For Quick Alerts
ALLOW NOTIFICATIONS  
For Daily Alerts

ಮೊಬೈಲ್ ನಲ್ಲಿ ಆಧಾರ್ ಆಪ್ ಡೌನ್ಲೋಡ್ ಮಾಡುವುದು ಹೇಗೆ?

By Siddu
|

ಆಧಾರ್ ಕಾರ್ಡ್ ಎಲ್ಲ ವಿಧದ ವ್ಯವಹಾರಗಳಿಗೆ ಗುರುತಿನ ಚೀಟಿ ಮತ್ತು ವಿಳಾಸದ ಪುರಾವೆಯಾಗಿ ಬಳಸಲಾಗುತ್ತಿದೆ. 12 ಅಂಕೆಗಳ ಆಧಾರ್ ನಂಬರ್ ಪ್ರತಿಯೊಬ್ಬ ಭಾರತೀಯನ ಗುರುತು ಹಾಗೂ ಹೆಮ್ಮೆಯ ಸಂಖ್ಯೆಯಾಗಿ ಮಾರ್ಪಟ್ಟಿದೆ.

 

ಅನೇಕ ಸೇವೆಗಳ ಆಧಾರ ಸ್ಥಂಭವಾಗಿ ಹಾಗೂ ಅಪಾರ ಪ್ರಯೋಜನಗಳನ್ನು ಪಡೆಯುವ ಸೇತುವೆಯಾಗಿ ಆಧಾರ್ ಕಾರ್ಡ್ ಪ್ರಾಮುಖ್ಯತೆ ಪಡೆದಿದೆ. ಭಾರತದ ಯಾವುದೇ ಮೂಲೆಗೆ ಹೋದರೂ ವಿಳಾಸ ಮತ್ತು ಗುರುತಿನ ದಾಖಲಾತಿಯಾಗಿ ಆಧಾರ್ ನಂಬರ್ ಬಳಕೆಯಾಗಲಿದೆ. ಅಲ್ಲದೆ UIDAI ವೆಬ್ಸೈಟ್ ಮೂಲಕ ಇ-ಆಧಾರ್ ಡೌನಲೋಡ್ ಮಾಡಿಕೊಳ್ಳುವುದು ಸಹ ಆಧಾರ್ ಕಾರ್ಡ್ ನಷ್ಟೆ ಮಾನ್ಯವಾಗಿರುತ್ತದೆ.

 

ಕಳೆದ ಕೆಲ ದಿನಗಳ ಹಿಂದೆ UIDAI ಮೊಬೈಲ್ ಆಫ್ ಬಿಡುಗಡೆಗೊಳಿಸಿದೆ. ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಮೊಬೈಲ್ ನಲ್ಲಿಯೇ ಆಧಾರ್ ಮಾಹಿತಿಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಆನ್ ಲೈನ್ ಮೂಲಕ ಆಧಾರ್ ಕಾರ್ಡ್ ಡೌನ್ ಲೋಡ್ ಹೇಗೆ?

ಮೊಬೈಲ್ ನಲ್ಲಿ ಆಧಾರ್ ಆಪ್ ಡೌನ್ಲೋಡ್ ಮಾಡುವುದು ಹೇಗೆ?

ಇದು ಹೆಸರು, ಜನ್ಮ ದಿನಾಂಕ, ಲಿಂಗ, ವಿಳಾಸ ಮತ್ತು ಛಾಯಾಚಿತ್ರ ಇತ್ಯಾದಿ ಪ್ರಮುಖ ಅಂಶಗಳನ್ನು ಒಳಗೊಂಡಿದ್ದು, ಗೂಗಲ್ ಪ್ಲೇ ಸ್ಟೋರ್ ಮೂಲಕ ಆಧಾರ್ ಆಪ್ ಡೌನ್ಲೋಡ್ ಮಾಡಬಹುದು.

ಮೊಬೈಲ್ ನಲ್ಲಿ ಆಧಾರ್ ಆಪ್ ಪಡೆಯುವುದು ಹೇಗೆ?
* ಆಧಾರ್ ಆಪ್ ಲಿಂಕ್ ಮೇಲೆ ಕ್ಲಿಕ್ ಮಾಡಿ
* ಆಧಾರ್ ನಂಬರ್ ನೋಂದಾಯಿಸಿ
* ಆಧಾರ್ ಕಾರ್ಡ್ ದಾರರ ಹೆಸರನ್ನು ನೋಂದಾಯಿಸಿ
* ಪಿನ್ ಕೋಡ್
* ಕ್ಲಿಕ್ ವೆರಿಪೈ

ಮೊಬೈಲ್ ನಲ್ಲಿ ಆಧಾರ್ ಆಪ್ ಡೌನ್ಲೋಡ್ ಮಾಡುವಾಗ ಆಧಾರ್ ಅರ್ಜಿ ತುಂಬುವಾಗ ನೀಡಿದ ಮಾಹಿತಿಯನ್ನು ತುಂಬಬೇಕಾಗುತ್ತದೆ. ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿದ ನಂತರ ಆಧಾರ್ ದತ್ತಾಂಶ, ಇ-ಮೇಲ್ ಇ-ಆಧಾರ್ ಮತ್ತು ಪಾಸ್ವರ್ಡ್ ಬದಲಾಯಿಸಬಹುದು, ಹಂಚಿಕೊಳ್ಳಬಹುದು.

Read more about: aadhar banking ಆಧಾರ್
English summary

Aadhaar App On Your Mobile: How To Get It?

Aadhaar is required in almost all of the transactions which act as ID and address proof as a part of KYC procedure. Aadhaar is a 12 digit unique number allotted to individuals holder, which can be hard to remember.
Story first published: Tuesday, September 27, 2016, 17:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X