For Quick Alerts
ALLOW NOTIFICATIONS  
For Daily Alerts

ಕಳೆದುಕೊಂಡ ಡೆಬಿಟ್ ಕಾರ್ಡ್ ಬ್ಲಾಕ್ ಮಾಡೋದು ಹೇಗೆ?

|

ಆಧುನಿಕ ಪ್ರಪಂಚದಲ್ಲಿ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಇಲ್ಲದೇ ಬದುಕಲೇ ಸಾಧ್ಯವಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ನಗರದ ವಾಸಿಗಳಿಗೆಂತೂ ಡೆಬಿಟ್ ಕಾರ್ಡ್ ಇಲ್ಲದೇ ವ್ಯವಹಾರವೇ ಸಾಧ್ಯವಿಲ್ಲ ಎಂಬ ಸ್ಥಿತಿ ತಂದುಕೊಂಡಿದ್ದಾರೆ.

 

ಒಂದು ವೇಳೆ ಆಕಸ್ಮಿಕವಾಗಿ ನಿಮ್ಮ ಡೆಬಿಟ್ ಕಾರ್ಡ್ ಕಳೆದುಕೊಂಡರೆ? ಹೌದು ಇಂಥದ್ದೊಂದು ಸಮಸ್ಯೆ ಎದುರಾದರೆ ಏನು ಮಾಡಬೇಕು ಎಂಬುದು ತಕ್ಷಣಕ್ಕೆ ಗೊತ್ತಾಗುವುದಿಲ್ಲ. ಅದಕ್ಕೆ ಉತ್ತರ ಇಲ್ಲಿದೆ.[ಎಟಿಎಂನೊಳಗೆ ಕಾರ್ಡ್ ಸಿಕ್ಕೊಂಡ್ರೆ ಏನು ಮಾಡೊದು?]

 
ಕಳೆದುಕೊಂಡ ಡೆಬಿಟ್ ಕಾರ್ಡ್ ಬ್ಲಾಕ್ ಮಾಡೋದು ಹೇಗೆ?

* ನೆಟ್ ಬ್ಯಾಂಕಿಂಗ್
ಇದು ಬಹಳ ಸರಳ ಮತ್ತು ಸುಲಭ ವಿಧಾನ. ನಿಮ್ಮ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ನ್ನು ಕೂಡಲೇ ಬ್ಲಾಕ್ ಮಾಡಲು ಇಲ್ಲಿ ಸಾಧ್ಯವಿದೆ. ನಿಮ್ಮ ನೆಟ್ ಬ್ಯಾಂಕಿಂಗ್ ಖಾತೆಗೆ ಲಾಗ್ ಇನ್ ಆಗಿ ಅಲ್ಲಿ ತಿಳಿಸಿರುವಂತೆ ಮಾಡಿದರೆ ಸಾಕು.

ಇದು ಕೆಲವೇ ಕ್ಷಣದಲ್ಲಿ ನಡೆದುಹೋಗುವ ಪ್ರಕ್ರಿಯೆ, ಆದರೆ ಇಲ್ಲಿ ನಿಮಗೆ ಇಂಟರ್ ನೆಟ್ ಸೌಲಭ್ಯ ಇರಬೇಕಾಗುತ್ತದೆ. ಎಲ್ಲ ಆಯ್ಕೆಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡ ನಂತರವೇ ಕಾರ್ಡ್ ಬ್ಲಾಕ್ ಆಗುತ್ತದೆ.

* ಫೋನ್ ಬ್ಯಾಂಕಿಂಗ್
ಅಂತರ್ಜಾಲ ಸಂಪರ್ಕ ಸಾಧ್ಯವಿಲ್ಲದಿದ್ದಾಗ ಫೋನ್ ಬ್ಯಾಂಕಿಂಗ್ ಬಳಸಿ ಬ್ಲಾಕ್ ಮಾಡಬಹುದು. ಕರೆ ಮಾಡಿದಾಗ ಬ್ಯಾಂಕಿನವರು ಕೇಳುವ ಮಾಹಿತಿ ನೀಡಬೇಕಾಗುತ್ತದೆ, ಅದು ಗುರುತಿನ ಪತ್ರದ ವಿವರ, ಜನ್ಮ ದಿನಾಂಕ ಯಾವುದು ಇರಬಹುದು.

ಎಸ್ ಬಿಐ ಕಾರ್ಡ್ ದಾರರು ಐವಿಆರ್ ಮೂಲಕವೂ ಬ್ಲಾಕ್ ಮಾಡಲು ಸಾಧ್ಯವಿದೆ. ನಿಮ್ಮ ನಗರದ ಎಸ್ ಟಿಡಿ ಕೋಡ್ ಬಳಕೆ ಮಾಡಿಕೊಂಡು 3902 0202 ಕ್ಕೆ ಡಯಲ್ ಮಾಡಿ ಬ್ಲಾಕ್ ಮಾಡಬಹುದು.[ಡೆಬಿಟ್ ಕಾರ್ಡ್ ಕಳೆದುಕೊಂಡರೆ ಏನು ಮಾಡಬೇಕು?]

