For Quick Alerts
ALLOW NOTIFICATIONS  
For Daily Alerts

ಈಗ ನಿಮ್ಮ ನೆಚ್ಚಿನ ದೇವಸ್ಥಾನಗಳಿಗೆ ಷೇರುಗಳನ್ನು ದೇಣಿಗೆ ನೀಡಬಹುದು

|

ಹೌದು, ದೇವರೆಂದರೆ ಭಾರತೀಯರಿಗೆ ಎಲ್ಲಿಲ್ಲದ ಶೃದ್ದೆ-ಭಕ್ತಿ. ದೇವರ ಅನುಗ್ರಹಕ್ಕೆ ಪಾತ್ರರಾಗಲು ಎಂತಹ ಪೂಜೆ-ಪುರಸ್ಕಾರ, ದೇಣಿಗೆ, ದಾನ ಧರ್ಮ, ತ್ಯಾಗಗಳಿಗೆ ಬೇಕಾದರೂ ನಾವು ಮುಂದಾಗುತ್ತೇವೆ.

ದೇವರ ಅನುಗ್ರಹಕ್ಕೆ ಪಾತ್ರರಾಗಲು, ದೇಣಿಗೆ, ದಾನ ಧರ್ಮಗಳನ್ನು ಮಾಡಲು ಇಲ್ಲೊಂದು ಸರಳ ವಿಧಾನವಿದೆ. ದೇವಸ್ಥಾನವು ತನ್ನ ಹೆಸರಿನ ಡಿಮ್ಯಾಟ್ ಖಾತೆ ಹೊಂದಿದಲ್ಲಿ ಭಕ್ತಾದಿಗಳು ತಮ್ಮ ನೆಚ್ಚಿನ ದೇವರಿಗೆ(ದೇವಸ್ಥಾನ) ಷೇರು, ಭದ್ರತಾ ಪತ್ರ ಮತ್ತು ಬಾಂಡುಗಳನ್ನು ದೇಣಿಗೆ ನೀಡಬಹುದಾಗಿದೆ. ಇದು ಜಗತ್ತಿನಲ್ಲಿಯೇ ಅತಿ ವೈಶಿಷ್ಟ್ಯತೆಯನ್ನು ಹೊಂದಿರುವ ದೇಣಿಗೆ, ದಾನ ಧರ್ಮ ಮಾಡುವ ವಿಧಾನವಾಗಿದೆ.

ಬ್ಯಾಂಕು ಖಾತೆಗಳಂತೆಯೇ ಡಿಮ್ಯಾಟ್ ಖಾತೆಗಳು ಕಾರ್ಯನಿರ್ವಹಿಸಲಿವೆ. ಅಲ್ಲದೆ ಎಲ್ಲ ಷೇರು ಮತ್ತು ಬಾಂಡುಗಳನ್ನು ವಿದ್ಯುನ್ಮಾನ ಮಾದರಿಯಲ್ಲಿ ನಿರ್ವಹಿಸಲಾಗುವುದು. ಬಂಗಾರ, ಹಣ, ವಿದೇಶಿ ಕರೆನ್ಸಿ ರೂಪದಲ್ಲಿ ಜಗತ್ತಿ ಮೂಲೆ ಮೂಲೆಗಳಿಂದ ಭಾರತೀಯ ದೇವಸ್ಥಾನಗಳಿಗೆ ಹೆಚ್ಚಿನ ಪ್ರಮಾಣದ ದೇಣಿಗೆ ಹರಿದು ಬರುತ್ತದೆ. (Donation)

ಡಿಮ್ಯಾಟ್ ಖಾತೆ ಹೊಂದಿರುವ ನಿಮ್ಮ ನೆಚ್ಚಿನ ದೇವಸ್ಥಾನಗಳ ವಿವರ ಇಲ್ಲಿದೆ ನೋಡಿ.

ತಿರುಪತಿ ದೇವಸ್ಥಾನ

ತಿರುಪತಿ ದೇವಸ್ಥಾನ

ಕಳೆದ ವರ್ಷ ತಿರುಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಭಕ್ತಾದಿಗಳಿಂದ ದೇಣಿಗೆಯನ್ನು ಷೇರು ಮತ್ತು ಸೆಕ್ಯುರಿಟಿಸ್ ರೂಪದಲ್ಲಿ ಪಡೆಯಲು CDSL ನಲ್ಲಿ ಡಿಮ್ಯಾಟ್ ಖಾತೆಯನ್ನು ತೆರೆದಿದೆ. ಭಕ್ತಾದಿಗಳಿಂದ ಉತ್ತೇಜಕರ ಪ್ರತಿಕ್ರಿಯೆ ಹರಿದು ಬರುತ್ತಿದೆ. ಡಿಮ್ಯಾಟ್ ಖಾತೆ ಸಂಖ್ಯೆ 16010100 00384828 ಆಗಿರುತ್ತದೆ.

