For Quick Alerts
ALLOW NOTIFICATIONS  
For Daily Alerts

ಉದ್ಯೋಗಿಗಳನ್ನು ವಜಾ ಮಾಡಿದ 6 ಬೃಹತ್ ಕಂಪನಿಗಳು

By Siddu Thorat
|

ಕಳೆದ ಕೆಲ ವರ್ಷಗಳ ಹಿಂದೆ ಅನೇಕ ತಂತ್ರಜ್ಞಾನ ಮತ್ತು ಸ್ಟಾರ್ಟ್ಅಪ್ ವಲಯದ ಕಂಪನಿಗಳು ಕ್ಯಾಂಪಸ್ ಸಂದರ್ಶನದ ಮೂಲಕ ಸಾವಿರಾರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದವು. ಕ್ಯಾಂಪಸ್ ಸಂದರ್ಶನ ಬೇಡಿಕೆಯು ಉತ್ತುಂಗದಲ್ಲಿತ್ತು.

ಆದರೆ ಅದರಲ್ಲಿನ ಕೆಲ ದೊಡ್ಡ ಕಂಪನಿಗಳು ಒತ್ತಡಕ್ಕೆ ಸಿಲುಕಿ ಕೆಲಸಗಾರರನ್ನು ಬೃಹತ್ ಪ್ರಮಾಣದಲ್ಲಿ ವಜಾಗೊಳಿಸುತ್ತಿವೆ.

ಕಂಪನಿಗಳ ಈ ಪ್ರಕಟಣೆಯಿಂದಾಗಿ ಲಕ್ಷಾಂತರ ನೌಕರರಿಗೆ ಸಿಡಿಲು ಬಡಿದಂತಾಗಿದೆ. ಹೀಗೆ ನೌಕರರನ್ನು ಕೆಲಸದಿಂದ ವಜಾ ಮಾಡಿದ ಜಗತ್ತಿನ ಬೃಹತ್ ಕಂಪನಿಗಳು ಯಾವವು ಎಂಬ ಚಿತ್ರಣ ಇಲ್ಲಿದೆ.

ಸಿಸ್ಕೊ ಸಿಸ್ಟಮ್

ಸಿಸ್ಕೊ ಸಿಸ್ಟಮ್

ಯುಎಸ್ ಮೂಲದ ನೆಟ್ವರ್ಕಿಂಗ್ ದೈತ್ಯ ಕಂಪನಿ ಸಿಸ್ಕೊ ಸಿಸ್ಟಮ್ ಜಾಗತಿಕವಾಗಿ ಪ್ರತಿನಿಧಿಸುವ ಸುಮಾರು ಶೇ. 7ರಷ್ಟು ಕಾರ್ಯಪಡೆಯನ್ನು, ಅಂದರೆ 5,500 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಕಳೆದ ವಾರ ಹೇಳಿದೆ.
ಈ ನಿರ್ಧಾರ ಭಾರತದ ಮೇಲೂ ಭಾರಿ ಪರಿಣಾಮವನ್ನೇ ಉಂಟು ಮಾಡಿದೆ. ಏಕೆಂದರೆ ಭಾರತ ಇದರ ಎರಡನೇ ದೊಡ್ಡ ತಾಣವಾಗಿದ್ದು, 11,000 ನೌಕರರನ್ನು ಹೊಂದಿದೆ. ಹೀಗಾಗಿ ಈ ಭೀತಿ 11,000 ಸಾವಿರ ನೌಕರರಿಗೂ ತಟ್ಟಲಿದೆ.

ಒಲಾ ಕ್ಯಾಬ್

ಒಲಾ ಕ್ಯಾಬ್

ಒಲಾ ಕಂಪನಿ 18 ತಿಂಗಳ ಹಿಂದೆ 200 ದಶಲಕ್ಷ ಕೊಟ್ಟು ಖರೀದಿಸಿದ್ದ ಟ್ಯಾಕ್ಸಿ ಫಾರ್ ಶೂರ್ ನಿಂದ ಈಗ ಪ್ರತ್ಯೇಕಗೊಂಡಿದೆ. ಈ ಹಿನ್ನೆಲೆಯಲ್ಲಿ ಕಳೆದ ವಾರ ಒಲಾ ಕನಿಷ್ಟ 700 ಉದ್ಯೋಗಿಗಳನ್ನು ವಜಾ ಮಾಡುವುದಾಗಿ ನಿರೀಕ್ಷಿಸಲಾಗಿದೆ.

