For Quick Alerts
ALLOW NOTIFICATIONS  
For Daily Alerts

ಮೊಬೈಲ್ ಬ್ಯಾಕಿಂಗ್ : ಸಿಮ್ ಸ್ವಾಪ್ ವಂಚನೆ ಬಗ್ಗೆ ಎಚ್ಚರ!

By Mahesh
|

ಬೆಂಗಳೂರು, ಸೆ.30: ಮೊಬೈಲ್ ಫೋನ್ ಮೂಲಕ ಬ್ಯಾಂಕಿಂಗ್ ಸೇವೆಗಳು ಸುಲಭವಾಗಿ , ಸರಳವಾಗಿ ಗ್ರಾಹಕರಿಗೆ ಲಭ್ಯವಾಗುತ್ತಿದೆ. ಸುರಕ್ಷತೆಯ ಭೀತಿಯ ನಡುವೆ ಒನ್ ಟೈಮ್ ಪಾಸ್ ವರ್ಡ್ (ಒಟಿಪಿ) ಮಾದರಿಯಲ್ಲಿ ಅನೇಕ ವಿಧಾನಗಳು ಜಾರಿಯಲ್ಲಿದ್ದರೂ ಭದ್ರತಾ ಲೋಪಗಳು ಆಗಾಗ ಸಂಭವಿಸುತ್ತಿರುತ್ತದೆ.

 

ತಂತ್ರಜ್ಞಾನ ಬಳಕೆಯಿಂದ ಲಾಭದ ಜೊತೆಗೆ ನಷ್ಟವೋ ಇರುತ್ತದೆ. ಸೈಬರ್ ವಂಚನೆ ಪ್ರಕರಣಗಳ ಸಾಲಿನಲ್ಲಿ ಇಮೇಲ್ ಫಿಶಿಂಗ್, ಪಾಸ್ ವರ್ಡ್ ಹ್ಯಾಕ್, ಕಾರ್ಡ್ ಸ್ಕಿಮಿಂಗ್, ವಿಶಿಂಗ್, ಐಡೆಂಟೆಟಿ ಕಳ್ಳತನದ ಜೊತೆಗೆ ಸಿಮ್ (SIM) ಸ್ವಾಪ್ ವಂಚನೆ ಸೇರಿಕೊಂಡಿದೆ.

 

ಏನಿದು ಸಿಮ್ ಸ್ವಾಪ್ ವಂಚನೆ?
ಸಿಮ್ ಸ್ವಾಪ್ ವಂಚನೆಯಲ್ಲಿ ನಿಮ್ಮ ಮೊಬೈಲ್ ನಲ್ಲಿರುವ ಸಿಮ್ ಕಾರ್ಡನ್ನು ಬದಲಾಯಿಸಿ ತಮ್ಮ ಹೆಸರಿನಲ್ಲಿರುವ ಮತ್ತೊಂದು ಸಿಮ್ ಕಾರ್ಡ್ ಹಾಕುತ್ತಾರೆ. ಈ ಮೂಲಕ ಸಿಮ್ ಬದಲಾವಣೆ ಮಾಡಿಕೊಂಡು ಬ್ಯಾಂಕಿಂಗ್ ವ್ಯವಹಾರ ಪೂರೈಸಿಕೊಳ್ಳುತ್ತಾರೆ. ಒಟಿಪಿ ಹಾಗೂ ಅಲರ್ಟ್ ಗಳು ಸುಲಭವಾಗಿ ವಂಚಕರ ಕೈ ಸೇರುತ್ತದೆ.[ಸೈಬರ್ ಹ್ಯಾಕರ್ ಗಳಿಂದ ತಪ್ಪಿಸಿಕೊಳ್ಳೋದು ಹೇಗೆ?]

ಮೊಬೈಲ್ ಬ್ಯಾಕಿಂಗ್ : ಸಿಮ್ ಸ್ವಾಪ್ ವಂಚನೆ ಬಗ್ಗೆ ಎಚ್ಚರ!

