For Quick Alerts
ALLOW NOTIFICATIONS  
For Daily Alerts

ಚಿನ್ನದ ಹೂಡಿಕೆ ಮೇಲೆ ಕೇಂದ್ರ ಬಜೆಟ್ ಪರಿಣಾಮವೇನು?

|

ಕೇಂದ್ರ ಸರ್ಕಾರದ ಗೋಲ್ಡ್ ಮಾನಿಟೈಸೇಶನ್ ಯೋಜನೆಗೆ ಅಂಥ ಸ್ಪಂದನೆ ಏನೂ ಸಿಕ್ಕಿಲ್ಲ. ಹಾಗಾದರೆ ಈ ಬಾರಿಯ ಬಜೆಟ್ ಚಿನ್ನದ ಯೋಜನೆಗಳ ಮೇಲೆ ಯಾವ ಪರಿಣಾಮ ಬೀರಲಿದೆ? ಜನರಿಗೆ ವಿಶೇಷ ಕೊಡುಗೆಗಳೆನು ದಕ್ಕಿವೆಯೇ? ಎಂಬುದನ್ನು ನೋಡಿಕೊಂಡು ಬರಬೇಕಾಗುತ್ತದೆ.

ಚಿನ್ನದ ಯೋಜನೆಗಳಲ್ಲಿ ಯಾವುದೇ ಹೆಚ್ಚುವರಿ ಬದಲಾವಣೆ ಮಾಡಲಾಗಿಲ್ಲ. ಮೊದಲೇ ಹೇಳಿದಂತೆ ಚಿನ್ನದ ಬಾಂಡ್ ಮತ್ತು ಉಳಿತಾಯ ಯೋಜನೆಗೆ ತೆರಿಗೆ ವಿನಾಯಿತಿ ಪದ್ಧತಿ ಜಾರಿಯಲ್ಲೇ ಇರುತ್ತದೆ.

ಜನರಲ್ಲಿ ಉಳಿತಾಯದ ಮನೋಭಾವ ಹೆಚ್ಚಳ ಮಾಡುವ ಉದ್ದೇಶದಿಂದ ಆರಂಭವಾದ ಯೋಜನೆಗೆ ಅಂಥ ಪ್ರತಿಕ್ರಿಯೆ ಸಿಗದೇ ಇದ್ದರೂ ಸರ್ಕಾರ ಅದನ್ನು ಮುಂದುವರಿಸಿಕೊಂಡೆ ಹೋಗಲಿದೆ.[ಗೋಲ್ಡ್ ಮಾನಿಟೈಸೇಶನ್ ಯೋಜನೆ ಏಕೆ ಮತ್ತು ಏತಕ್ಕೆ?]

ಚಿನ್ನದ ಹೂಡಿಕೆ ಮೇಲೆ ಕೇಂದ್ರ ಬಜೆಟ್ ಪರಿಣಾಮವೇನು?

ಗೋಲ್ಡ್ ಮಾನಿಟೈಸೇಶನ್ ಹೇಗೆ ಕೆಲಸ ಮಾಡುತ್ತದೆ?[ನಿಮ್ಮ ನಗರದ ಚಿನ್ನದ ದರ ಒಂದೆ ಕ್ಲಿಕ್ ನಲ್ಲಿ]

ಚಿನ್ನವನ್ನು ಬಂಡವಾಳ ಅಥವಾ ಹೂಡಿಕೆ ರೂಪದಲ್ಲಿ ಬಳಕೆ ಮಾಡಿಕೊಳ್ಳಬಹುದು (ಚಿನ್ನದ ಪತ್ರಗಳನ್ನು ಹೊರತುಪಡಿಸಿ). ಹೂಡಿಕೆಗೂ ಮುನ್ನ ನಿಮ್ಮ ಬಳಿ ಇರುವ ಚಿನ್ನವನ್ನು ಅನೇಕ ಪರೀಕ್ಷೆಗೆ ಒಡ್ಡಬೇಕಾಗುತ್ತದೆ. ಅಂದರೆ ಪರಿಶುದ್ಧತೆಯನ್ನು ಲೆಕ್ಕ ಹಾಕಬೇಕಾಗುತ್ತದೆ. ಈ ಪರೀಕ್ಷೆಗಳ ಸ್ಪಷ್ಟ ವಿಧಾನವನ್ನು ತಿಳಿಸುವುದೇ ಗೋಲ್ಡ್ ಮಾನಿಟೈಸೇಶನ್ ಯೋಜನೆ.

1. ಸದ್ಯ ಭಾರತದಲ್ಲಿ (ಬಿಎಸ್ ಐ) 350 ಹಾಲ್ ಮಾರ್ಕಿಂಗ್ ಕೇಂದ್ರಗಳಿವೆ. ಚಿನ್ನದ ಆಭರಣದ ಪರಿಶುದ್ಧತೆಯನ್ನು ಇವೇ ನಿರ್ಧರಿಸುತ್ತಿವೆ. ಇಲ್ಲಿ ಚಿನ್ನದ ಪರಿಶುದ್ಧತೆ ಅಳೆಯುವ ಪ್ರಯತ್ನ ಮಾಡಲಾಗುವುದು.

