For Quick Alerts
ALLOW NOTIFICATIONS  
For Daily Alerts

ಪ್ರಾಪರ್ಟಿ ಟ್ಯಾಕ್ಸ್ ಎಂದರೇನು? ಯಾರು ಕಟ್ಟಬೇಕು?

|

ಪ್ರಾಪರ್ಟಿ ಟ್ಯಾಕ್ಸ್ ಎಂಬ ಪದವನ್ನು ಕೇಳಿಯೇ ಇರುತ್ತಿರಿ. ಹಾಗಾದರೆ ಪ್ರಾಪರ್ಟಿ ಟ್ಯಾಕ್ಸ್ ಅಥವಾ ಆಸ್ತಿ ತೆರಿಗೆ ಎಂದರೇನು? ಎಂಬುದನ್ನು ತಿಳಿದುಕೊಳ್ಳುವುದು ಅಷ್ಟೇ ಮುಖ್ಯವಾಗುತ್ತದೆ.

 

ನೀವು ಹೊಂದಿರಬಹುದಾದ ಮನೆ, ನಿವೇಶನಕ್ಕೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗೆ ಸಲ್ಲಿಕೆ ಮಾಡುವ ತೆರಿಗೆಯನ್ನು ಆಸ್ತಿ ತೆರಿಗೆ ಎಂದು ಕರೆಯಬಹುದು. ಭಾರತದಲ್ಲಿ ಇದನ್ನು ಮನೆ ಕರ(ಗೃಹ ತೆರಿಗೆ) ಎಂದು ಕರೆಯಲಾಗುತ್ತದೆ. ನಿಮ್ಮ ಸ್ಥಳೀಯ ಸಂಸ್ಥೆಗೆ ಅಂದರೆ ಮುನ್ಸಿಪಾಲಿಟಿ ಇಲ್ಲಾ ಗ್ರಾಮ ಪಂಚಾಯಿತಿ, ನಗರಸಭೆಗೆ ತೆರಿಗೆಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ.

 
ಪ್ರಾಪರ್ಟಿ ಟ್ಯಾಕ್ಸ್ ಎಂದರೇನು? ಯಾರು ಕಟ್ಟಬೇಕು?

ಈ ತೆರಿಗೆ ಪ್ರಮಾಣ ನಗರದಿಂದ ನಗರಕ್ಕೆ ಬದಲಾಗುತ್ತದೆ. ನೀವು ಹೊಂದಿರುವ ಮನೆ ಖಾಲಿಯಿದ್ದು ಯಾರೂ ಬಾಡಿಗೆಗೆ ಇಲ್ಲ ಎಂದಾದರೂ ತೆರಿಗೆ ಸಲ್ಲಿಕೆ ಮಾಡಲೇ ಬೇಕಾಗುತ್ತದೆ. ನೀವು ಹೊಂದಿರಬಹುದಾದ ರೆಸಿಡೆನ್ಶಿಯಲ್ ಹೌಸ್, ಆಫೀಸ್ ಬಿಲ್ಡಿಂಗ್, ಫಾಕ್ಟರಿ ಬಿಲ್ಡಿಂಗ್, ನಿವೇಶನ ಮತ್ತು ಅಂಗಡಿಗಳಿಗೆ ನಿರ್ದಿಷ್ಟ ತೆರಿಗೆ ಸಲ್ಲಿಕೆ ಮಾಡಬೇಕಾಗುತ್ತದೆ.[ಸೇವಿಂಗ್ ಅಕೌಂಟ್ ಗಿಂತ ಕರೆಂಟ್ ಅಕೌಂಟ್ ಹೇಗೆ ಭಿನ್ನ?]

ಪ್ರಾಪರ್ಟಿ ಟ್ಯಾಕ್ಸ್ ಲೆಕ್ಕ ಹಾಕುವುದು ಹೇಗೆ?

ವರ್ಷದ ಆಧಾರದಲ್ಲಿ ಪ್ರಾಪರ್ಟಿ ಟ್ಯಾಕ್ಸ್ ಲೆಕ್ಕ ಹಾಕಲಾಗುತ್ತದೆ. ನೀವು ಒಂದು ವೇಳೆ ಹೊಂದಿರುವ ಆಸ್ತಿಗೆ ಸಂಬಂಧಿಸಿ ಸ್ಥಳೀಯ ಸಂಸ್ಥೆಗೆ ನಿರ್ದಿಷ್ಟ ಮೊತ್ತದ ಕರ ಸಲ್ಲಿಕೆ ಮಾಡುತ್ತಿದ್ದರೆ ಆದಾಯ ತೆರಿಗೆ ಇಲಾಖೆಗೂ ಎಲ್ಲ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಹೊಂದಿರುವ ಪ್ರಾಪರ್ಟಿಯಿಂದ ವಾರ್ಷಿಕ ಆದಾಯ ಒಂದೇ ಒಂದು ರೂಪಾಯಿ ಬರದೇ ಇದ್ದರೂ ಸಹ ನಿರ್ದಿಷ್ಟ ಮೊತ್ತದ ತೆರಿಗೆ ಸಲ್ಲಿಕೆ ಮಾಡಲೇ ಬೇಕಾಗುತ್ತದೆ.[ಪರ್ಸನಲ್ ಲೋನ್ ಗೆ ವಿವಿಧ ಬ್ಯಾಂಕ್ ಬಡ್ಡಿದರ ಎಷ್ಟು?]

ವ್ಯಕ್ತಿಗಳಿಗೆ ಈ ತೆರಿಗೆಗೆ ಸಂಬಂಧಿಸಿ ಶೇ. 30 ಕಡಿತದ ಲಾಭ ಸಿಗುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಯಾವ ವ್ಯಕ್ತಿ ಈ ಬಗೆಯ ಆಸ್ತಿಯನ್ನು ಹೊಂದಿರುತ್ತಾನೋ ಆತ ಪ್ರಾಪರ್ಟಿ ಟ್ಯಾಕ್ಸ್ ಸಲ್ಲಿಕೆ ಮಾಡಲೇ ಬೇಕಾಗುತ್ತದೆ.(ಗುಡ್ ರಿಟರ್ನ್ಸ್.ಇನ್)

English summary

What Is Property Tax? Who Should Pay It?

Property tax is kind of tax which is paid by the owner of the property to the local government or to the municipal division of the city. The tax amount depends on the value of the land, area and region. In other countries, it is also called as Mileage Tax. In India, it is also known as "House Tax". The power is delegated in the hand of local governing bodies and municipality on the quantum of tax payable. It could vary each year depending on the levies by the local authorities.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X