For Quick Alerts
ALLOW NOTIFICATIONS  
For Daily Alerts

ಕೃಷಿ ಕಲ್ಯಾಣ ಸೆಸ್ ಜಾರಿ, ನಾಗರಿಕನ ಮೇಲೆ ಪರಿಣಾಮವೇನು?

|

ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ವಿವಿಧ ಸೇವೆಗಳ ಮೇಲೆ ವಿಧಿಸಿರುವ ಶೇಕಡಾ 0.5 ಕೃಷಿ ಕಲ್ಯಾಣ ಸೆಸ್ ಜೂನ್ 1 ಬುಧವಾರದಿಂದಲೇ ಜಾರಿಗೆ ಬಂದಿದೆ. ಈ ಸೆಸ್ ಮೂಲಕ ಪ್ರಸ್ತುತ ಸರ್ಕಾರ 5000 ಕೋಟಿ ರು. ಸಂಗ್ರಹಿಸುವ ಗುರಿಯನ್ನು ಹೊಂದಿದೆ.

 

ನಾವು ಈಗಾಗಲೇ ಶೇ. 14 ರಷ್ಟು ಸೇವಾ ಶುಲ್ಕ ಪಾವತಿ ಮಾಡುತ್ತಿದ್ದೇವೆ. ಸ್ವಚ್ಛ ಭಾರತ್ ಸೆಸ್ ಎಂದು ೦.5 ನ್ನು ನೀಡುತ್ತಿದ್ದೇವೆ. ಇದೀಗ ಕೃಷಿ ಕೃಷಿ ಕಲ್ಯಾಣ ಸೆಸ್ ಜಾರಿಗೆ ಬರಲಿದ್ದು ಅಲ್ಲಿಯೂ ೦.5 ನ್ನು ಪಾವತಿ ಮಾಡಬೇಕಾಗುತ್ತದೆ. ಅಂದರೆ ಸೇವಾ ತೆರಿಗೆಯನ್ನು ಶೇ. 15 ರಷ್ಟು ನೀಡಬೇಕಾಗುತ್ತದೆ. ದೇಶದ ಕೃಷಿ ವ್ಯವಸ್ಥೆ ಸುಧಾರಣೆ ಮತ್ತು ರೈತರ ಕಲ್ಯಾಣಕ್ಕೆ ಈ ಸಂಗ್ರಹ ಹಣ ಬಳಕೆಯಾಗಲಿದೆ.[ಜೂನ್ 1 ರಿಂದ ಯಾವ ಯಾವ ಬಿಲ್ ಮೊತ್ತ ಏರಲಿದೆ?]

 
ಕೃಷಿ ಕಲ್ಯಾಣ ಸೆಸ್ ಜಾರಿ, ನಾಗರಿಕನ ಮೇಲೆ ಪರಿಣಾಮವೇನು?

ಎಲ್ಲೆಲ್ಲಿ ಕೃಷಿ ಕಲ್ಯಾಣ ಸೆಸ್ ಮುರಿದುಕೊಳ್ಳಲಾಗುತ್ತದೆ?
ಕೃಷಿ ಕಲ್ಯಾಣ ಸೆಸ್ ಮುರಿದುಕೊಳ್ಳುವ ಕೆಲ ಪ್ರಮುಖ ಸಂಸ್ಥೆಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

* ಟೆಲಿಪೋನ್ ಬಿಲ್
* ಕಟ್ಟಡ ನಿರ್ಮಾಣ
* ಇಂಟರ್ ನೆಟ್ ಬಿಲ್
* ಪ್ರವಾಸ
* ಬಾಡಿಗೆ ಪಾವತಿ
* ರೆಸ್ಟೋರೆಮಟ್ ಬಿಲ್
* ಸಿನಿಮಾ
* ಕೇಬಲ್ ಬಿಲ್

ಗಮನಿಸಬೇಕಾದ ಅಂಶಗಳು
ಜೂನ್ ಒಂದಿರಿಂದ ಪಾವತಿ ಮಾಡುವ ಎಲ್ಲ ಬಿಲ್ ಗಳಿಗೆ ಇದು ಅನ್ವಯವಾಗುತ್ತದೆ. ದಿನಾಂಕಕ್ಕೂ ಮುನ್ನವೇ ಹಣ ಪಾವತಿ ಮಾಡಿದ್ದು ಅಧಿಕೃತ ಮರುಪಾವತಿ ಸಿಗದೆ ಮುಂದಕ್ಕೆ ಹೋಗಿದ್ದರೆ ಯಾವ ಸೆಸ್ ಇಲ್ಲ. [ರಾಜ್ಯ ಬಜೆಟ್: ಸಿದ್ದರಾಮಯ್ಯ ತೆರಿಗೆ ನೀತಿ ಪೂರ್ಣ ಮಾಹಿತಿ]

ಇಲ್ಲಿ ಸಂಗ್ರಹವಾದ ಹಣ ಕೇಂದ್ರ ಸರ್ಕಾರದ ಖಜಾನೆಯನ್ನು ಸೇರುತ್ತದೆ. ಇದಾದ ನಂತರ ಹಣವನ್ನು ಯಾವುದಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂಬುದನ್ನು ಸಂಸತ್ ನಿರ್ಧಾರ ಮಾಡುತ್ತದೆ.

ಶೇಕಡಾ 0.5 ಸ್ವಚ್ಛ ಭಾರತ ಸೆಸ್ ಮೂಲಕ 10,000 ಕೋಟಿ ರೂಪಾಯಿ ಹಾಗೂ ಶೇಕಡಾ 0.5 ಕೃಷಿ ಕಲ್ಯಾಣ ಸೆಸ್ ಮೂಲಕ 5000 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲು ಉದ್ದೇಶಿಸಿದೆ.

ಯಾಕಾಗಿ ಕೃಷಿ ಕಲ್ಯಾಣ ಸೆಸ್?
ರೈತರ ಏಳಿಗೆಗೆಂದೇ ಈ ಹಣವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ಬಗೆಯಾಗಿ ತೆರಿಗೆ ಹೇರುವುದು ಸಾಮಾನ್ಯ ಜನರಿಗೆ ಅನಗತ್ಯ ಹೊರೆ ಎಂಬ ಮಾತುಗಳು , ಆರೋಪಗಳು ಕೇಳಿಬಂದಿವೆ. ಇಲ್ಲಿ ಸಂಗ್ರಹವಾಗುವ ಹಣವನ್ನು ಸರ್ಕಾರ ನಿಜ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲಿ ಎಂಬುದೇ ಎಲ್ಲರ ಆಶಯ .

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಬಹುದು.

English summary

What Is Krishi Kalyan Cess? What Is Its Impact On The Common Man?

In the Union Budget 2016-17, Finance Minister Arun Jaitley announced the Krishi Kalyan Cess which will be applicable at the rate of 0.5 per cent on all taxable services. What this means is that it will be applicable over and above the Swachh Bharat Cess and Service Tax. The same is with effective from June 1, 2016. As of now, we are already paying service taxes at the rate of 14 per cent and a Swachh Bharat Cess at a rate of 0.5 per cent. Now along with Krishi Kalyan Cess it will be total of 15 per cent as service tax.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X