For Quick Alerts
ALLOW NOTIFICATIONS  
For Daily Alerts

ನಿಮ್ಮ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವ ಮುನ್ನ....

|

ಕ್ರೆಡಿಟ್ ಕಾರ್ಡ್ ಪಡೆದುಕೊಂಡಂತೆ ಅದನ್ನು ಕ್ಯಾನ್ಸಲ್ ಮಾಡುವ ಸಂದರ್ಭವೂ ನಿಮಗೆ ಕೆಲವೊಮ್ಮೆ ಒದಗಿ ಬರಬಹುದು. ಸರಿಯಾದ ಕಾರಣಗಳನ್ನು ನೀಡಿ ಕ್ಯಾನ್ಸಲ್ ಮಾಡದಿದ್ದರೆ ನಿಮ್ಮ ಸ್ಕೋರ್ ಗೆ ಹೊಡೆತ ಬೀಳುವ ಸಾಧ್ಯತೆ ಇರುತ್ತದೆ.

ಕ್ಯಾನ್ಸಲ್ ಮಾಡಲು ಕೆಲವೊಂದು ಹಂತಗಳನ್ನು ಪೂರೈಸಬೇಕಾಗುತ್ತದೆ. ಹೆಚ್ಚಿನ ಶುಲ್ಕ, ಮಿತಿಮೀರಿದ ಶಾಪಿಂಗ್ ಹುಚ್ಚು, ತುಂಬಲಾಗದ ಬಡ್ಡಿ ಮುಂದಾದ ಕಾರಣಗಳು ಕ್ರೆಡಿಟ್ ಕಾರ್ಡ್ ಕ್ಯಾನ್ಸಲ್ ಮಾಡಲು ನಿಮ್ಮನ್ನು ಪ್ರೇರೇಪಿಸಬಹುದು.

ಆದರೆ ಕ್ರೆಡಿಟ್ ಕಾರ್ಡ್ ಕ್ಯಾನ್ಸಲ್ ಮಾಡುವ ಮುನ್ನ ಈ ಕೆಳಗಿನ ಸಂಗತಿಗಳನ್ನು ಗಮನವಿಟ್ಟು ನೋಡಿಕೊಂಡಿರಬೇಕಾಗುತ್ತದೆ.[ಕ್ರೆಡಿಟ್ ಕಾರ್ಡ್ ಇದೆ ಅಂತ ಮಾಲ್ ಗೆ ಲಗ್ಗೆ ಇಡೋದಲ್ಲ!]

ನಿಮ್ಮ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವ ಮುನ್ನ....

1. ಸಾಲ ಮರುಪಾವತಿ

ನೀವು ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿ ಹಣ ತುಂಬುವುದು ಬಾಕಿ ಇದ್ದರೆ ಅಂದರೆ ಬ್ಯಾಲೆನ್ಸ್ ಉಳಿಸಿಕೊಂಡಿದ್ದರೆ ಕ್ಯಾನ್ಸಲ್ ಮಾಡಲು ಸಾಧ್ಯವಿಲ್ಲ. ನೀವು ಯಾವುದೇ ಹಣ ನೀಡುವುದು ಬಾಕಿ ಇರಬಾರದು ಜತೆಗೆ ತಿಂಗಳ ಕೊನೆಯ ಬಿಲ್ ನಿಮ್ಮ ಕೈ ಸೇರುವ ತನಕ ಕಾಯುವುದು ಉತ್ತಮ.

2. ಬ್ಯಾಂಕ್ ಗೆ ಭೇಟಿ

ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಕ್ರೆಡಿಟ್ ಕಾರ್ಡ್ ಕ್ಯಾನ್ಸಲ್ ಮಾಡುವುದು ಉತ್ತಮ. ಇಲ್ಲಿ ನಿಮಗೊಂದು ಅಕ್ ನಾಲೆಜ್ ಕಾಪಿಯೂ ದೊರೆಯುವುದರಿಂದ ಮುಂದೆ ಸಮಸ್ಯೆಯಾಗಲು ಸಾಧ್ಯವಿಲ್ಲ. ಬ್ಯಾಂಕ್ ನವರು ಹೇಳುವ ನಿಯಮಾವಳಿಗಳನ್ನು ಗಮನವಿಟ್ಟು ಓದಿ ನಿಮ್ಮಹಸ್ತಾಕ್ಷರವನ್ನು ಹಾಕಬೇಕಾಗುತ್ತದೆ.

