For Quick Alerts
ALLOW NOTIFICATIONS  
For Daily Alerts

ಷೇರುಗಳನ್ನು ಒಂದು ಡಿಮ್ಯಾಟ್ ಖಾತೆಯಿಂದ ಇನ್ನೊಂದು ಖಾತೆಗೆ ವರ್ಗಾವಣೆ ಮಾಡುವುದು ಹೇಗೆ?

|

ಸ್ಟಾಕ್ ಎಕ್ಷ್ಚೆಂಜ್ ಮುಖಾಂತರ ಷೇರುಗಳನ್ನು ಕೊಳ್ಳಬೇಕಾದರೆ ಹಾಗೂ ಮಾರಬೇಕಾದರೆ ವಿದ್ಯುನ್ಮಾನ ಮಾದರಿಯಲ್ಲಿ ಪ್ರಕ್ರಿಯೆ ನಡೆಸಬೇಕಾಗುತ್ತದೆ ಇದನ್ನು ಡಿಮ್ಯಾಟ್ ಖಾತೆ ಎನ್ನಲಾಗುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ‍ದಲ್ಲಾಳಿಗಳ ಸಹಕಾರವಿಲ್ಲದೆ ಷೇರುಗಳನ್ನು ಸ್ನೇಹಿತರಿಗೆ ಅಥವಾ ಸಂಬಂಧಿಕರಿಗೆ ವರ್ಗಾವಣೆ ಮಾಡಬೇಕಾಗುತ್ತದೆ.

ಷೇರುಗಳನ್ನು ವರ್ಗಾಯಿಸಲು ತಗಲುವ ವೆಚ್ಚ?

ಷೇರುಗಳನ್ನು ಒಂದು ಡಿಮ್ಯಾಟ್ ಖಾತೆಯಿಂದ ಇನ್ನೊಂದು ಖಾತೆಗೆ ವರ್ಗಾವಣೆ ಮಾಡುವುದು

ಮೇಲೆ ಉಲ್ಲೇಖಿಸಿದಂತೆ ಕೆಲವೊಮ್ಮೆ ಷೇರುಗಳನ್ನು ಹೆಂಡತಿಗೆ ವರ್ಗಾಯಿಸಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ನೀವು ವಿತರಣಾ ಸೂಚನಾ ಸ್ಲಿಪ್ ನಲ್ಲಿ ನೋಂದಣಿ ಮಾಡಬೇಕಾಗುತ್ತದೆ. ಮಾರುಕಟ್ಟೆಯ ವ್ಯವಹಾರದ ಮಾಹಿತಿಯನ್ನು ತುಂಬಲು ಎಲ್ಲಾ ದಲ್ಲಾಳಿಗಳು ನಿಮಗೆ ವಿತರಣಾ ಸೂಚನಾ ಸ್ಲಿಪ್ ನೀಡುತ್ತಾರೆ.

ನೀವು ವಿತರಣಾ ಸೂಚನಾ ಸ್ಲಿಪ್ ನೋಡಿದರೆ ಅದರಲ್ಲಿ ನಿಮಗೆ ಮಾರುಕಟ್ಟೆ ವಹಿವಾಟಿನ ಮಾಹಿತಿ ಸಂಪೂರ್ಣವಾಗಿ ಲಭ್ಯವಾಗುತ್ತದೆ. ಅದಾಗ್ಯು ವ್ಯವಹಾರದ ಮೂಲಕ ಷೇರುಗಳನ್ನು ತರದೆ ಇದ್ದರೆ ನೀವು ಸೂಚನಾ ಸ್ಲಿಪ್ ನ್ನು ತುಂಬಿ ಷೇರುಗಳನ್ನು ವರ್ಗಾಯಿಸಬೇಕಾಗುತ್ತದೆ.
ಆದ್ದರಿಂದ ನೀವು ಖಚಿತ ಪಡಿಸಿದ ವ್ಯಕ್ತಿಯ ಸಂಪೂರ್ಣ ಮಾಹಿತಿಯನ್ನು ಅವನ/ಅವಳ ಡಿಮ್ಯಾಟ್ ಖಾತೆ ನಂಬರ್, ಡಿಪಿ ಐಡಿ ಒಳಗೊಂಡಂತೆ ಎಲ್ಲ ಅಂಶಗಳನ್ನು ತಪ್ಪದೆ ತುಂಬಬೇಕಾಗುತ್ತದೆ. ತುಂಬಿದ ಮಾಹಿತಿಯನ್ನು ಠೇವಣಿ ತುಂಬಿಸುವವನ ಬಳಿ ಕೊಟ್ಟು ತಪ್ಪದೆ ರಶೀತಿ ಪಡೆಯತಕ್ಕದ್ದು.

