For Quick Alerts
ALLOW NOTIFICATIONS  
For Daily Alerts

ಬಿಬಿಎಂಪಿ ಆಸ್ತಿ ತೆರಿಗೆ ಸಲ್ಲಿಕೆ ಪ್ರಕ್ರಿಯೆ ಹೇಗೆ?

|

ಹೌದು ತೆರಿಗೆ ತುಂಬುವ ಕಾಲ ಮತ್ತೆ ಬಂದಿದೆ. ನೀವು ಬೆಂಗಳೂರು ಮಹಾನಗರ ಪಾಲಿಕೆ ಅಡಿಯಲ್ಲಿ ಆಸ್ತಿಯನ್ನು ಹೊಂದಿದ್ದರೆ ಆಸ್ತಿ ತೆರಿಗೆಯನ್ನು ತುಂಬಬೇಕಾಗುತ್ತದೆ. ಆಸ್ತಿ ತೆರಿಗೆ ಸಲ್ಲಿಕೆ ಪ್ರಕ್ರಿಯೆಯನ್ನು ಬಿಬಿಎಂಪಿ ಮತ್ತಷ್ಟು ಸರಳ ಮಾಡಿದೆ. ಆನ್ ಲೈನ್ ಮೂಲಕವೇ ಸಲ್ಲಿಕೆ ಮಾಡಲು ಅವಕಾಶ ನೀಡಿದೆ.

ಏಪ್ರಿಲ್ 1ರಿಂದ ಪ್ರಾಪರ್ಟಿ ಟ್ಯಾಕ್ಸ್ ಲೆಕ್ಕ ಶುರುವಾದರೆ ಏಪ್ರಿಲ್ 4 ರಿಂದ ಸಲ್ಲಿಕೆ ಆರಂಭವಾಗುತ್ತದೆ. (ಬಿಬಿಎಂಪಿ ವೆಬ್ ತಾಣ ಸಹ ಏಪ್ರಿಲ್ 4 ರಿಂದ ಕಾರ್ಯ ನಿರ್ವಹಿಸಲಿದೆ)ವಿಳಂಬ ಮಾಡಿದರೆ ಶೇ. 2 ಅಥವಾ ವಾರ್ಷಿಕವಾಗಿ ಶೇ. 24 ದಂಡ ಆಕರಣೆಯನ್ನು ಮಾಡಿಕೊಳ್ಳಲಾಗುತ್ತದೆ. ಹಾಗಾದರೆ ಆಸ್ತಿ ತೆರಿಗೆಯನ್ನು ಹೇಗೆ ಸಲ್ಲಿಕೆ ಮಾಡಬೇಕು ಎಂಬುದನ್ನು ನೋಡಿಕೊಂಡು ಬರೋಣ...[ರಾಜ್ಯ ಬಜೆಟ್: ಸಿದ್ದರಾಮಯ್ಯ ತೆರಿಗೆ ನೀತಿ ಪೂರ್ಣ ಮಾಹಿತಿ]

ಬಿಬಿಎಂಪಿ ಆಸ್ತಿ ತೆರಿಗೆ ಸಲ್ಲಿಕೆ ಪ್ರಕ್ರಿಯೆ ಹೇಗೆ?

ಫಾರ್ಮ್ 1: ಪಿಐಡಿ ಸಂಖ್ಯೆ
ಬಿಳಿ ಬಣ್ಣದಲ್ಲಿ ಇರುವ ಫಾರಂನಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ ನಿಮ್ಮ ಆಸ್ತಿಯ ದಾಖಲೆಯನ್ನು ತೋರಿಸಬೇಕಾಗುತ್ತದೆ.

ಫಾರ್ಮ್ 2: ಕಟ್ಟಾ ಸಂಖ್ಯೆ ಹೊಂದಿರುವ ಆಸ್ತಿ
ಇದು ಸಾಮಾನ್ಯವಾಗಿ ಸಿಎಂಸಿ, ಟಿಎಂಸಿ ಮತ್ತು ಇತ್ತೀಚೆಗೆ ಬಿಬಿಎಂಪಿ ವ್ಯಾಪ್ತಿಗೆ ಒಳಪಟ್ಟ 110 ಹಳ್ಳಿಗಳನ್ನು ಒಳಗೊಂಡಿರುತ್ತದೆ. ಇದು ಪಿಂಕ್ ಬಣ್ಣದಲ್ಲಿ ಇರುತ್ತದೆ.


ಫಾರ್ಮ್ 3: ಕಟ್ಟಾ ಮತ್ತುನ ಪಿಐಡಿ ನಂಬರ್ ಹೊಂದಿರದ ಆಸ್ತಿ

ಅರ್ಜಿ ತಿಳಿ ಹಸಿರು ಬಣ್ಣದಲ್ಲಿ ಇರುತ್ತದೆ. ಅನಧಿಕೃತ ಕಟ್ಟಡಗಳು, ಒತ್ತುವರಿ ಇದರ ಅಡಿಯಲ್ಲಿ ಬರುತ್ತದೆ.