ಪ್ಲಿಪ್ಕಾರ್ಟ್

ಪ್ಲಿಪ್ಕಾರ್ಟ್

ಪ್ಲಿಪ್ಕಾರ್ಟ್ ಭಾರತದ ಅತಿದೊಡ್ಡ ಇ-ಕಾಮರ್ಸ್ ಕಂಪನಿಯಾಗಿದೆ. ಯಾರು ದಕ್ಷತೆ ಮತ್ತು ಶಿಸ್ತಿನಿಂದ ಪ್ರಾಮಾಣಿಕ ಕೆಲಸ ಮಾಡುತ್ತಿಲ್ಲ ಅಂತವರಿಗೆ ಕೆಲಸ ಬಿಡುವಂತೆ ಕಳೆದ ತಿಂಗಳು ಹೇಳಿತ್ತು.
ಕಂಪನಿಯ ಶೇ. 1/2ರಷ್ಟು ಅಂದರೆ ಹೆಚ್ಚು ಕಡಿಮೆ 300 ಜನರನ್ನು ಅವರ ದಕ್ಷತೆ ಮತ್ತು ಪ್ರದರ್ಶನದ ಆಧಾರದ ಮೇಲೆ ಕೆಲಸ ಬಿಡುವಂತೆ ತಿಳಿಸಿದೆ.

ಮೈಕ್ರೊಸಾಫ್ಟ್

ಮೈಕ್ರೊಸಾಫ್ಟ್

ಸ್ಮಾರ್ಟ್ ಫೋನ್ ಯಂತ್ರಾಂಶ ಮತ್ತು ಜಾಗತಿಕ ಮಾರಾಟ ವಿಭಾಗಗಳಿಂದ ಹೆಚ್ಚುವರಿ 2,850 ಸ್ಥಾನಗಳನ್ನು ಕೈಬಿಡುವುದಾಗಿ ಮೈಕ್ರೊಸಾಫ್ಟ್ ಕಂಪನಿ ತಿಳಿಸಿದೆ. ಉದ್ಯೋಗಿಗಳನ್ನು ಕಡಿತಗೊಳಿಸುವ ಪ್ರಕ್ರಿಯೆ ಜೂನ್ 2017ರ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿತ್ತು.

Grofers

Grofers

ದಿನಸಿ ವಿತರಣೆಯ ಮಾಡುವ ಸ್ಟಾರ್ಟ್ಅಪ್ ಆದ Grofers ಕಂಪನಿ ತನ್ನ ಶೇ. 10ರಷ್ಟು ಅಥವಾ ಹೆಚ್ಚು ಕಡಿಮೆ 100 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಹೇಳಿದೆ.

ಆಸ್ಕ್ ಮಿ

ಆಸ್ಕ್ ಮಿ

ಆರ್ಥಿಕ ಬಿಕ್ಕಟ್ಟಿನಿಂದ ವಹಿವಾಟು ಸ್ಥಗಿತಗೊಳಿಸಲಿರುವ ಇ-ಕಾಮರ್ಸ್ ಕಂಪನಿ ಆಸ್ಕ್ ಮಿ ನಿರ್ಧಾರದಿಂದ ನಾಲ್ಕು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಕಳೆದುಕೊಳ್ಳುವ ಭಿತಿ ಎದುರಿಸುತ್ತಿದ್ದಾರೆ.
ಆಸ್ಕ್ ಮಿ ಪ್ರಮುಖ ಹೂಡಿಕೆದಾರ ಕಂಪನಿ ಅಸ್ಟ್ರೊ ಆಸ್ಕ್ ಮಿಯ ಮಾತೃ ಸಂಸ್ಥೆ ಗೆಟ್ಇಟ್ ಲೆಕ್ಕಪತ್ರ ತಪಾಸಣೆ ನಡೆಸಲು ಮುಂದಾಗಿದೆ ಎಂದು ತಿಳಿದು ಬಂದಿದೆ.
ದೇಶದಲ್ಲಿರುವ 40 ಸೇವಾ ಕೇಂದ್ರಗಳನ್ನು ಮುಚ್ಚುವಂತೆ ಗೆಟ್ಇಟ್ ಮುಖ್ಯ ಹಣಕಾಸು ಅಧಿಕಾರಿ ಸೋನ್ ಭದ್ರ ತಿಳಿಸಿದ್ದಾರೆ.
ಮಾರುಕಟ್ಟೆಯಲ್ಲಿಯ ಅನಿಶ್ಚಿತ ಬೆಳವಣಿಗೆಯಿಂದ ಹೂಡಿಕೆದಾರರು ನವೋದ್ಯಮಗಳಲ್ಲಿ ಹೂಡಿಕೆಗೆ ಹಿಂಜರಿಯುತ್ತಿರುವುದೇ ಈ ಪರಿಸ್ಥಿತಿಗೆ ಕಾರಣ ಎನ್ನಲಾಗಿದೆ.

ಟ್ಯಾಕ್ಸಿ ಫಾರ್ ಶೂರ್ ಉದ್ಯೋಗಿಗಳಿಗೆ ಕದ ಮುಚ್ಚಿದ ಒಲಾಟ್ಯಾಕ್ಸಿ ಫಾರ್ ಶೂರ್ ಉದ್ಯೋಗಿಗಳಿಗೆ ಕದ ಮುಚ್ಚಿದ ಒಲಾ

English summary

Companies That Announced Layoffs Recently

The technology and start-up sectors, once the most sought after by students across campuses, have come under pressure, with many big companies announcing massive layoffs. These announcements have come in quick succession, casting a gloom on millions of employees associated with these sectors.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X