For Quick Alerts
ALLOW NOTIFICATIONS  
For Daily Alerts

2 ಲಕ್ಷ ಆಭರಣ ಖರೀದಿಗೆ ಪ್ಯಾನ್ ಕಾರ್ಡ್ ಕಡ್ಡಾಯ

By Siddu
|

ಎರಡು ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಆಭರಣ ಖರೀದಿಗೆ ಪ್ಯಾನ್ ಕಾರ್ಡ್ ಕಡ್ಡಾಯ ಮಾಡಿರುವ ಸರ್ಕಾರದ ನಿರ್ಧಾರದ ಬಗ್ಗೆ ಅಖಿಲ ಭಾರತೀಯ ರತ್ನ ಮತ್ತು ಆಭರಣ ವ್ಯಾಪಾರ ಒಕ್ಕೂಟ(GJF) ಅಸಮಧಾನ ವ್ಯಕ್ತಪಡಿಸಿದೆ.

ಶೇ.70ರಷ್ಟು ತೆರಿಗೆ ಅಡಿಯಲ್ಲಿ ಬರದೆ ಇರುವ ಮತ್ತು ಪ್ಯಾನ್ ಕಾರ್ಡ್ ಇಲ್ಲದಿರುವ ಗ್ರಾಮೀಣ ಖರೀದಿದಾರರಿಗೆ ಇದರಿಂದಾಗಿ ಪಕ್ಷಪಾತ ಮಾಡಿದಂತಾಗುತ್ತದೆ. ಹೀಗಾಗಿ ಸರ್ಕಾರದ ಈ ನಿರ್ಧಾರ ಪ್ರಾಯೋಗಿಕವಾಗಿಲ್ಲ ಎಂದು ಹೇಳಿದೆ.

2 ಲಕ್ಷ ಆಭರಣ ಖರೀದಿಗೆ ಪ್ಯಾನ್ ಕಾರ್ಡ್ ಕಡ್ಡಾಯ

ಆಭರಣ ವಲಯಕ್ಕೆ ಪ್ಯಾನ್ ಕಾರ್ಡ್ ಕಡ್ಡಾಯ ಮಾಡಿರುವುದನ್ನು ತೆಗೆದು ಹಾಕುವಂತೆ ಸರ್ಕಾರಕ್ಕೆ ಕೇಳುತ್ತೇವೆ. ಜತೆಗೆ 2 ಲಕ್ಷ ಬೆಳ್ಳಿ ಮತ್ತು 5 ಲಕ್ಷ ಆಭರಣ ಮಾರಾಟ ಹಾಗೂ ತೆರಿಗೆ ಸಂಬಂಧಿತ ಮಾಹಿತಿಯನ್ನು ಸಮರ್ಥವಾಗಿ ನಿರ್ವಹಿಸಲಾಗುವುದು ಎಂದು GJF ಅಧ್ಯಕ್ಷ ಶ್ರೀಧರ್ ಜಿವಿ ಹೇಳಿದರು.

ಚಿನ್ನ, ರತ್ನ, ಆಭರಣ ಮತ್ತು ಆಭರಣ ಯಂತ್ರೋಪಕರಣಗಳ ಮೇಲಿನ ಅಮದು ಸುಂಕವನ್ನು ಕಡಿಮೆ ಮಾಡುವ ಅಗತ್ಯವಿದೆ ಎಂದರು.
ಪ್ರಸ್ತುತ 5 ಲಕ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಆಭರಣ ಖರೀದಿಗೆ ಪ್ಯಾನ್ ಕಾರ್ಡ್ ಬೇಕಾಗಿದೆ.

English summary

PAN mandatory for purchase of 2 lakh jewelery

The All India Gems and Jewellery Trade Federation (GJF) today expressed dissatisfaction over the government's decision to make PAN card mandatory on any transaction of Rs 2 lakh and above.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X