ಫಾರ್ಮ್ 4: ಇದು ಸಹ ಬಿಳಿ ಬಣ್ಣದಲ್ಲಿದ್ದು ಹಿಂದಿನ ಬಾರಿ ಸಲ್ಲಿಕೆ ಮಾಡಿದ್ದರಲ್ಲಿ ಯಾವ ಬದಲಾವಣೆ ಇರುವುದಿಲ್ಲ.

ಫಾರ್ಮ್ 5: ಪ್ರಾಪರ್ಟಿ ತೆರಿಗೆಯನ್ನು ಮೀರಿದ್ದಾಗ ಈ ಫಾರ್ಮ್ ಬಳಕೆ ಮಾಡಿಕೊಳ್ಳಲಾಗುತ್ತದೆ. ಸೇವಾ ಶುಲ್ಕ ನೀಡಿಕೆ ವೇಳೆ ಇದನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.[ಏಪ್ರಿಲ್ 1 ರಿಂದ ವಾಹನದ ವಿಮೆ ಕಂತು ಶೇ. 40 ಅಧಿಕ]

ಆನ್ ಲೈನ್ ಮೂಲಕ ಸಲ್ಲಿಕೆ ಹೇಗೆ?
* ಬಿಬಿಎಂಪಿಯ ವೆಬ್ ತಾಣಕ್ಕೆ ಮೊದಲು ಪ್ರವೇಶ ಪಡೆಯಿರಿ.

* 2009-10 ರಿಂದ 2015-16 ಆನ್ ಲೈನ್ ಪೇಮೆಂಟ್ ಆಯ್ಕೆಯನ್ನು ಒತ್ತಿ[ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಮಾಡುವುದು ಹೇಗೆ?]

* ಕಳೆದ ವರ್ಷದ ವಿವರಕ್ಕೆ ಸಂಬಂಧಿಸಿ ಯಾವ ಬದಲಾವಣೆಗಳೂ ಇಲ್ಲವಾದರೆ Year 2015-16" ನ್ನು ಒತ್ತಿ.

* ನಿಮ್ಮ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಕೆ ಮಾಡಿ(2008-09) ರಂತೆಯೇ ಮುಂದುವರಿಯುವುದು.

* ಒಳ ಪ್ರವೇಶ ಮಾಡಿದ ಮೇಲೆ ಹೆಸರನ್ನು ಆಯ್ಕೆ ಮಾಡಿಕೊಂಡು ಮುಂದುವರಿಯಿರಿ.

* ನಿಮ್ಮ ಸದ್ಯದ ಆಸ್ತಿ ದಾಖಲೆ ಮತ್ತಿತರ ವಿವರಗಳನ್ನು ಸಲ್ಲಿಕೆ ಮಾಡಿ

* ಟರ್ಮ್ಸ್ ಮತ್ತು ಕಂಡಿಷನ್ ಗಳನ್ನು ಓದಿ ಒಪ್ಪಿಗೆ ನೀಡಿ

* ಆನ್ ಲೈನ್ ಪೇಮೆಂಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿ

ನಿಮ್ಮ ಮರುಪಾವತಿ ಬಂದಿದೆಯೋ ಇಲ್ಲವೋ ಎಂಬುದನ್ನು ಖಾತ್ರಿ ಪಡಿಸಿಕೊಂಡಿಕೊಳ್ಳಿ. ಎಸ್ ಡಬ್ಲ್ಯೂಎಮ್ ಸೆಸ್ ಅನ್ನು ಸಹ ಆಸ್ತಿ ತೆರಿಗೆಯೊಂದಿಗೆ ಸಲ್ಲಿಕೆ ಮಾಡಲು ಸಾಧ್ಯವಿದೆ.

ಆಸ್ತಿ ತೆರಿಗೆ ಆಫ್ ಲೈನ್ ಸಲ್ಲಿಕೆ ಹೇಗೆ?
* ಆಫ್ ಲೈನ್ ಮೂಲಕ ಸಹ ತೆರಿಗೆ ಸಲ್ಲಿಕೆ ಮಾಡಬಹುದು. ಇದು ಸಾಂಪ್ರದಾಯಿಕ ವಿಧಾನ.

ನೀವು ಯಾವ ಕೆಟೆಗರಿ ಅಡಿಯಲ್ಲಿ ಬರುತ್ತೀರಿ ಎಂಬ ಆಧಾರದ ಮೇಲೆ ಫಾರ್ಮ್ ಗಳನ್ನು ತುಂಬಿ ಸಲ್ಲಿಕೆ ಮಾಡಬೇಕಾಗುತ್ತದೆ. ಫಾರ್ಮ್ ಗಳನ್ನು ಬಿಬಿಎಂಪಿಯ ಎಆರ್ ಒ ಕೇಂದ್ರಗಳಲ್ಲಿ ನಿರ್ದಿಷ್ಟ ಪಡಿಸಿದ ಅಧಿಕಾರಿ ಗೆ ಸಲ್ಲಿಕೆ ಮಾಡಬೇಕು. (ಗುಡ್ ರಿಟರ್ನ್ಸ್. ಇನ್)

English summary

How To Pay BBMP Property Tax Online and offline?

This is the time when property owners rush to pay their property tax. Now, the Bruhat Bangalore Mahanagara Palike (BBMP) has simplified the procedure by introducing online mode and many Bangalore one centers.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X