For Quick Alerts
ALLOW NOTIFICATIONS  
For Daily Alerts

ಗೃಹ ಸಾಲದ ಬದಲಾವಣೆ ಮೇಲೆ ಚರ ಬಡ್ಡಿ ಹೇಗೆ ಮತ್ತು ಯಾವಾಗ ಸಂಭವಿಸುತ್ತದೆ?

|

ಗೃಹ ಸಾಲ ಪಡೆಯುವಾಗ ನಿಮಗೆ ಚರ ಬಡ್ಡಿ ಅಥವಾ ಸ್ಥಿರ ಬಡ್ಡಿಯಲ್ಲಿ ಗೃಹ ಸಾಲ ಪಡೆಯುವ ಆಯ್ಕೆಗಳು ಇರುತ್ತವೆ.
ಹೆಸರೆ ಸೂಚಿಸುವಂತೆ ಸ್ಥಿರ ಬಡ್ಡಿ ಗೃಹ ಸಾಲದ ಪೂರ್ಣ ಅವಧಿ ಮುಗಿಯುವವರೆಗೆ ಅದರ ನಿಯಮಾವಳಿಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಇದನ್ನು ಒಂದು ಉದಾಹರಣೆಯ ಮೂಲಕ ಅರ್ಥೈಸಿಕೊಳ್ಳೊಣ.

ಗೃಹ ಸಾಲದ  ಮೇಲೆ ಚರ ಬಡ್ಡಿ ಹೇಗೆ ಮತ್ತು ಯಾವಾಗ ಸಂಭವಿಸುತ್ತದೆ?

ಒಬ್ಬ ವ್ಯಕ್ತಿಯು ಒಂದು ಬ್ಯಾಂಕಿನಿಂದ ಶೇಕಡ 10 ರ ಬಡ್ಡಿ ದರದಂತೆ ಸ್ಥಿರ ಗೃಹ ಸಾಲ ಪಡೆದುಕೊಂಡಾಗ ಆತನ ಒಂದು ತಿಂಗಳ ಇಎಮ್ಐ(ಸರಳ ತಿಂಗಳ ಕಂತು) 10,500 ರೂ. ಆಗಿರುತ್ತದೆ. ಆಗ ಆತನು ಬ್ಯಾಂಕಿನ ಸಾಲದ ಕಂತನ್ನು ತಿಂಗಳಿಗೆ 10,500 ರೂ. ಗಳಂತೆ ಸಾಲದ ಅವಧಿ ಮುಗಿಯುವವರೆಗೆ ಕಟ್ಟಬೇಕಾಗುತ್ತದೆ.

ಗೃಹ ಸಾಲದ ಮೇಲೆ ಚರ ಬಡ್ಡಿ ದರವು ಹೇಗೆ ಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಚರವ ಬಡ್ಡಿ ದರವು ಒಂದೇ ತೆರನಾದ ನಿಯಮಗಳಲ್ಲಿ ಕೆಲಸ ಮಾಡುವುದಿಲ್ಲ. ಬಡ್ಡಿ ದರವು ಮಾರುಕಟ್ಟೆಯ ಸ್ಥಿತಿಗತಿಗಳಿಗೆ ಅನುಗುಣವಾಗಿ ಬದಲಾಗುತ್ತಿರುತ್ತದೆ. ಹಾಗೂ ಈ ಬದಲಾವಣೆಯೂ ಬ್ಯಾಂಕುಗಳಿಗೆ ಅನುಸಾರವಾಗಿ ತನ್ನ ಇಎಮ್ಐನಲ್ಲಿ ಏರಿಳಿತಗಳನ್ನು ತರುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಬಡ್ಡಿದರವು ಪ್ರಧಾನ ಕೊಡುಗೆ ದರದೊಂದಿಗೆ ಹೊಂದಿಕೊಂಡಿರುತ್ತದೆ. ಪ್ರಧಾನ ಕೊಡುಗೆ ದರ ಹೆಚ್ಚಾದಂತೆ ಇಎಮ್ಐ ಕೂಡ ಹೆಚ್ಚಾಗುತ್ತದೆ.

ಚರ ಬಡ್ಡಿ ದರದ ಚಲನೆಯಲ್ಲಿನ ಏರಿಳಿತ

ಚರ ಬಡ್ಡಿ ದರದಲ್ಲಿ ಅತಿದೊಡ್ಡ ಬದಲಾವಣೆ ತರುವ ಅವುಗಳಲ್ಲಿನ ಅಂಶವೆಂದರೆ ಆರ್ಬಿಐ ಸಾಲ ನೀತಿ ಆಗಿರುತ್ತದೆ. ಯಾವಾಗ ಆರ್ಬಿಐ ಹಣದುಬ್ಬರ ಹೆಚ್ಚಾಗುತ್ತದೆಯೆಂದು ಭಾವಿಸುತ್ತದೆಯೊ ಅಂತ ಸಂದರ್ಭದಲ್ಲಿ ರೆಪೊ ದರದಲ್ಲೂ ಹೆಚ್ಚಳ ಆಗುವ ಸಂಭವ ಇರುತ್ತದೆ. ಆರ್ಬಿಐ ತನ್ನ ಬ್ಯಾಂಕುಗಳಿಗೆ ನೀಡುವ ಸಾಲದಿಂದ ಪಡೆಯುವ ಬಡ್ಡಿ ದರವೆ ರೆಪೊ ದರವಾಗಿರುತ್ತದೆ. ಯಾವಾಗ ರೆಪೊ ದರವು ಹೆಚ್ಚಾಗುತ್ತದೆಯೊ ಆಗ ಬ್ಯಾಂಕಿನ ವೆಚ್ಚವೂ ಹೆಚ್ಚಾಗುತ್ತದೆ. ಅದು ಬಡ್ಡಿಯ ದರದಲ್ಲೂ ಸಹ ಹೆಚ್ಚಳವನ್ನುಂಟು ಮಾಡುತ್ತದೆ.

