For Quick Alerts
ALLOW NOTIFICATIONS  
For Daily Alerts

ಬ್ಯಾಂಕುಗಳ ವೈಫಲ್ಯದಿಂದಾಗಿ ಸ್ಥಿರ ಠೇವಣಿಗಳಲ್ಲಿ ಏನಾಗುತ್ತದೆ?

|

ಭಾರತದಲ್ಲಿ ಹಲವು ಬ್ಯಾಂಕುಗಳು ದೀವಾಳಿಯಾಗಿವೆ ಅಥವಾ ವೈಫಲ್ಯಕ್ಕೆ ಒಳಪಟ್ಟಿವೆ. ಅದರಲ್ಲಿ ಕೋ-ಅಪರೇಟಿವ್(ಸಹಕಾರಿ) ಬ್ಯಾಂಕುಗಳ ಸಂಖ್ಯೆಯೇ ಹೆಚ್ಚು. ವ್ಯವಹಾರ ನಡೆಸಲು ವಿಫಲವಾದ ಬ್ಯಾಂಕುಗಳನ್ನು ಸಾಮಾನ್ಯವಾಗಿ ದೊಡ್ಡ ಬ್ಯಾಂಕುಗಳು ಖರೀದಿಸುತ್ತವೆ.

ಬ್ಯಾಂಕುಗಳ ವೈಫಲ್ಯದಿಂದಾಗಿ ಸ್ಥಿರ ಠೇವಣಿಗಳಲ್ಲಿ ಏನಾಗುತ್ತದೆ?

2013 ರಲ್ಲಿ ಹಲವು ಬ್ಯಾಂಕುಗಳು ಠೇವಣಿದಾರರಿಗೆ ಹಣ ಪಾವತಿಸಲು ವಿಫಲವಾಗಿದ್ದವು, ಅವುಗಳಲ್ಲಿ ಹೆಚ್ಚಿನವು ಸಹಕಾರಿ ಬ್ಯಾಂಕುಗಳು ಸೇರಿದ್ದವು. ಇವುಗಳ ಸಂಖ್ಯೆ ಕೇವಲ 16 ಆದರೂ ಠೇವಣಿದಾರರಿಗೆ 160 ಕೋಟಿ ಹಣ ಪಾವತಿಸಬೇಕಾಯಿತು.

ಈ ಬ್ಯಾಂಕು ಠೇವಣಿದಾರರಿಗೆ ಯಾರು ಪಾವತಿಸುತ್ತಾರೊ ನೋಡೋಣ... ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಲೀಕತ್ವದಲ್ಲಿರುವ ಠೇವಣಿ ವಿಮೆ ಮತ್ತು ಖಚಿತ ಸಾಲ ನಿಗಮದ(ಡಿಐಸಿಜಿಸಿ) ಮೂಲಕ ವೈಫಲ್ಯಕ್ಕೆ ಅಥವಾ ದೀವಾಳಿತನಕ್ಕೆ ಒಳಗಾಗಿರುವ ಬ್ಯಾಂಕುಗಳಿಗೆ ಸ್ಥಿರ ಠೇವಣಿ ಹಣವನ್ನು ನೀಡಲಾಗುತ್ತದೆ.

ಠೇವಣಿ ವಿಮೆ ಮತ್ತು ಖಚಿತ ಸಾಲ ನಿಗಮ(ಡಿಐಸಿಜಿಸಿ) ಎಲ್ಲ ಮೊತ್ತವನ್ನು ಪಾವತಿಸುವುದಿಲ್ಲ. ಬಡ್ಡಿ ಮತ್ತು ನಿಯಮಾವಳಿ ಮೊತ್ತ ಒಳಗೊಂಡಂತೆ ಇದು ಕೇವಲ 1 ಲಕ್ಷದ ವರೆಗೆ ಮಾತ್ರ ಹಣ ಪಾವತಿಸುತ್ತದೆ.
ಎ ಬ್ಯಾಂಕಿನಲ್ಲಿ ನೀವೂ 80,000 ರೂ.ಗಳನ್ನು ಠೇವಣಿ ಇಟ್ಟಿದ್ದಲ್ಲಿ, ಅದು ಬಡ್ಡಿ ಹಣವಾಗಿ 9000 ರೂ.ಗಳನ್ನು ಸಹ ಒಳಗೊಂಡಿರುತ್ತದೆ ಎಂದು ತಿಳಿದುಕೊಳ್ಳಬೇಕಾಗುತ್ತದೆ.

ಒಂದು ವೇಳೆ ಎ ಬ್ಯಾಂಕು ವೈಫಲ್ಯಕ್ಕೆ ಒಳಪಟ್ಟಲ್ಲಿ ಠೇವಣಿ ವಿಮೆ ಮತ್ತು ಖಚಿತ ಸಾಲ ನಿಗಮ(ಡಿಐಸಿಜಿಸಿ) 89,0000 ರೂ.ಗಳನ್ನು ನಿಮಗೆ ಪಾವತಿಸುತ್ತದೆ. ಅದಾಗ್ಯೂ ನೀವು 2 ಲಕ್ಷಗಳ ವಸೂಲಾಗದ (ಔಟ್‍ಸ್ಟಾಂಡಿಂಗ್) ಸ್ಥಿರ ಠೇವಣಿ ಹೊಂದಿದ್ದಲ್ಲಿ ನಿಮಗೆ ಕೇವಲ 1 ಲಕ್ಷ ಮಾತ್ರ ಸಿಗುತ್ತದೆ.

