For Quick Alerts
ALLOW NOTIFICATIONS  
For Daily Alerts

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ(NPS ): ಚಂದಾದಾರರಿಗೆ 7 ಅತ್ಯುತ್ತಮ ಲಾಭಗಳು

By Siddu
|

ನಿವೃತ್ತಿ ನಿಧಿ ಎಂಬುದಾಗಿ ಜನಜನಿತವಾದ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ(National Pension System), ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA)ದಿಂದ ನಿಯಂತ್ರಿಸಲ್ಪಡುತ್ತದೆ.

 

ದೇಶದ ನಾಗರಿಕರಲ್ಲಿ ಅರಿವು ಮೂಡಿಸಲು ಹಾಗೂ ಈ ಆಕರ್ಷಕ ಸ್ಕೀಮ್ ನ ಮಹತ್ವವನ್ನು ತಿಳಿಸಲು ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ನಿವೃತ್ತಿಯ ನಂತರ ಈ ಯೋಜನೆಯ ಲಾಭಗಳೇನು/ಕೊಡುಗೆಗಳೇನು ಎಂಬುದನ್ನು ತಿಳಿಸಲು ಸರ್ಕಾರ ಮುಂದಾಗಿದೆ.

ಮೊಬೈಲ್ ಅಪ್ಲಿಕೇಶನ್

ಮೊಬೈಲ್ ಅಪ್ಲಿಕೇಶನ್

NPS ಚಂದಾದಾರರು ತಮ್ಮ ನಿರ್ಧಿಷ್ಟ ಹಣಕಾಸಿನ ವರ್ಷದ ವ್ಯವಹಾರದ ಮಾಹಿತಿಯನ್ನು ಪಡೆಯಲು ಇಚ್ಚಿಸಿದಲ್ಲಿ ಅವರ ಇ-ಮೇಲ್ ID ಗೆ ದಿನದ ಅಂತ್ಯದ ಒಳಗಾಗಿ ಸಂದೇಶ ಕಳುಹಿಸಲಾಗುತ್ತದೆ.
ಚಂದಾದಾರರು ತಮ್ಮ NPS ಖಾತೆ, ಸ್ಕೀಮ್ ನ ಇತ್ತೀಚಿನ ಮಾಹಿತಿ, ಖಾತೆಯ ಒಟ್ಟು ಮೌಲ್ಯ, ಕಳೆದ ಐದು ವ್ಯವಹಾರಗಳ ಮಾಹಿತಿ, ಸಂಪರ್ಕ ಮಾಹಿತಿಯಲ್ಲಿ ಬದಲಾವಣೆ (Telephone/Mobile no./Email ID) ಸೇರಿದಂತೆ ಅನೇಕ ಅನುಕೂಲಗಳನ್ನು ಪಡೆಯಬಹುದಾಗಿದೆ.

ಆಧಾರ್ ಬಳಸಿ ವಿಳಾಸ ಬದಲಾವಣೆ

ಆಧಾರ್ ಬಳಸಿ ವಿಳಾಸ ಬದಲಾವಣೆ

NPS ಚಂದಾದಾರರು ತಮ್ಮ ಆಧಾರ್ ಕಾರ್ಡನಲ್ಲಿರುವಂತೆ ವಿಳಾಸವನ್ನು ಅಧಿಕೃತವಾಗಿ ನವೀಕರಿಸಬಹುದು ಅಥವಾ ಬದಲಾಯಿಸಬಹುದು. ಅಂದರೆ ನಿಮ್ಮ ಹೆಸರಿನ ಆಧಾರ್ ಕಾರ್ಡಿನಲ್ಲಿರುವಂತೆ ಮಾಹಿತಿಯನ್ನು ಬದಲಾಯಿಸಲು ಅವಕಾಶವಿದೆ.

ಆದ್ಯತೆಗೆ ಅನುಗುಣವಾಗಿ ಯೋಜನೆಯಲ್ಲಿ ಬದಲಾವಣೆ
 

ಆದ್ಯತೆಗೆ ಅನುಗುಣವಾಗಿ ಯೋಜನೆಯಲ್ಲಿ ಬದಲಾವಣೆ

ಚಂದಾದಾರರು ಲಾಗಿನ್ ಆದ ನಂತರವೂ ಯೋಜನೆಯನ್ನು ಬದಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ನೋಂದಾಯಿಸಲಾದ ನಂಬರಿಗೆ OTP
ಕಳುಹಿಸಲಾಗುತ್ತದೆ. OTP ದೃಢೀಕರಣದ ನಂತರ PFM, ಆಸ್ತಿ ವರ್ಗ, ಹಂಚಿಕೆ ಅನುಪಾತ, ಯೋಜನೆ ಆಯ್ಕೆಗಳ (Asset Class, Allocation Ratio, Scheme Options) ಮಾಹಿತಿಯನ್ನು ನೀಡಲಾಗುತ್ತದೆ.

eNPS ಮೂಲಕ ಆನ್ಲೈನ್ ಖಾತೆಯನ್ನು ಸಕ್ರಿಯಗೊಳಿಸಿ

eNPS ಮೂಲಕ ಆನ್ಲೈನ್ ಖಾತೆಯನ್ನು ಸಕ್ರಿಯಗೊಳಿಸಿ

NPS ನಲ್ಲಿ ಶ್ರೇಣಿ I (Tier I)ಖಾತೆ ಹೊಂದಿರುವವರು PRAN, DOB ಮತ್ತು PAN ಶ್ರೇಣಿ I (Tier II) ಮಾಹಿತಿಯನ್ನು ಬದಲಾಯಿಸುವುದರ ಮೂಲಕ eNPS ನಲ್ಲಿ ಆನ್ಲೈನ್ ಖಾತೆಯನ್ನು ಸಕ್ರಿಯಗೊಳಿಸಬಹುದು.