ಸಿಮ್ ಸ್ವಾಪ್ ಹೇಗೆ ಕಾರ್ಯನಿರ್ವಹಿಸುತ್ತದೆ?
ಸಿಮ್ ಮೂಲಕ ನಿಮ್ಮ ವೈಯಕ್ತಿಕ ದಾಖಲೆ ಪಡೆದುಕೊಂಡು ಫಿಶಿಂಗ್ ದಾಳಿಯಂತೆ ಬ್ಯಾಂಕ್ ಖಾತೆಗೆ ಕನ್ನ ಹಾಕಬಹುದು. ತಮ್ಮ ಖಾತೆಗೆ ಹಣ ವರ್ಗಾಯಿಸಿಕೊಳ್ಳಬಹುದು. ನಿಮ್ಮ ಹೆಸರಿನಲ್ಲಿ ವಂಚಕರು ಡೂಪ್ಲಿಕೇಟ್ ಸಿಮ್ ಪಡೆದುಕೊಂಡು ಈ ರೀತಿ ವಂಚನೆ ಮಾಡುತ್ತಾರೆ. ಮೊಬೈಲ್ ಕಳೆದು ಹೋಗಿದೆ,. ಸಿಮ್ ಕಾರ್ಡ್ ಹಾಳಾಗಿದೆ ಎಂದು ದೂರು ನೀಡಿ ಮೊಬೈಲ್ ಸೇವಾ ಸಂಸ್ಥೆಯಿಂದ ನಕಲಿ ಸಿಮ್ ಪಡೆದುಕೊಳ್ಳುತ್ತಾರೆ. [ಬ್ಯಾಂಕ್ ಖಾತೆಯೊಂದಿಗೆ ಮೊಬೈಲ್ ಸಂಖ್ಯೆ ನೋಂದಣಿ ಏಕೆ?]

ಸಿಮ್ ಸ್ವಾಪ್ ಭೀತಿಗೆ ಏನು ಪರಿಹಾರ?
* ಬ್ಯಾಂಕಿಂಗ್ ವ್ಯವಹಾರ ಮಾಡುವಾಗ ಇತರೆ ಯಾವುದೇ ವಿಂಡೋಸ್ ಓಪನ್ ಮಾಡಬೇಡಿ. ಕ್ಯಾಶ್ (Cache) ಕ್ಲಿಯರ್ ಮಾಡಿರಿ. ಹೆಚ್ಚುವರಿ ಸುರಕ್ಷತಾ ವಿಧಾನಗಳಿದ್ದರೆ ಬಳಸಿ.
* ಬ್ಯಾಂಕಿನಿಂದ ಸುಮಾರು ಕಾಲವಾದರೂ ಯಾವುದೇ ಅಲರ್ಟ್ ಅಥವಾ ಕರೆ ಬರದಿದ್ದರೆ ತಕ್ಷಣವೇ ಬ್ಯಾಂಕಿಗೆ ದೂರು ನೀಡಿ.
* ವೈಯಕ್ತಿಕ ವಿಷಯಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಳ್ಳಬೇಡಿ.
* ಬ್ಯಾಂಕಿಂಗ್ ವ್ಯವಹಾರಕ್ಕಾಗಿ ಪ್ರತ್ಯೇಕ ಇಮೇಲ್ ಐಡಿ ಬಳಸಿದರೆ ಉತ್ತಮ
(ಗುಡ್ ರಿಟರ್ನ್ಸ್. ಇನ್)

English summary

SIM Swap Fraud: How It Could Affect Your Banking Transactions?

Mobile Phones have made banking easy on fingertips. And for most of the banking transaction we receive One Time Password (OTP) to make the transaction secure. There are various risk associated with banking with phishing, cyber stalking, identity theft, card skimming, vishing and the latest one to the list is SIM swap fraud.
Story first published: Wednesday, September 30, 2015, 18:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X