ಇದು ಪ್ರತಿಸಲ ಸಂಭವಿಸದಿದ್ದರೂ ಹೆಚ್ಚಿನ ಸಂದರ್ಭದಲ್ಲಿ ಸಂಭವಿಸುತ್ತದೆ. ಯಾವಾಗ ಆರ್ಬಿಐ ಹಣದುಬ್ಬರ ಕಡಿಮೆಯಾಗುತ್ತದೆ ಎಂದು ಭಾವಿಸುತ್ತದೆಯೊ ಆಗ ಬಡ್ಡಿ ದರವು ಕಡಿಮೆಯಾಗಿ ಆರ್ಥಿಕ ಅಭಿವೃದ್ಧಿಗೆ ಶಕ್ತಿ ನೀಡುತ್ತದೆ. ಈ ಸಂದರ್ಭದಲ್ಲಿ ಮಾತ್ರ ಚರ ದರವು ಗೃಹ ಸಾಲದ ಮೇಲೆ ಬದಲಾವಣೆಯಾಗುವ ಸಂಭವ ಇರುತ್ತದೆ.

ಗೃಹ ಸಾಲದ ಇಎಮ್ಐ ಕಂತಿನಲ್ಲಿ ಈ ಒಂದೇ ಆಂಶವು ಬದಲಾವಣೆ ತರುವುದಿಲ್ಲವೆಂದು ಎಂದು ಮತ್ತೊಮ್ಮೆ ದೃಢಿಕರಿಸಲು ಇಚ್ಚಿಸುತ್ತೇವೆ. ಏಕೆಂದರೆ ಚರ ಗೃಹ ಸಾಲದ ದರದಲ್ಲಿನ ಬದಲಾವಣೆ ಆಗಿದೆ. ಬ್ಯಾಂಕುಗಳು ಆರ್ಬಿಐ ರೆಪೊ ದರ ಬದಲಾವಣೆ ಆಧಾರದ ಮೇಲೆ ಬಡ್ಡಿಯ ದರವನ್ನು ಬದಲಾಯಿಸಬಹುದು ಅಥವಾ ಬದಲಾಯಿಸದೆ ಇರಬಹುದು.

ಇನ್ನೊಂದು ಮುಖ್ಯವಾದ ಅಂಶವೆದರೆ ಬ್ಯಾಂಕುಗಳು ಬಡ್ಡಿ ದರವನ್ನು ನಿರ್ಧರಿಸುವುದಕ್ಕೆ ಮುಂಚಿತವಾಗಿ ತನ್ನ ಆಸ್ತಿ ಹೊಣೆಗಾರಿಕೆಯಲ್ಲಿ ಹೊಂದಾಣಿಕೆ ಆಗದೆ ಇರುವ ಅಂಶಗಳನ್ನು ವಿಶ್ಲೇಷಿಸಿಕೊಳ್ಳುತ್ತದೆ.

ಬಡ್ಡಿ ದರದಲ್ಲಿನ ಬದಲಾವಣೆಗೆ ಮುಂಚಿತವಾಗಿ ಇನ್ನು ಅನೇಕ ಅಂಶಗಳು ಪಾತ್ರವನ್ನು ವಹಿಸುತ್ತವೆ. ಉದಾಹರಣೆಗೆ ಕಳೆದ ಅನೇಕ ತ್ರೈಮಾಸಿಕಗಳಲ್ಲಿ ಆರ್ಬಿಐ ತನ್ನ ರೆಪೊ ದರವನ್ನು 150 ಪಾಯಿಂಟುಗಳ ಆಧಾರದಲ್ಲಿ ಕಡಿಮೆಗೊಳಿಸಿದೆ. ಬ್ಯಾಂಕುಗಳು ಸಮಾನರೂಪದ ಮೊತ್ತದ ಬಡ್ಡಿ ದರವನ್ನು ಕಡಿತಗೊಳಿಸಿಲ್ಲ.

ಆದರಿಂದ ಇದು ಯಾವಾಗಲು ರೆಪೊ ದರ ಆಗಿರುವುದಿಲ್ಲ. ಬದಲಾಗಿ ಇದು ಬಹುಶಹ ಭಾರತದಲ್ಲಿ ತೇಲುವ ಗೃಹ ಸಾಲದ ಬಡ್ಡಿ ದರ ಹಾಗೂ ನಿಮ್ಮ ಗೃಹ ಸಾಲದ ಇಎಮ್ಐ ಮೇಲೆ ಪರಿಣಾಮ ಬೀರುವ ಏಕೈಕ ಮುಖ್ಯವಾದ ಅಂಶವಾಗಿದೆ.

Read more about: repo rate ರೆಪೊ ದರ
English summary

How And When Does Floating Interest On Home Loan Change?

When you take a home loan, you have a choice between taking a floating interest or a fixed interest home loan. As the name suggests, a fixed interest home loan does not change over the entire tenure of the loan. Let us understand this with an example.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X