KYC ಮರು ಪರಿಶೀಲನೆ

KYC ಮರು ಪರಿಶೀಲನೆ

ಯಾರ ಬ್ಯಾಂಕು ಖಚಿತವಾಗಿರುವುದಿಲ್ಲವೊ ಅಥವಾ ತಿರಸ್ಕರಿಸಲ್ಪಟ್ಟಿರುತ್ತದೆಯೊ ಅಂತಹ ಚಂದಾದಾರರು ಆಧಾರ್ ದೃಢೀಕರಣ ಬಳಸಿಕೊಂಡು KYC ಮರು ಪರಿಶೀಲನೆ ಮಾಡಬಹುದಾಗಿದೆ.
ಚಂದಾದಾರರು eNPS ಸೈಟ್ ಗೆ ಹೋಗಿ ಕ್ಲಿಕ್ ಮಾಡುವುದರ ಮುಖಾಂತರ ಮಾಹಿತಿಯನ್ನು ಅಪ್ಡೇಟ್ ಮಾಡಬಹುದು.

ಆನ್ಲೈನ್ ಕೊಡುಗೆ

ಆನ್ಲೈನ್ ಕೊಡುಗೆ

ಚಂದಾದಾರರು ಆನ್ಲೈನ್ ಮೂಲಕ eNPS ಪೊರ್ಟಲ್ ಬಳಸಿಕೊಂಡು NPS ಗೆ ಕೊಡುಗೆಯನ್ನು ಕೊಡಬಹುದು. CRA ವ್ಯವಸ್ಥೆಯಲ್ಲಿ IPIN ರುಜುವಾತನ್ನು ಬಳಸಿಕೊಂಡು ಕಾಣಿಕೆಯನ್ನು ಕೊಡಬಹುದಾಗಿದೆ.

ಶ್ರೇಣಿ II ನೇ ಖಾತೆಯಿಂದ ವಾಪಸಾತಿ

ಶ್ರೇಣಿ II ನೇ ಖಾತೆಯಿಂದ ವಾಪಸಾತಿ

ಲಾಗಿನ್ ರುಜುವಾತುಗಳನ್ನು ಮತ್ತು OTP ದೃಢೀಕರಣಗಳನ್ನು ನೋಂದಾಯಿತ ಮೊಬೈಲ್ ನಲ್ಲಿ ಬಳಸುವುದರ ಮೂಲಕ NPS ಚಂದಾದಾರರು ಶ್ರೇಣಿ II ನೇ ಖಾತೆಯಿಂದ ವಾಪಸಾತಿ ಆಗಲು ಅನುಕೂಲವನ್ನು ಕಲ್ಪಿಸಲಾಗಿದೆ.
ಇದಕ್ಕೂ ಮೊದಲು NPS ಚಂದಾದಾರರು ಶ್ರೇಣಿ II ನೇ ಖಾತೆಯಿಂದ ವಾಪಸಾತಿ ಆಗಲು ಆಯಾ ಶಾಖೆಗಳಿಗೆ ಹೋಗಬೇಕಾಗಿತ್ತು.

ಖಾತೆ ತೆರೆಯುವ, ವಾಪಸಾತಿ, ದೂರು ನಿರ್ವಹಣೆ ಮುಂತಾದ ಸಂಗತಿಗಳು ಸೇರಿದಂತೆ ಇವುಗಳ ಸರಳೀಕರಣಕ್ಕಾಗಿ PFRDA ಅಡಿಯಲ್ಲಿ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಇತ್ತೀಚಿಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ(NPS) ಯಲ್ಲಿ ಎದುರಾಗುವ ಕಾರ್ಯಾಚರಣಾ ಸಮಸ್ಯೆಗಳನ್ನು ಸರಿಪಡಿಸಲು ಹಾಗೂ ಕಾರ್ಯಾಚರಣವನ್ನು ಅಭಿವೃದ್ಧಿ ಪಡಿಸಲು PFRDA ಮುಂದಾಗಿದೆ.

ಜೊತೆಗೆ ಚಂದಾದಾರರ ಪ್ರಯೋಜನಕ್ಕಾಗಿ ಅನೇಕ ಹೊಸ ಕಾರ್ಯನಿರ್ವಹಣಾ ತಂತ್ರಗಳನ್ನು ಹಾಗೂ ಪ್ರಕ್ರಿಯೆಗಳನ್ನು ಅಳವಡಿಸಲಾಗಿದೆ. ಅವುಗಳಲ್ಲಿ ಮಹತ್ವವಾದ 7 ಅಂಶಗಳನ್ನು ಇಲ್ಲಿ ನೀಡಲಾಗಿದೆ.

Read more about: money pension ವಿಮೆ ಹಣ
English summary

8 New Features Added To Benefit NPS Subscribers

National Pension System (NPS) is a retirement fund which is regulated by Pension Fund Regulatory and Development Authority (PFRDA). The government is taking various measures to make the scheme attractive and make citizens aware of importance for contributions towards retirement.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X