3. ರೀಡೀಮ್ ಪಾಯಿಂಟ್ಸ್

ಗಡಿಬಿಡಿಯಲ್ಲಿ ಕಾರ್ಡ್ ಕ್ಯಾನ್ಸಲ್ ಮಾಡುವ ವೇಳೆ ನಮ್ಮ ಕಾರ್ಡ್ ಗೆ ಸಂಬಂಧಿಸಿದ ರಿವಾರ್ಡ್ ಪಾಯಿಂಟ್ಸ್ ಗಳಿದ್ದರೆ ಅದನ್ನು ಕ್ಯಾಶ್ ಮಾಡಿಕೊಳ್ಳಲು ಮರೆಯಬಾರದು.

4. ವಾರ್ಷಿಕ ಶುಲ್ಕಗಳು

ವಾರ್ಷಿಕ ಶುಲ್ಕದ ಬಗ್ಗೆ ಬ್ಯಾಂಕ್ ನೊಂದಿಗೆ ಮಾತನಾಡಿಕೊಂಡು ಅಂತಿಮ ತೀರ್ಮಾನಕ್ಕೆ ಬರಬೇಕಾಗುತ್ತದೆ.[ಎಸ್ ಬಿಐನಿಂದ ಆನ್ ಲೈನ್ ಕ್ರೆಡಿಟ್ ಕಾರ್ಡ್ ಬಿಡುಗಡೆ]

ನಿಮ್ಮ ಕ್ರೆಡಿಟ್ ಸ್ಕೋರ್ ನ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ?

ಕ್ರೆಡಿಟ್ ಕಾರ್ಡ್ ಕ್ಯಾನ್ಸಲ್ ಮಾಡಿದ ನಂತರ ಅದು ನಿಮ್ಮ ಅಕೌಂಟ್ ಸ್ಕೋರ್ ಮೇಲೆ ಪರಿಣಾಮ ಉಂಟುಮಾಡುತ್ತದೆ. ನೀವು ಕ್ರೆಡಿಟ್ ಕಾರ್ಡ್ ಶುಲ್ಕ ಭರಿಸಲು ಸಾಧ್ಯವಾಗುತ್ತಿಲ್ಲ ಎಂಬ ನಿರ್ಧಾರಕ್ಕೂ ಬ್ಯಾಂಕ್ ಬಂದರೆ ಆಶ್ಚರ್ಯವಿಲ್ಲ.

ನಿಮ್ಮ ಬಳಿ ಒಂದಕ್ಕಿಂತ ಅಧಿಕ ಕ್ರೆಡಿಟ್ ಕಾರ್ಡ್ ಇದ್ದರೆ ಹೆಚ್ಚುವರಿ ಇದ್ದವನ್ನು ಕ್ಯಾನ್ಸಲ್ ಮಾಡುವುದು ಉತ್ತಮ. ಕೆಲವೊಮ್ಮೆ ನಿಮ್ಮ ಖಾತೆಯ ವ್ಯವಹಾರದ ವಿವರಗಳನ್ನು ಕ್ರೆಡಿಟ್ ಕಾರ್ಡ್ ಹಿಸ್ಟರಿ ಮೂಲಕವೇ ಅಳೆಯುವ ಸಾಧ್ಯತೆಗಳೂ ಇರುತ್ತದೆ.(ಗುಡ್ ರಿಟರ್ನ್ಸ್.ಇನ್)

English summary

Closing A Credit Card? Here Are 4 Things To Consider

You might have your reasons to cancel your credit card, but, if you fail to cancel it in a right way your credit score can be damaged. Just by destroying your credit card at your end does not mean that your credit card is closed. Canceling your credit card requires particular steps to be followed so that your credit score is not hurt in the process.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X