2. ಪ್ರಾಥಮಿಕ ಪರೀಕ್ಷೆ ಕೇಂದ್ರದಲ್ಲಿರುವ ಎಕ್ಸ್ ಆರ್ ಎಫ್ ಯಂತ್ರದ ಮೂಲಕ ಚಿನ್ನದ ಪರಿಶುದ್ಧತೆಯ ಲೆಕ್ಕ ಮಾಡಲಾಗುತ್ತದೆ. ಚಿನ್ನ ಪರಿಶೀಲನೆ ಮಾಡಬೇಕಾದವರು ಕೆವೈಸಿ ಸೇರಿದಂತೆ ವಿವಿಧ ಮಾಹಿತಿಯನ್ನು ನೀಡಬೇಕಾಗುತ್ತದೆ

3. ಚಿನ್ನ ಪರೀಕ್ಷೆ ಮಾಡಿದಾಗ ಕೆಲ ಪ್ರಮಾಣದ ನಷ್ಟವಾಗುತ್ತದೆ ಎಂದೇ ಒಡವೆ ಹೊಂದಿರುವವರು ಇಂದಿಗೂ ನಂಬಿಕೊಂಡಿದ್ದಾರೆ. ಕೆಲವೊಂದು ಸಂದರ್ಭದಲ್ಲಿ ಎಲ್ಲ ಬಗೆಯ ಪರಿಶೀಲನೆ ನೋಡುವ ಅವಕಾಶವೂ ಆಭರಣ ಮಾಲೀಕರಿಗೆ ಇರುವುದಿಲ್ಲ.[ಸಾಮಾನ್ಯ ನಾಗರಿಕನ ಮೇಲೆ ಬಜೆಟ್ ಪರಿಣಾಮವೇನು]

4. ಚಿನ್ನದ ಹೂಡಿಕೆ ಚಿನ್ನದ ಪರಿಶುದ್ಧತೆ ಫಲಿತಾಂಶ ಬಂದ ನಂತರ ಗ್ರಾಹಕ ಅದನ್ನು ಒಪ್ಪಿಕೊಳ್ಳಬಹುದು ಅಥವಾ ತಿರಸ್ಕರಿಸಲುಬಹುದು. ತಿರಸ್ಕಾರ ಮಾಡುವುದಾದರೆ ನಿರ್ದಿಷ್ಟ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಒಪ್ಪಿಕೊಂಡರೆ ಪರಿಶೀಲನೆಯ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದು.

5.ನಿಯಮಾವಳಿಗಳು ಪರೀಕ್ಷೆಗೆ ಒಯ್ಯಲು ಕನಿಷ್ಠ 30 ಗ್ರಾಂ ಚಿನ್ನವನ್ನಾದರೂ ಕೊಂಡೊಯ್ಯಬೇಕಾಗುತ್ತದೆ. ಸಣ್ಣ ಪ್ರಮಾಣದ ಹೂಡಿಕೆ ಮಾಡಲು ಇಂಥ ಕ್ರಮಗಳು ನೆರವಾಗುತ್ತದೆ ಎಂದು ಭಾವಿಸಲಾಗಿದೆ.

2016-17 ರ ಬಜೆಟ್ ನಲ್ಲಿ ಚಿನ್ನದ ಯೋಜನೆಗಳಿಗೆ ಸಿಗುವ ಲಾಭ
ಚಿನ್ನದ ಬಾಂಡ್ ಮತ್ತು ಗೋಲ್ಡ್ ಮಾನಿಟೈಸೇಶನ್ ಯೋಜನೆ ಮೊದಲಿನಂತೆ ಇದೆ. ಹೂಡಿಕೆದಾರರು ತಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಬಹುದು. ತಮ್ಮ ಬಳಿ ಇರುವ ಚಿನ್ನವನ್ನು ಮುರಿಯಲು ಗ್ರಾಹಕರು ಹಿಂದೇಟು ಹಾಕುತ್ತಿರುವುದು ಯೋಜನೆ ಹಿನ್ನಡೆಗೆ ಪ್ರಮುಖ ಕಾರಣ. ಇದಕ್ಕೆ ಯಾವ ಪರ್ಯಾಯ ಕ್ರಮವನ್ನು ನೀಡಲು ಸಾಧ್ಯವಾಗಿಲ್ಲ.

ಯೋಜನೆಗಳು ಅಂಥ ಕೆಟ್ಟವೇನಲ್ಲ. ಹೊಸದಾಗಿ ಬಾಂಡ್ ಖರೀದಿ ಮಾಡಿದರೆ ಹೂಡಿಕೆ ಲೆಕ್ಕದಲ್ಲಿ ಬಹಳ ಉತ್ತಮ. ಚಿನ್ನಾಭರಣ ಅಥವಾ ಚಿನ್ನದ ಬಿಸ್ಕಟ್ ಖರೀದಿ ಮಾಡುವ ಬದಲು ಬಾಂಡ್ ಯೋಜನೆಯಲ್ಲಿ ಹಣ ತೊಡಗಿಸುವುದೆ ಒಳಿತು. ತೆರಿಗೆ ಲಾಭ, ಕಳ್ಳತನದಿಂದ ಮುಕ್ತಿ, ಭದ್ರತೆ ಇದರೊಂದಿಗೆ ಕೂಡಿಕೊಂಡು ಬರುತ್ತದೆ. (ಗುಡ್ ರಿಟರ್ನ್ಸ್. ಇನ್)

English summary

Tax Benefits On Gold Schemes In Union Budget 2016-17

The Gold Monetization Scheme and the Gold Bond Scheme, which evoked a poor response, will now come with some tax benefits. The Union Budget 2016-17, has proposed that gold bonds would be exempt from Capital gains tax at the time of redemption. On the other hand the income from the Gold Monetization Scheme and the capital gains from the same would be tax free.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X