For Quick Alerts
ALLOW NOTIFICATIONS  
For Daily Alerts

ಅಶೋಕ ಚಕ್ರ ಚಿನ್ನದ ನಾಣ್ಯ, ಏನು? ಎತ್ತ? ಏತಕ್ಕೆ?

|

ಹಿಂದಿನ ಹಣಕಾಸು ಬಜೆಟ್ ನಲ್ಲಿ ಹೇಳಿರುವ ಅಶೋಕ ಚಕ್ರ ಚಿನ್ನದ ನಾಣ್ಯ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನವೆಂಬರ್ 5 ರಂದು ಲೋಕಾಪರ್ಣೆ ಮಾಡಲಿದ್ದಾರೆ.

 

ಬಜೆಟ್ ನಲ್ಲಿ ಹೇಳಿರುವ ಚಿನ್ನಕ್ಕೆ ಸಂಬಂಧಿಸಿದ ಯೋಜನೆಗಳಲ್ಲಿ ಇದು ಪ್ರಮುಖ ಸ್ಥಾನ ಪಡೆದುಕೊಂಡಿದೆ. ಇದನ್ನು ಬಿಟ್ಟು ಗೋಲ್ಡ್ ಮಾನಿಟೈಸೇಶನ್ ಯೋಜನೆ ಮತ್ತು ಗೋಲ್ಡ್ ಸವರಿನ್ ಯೋಜನೆಗೂ ಮೋದಿ ಚಾಲನೆ ನೀಡಲಿದ್ದಾರೆ.[ಗೋಲ್ಡ್ ಮಾನಿಟೈಸೇಶನ್ ಯೋಜನೆ ಏಕೆ ಮತ್ತು ಏತಕ್ಕೆ?]

 

ಹಾಗಾದರೆ ಅಶೋಕ ಚಕ್ರ ಚಿನ್ನದ ನಾಣ್ಯದ ಯೋಜನೆಯ ಹೈಲೈಟ್ಸ್ ಗಳನ್ನು ನೋಡೋಣ

ಅಶೋಕ ಚಕ್ರ ಚಿನ್ನದ ನಾಣ್ಯ, ಏನು? ಎತ್ತ? ಏತಕ್ಕೆ?

1. ಗೋಲ್ಡ್ ಮಾನಿಟೈಸೇಶನ್ ಯೋಜನೆಯ ಪ್ರಮುಖ ಭಾಗವೇ ಅಶೋಕ ಚಕ್ರ ಚಿನ್ನದ ನಾಣ್ಯದ ಯೋಜನೆ.

2. ರಾಷ್ಟ್ರೀಯ ಸಂಕೇತ ಅಥವಾ ಚಿಹ್ನೆಯನ್ನು ಹೊಂದಿರುವ ಪ್ರಪ್ರಥಮ ಚಿನ್ನದ ನಾಣ್ಯ ಎಂಬ ಖ್ಯಾತಿಯನ್ನು ಅಶೋಕ ಚಕ್ರ ಚಿನ್ನದ ನಾಣ್ಯ ಪಡೆದುಕೊಳ್ಳಲಿದೆ.

3. ಇನ್ನು ಮುಂದೆ 5 ಮತ್ತು 10 ಗ್ರಾಂ ಅಶೋಕ ಚಕ್ರದ ಚಿನ್ನದ ನಾಣ್ಯಗಳು ದೊರೆಯಲಿವೆ. ಅಲ್ಲದೇ 20 ಗ್ರಾಂ ನ ಚಿನ್ನದ ನಾಣ್ಯವೂ ಸಿಗಲಿದೆ.

4. 5 ಗ್ರಾಂನ 15 ಸಾವಿರ, 10 ಗ್ರಾಂನ 20 ಸಾವಿರ, 20 ಗ್ರಾಂನ 3750 ಚಿನ್ನದ ನಾಣ್ಯಗಳನ್ನು ಬಿಡುಗಡೆ ಮಾಡಲಾಗುತ್ತಿದೆ.[ಚಿನ್ನದ ಮೇಲೆ ಹೂಡಿಕೆಗೆ ಹೊರಟಿದ್ದೀರಾ? ಇದನ್ನೊಮ್ಮೆ ಓದಿ]

5. ಈ ಚಿನ್ನದ ನಾಣ್ಯಗಳನ್ನು ನಕಲು ಮಾಡಲು ಸಾಧ್ಯವಿಲ್ಲ. ವಿಶೇಷ ಚಿಹ್ನೆಗಳನ್ನು ಇದು ಹೊಂದಿದೆ.

6. 24 ಕ್ಯಾರಟ್ ನ ಚಿನ್ನದ ನಾಣ್ಯಗಳು ಶೇ. 99 ಶುದ್ಧವಾಗಿವೆ. ಎಲ್ಲ ನಾಣ್ಯಗಳು ಬಿಐಎಸ್ ಮಾನ್ಯತೆ ಪಡೆದುಕೊಂಡಿದ್ದು ಹಾಲ್ ಮಾರ್ಕ್ ಹೊಂದಿವೆ. ಎಂಎಂಟಿಸಿಯ (Metals and Minerals Trading Corporation) ಎಲ್ಲ ಔಟ್ ಲೆಟ್ ಗಳಲ್ಲಿ ಇನ್ನು ಮುಂದೆ ನಾಣ್ಯಗಳು ಲಭ್ಯವಾಗಲಿವೆ.(ಗುಡ್ ರಿಟರ್ನ್ಸ್.ಇನ್)

English summary

Ashoka Chakra Gold Coin: 6 Must Know Points

The Prime Minister Shri Narendra Modi will launch the Gold Coin Scheme on Thursday, 5th November, 2015 in the national capital.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X