* ಎಸ್ ಎಂಎಸ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹ ತನ್ನ ಗ್ರಾಹಕರಿಗೆ ಎಸ್ ಎಂಎಸ್ ಸೌಲಭ್ಯ ಕಲ್ಪಿಸಿಕೊಟ್ಟಿದೆ. ಬ್ಯಾಂಕ್ ನಲ್ಲಿ ನೀವು ನೋಂದಣಿಗೆ ನೀಡಿರುವ ಮೊಬೈಲ್ ಸಂಖ್ಯೆಯ ಮೂಲಕವೇ ಸಂದೇಶ ರವಾನೆ ಮಾಡಬೇಕು. BLOCKXXXX to 567676 ಎಂದು ಸಂದೇಶ ರವಾನೆ ಮಾಡಿದರೆ ನಿಮ್ಮ ಕಾರ್ಡ್ ಬ್ಲಾಕ್ ಆದ ಬಗ್ಗೆ ಒಂದು ದೃಢೀಕರಣ ಸಂದೇಶ ಸಹ ಬರುತ್ತದೆ.

* ಬ್ಯಾಂಕ್ ಶಾಖೆಗೆ ಭೇಟಿ
ನೀವು ಕಾರ್ಡ್ ಕಳೆದುಕೊಂಡ ಸಂಬಂಧ ಕೆಲ ದಾಖಲಾತಿಗಳನ್ನು ಹಿಡಿದುಕೊಂಡು ಬ್ಯಾಂಕ್ ಶಾಖೆಗೆ ನೇರವಾಗಿ ತೆರಳಿ ಕಾರ್ಡ್ ಬ್ಲಾಕ್ ಮಾಡಿಸಬಹುದು. ನಂತರ ಹೊಸ ಕಾರ್ಡ್ ಗೆ ಅರ್ಜಿ ಸಹ ಸಲ್ಲಿಕೆ ಮಾಡಬಹುದು.

ಇವಿಷ್ಟು ಅಂಶ ಯಾವಾಗಲೂ ಗಮನದಲ್ಲಿರಲಿ
* ಹೊಸ ಕಾರ್ಡ್ ನೀಡಲು ಬ್ಯಾಂಕ್ ನಿರ್ದಿಷ್ಟ ಶುಲ್ಕ ಪಡೆದುಕೊಳ್ಳಬಹುದು.
* ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಸಿದ ನಂತರ ಕಾರ್ಡ್ ನಿಮ್ಮ ಕೈ ಸೇರಲು 2 ರಿಂದ 4 ದಿನ ಬೇಕಾಗಬಹುದು.
* ಬ್ಯಾಂಕ್ ನ ಟೋಲ್ ಫ್ರೀ ನಂಬರ್ ಗೆ ಕಾಲ್ ಮಾಡಿ ಬ್ಲಾಕ್ ಮಾಡಲು ಸಾಧ್ಯವಿದೆ.
* ನೆಟ್ ಬ್ಯಾಂಕಿಂಗ್ ಸೌಲಭ್ಯ ಹೊಂದಿರುವವರು ಮಾತ್ರ ಆನ್ ಲೈನ್ ಮೂಲಕ ಬ್ಲಾಕ್ ಮಾಡಲು ಸಾಧ್ಯವಿದೆ.

ಕೊನೆ ಮಾತು: ಆಕಸ್ಮಿಕವಾಗಿ ಕಾರ್ಡ ಕಳೆದು ಹೋದರೆ ಕೂಡಲೇ ಬ್ಲಾಕ್ ಮಾಡಬೇಕು. ಇಲ್ಲವಾದಲ್ಲಿ ನಿಮ್ಮಹಣ ಬೇರೆಯವರ ಪಾಲಾಗುವ ಸಾಧ್ಯತೆ ಇದೆ. ಬೇರೆಯವರ ಕೈಗೆ ಕಾರ್ಡ್ ನೀಡದಂತೆ ಅಥವಾ ಜೋಪಾನವಾಗಿ ಕಾಪಾಡಿಕೊಳ್ಳುವ ಜವಾಬ್ದಾರಿ ನಿಮ್ಮದೇ ಆಗಿರುತ್ತದೆ.(ಗುಡ್ ರಿಟರ್ನ್ಸ್.ಇನ್)

English summary

How To Block A Lost Debit Card?

It becomes increasingly difficult to imagine life without a debit or a credit card for a few days. It can be agonizing, if we have misplaced these cards. But, in case we have, we must be swift to block the debit card, so as to ensure that they are not misused by people. There are different ways through which you can block your card.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X