ಸಿದ್ದಿವಿನಾಯಕ ದೇವಸ್ಥಾನ

ಸಿದ್ದಿವಿನಾಯಕ ದೇವಸ್ಥಾನ

ಶ್ರೀ ಸಿದ್ದಿವಿನಾಯಕ ಗಣಪತಿ ಟೆಂಪಲ್ ಟ್ರಸ್ಟ್(ಪ್ರಭಾದೇವಿ) ಮುಂಬೈ ಹೆಸರಿನಲ್ಲಿ ಸಿದ್ದಿವಿನಾಯಕ ಟೆಂಪಲ್ ಅಥಾರಿಟಿಸ್ ನವರು CDSL ಡಿಮ್ಯಾಟ್ ಖಾತೆಯನ್ನು SBICAP ಸೆಕ್ಯುರಿಟಿಸ್ ಲಿಮಿಟೆಡ್ ನಲ್ಲಿ ತೆರೆದಿದ್ದಾರೆ.
ಲಾರ್ಡ್ ಸಿದ್ದಿವಿನಾಯಕನ ಭಕ್ತಾದಿಗಳು ಈಗ ಷೇರು ಮತ್ತು ಬಾಂಡುಗಳನ್ನು ಈ ಖಾತೆ ಸಂಖ್ಯೆ 12047200 11413505 ದೇಣಿಗೆ ಮಾಡಬಹುದಾಗಿದೆ.

ಉಜ್ಜೈನಿ ಮಹಾಕಾಳಿ ದೇವಸ್ಥಾನ

ಉಜ್ಜೈನಿ ಮಹಾಕಾಳಿ ದೇವಸ್ಥಾನ

ವರದಿ ಪ್ರಕಾರ ಉಜೈನಿ ಮಹಾಕಾಳಿ ದೇವಸ್ಥಾನದವರು ಡಿಮ್ಯಾಟ್ ಖಾತೆಯನ್ನು ಶೀಘ್ರದಲ್ಲಿ ತೆರೆಯಲು ಯೋಜಿಸಿದ್ದು, ಭಕ್ತಾದಿಗಳು ದೇವರ ಹೆಸರಿನಲ್ಲಿ ತಮ್ಮ ಷೇರು ಮತ್ತು ಬಾಂಡುಗಳನ್ನು ದೇಣಿಗೆ ಕೊಡಬಹುದಾಗಿದೆ. ಉದ್ಯಮಿಗಳು ಮಾತ್ರ ಪಾಲುದಾರರಾಗಬಹುದಾಗಿದ್ದು ದೇವರ ಹೆಸರಿನಲ್ಲಿ ಷೇರು ಮತ್ತು ಬಾಂಡುಗಳಲ್ಲಿ ಹೂಡಿಕೆ ಮತ್ತು ದೇಣಿಗೆ ಮಾಡಬಹುದಾಗಿದೆ.

ಮುಂಬರಲಿರುವ ದೇವಸ್ಥಾನಗಳು

ಮುಂಬರಲಿರುವ ದೇವಸ್ಥಾನಗಳು

ಖಜ್ರಾಣದ ಗಣೇಶ ದೇವಸ್ಥಾನ ಮತ್ತು ಮಧ್ಯಪ್ರದೇಶದ ರಂಜಿತ್ ಹನುಮಾನ್ ದೇವಸ್ಥಾನ ಸೇರಿದಂತೆ ಇನ್ನೀತರ ದೇವಸ್ಥಾನದವರು ಡಿಮ್ಯಾಟ್ ಖಾತೆ ತೆರೆಯಲು ಮುಂದಾಗಲಿದ್ದಾರೆ.
ಇನ್ನೊಂದು ಮಾದ್ಯಮ ವರದಿಯ ಪ್ರಕಾರ ಮುಂಬಯಿಯ ಬಬುಲ್ನಾಥ ಮಂದಿರ, ರಾಜಸ್ಥಾನದ ಶ್ರೀನಾಥಜೀ ದೇವಸ್ಥಾನ ಮತ್ತು ಸ್ವಾಮಿ ನಾರಾಯಣ ಹಿಂದು ದೇವಸ್ಥಾನ ಇವರು ಡಿಮ್ಯಾಟ್ ಖಾತೆ ತೆರೆಯಲು ಯೋಜಿಸಿದ್ದಾರೆ.

ಷೇರುಗಳನ್ನು ದೇಣಿಗೆ ಮಾಡಿ

ಷೇರುಗಳನ್ನು ದೇಣಿಗೆ ಮಾಡಿ

ಸ್ಟಾಕ್ ಮಾರುಕಟ್ಟೆಗಳಲ್ಲಿ ಲಾಭ ಗಳಿಸುವ ಉದ್ಯಮಿ ಭಕ್ತರು ಮತ್ತು ಹೂಡಿಕೆದಾರರು ಷೇರು ಮತ್ತು ಸೆಕ್ಯುರಿಟಿಸ್ ರೂಪದಲ್ಲಿ ದೇವಸ್ಥಾನಗಳಿಗೆ ದೇಣಿಗೆ ಕೊಡಲು ಇಚ್ಛೆ ಪಡುತ್ತಾರೆ.

See more - 80g

English summary

Now You Can Donate Shares To Your Favorite Temple

Yes, it is one of its kind in the whole world, where an individual devotee can donate shares and bonds if the temple is having a Demat account. Demat account works very similar to a bank account where all shares and bonds are held in electronic form.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X