿಕೆ ಮಾಡಲಾಗಿರುವುದಿಲ್ಲ. ಬದಲಾಗಿ ಕಾರ್ಪೋರೇಟ್ ಕಂಪನಿಗಳ ಆಧಾರದಲ್ಲಿ ಹಾಕಿರಲಾಗುತ್ತದೆ.

ಹಣಕಾಸು ಸಂಸ್ಥೆಗಳು ಮತ್ತು ಬ್ಯಾಕಿಂಗ್ ಕೆಲಸ ಮಾಡದ ಸಂಸ್ಥೆಗಳು ಸಹ ಈ ಬಗೆಯ ಡಿಪಾಸಿಟ್ ಗಳಿಗೆ ಅನುವು ಮಾಡಿಕೊಡುತ್ತವೆ. ಹಾಗಾದರೆ ಕಾರ್ಪೋರೇಟ್ ಡಿಪಾಸಿಟ್ ಎಂದರೆ ಏನು? ಇದರಲ್ಲಿ ಹೂಡಿಕೆ ಮಾಡಿ ಲಾಭ ಸಾಧಿಸಬಹುದೇ? ಮೂಲಭೂತ ಅಂಶಗಳು ಯಾವವು ಎಂಬುದರ ಮೇಲೆ ಒಂದು ನೋಟ ಇಲ್ಲಿದೆ.(ಗುಡ್ ರಿಟರ್ನ್ಸ್.ಇನ್)

ರಿಸ್ಕ್ ಜತೆಗೆ ಇದೆ

ರಿಸ್ಕ್ ಜತೆಗೆ ಇದೆ

ಇದು ರಿಸ್ಕ್ ತೆಗೆದುಕೊಂಡು ಮಾಡಬೇಕಾದ ಹೂಡಿಕೆ. ಯಾವ ವಿಮಾ ಕಂಪನಿಯೂ ಇದಕ್ಕೆ ಭದ್ರತೆಯನ್ನು ಒದಗಿಸುವುದಿಲ್ಲ. ಬ್ಯಾಂಕ್ ಡಿಪಾಸಿಟ್ ಗೆ ಹೋಲಿಸಿದರೆ ಇದು ಅಷ್ಟು ಸುರಕ್ಷಿತ ತಂತ್ರವಲ್ಲ.

ಬಡ್ಡಿದರ

ಬಡ್ಡಿದರ

ಸಾಮಾನ್ಯವಾಗಿ ಬಡ್ಡಿದರ ಬ್ಯಾಂಕ್ ನಲ್ಲಿ ನೀಡುವುದಕ್ಕಿಂತ ಅಧಿಕವಾಗಿರುತ್ತದೆ. ಇದನ್ನು ನೀವು ಹಣ ಹೂಡಿಕೆ ಮಾಡುವ ಸಂದರ್ಭದಲ್ಲೇ ಅರಿತಿರುತ್ತೀರಿ.

ಬಡ್ಡಿ ಪಾವತಿ ಹೇಗೆ?

ಬಡ್ಡಿ ಪಾವತಿ ಹೇಗೆ?

ನೀವು ಹೂಡಿಕೆ ಮಾಡಿದ ಯೋಜನೆಗೆ ಅನುಗುಣವಾಗಿ ಬಡ್ಡಿ ನೀಡಲಾಗುತ್ತದೆ. ತಿಂಗಳು, ತ್ರೈಮಾಶಿಕ, ಅರ್ಧವಾರ್ಷಿಕ ಮತ್ತು ವಾರ್ಷಿಕ ಲೆಕ್ಕದಲ್ಲಿಯೂ ಬಡ್ಡಿ ನೀಡಿಕೆ ಸೌಲಭ್ಯಗಳಿವೆ.

ಅವಧಿಗೂ ಮುನ್ನ ವಿಥ್ ಡ್ರಾ
 

ಅವಧಿಗೂ ಮುನ್ನ ವಿಥ್ ಡ್ರಾ

ಅವಧಿಗೂ ಮುನ್ನ ವಿಥ್ ಡ್ರಾ ಮಾಡಲು ಅವಕಾಶವಿದೆ. ಆದರೆ ಕೆಲ ಪ್ರಮಾಣದ ಶುಲ್ಕ ನೀಡಬೇಕಾಗುತ್ತದೆ.

ಬೇಗ ವಿಥ್ ಡ್ರಾ ಮಾಡಿದರೆ ಬಡ್ಡಿ ಇಲ್ಲ

ಬೇಗ ವಿಥ್ ಡ್ರಾ ಮಾಡಿದರೆ ಬಡ್ಡಿ ಇಲ್ಲ

ಆರು ತಿಂಗಳು ಅಥವಾ ಅದಕ್ಕಿಂತ ಮುನ್ನವೇ ಹೂಡಿಕೆ ಮಾಡಿದ್ದ ಹಣವನ್ನು ಡ್ರಾ ಮಾಡಲು ಮುಂದಾದರೆ ಬಡ್ಡಿ ನೀಡಲಾಗುವುದಿಲ್ಲ. ಜತೆಗೆ ಕೆಲ ನಿಬಂಧನೆಗಳನ್ನು ಪಾಲಿಸಬೇಕಾಗುತ್ತದೆ.

ಕ್ರೆಡಿಟ್ ರೇಟಿಂಗ್

ಕ್ರೆಡಿಟ್ ರೇಟಿಂಗ್

ಸದ್ಯ ಮಾರುಕಟ್ಟೆಯಲ್ಲಿ ಈ ಬಗೆಯ ಹೂಡಿಕೆಗೆ ಉತ್ತಮ ರೇಟಿಂಗ್ ಇದೆ. ಸರಿಯಾದ ಸಮಯಕ್ಕೆ ಬಡ್ಡಿ ಪಾವತಿಯಾಗುತ್ತಿದ್ದು ಉತ್ತಮ ಹೆಸರು ಕಾಪಾಡಿಕೊಂಡಿದೆ.

English summary

Corporate Fixed Deposits: 7 Must Know Points

Corporate fixed deposits are very similar to bank fixed deposits where the money is invested in corporate and not with a bank. Financial Institutions and Non-Banking Finance Companies (NBFCs) also accept such deposits. There are two types of fixed deposit schemes one is cumulative and other is non-cumulative fixed deposit schemes.
Story first published: Friday, September 4, 2015, 15:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X