For Quick Alerts
ALLOW NOTIFICATIONS  
For Daily Alerts

ಪಾನ್ ಕಾರ್ಡ್ ಸರಿ ಇಲ್ಲ: ದೂರು ದಾಖಲಿಸುವುದು ಹೇಗೆ?

|

ಪಾನ್ ಕಾರ್ಡ್ ಅಂದರೆ ಪರ್ಮನೆಂಟ್ ಅಕೌಂಟ್ ನಂಬರ್ ಅನ್ನು ಹಣಕಾಸು ವ್ಯವಹಾರಗಳಿಗೆ ಕಡ್ಡಾಯ ಎಂಬ ರೀತಿಯಲ್ಲೇ ಬಳಕೆ ಮಾಡಲಾಗುತ್ತಿದೆ. ಅದು ಆದಾಯ ತೆರಿಗೆ ತುಂಬುವುದಿರಬಹುದು. ಇಲ್ಲವೇ ದೊಡ್ಡ ಮೊತ್ತದ ಹಣ ರವಾನೆ ಇರಬಹುದು.

 

ಜನವರಿ 1, 2016ರಿಂದ ಅನೇಕ ಬಗೆಯ ಟ್ರಾನ್ಸಾಕ್ಷನ್ ಗೆ ಪಾನ್ ಕಾರ್ಡ್ ಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಒಂದಕ್ಕಿಂತ ಹೆಚ್ಚಿನ ಪಾನ್ ಕಾರ್ಡ್ ಹೊಂದುವುದು ಅಪರಾಧ ಎಂದು ಕಾನೂನು ಹೇಳುತ್ತದೆ.[ಪಾನ್ ಕಾರ್ಡ್ ಕಳೆದುಕೊಂಡರೆ ಏನು ಮಾಡಬೇಕು?]

 
ಪಾನ್ ಕಾರ್ಡ್ ಸರಿ ಇಲ್ಲ: ದೂರು ದಾಖಲಿಸುವುದು ಹೇಗೆ?

ನೀವು ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದರೂ ಅದು ನಿಮ್ಮ ಕೈ ಸೇರುವುದು ವಿಳಂಬವಾಗಿ ತೊಂದರೆಗೆ ಸಿಕ್ಕಿಹಾಕಿಕೊಳ್ಳುವ ಸಂದರ್ಭ ಇರುತ್ತದೆ. ನಿಮ್ಮ ತಪ್ಪಿಲ್ಲದೆಯೂ ಪಾನ್ ಕಾರ್ಡ್ ಗೊಂದಲ ಏರ್ಪಡುವ ಯಾವ ಸಂದರ್ಭದಲ್ಲಿ ನೀವು ದೂರು ದಾಖಲು ಮಾಡಬಹುದು ಎಂಬುದನ್ನು ನೋಡಿಕೊಂಡು ಬರೋಣ....

* ಪಾನ್ ಕಾರ್ಡ್ ಅಥವಾ ಪಾನ್ ನಂಬರ್ ನಿಮ್ಮ ಕೈಗೆ ಸಿಗದೇ ಇದ್ದರೆ

* ಪಾನ್ ಕಾರ್ಡ್ ಸಿಗದೇ ಇದ್ದರೆ

* ವಿಳಾಸಕ್ಕೆ ಡಿಲೆವರಿ ಆಗದಿದ್ದರೆ

* ಹೆಸರು ತಪ್ಪು

* ಫೋಟೋ ತಪ್ಪು

* ತಂದೆ ಹೆಸರು ತಪ್ಪು

ದೂರು ದಾಖಲು ಮಾಡುವುದು ಹೇಗೆ?
* ಮೊದಲಿಗೆ ಆದಾಯ ತೆರಿಗೆ ಇಲಾಖೆ ವೆಬ್ ತಾಣಕ್ಕೆ ಭೇಟಿ ನೀಡಿ

* ಯಾವ ಬೆಗೆಯ ದೂರು ಎಂಬ ಆಯ್ಕೆಯನ್ನು ಮಾಡಿಕೊಳ್ಳಿ

* ಕೂಪನ್ ಅಥವಾ ಮರುಪಾವತಿ ಅಂಕೆಯನ್ನು ಪಡೆದುಕೊಳ್ಳಿ[ಆನ್‌ಲೈನ್‌ನಲ್ಲಿ ಪಾನ್‌ಕಾರ್ಡ್ ಅಪ್‌ಡೇಟ್ ಹೇಗೆ?]

* ನಿಮ್ಮ ಏಜೆನ್ಸಿ ಅದು ಎನ್ ಎಸ್ ಡಿಎಲ್ ಅಥವಾ ಯುಟಿಐಐಎಸ್ ಎಲ್ ಯಾವುದು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ

* ಉಳಿದ ಮೂಲ ಮಾಹಿತಿಗಳನ್ನು ಭರ್ತಿ ಮಾಡಿ

* ಇದೆಲ್ಲ ಮುಗಿದ ಮೇಲೆ ಸಬ್ ಮಿಟ್ ಮಾಡಿ

ಒಮ್ಮೆ ನೀವು ಸಬ್ ಮಿಟ್ ಮಾಡಿದ ಬಳಿಕ ಕೂಪನ್ ಸಂಖ್ಯೆಯೊಂದು ಸಿಗುತ್ತದೆ. ಅದನ್ನು ಬಳಕೆ ಮಾಡಿಕೊಂಡು ನಿಮ್ಮ ದೂರು ಯಾವ ಹಂತದಲ್ಲಿದೆ ಎಂಬುದನ್ನು ಪತ್ತೆ ಮಾಡಬಹುದು. (ಗುಡ್ ರಿಟರ್ನ್ಸ್. ಇನ್)

English summary

How To Register PAN Card Related Complain Online And Track Status?

Permanent Account Number (PAN) Card is necessary for most financial transactions. Pan Card is mandatory for transactions such as filing income tax returns, depositing large amounts of cash, buying property etc.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X