For Quick Alerts
ALLOW NOTIFICATIONS  
For Daily Alerts

ಪಿಪಿಎಫ್(PPF) ಖಾತೆ ತೆರೆಯಲು ಭಾರತದಲ್ಲಿನ ಅತ್ಯುತ್ತಮ ಬ್ಯಾಂಕುಗಳು

By Siddu
|

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ ಭಾರತದ ವಾಣಿಜ್ಯದಲ್ಲಿರುವ ಚಾಲ್ತಿಯಲ್ಲಿರುವ ಪ್ರಸಿದ್ದ ಪದ್ದತಿ. ಇದು ನಿವೃತ್ತಿ ನಂತರ ಉತ್ತಮ ಆದಾಯ ತಂದು ಕೊಡುತ್ತದೆ. ಹೆಚ್ಚು ತೆರಿಗೆ ಉಳಿತಾಯದ ದೃಷ್ಟಿಯಿಂದಲೂ ಪರಿಣಾಮಕಾರಿ ಯೋಜನೆ ಎಂದೇ ಭಾವಿಸಲಾಗಿದೆ. ವಾಣಿಜ್ಯ ಕಾನೂನಿನ ಸೆಕ್ಷನ್ 80c ಪ್ರಕಾರ ಇದು ನಿಮಗೆ ಆದಾಯ ತೆರಿಗೆಯ ಲಾಭವನ್ನು ತಂದುಕೊಡುತ್ತದೆ. ಹೀಗಾಗಿ ಪಿಪಿಎಫ್ ಆಕರ್ಷಕ ಹೂಡಿಕೆಗಳಲ್ಲಿ ಒಂದಾಗಿದ್ದು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.

ಇದು ಭಾರತದಲ್ಲಿನ ಪ್ರಸಿದ್ದ ಸ್ಕೀಮ್ ಆಗಿದ್ದು, ಪಿಪಿಎಫ್ ಖಾತೆಗಳನ್ನು ಸುಲಭವಾಗಿ ಬ್ಯಾಂಕುಗಳಲ್ಲಿ ಹಾಗೂ ಅಂಚೆ ಕಚೇರಿಗಳಲ್ಲಿ ತೆರೆಯಬಹುದಾಗಿದೆ. ಅದರಲ್ಲೂ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು ಪಿಪಿಎಫ್ ಖಾತೆಯನ್ನು ತೆರೆಯಲು ಸಾಲಾಗಿ ಮುಂದಾಗುತ್ತಿವೆ. ಅಲ್ಲದೆ ಗ್ರಾಹಕರನ್ನು ವಿಶೇಷವಾಗಿ ಆಕರ್ಷಿಸುತ್ತಿವೆ.

ಪಿಪಿಎಫ್(PPF) ಖಾತೆ ತೆರೆಯಲು ಭಾರತದಲ್ಲಿನ ಅತ್ಯುತ್ತಮ ಬ್ಯಾಂಕುಗಳು

ಆದರೆ ಇದಕ್ಕೂ ಮೊದಲು ಪಬ್ಲಿಕ್ ಪ್ರಾವಿಡೆಂಟ್ ಫಂಡ್(ಪಿಪಿಎಫ್) ಖಾತೆಗಳನ್ನು ಪೋಸ್ಟಾಫೀಸು ಗಳಲ್ಲಿ ಮಾತ್ರ ತೆರೆಯಬಹುದಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಖಾಸಗಿ ಹಾಗೂ ಸಾರ್ವಜನಿಕ ವಲಯದ ಅನೇಕ ಬ್ಯಾಂಕುಗಳಲ್ಲಿ ಪಿಪಿಎಫ್ ಖಾತೆಗಳನ್ನು ತೆರೆಯಬಹುದಾಗಿದೆ.

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ ಒಂದು ಉತ್ತಮ ಹೂಡಿಕೆ ಆಗಿದ್ದು, ಆದಾಯ ತೆರಿಗೆ ಕಾನೂನಿನ ಸೆಕ್ಷನ್ 80c ಪ್ರಕಾರ ತೆರಿಗೆಯನ್ನು ಉಳಿಸುವ ಉತ್ತಮ ವಿಧಾನವಾಗಿದೆ. ಹೀಗಾಗಿ ಪಿಪಿಎಫ್ ಆಕರ್ಷಕ ಹೂಡಿಕೆಗಳಲ್ಲಿ ಒಂದು ಎಂಬುದಾಗಿ ಜನಜನಿತವಾಗಿದೆ.

Also read: Opening a PPF account for your minor child

ವಾರ್ಷಿಕವಾಗಿ ರೂ.1.50 ಲಕ್ಷದ ಗರಿಷ್ಠ ಮಿತಿಯಲ್ಲಿ ಸೆಕ್ಷನ್ 80c ಪ್ರಕಾರ ತೆರಿಗೆ ಲಾಭ ಸಿಗುತ್ತದೆ. ಹೂಡಿಕೆ ಮೇಲೆ ಗಳಿಸುವ ಬಡ್ಡಿ ತೆರಿಗೆ ಮುಕ್ತವಾಗಿರುತ್ತದೆ ಅಂದರೆ ಆದಾಯ ಮೂಲದ ಮೇಲೆ ತೆರಿಗೆಯನ್ನು ಕಡಿತಗೊಳಿಸಲಾಗುವುದಿಲ್ಲ.