ಆಗಾಗ ಎದುರಾಗುವ ಪ್ರಶ್ನೆಯೆಂದರೆ: ಡಿಐಸಿಜಿಸಿ ನನ್ನ ಬ್ಯಾಂಕನ್ನು ವಿಮೆ ಒಳಪಟ್ಟಿದೆ(ಸುರಕ್ಷಿತ) ಎಂದು ಹೇಗೆ ತಿಳಿದುಕೊಳ್ಳುವುದು? ದೇಶದಲ್ಲಿನ ಖಾಸಗಿ ಮತ್ತು ಸಾರ್ವಜನಿಕ ಬ್ಯಾಂಕುಗಳೆಲ್ಲವೂ ವಿಮೆಗೆ ಒಳಪಟ್ಟಿರುತ್ತವೆ. ಆದರೆ ಸಣ್ಣ ಕೋಅಪರೆಟಿವ್ ಬ್ಯಾಂಕುಗಳ ವಿಚಾರದಲ್ಲಿ ಅವುಗಳು ಇದನ್ನು ಹೇಳುವುದು ಕಷ್ಟವಾಗುತ್ತದೆ.

ಈ ಹಿನ್ನಲೆಯಿಂದಾಗಿ, ಭಾರತೀಯ ರಿಸರ್ವ್ ಬ್ಯಾಂಕು ನೀಡುವ ವಿಮಾ ಪ್ರಮಾಣ ಪತ್ರವನ್ನು ನೀವು ಸಂಬಂಧಿಸಿದ ಬ್ಯಾಂಕುಗಳಿಗೆ ತೋರಿಸುವಂತೆ ಹೇಳಬೇಕಾಗುತ್ತದೆ. ಇದನ್ನು ಆಯಾ ಬ್ಯಾಂಕುಗಳು ಸರಿಯಾಗಿ ತೋರಿಸಬಹುದು ಅಥವಾ ತೋರಿಸದೆ ಇರಬಹುದು.
ಈಗ, ನೀವೂ ಅದೇ ಬ್ಯಾಂಕಿನ ಎರಡು ಶಾಖೆಗಳಲ್ಲಿ ಎರಡು ಠೇವಣಿಗಳನ್ನು ಹೊಂದಿದ್ದರೆ ಏನಾಗುತ್ತದೆ ಎಂದು ಯಾರಾದರೊಬ್ಬರು ಕೇಳಿದರೆ?

ಎರಡು ಬೇರೆ ಶಾಖೆಗಳಲ್ಲಿ ಒಟ್ಟು 1.5 ಲಕ್ಷದ ಎರಡು ಠೇವಣಿಗಳು ನೀವೂ ಹೊಂದಿದ್ದಲ್ಲಿ ಅಂತಿಮವಾಗಿ ನಿಮಗೆ 1 ಲಕ್ಷ ಸಿಗುತ್ತದೆ. ವಿಮೆ ಹಣ ಪಡೆಯುವ ಸಲುವಾಗಿ ಮೂಲ ಕಂತಿನ ಮೊತ್ತವನ್ನು ಅದರಲ್ಲಿ ಸೇರಿಸಲಾಗುತ್ತದೆ.

ನೀವು ವಿಭಿನ್ನ ಬ್ಯಾಂಕುಗಳಲ್ಲಿ ಹಣ ಹೊಂದಿದ್ದಲ್ಲಿ ಏನಾಗುತ್ತದೆ?

ನೀವು ಠೇವಣಿ ಇಟ್ಟ ಎರಡು ಬೇರೆ ಬೇರೆ ಬ್ಯಾಂಕುಗಳು ಒಂದು ವೇಳೆ ದೀವಾಳಿತನಕ್ಕೆ ಒಳಗಾದರೆ ನಿಮ್ಮ ಒಟ್ಟು ಮೊತ್ತ 1 ಲಕ್ಷದ ಮೀತಿಯಲ್ಲಿರುವುದಿಲ್ಲ. ಆದರೆ ನಿಮ್ಮ ವಿಮಾ ಮೊತ್ತವು 2 ಲಕ್ಷದ ವರೆಗೆ ಇರುತ್ತದೆ.

ಖಂಡಿತವಾಗಿಯೂ ಎರಡು ಬ್ಯಾಂಕುಗಳು ಏಕಕಾಲದಲ್ಲಿ ವೈಫಲ್ಯಕ್ಕೆ ಒಳಗಾಗುವುದು ತುಂಬಾ ವಿರಳ. ಹಾಗಾದಲ್ಲಿ ವಿಮೆ ನೀಡಲಾಗುವುದು ಆದರೆ ವ್ಯಕ್ತಿಗತ(ವೈಯಕ್ತಿಕ)ವಾಗಿ ಅಲ್ಲ ಬದಲಾಗಿ ಆಯಾ ಬ್ಯಾಂಕಿನ ವೈಫಲ್ಯಕ್ಕೆ ಅನುಗುಣವಾಗಿ ಎಂಬುದನ್ನು ನೆನಪಿನಲ್ಲಿಡುವುದು ಮುಖ್ಯವಾಗುತ್ತದೆ.

English summary

What Happens To Fixed Deposits In The Event Of Bank Failure?

Several banks in India have failed or gone bankrupt n the past, but, most of them have been cooperative banks. Private sector banks that do not do well, are generally taken over by the larger banks.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X