ಷೇರುಗಳನ್ನು ಒಂದು ಖಾತೆಯಿಂದ ಇನ್ನೊಂದು ಖಾತೆಗೆ ವರ್ಗಾವಣೆ ಮಾಡುವಾಗ ಸ್ಲಿಪ್ ತುಂಬುವುದು ಹೇಗೆ?

ನೀವು ವಿತರಣಾ ಸೂಚನಾ ಸ್ಲಿಪ್ ಮೇಲೆ ಕೇಲವು ಮಾಹಿತಿಯನ್ನು ನೋಡಬಹುದಾಗಿದೆ. ಉದಾಹರಣೆಗೆ ನೀವು ಐಎಸ್ಐಎನ್ ನೋಡಬಹುದಾಗಿದೆ.
ಇದನ್ನು ಹೊರತುಪಡಿಸಿ ನಿಮಗೆ ಡಿಪಿ ಐಡಿ ಮತ್ತು ಫಲಾನುಭವಿಯ/ಗ್ರಾಹಕನ ಅಕೌಂಟ್ ಖಾತೆ ನಂಬರ್ ಬೇಕಾಗುತ್ತದೆ. ಅದರ ಒಂದು ಪ್ರತಿ ನಿಮ್ಮೊಂದಿಗೆ ಇಟ್ಟುಕೊಳ್ಳಲು ಮರೆಯಬಾರದು. ಆ ವ್ಯಕ್ತಿಯ ಡಿಪಿ ಖಾತೆ ಸಂಖ್ಯೆ ಹಾಗೂ ಐಡಿ ಸರಿಯಾಗಿದೆಯೆ ಎಂದು ಖಚಿತಪಡಿಸಬೇಕು.

ವರ್ಗಾಯಿಸಲ್ಪಟ್ಟ ಷೇರುಗಳನ್ನು ಫಲಾನುಭವಿ ಯಾವಾಗ ಪಡೆಯಬಹುದು?

ಫಲಾನುಭವಿ ಮಾರನೆ ದಿನವೆ ಷೇರುಗಳನ್ನು ಅವನು/ಅವಳು ತಮ್ಮ ಖಾತೆಯಲ್ಲಿ ಪಡೆಯುತ್ತಾರೆ. ಹಣದ RTGS ಮತ್ತು NEFT ವರ್ಗಾವಣೆಗೆ ೩೦ ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇದು ಷೇರುಗಳ ವರ್ಗಾವಣೆಗು ಅನ್ವಯಿಸುತ್ತದೆ.

ಷೇರುಗಳನ್ನು ಒಂದು ಖಾತೆಯಿಂದ ಇನ್ನೊಂದು ಖಾತೆಗೆ ವರ್ಗಾಯಿಸಲು ತಗಲುವ ವೆಚ್ಚ?