ಪಿಪಿಎಫ್ ಖಾತೆ ತೆರೆಯಬಹುದಾದ ಪ್ರಧಾನ ಬ್ಯಾಂಕುಗಳು:
* SBI
* Allahabad Bank
* ICICI Bank
* SBI and its Subsidiaries
* BOB - Bank of Baroda
* Central Bank of India
* IOB - Indian Overseas Bank
* Union Bank of India
* Vijiya Bank
* UCO Bank
* Punjab National Bank
* Oriental Bank of Commerce
* Bank of Maharashtra
* Canara Bank
* IDBI Bank
* Corporation Bank
* Dena Bank
* Indian Bank
* United Bank of India
* Axis Bank
* BOI -Bank of India

ನೆನಪಿಡಿ: ಮೇಲೆ ತಿಳಿಸಿದ ಎಲ್ಲ ಬ್ಯಾಂಕುಗಳಲ್ಲಿ ಪಿಪಿಎಫ್ ಖಾತೆ ತೆರೆಯಲು ಅಧಿಕಾರವನ್ನು ನೀಡಲಾಗಿದೆ. ಆದರೆ HDFC ಬ್ಯಾಂಕು ಇಷ್ಟೊಂದು ಪ್ರಸಿದ್ದಿ ಪಡೆದರು ಪಿಪಿಎಫ್ ಖಾತೆ ತೆರೆಯಲು ಅನುಮತಿ ಇರುವುದಿಲ್ಲ.

ಪಿಪಿಎಫ್ ಖಾತೆ ತೆರೆಯಲು ಉತ್ತಮ ಬ್ಯಾಂಕ್ ಆಯ್ಕೆ ಹೇಗೆ?
ಗ್ರಾಹಕರು ತಮ್ಮ ಅನುಭವದ ಆಧಾರದ ಮೇಲೆ ಖಾತೆಗಳನ್ನು ತೆರೆಯುವುದೇ ಉತ್ತಮ. ಯಾವ ಬ್ಯಾಂಕಿನ ಸೇವೆ ಮತ್ತು ಸೌಲಭ್ಯಗಳು ಉತ್ತಮವಾಗಿವೆ? ಯಾವ ಬ್ಯಾಂಕಿನವರು ಗ್ರಾಹಕರ ಸಮಸ್ಯೆ/ಗೊಂದಲಗಳಿಗೆ ಶೀಘ್ರವಾಗಿ ಪ್ರತಿಕ್ರಿಯಿಸುತ್ತಾರೆ. ಯಾವ ಬ್ಯಾಂಕು ಗ್ರಾಹಕ ಸ್ನೇಹಿ ಆಗಿದೆ. ಯಾವ ಬ್ಯಾಂಕಿನಲ್ಲಿ ಖಾತೆ ತೆರೆದರೆ ವ್ಯವಹಾರ ಅನುಕೂಲಕರವಾಗಿರುತ್ತದೆ ಇತ್ಯಾದಿ ಅಂಶಗಳ ಆಧಾರದ ಮೇಲೆ ಮತ್ತು ವೈಯಕ್ತಿಕ ಅನುಭವದ ಮೇಲೆ ನಿರ್ಣಯಗಳನ್ನು ತೆಗೆದುಕೊಳ್ಳುವುದು ಉತ್ತಮ.

ನೀವು ಯಾವುದಾದರು ಬ್ಯಾಂಕಿನಲ್ಲಿ ಪಿಪಿಎಫ್ ಖಾತೆ ತೆರೆಯಬೇಕೆಂದು ಬಯಸಿದ್ದಲ್ಲಿ ಅಲ್ಲಿ ನಿಮ್ಮ ಬ್ಯಾಂಕು ಖಾತೆ ಇರಬೇಕಾಗುತ್ತದೆ. ಆದರೆ ಇದು ಕಡ್ಡಾಯವಲ್ಲ. ಆದರೂ ಬ್ಯಾಂಕು ಖಾತೆ ಹೊಂದಿದಲ್ಲಿ ಪಿಪಿಎಫ್ ಖಾತೆಯ ವ್ಯವಹಾರ/ಪಾವತಿ ಸಂದರ್ಭದಲ್ಲಿ ಸಹಾಯಕವಾಗುತ್ತದೆ.

Also read: How To Transfer Money From Bank Account To PPF Account Online?

ಅಲ್ಲದೆ, ತಂತ್ರಜ್ಞಾನ ಮತ್ತು ಸೇವೆಗಳು ಉತ್ತಮವಾಗಿರಬೇಕಾಗುವುದು ಸಹ ಪ್ರಮುಖ ಅಂಶಗಳಾಗಿವೆ. ಇಸಿಎಸ್(ECS ) ಮತ್ತು ನೇರ ಡೆಬಿಟ್ ಅನುಕೂಲಗಳನ್ನು ಹೊಂದಿರುವ ಅಲ್ಲದೆ ಉತ್ತಮ ದಾಖಲೆ ಹಾಗೂ ಪ್ರಾಮಾಣಿಕ ಸೇವೆ ಒದಗಿಸುವ ಬ್ಯಾಂಕುಗಳಲ್ಲಿ ಪಿಪಿಎಫ್ ಖಾತೆಗಳನ್ನು ತೆರೆಯಿರಿ.

English summary

Best Bank To Open PPF Account In India?

Public Provident Fund (PPF) is an excellent avenue to build a corpus for your retirement. It is perhaps one of the most popular schemes in the country and can be opened at post offices and banks.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X