For Quick Alerts
ALLOW NOTIFICATIONS  
For Daily Alerts

ಭಾರತದ ರುಪಾಯಿ ಬಗ್ಗೆ ಗೊತ್ತಿಲ್ಲದ 7 ಸಂಗತಿಗಳಿವು

|

ನಾವು ಪ್ರತಿದಿನ ವ್ಯವಹಾರ ನಡೆಸುವುದು ಭಾರತದ ರುಪಾಯಿಯಲ್ಲೇ. ಇದರ ಬಗ್ಗೆ ಹೊಸದಾಗಿ ಹೇಳುವುದು ಏನಿದೆ? ಅಂದುಕೊಳ್ಳಬೇಡಿ. ಆದರೂ ರುಪಾಯಿ ಮತ್ತು ಅದರ ಪ್ರತಿದಿನದ ಆಗು ಹೋಗುಗಳನ್ನು, ಇತಿಹಾಸವನ್ನು ತಿಳಿದುಕೊಳ್ಳಲೇಬೇಕು.

ರುಪಾಯಿಗೆ ರಿಸರ್ವ್ ಬ್ಯಾಂಕ್ "₹" ಚಿಹ್ನೆ ನೀಡಿ ಮಾನ್ಯ ಮಾಡಿದೆ. ಡಾಲರ್ ಎದುರು ರುಪಾಯಿ ಏನಾಯಿತೆಂದು ಮಾತ್ರ ಲೆಕ್ಕ ಹಾಕುವುದಲ್ಲ. ಇದೆಲ್ಲವನ್ನು ತಿಳಿದುಕೊಳ್ಳಿ...

1. ಬ್ಯಾಂಕ್ ಗಳಿಂದ ದೊರೆಯುವ ನೋಟುಗಳನ್ನೇ ಬಳಸುತ್ತೇನೆ
ಹೌದು ಇಂಥದ್ದೊಂದು ಪ್ರತಿಜ್ಞೆಯನ್ನು ಪ್ರತಿಯೊಬ್ಬರು ಕೈಗೊಳ್ಳಬೇಕಿದೆ. ಭಾರತದ ರುಪಾಯಿಯನ್ನು ನಾವು ಕಾನೂನು ಬದ್ಧವಾಗಿಯೇ ಉಪಯೋಗಿಸಬೇಕು.[ಸದ್ಯಕ್ಕೆ ಮಾರುಕಟ್ಟೆಯಿಂದ ದೂರ ಇರೋದೆ ಒಳ್ಳೆಯದು]

ಭಾರತದ ರುಪಾಯಿ ಬಗ್ಗೆ ಗೊತ್ತಿಲ್ಲದ 7 ಸಂಗತಿಗಳಿವು

2. ಅತಿಹೆಚ್ಚು ಮುಖಬೆಲೆ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 1938 ಮತ್ತು 1954 ರಲ್ಲಿ 10 ಸಾವಿರ ರು. ಮುಖಬೆಲೆಯ ನೋಟನ್ನು ಮುದ್ರಣ ಮಾಡಿತ್ತು. ಆದರೆ ನಂತರ ಇದನ್ನು ರದ್ದು ಮಾಡಲಾಯಿತು. ಸದ್ಯದ ಮಟ್ಟಿಗೆ ಹೇಳುವುದಾದರೆ ಸಾವಿರ ರು. ಮುಖಬೆಲೆಯ ನೋಟೇ ದೊಡ್ಡದು.

3. ಭಾರತೀಯ ನಾಣ್ಯಗಳು
ಸದ್ಯ 50 ಪೈಸೆ, 1 ರು., 2 ರು., 5 ಮತ್ತು 10 ರು. ನ ನಾಣ್ಯಗಳು ಚಲಾವಣೆಯಲ್ಲಿವೆ. 50 ಪೈಸೆಯ ನಾಣ್ಯಕ್ಕೆ ಸ್ಮಾಲ್ ಕಾಯಿನ್ಸ್ ಎಂದು ಕರೆದರೆ, ಒಂದು ರು. ಮೇಲಿನವನ್ನು ರುಪಾಯಿ ನಾಣ್ಯಗಳು ಎಂದು ಕರೆಯಲಾಗುತ್ತದೆ. 1,2,3 ,5, 10, 20, ಮತ್ತು 25 ಪೈಸೆ ನಾಣ್ಯಗಳ ಚಲಾವಣೆಯನ್ನು ಜೂನ್ 30, 2011 ರಿಂದ ಬಂದ್ ಮಾಡಲಾಗಿದೆ.

4. ನೋಟು ಮುದ್ರಣ ಮಾಡುವ ಕಾಗದ ಸಹ ಕಾನೂನು ಬದ್ಧವಾಗಿರಬೇಕು. ಹತ್ತಿಯ ಅಂಶವನ್ನು ಒಳಗೊಂಡಿರುತ್ತದೆ.[ಭಾರತದ ಕರೆನ್ಸಿ ಮೌಲ್ಯ ಹೆಚ್ಚಿಸಲಿದೆ ಹಂಪಿ ಕಲ್ಲಿನ ರಥ]

5. ಸರ್ಕಾರದ ವಿನಂತಿಗೆ ಅನುಗುಣವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕರೆನ್ಸಿ ಮುದ್ರಣ ಮಾಡಿ ನೀಡುತ್ತದೆ. ಇಲ್ಲಿ ಕೆಲ ಒಡಂಬಡಿಕೆ ಮತ್ತು ನಿಯಮಾವಳಿಗಳೂ ಇರುತ್ತವೆ.

6. ರಿಸರ್ವ್ ಬ್ಯಾಂಕ್ ಸಹ ನೋಟುಗಳ ಬೇಡಿಕೆ ಲೆಕ್ಕವನ್ನು ತೆಗೆದು ಹೇಳಬಹುದು. ಅರ್ಥ ವ್ಯವಸ್ಥೆ ಮತ್ತು ಇತರ ಸ್ಥಿತಿಗಳಿಗೆ ಅನುಗುಣವಾಗಿ ಬ್ಯಾಂಕ್ ಹೇಳಿಕೆ ನೀಡುತ್ತದೆ.

7. ನಾಸಿಕ್ , ದೇವಾಸ್, ಮೈಸೂರು ಮತ್ತು ಸಾಲ್ಬೋನಿಯಲ್ಲಿರುವ ಆರ್ ಬಿಐ ಕೇಂದ್ರಗಳಲ್ಲಿ ರುಪಾಯಿ ಮುದ್ರಣ ಮಾಡಲಾಗುವುದು. ನಾಣ್ಯಗಳನ್ನು ಮುಂಬೈ, ನೋಯ್ಡಾ, ನಾಸಿಕ್ ಮತ್ತು ಹೈದ್ರಾಬಾದ್ ಕೇಂದ್ರಗಳಲ್ಲಿ ಮುದ್ರಣ ಮಾಡಲಾಗುವುದು.(ಗುಡ್ ರಿಟರ್ನ್ಸ್.ಇನ್)

English summary

7 Must Know Facts On Indian Rupee

The Indian currency is called the Indian Rupee (INR) and the coins are called paise. The design resembles both the Devanagari letter "₹" (ra) and the Latin capital letter "R", with a double horizontal line at the top. Here 5 interesting facts on Indian Rupee.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X