For Quick Alerts
ALLOW NOTIFICATIONS  
For Daily Alerts

ಈ 8 ಕಾರಣ ನೀಡಿ ನಿಮ್ಮ ಪಿಎಫ್ ಹಣ ಪಡೆಯಬಹುದು

By Madhusoodhan
|

ಎಲ್ಲೆಲ್ಲೂ ಪ್ರಾವಿಡೆಂಟ್ ಫಂಡ್ ನದ್ದೆ ಗಲಾಟೆ, ಗೊಂದಲ. ಅದನ್ನು ಒತ್ತಟ್ಟಿಗೆ ಇಡಿ. ಹೊಸ ನಿಯಮಕ್ಕೆ ಮುಂದಾಗಿದ್ದ ಕೇಂದ್ರ ಸರ್ಕಾರ ಕಾರ್ಮಿಕರ ಪ್ರತಿಭಟನೆ ಹಿನ್ನೆಲೆಯಲ್ಲಿ ನಿಯಮಾವಳಿಗೆ ತಾತ್ಕಾಲಿಕ ತಡೆ ನೀಡಿದೆ.

ಬೆಂಗಳೂರು ಹೊತ್ತಿ ಉರಿದ ನಂತರ ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ನಿಯಮಕ್ಕೆ ತಾತ್ಕಾಲಿಕ ತಡೆ ನೀಡಿದ್ದು ಟ್ರಸ್ಟಿಗಳೊಂದಿಗೆ ಮಾತನಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ. ಕಾರ್ಮಿಕರ ವಿರುದ್ಧವಾದ ನೀತಿ ಜಾರಿ ಮಾಡುವುದಿಲ್ಲ ಎಂದು ಅಭಯ ನೀಡಿದ್ದಾರೆ.[ಕಾರ್ಮಿಕರನ್ನು ಕೆರಳಿಸಿದ ಕೇಂದ್ರದ ನೀತಿ ಯಾವುದು?]

ಆದರೆ ಯಾವ ಯಾವ ಕಾರಣಗಳ ಆಧಾರದಲ್ಲಿ ಪಿಎಫ್ ವಿಥ್ ಡ್ರಾ ಮಾಡಲು ಸಾಧ್ಯವಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕಿದೆ. ಈ ಕೆಳಗಿನ ಎಂಟು ಕಾರಣಗಳನ್ನು ನೀಡಿ ಪಿಎಫ್ ವಿಥ್ ಡ್ರಾ ಮಾಡಲು ಅವಕಾಶವಿದೆ.

ಮದುವೆ/ ಶಿಕ್ಷಣ

ಮದುವೆ/ ಶಿಕ್ಷಣ

ಖಾತೆದಾರ ವ್ಯಕ್ತಿ ತನ್ನ ಅಥವಾ ತನ್ನ ಮಗಳ, ಮಗನ, ಸಹೋದರಿಯ ಅಥವಾ ಸಹೋದರನ ಮದುವೆ ಕಾರಣ ನೀಡಿ ಪಿಎಫ್ ಹಣ ಪಡೆದುಕೊಳ್ಳಬಹುದು. ಶಿಕ್ಷಣಕ್ಕೆ ಸಂಬಂಧಿಸಿಯೂ ಇವರೆಲ್ಲರ ಆಧಾರದ ಮೇಲೆ ಹಣ ಪಡೆದುಕೊಳ್ಳಬಹುದು. ಕೆಲಸ ಮಾಡಲು ಆರಂಭಿಸಿ ಏಳು ವರ್ಷ ಕಳೆದಿರಬೇಕು. ತನ್ನಿಂದ ಎಪಿಎಫ್ ಪಡೆದುಕೊಂಡ ಹಣದಲ್ಲಿ ಶೇ. 50ನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಮನೆ ನಿರ್ಮಾಣ ಅಥವಾ ಖರೀದಿ

ಮನೆ ನಿರ್ಮಾಣ ಅಥವಾ ಖರೀದಿ

ಮನೆ ನಿರ್ಮಾಣ ಅಥವಾ ಖರೀದಿ ಕಾರಣಕ್ಕೆ ಪಿಎಫ್ ಹಣ ಪಡೆದುಕೊಳ್ಳಬಹುದು. 5 ವರ್ಷ ಸೇವೆ ಸಲ್ಲಿಸಿರಬೇಕು. ನಿಮ್ಮ ಅಥವಾ ನಿಮ್ಮ ಹೆಂಡತಿ ಅಥವಾ ಜಂಟಿ ಹೆಸರಲ್ಲಿ ಆಸ್ತಿ ನೋಂದಣಿಯಾಗಿರಬೇಕು ಎಂಬ ನಿಯಮಾವಳಿಗಳಿವೆ.