ದಲ್ಲಾಳಿಗಳು ವಿಧಿಸುವ ಶುಲ್ಕಗಳಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ವ್ಯತ್ಯಾಸ ಇರುತ್ತದೆ. ವಿದ್ಯುನ್ಮಾನ ಅಥವಾ ಆನ್ಲೈನ್ ಮೂಲಕ ವೈಯಕ್ತಿಕವಾಗಿ ವ್ಯಾಪಾರ ಮಾಡಬೇಕಾದವರೆಲ್ಲರೂ ವಿತರಣಾ ಸೂಚನಾ ಸ್ಲಿಪ್ ತುಂಬಬೇಕಾದ ಅಗತ್ಯ ಇರುವುದಿಲ್ಲ.
ಉದಾಹರಣೆಗೆ ಶೇರ್ಖಾನ್, ಎಂಜೆಲ್ ಬ್ರೋಕಿಂಗ್, ಸುಶೀಲ್ ಪೈನಾನ್ಸ್, ಎಸ್ಎಮ್ಸಿ ಮುಂತಾಧ ಕಂಪೆನಿಗಳು ಡಿಮ್ಯಾಟ್ ಖಾತೆ ತೆರೆಯಲು, ವ್ಯಾಪಾರ ಮಾಡಲು ಹಾಘೂ ಇನ್ನಿತರ ಸೇವೆಗಳನ್ನು ಒದಗಿಸಲು ವಿಧಿಸುವ ಶುಲ್ಕ ಬೇರೆ ಬೇರೆಯಾಗಿರುತ್ತದೆ.
ಮೊದಲೆ ತಿಳಿಸಿದಂತೆ ಶುಲ್ಕಗಳು ಬೇರೆ ಬೇರೆ ಇದ್ದು ಬದಲಾಗುತ್ತಲೇ ಇರುತ್ತವೆ. ಈ ಮಾಹಿತಿಯನ್ನು ನಿಮ್ಮ ದಲ್ಲಾಳಿಯೊಂದಿಗೆ ವಿಚಾರಿಸಿ ಪರಿಶೀಲಿಸಬೇಕಾಗುತ್ತದೆ.

ವಿತರಣಾ ಸೂಚನಾ ಸ್ಲಿಪ್ ನ್ನು ಪರಿಶೀಲನೆ ಮಾಡುತ್ತಿರಬೇಕು

ವಿತರಣಾ ಸೂಚನಾ ಸ್ಲಿಪ್ ಮೇಲೆ ಮುದ್ರೆ ಹಾಕಲಾಗಿದೆಯೇ ಹಾಗೂ ಡಿಪಿ ಐಡಿ ಮತ್ತು ಗ್ರಾಹಕರ ಐಡಿ ಮೇಲೆ ಮಾಹಿತಿ ಒಂದೆ ತೆರನಾಗಿ ಉಲ್ಲೇಖಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಬೇಕು. ಏನಾದರೂ ತಪ್ಪುಗಳಿದ್ದಲ್ಲಿ ತಕ್ಷಣವೆ ನಿಮ್ಮ ದಲ್ಲಾಳಿಗೆ ತಿಳಿಸಬೇಕು.
ಜೊತೆಗೆ ಕಡತದಲ್ಲಿಡುವ ಮುನ್ನ ಗ್ರಾಹಕರ ಐಡಿ ಮತ್ತು ಡಿಮ್ಯಾಟ್ ಖಾತೆ ಸಂಖ್ಯೆಯನ್ನು ಇನ್ನೊಮ್ಮೆ ಮರೆಯದೆ ಪರಿಶೀಲಿಸಬೇಕು. ಒಂದು ವೇಳೆ ನೀವು ವಿತರಣಾ ಸೂಚನಾ ಸ್ಲಿಪ್ ಬಳಸದೆ ಇದ್ದಲ್ಲಿ ಅದನ್ನು ಶರಣಾಗತಿ ಮಾಡಬೇಕಾಗುತ್ತದೆ.

ಇದನ್ನು ಹೊರತು ಪಡಿಸಿ ಇನ್ನಿತರ ಮಾಹಿತಿಗಾಗಿ, ಷೇರು ಮಾರುಕಟ್ಟೆಯ ವ್ಯವಹಾರಕ್ಕಾಗಿ ನಿಮ್ಮ ದಲ್ಲಾಳಿಯನ್ನು ವಿಚಾರಿಸಿ.

Read more about: demat account isin
English summary

How To Transfer Shares From One Demat Account To The Other?

Demat accounts, which hold shares in the electronic form are now a must, if you want to buy and sell shares through the stock exchanges. But, at times you may want to transfer shares to a friend or a relative without the need for a broker.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X