ಗೃಹ ಸಾಲ ತೀರಿಸಲು

ಗೃಹ ಸಾಲ ತೀರಿಸಲು

ವ್ಯಕ್ತಿ ಜೀವನದಲ್ಲಿ ಒಮ್ಮೆ ಮಾತ್ರ ಗೃಹ ಸಾಲ ತೀರಿಸಲು ಹಣ ಪಡೆದುಕೊಳ್ಳಬಹುದು. 10 ವರ್ಷ ಸೇವೆ ಸಲ್ಲಿಸಿರಬೇಕು. ಮನೆ ವ್ಯಕ್ತಿ ಅಥವಾ ಅವನ ಹೆಂಡತಿಯ ಹೆಸರಲ್ಲಿ ಇರಬೇಕು.

ಆರೋಗ್ಯ ಕಾರಣ

ಆರೋಗ್ಯ ಕಾರಣ

ಆರೋಗ್ಯದ ಕಾರಣ ನೀಡಿ ನಿಮ್ಮ ಪಿಎಫ್ ಹಣವನ್ನು ಪಡೆದುಕೊಳ್ಳಲು ಸಾಧ್ಯವಿದೆ. ನಿಮ್ಮ ಕುಟುಂಬ ಸದಸ್ಯರಿಗೆ ಆರೋಗ್ಯ ಸಮಸ್ಯೆ ಎದುರಾದರೂ ಹಣ ಪಡೆದುಕೊಳ್ಳಬಹುದು. ಕೆಲಸ ಮಾಡಿದ ವರ್ಷದ ಲೆಕ್ಕ ಇಲ್ಲಿ ಗಮನಿಸಲಾಗುವುದಿಲ್ಲ. ವೈದ್ಯರು ಮತ್ತು ಇಎಸ್ ಐ ವರದಿ ಇಲ್ಲಿ ಪ್ರಮುಖವಾಗುತ್ತದೆ.

ನಿವೇಶನ ಅಥವಾ ಪ್ಲಾಟ್ ಖರೀದಿ

ನಿವೇಶನ ಅಥವಾ ಪ್ಲಾಟ್ ಖರೀದಿ

ನಿವೇಶನ ಅಥವಾ ಪ್ಲಾಟ್ ಖರೀದಿ ಮಾಡಲು ಪಿಎಫ್ ಹಣ ಪಡೆದುಕೊಳ್ಳಬಹುದು. ಸೇವೆ ಆರಂಭಿಸಿ 5 ವರ್ಷ ಕಳೆದಿರಬೇಕು. ನಿಮ್ಮ ಅಥವಾ ನಿಮ್ಮ ಹೆಂಡತಿ ಹೆಸರಿನಲ್ಲಿ ಅಥವಾ ಜಾಯಿಂಟ್ ಖಾತೆ ಹೆಸರಿಸಲ್ಲಿ ಆಸ್ತಿ ಖರೀದಿಯಾಗಬೇಕು ಎಂಬ ನಿಯಮವಿದೆ.

ಮನೆ ದುರಸ್ತಿ

ಮನೆ ದುರಸ್ತಿ

ನಿಮ್ಮ ಮನೆದುರಸ್ತಿಗೆ ಸಂಬಂಧಿಸಿ ಒಮ್ಮೆ ಮಾತ್ರ ಹಣ ಪಡೆದುಕೊಳ್ಳಲು ಸಾಧ್ಯವಿದೆ. ಕೆಲಸ ಮಾಡಲು ಆರಂಭಿಸಿ 10 ವರ್ಷ ಕಳೆದಿರಬೇಕು. ಆಸ್ತಿ ನಿಮ್ಮ ಅಥವಾ ನಿಮ್ಮ ಕುಟುಂಬದವರ ಹೆಸರಿನಲ್ಲಿ ಇರಬೇಕು.

 ನಿವೃತ್ತಿ ನಂತರ

ನಿವೃತ್ತಿ ನಂತರ

ನಿವೃತ್ತಿ ನಂತರ ಅಷ್ಟೂ ಹಣ ಪಡೆದುಕೊಳ್ಳಬಹುದು. ವ್ಯಕ್ತಿ 54 ವರ್ಷ ಪೂರೈಸಿರಬೇಕು. ನಿವೃತ್ತಿಗೆ ಮುನ್ನ ಒಂದು ವರ್ಷ ಇರುವಾಗ ಹಣ ಪಡೆದುಕೊಳ್ಳಲು ಸಾಧ್ಯವಿದೆ.

English summary

EPF Withdrawal Or Loan: 8 Reasons When You Can Avail Them

One can avail loan or withdraw from accumulated amount from Employee Provident Fund (EPF). However, there are specific reasons and permissible amount depending on the service provided. Here is a look at advance or withdrawals which can be availed for the following purposes. Marriage / Education , Treatment , Purchase or construction of Dwelling house , Repayment of Housing Loan , Purchase of Plot , Addition/Alteration of House ,Repair of House, and Withdrawal Prior to Retirement.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X