For Quick Alerts
ALLOW NOTIFICATIONS  
For Daily Alerts

ರುಪೇ ಕಾರ್ಡ್ ಪ್ರಯೋಜನಗಳೇನು?

ರುಪೇ ಕಾರ್ಡ್ ಬ್ಯಾಂಕು, ವ್ಯಾಪಾರಿ ಮತ್ತು ಭಾರತೀಯ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಸಹಕರಿಸುತ್ತದೆ

By Siddu
|

ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಕಾರ್ಡ್ ಗಳು ಲಭ್ಯವಿವೆ. ಕಾರ್ಡುಗಳ ಮೂಲಕ ವ್ಯವಹಾರ ಮಾಡುವುದೇ ಒಂದು ಸವಾಲಾಗಿದೆ. ಅದರಲ್ಲೂ ಇ-ಕಾಮರ್ಸ್ ವ್ಯವಹಾರದ ಸಂದರ್ಭದಲ್ಲಿ ಡೆಬಿಟ್, ವೀಸಾ, ಮಾಸ್ಟರ್, ಕ್ರೆಡಿಟ್ ಕಾರ್ಡುಗಳು ಬಹುಮುಖ್ಯ ಪಾತ್ರ ವಹಿಸುತ್ತಿವೆ.

 

ಕೇವಲ ವೀಸಾ ಕಾರ್ಡ್ ಮತ್ತು ಮಾಸ್ಟರ್ ಕಾರ್ಡ್ ಗೆ ಸೀಮಿತವಾಗಿದ್ದ ಇ-ಕಾಮರ್ಸ್ ವ್ಯವಹಾರಗಳನ್ನು ರುಪೇ ಕಾರ್ಡ್ ಮೂಲಕವೂ ನಡೆಸಬಹುದಾಗಿದೆ.
ರುಪೇ ಕಾರ್ಡ್ ಬ್ಯಾಂಕು, ವ್ಯಾಪಾರಿ ಮತ್ತು ಭಾರತೀಯ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಸಹಕರಿಸುತ್ತದೆ.

 
ರುಪೇ ಕಾರ್ಡ್ ಪ್ರಯೋಜನಗಳೇನು?

ರುಪೇ ಕಾರ್ಡ್ ಪ್ರಯೋಜನಗಳು:
1. ಕಡಿಮೆ ವೆಚ್ಚ ಮತ್ತು ನಿರ್ವಹಣಾ ಸಾಮರ್ಥ್ಯ
ವ್ಯವಹಾರ ಪ್ರಕ್ರಿಯೆ ದೇಶಿಯವಾಗಿ ನಡೆಯುವುದರಿಂದ ಕಡಿಮೆ ವೆಚ್ಚದಲ್ಲಿ ವಹಿವಾಟು ನಡೆಸಬಹುದು. ರುಪೇ ಕಾರ್ಡ್ ಬಳಕೆಯಿಂದ ವ್ಯವಹಾರ ಕೈಗೆಟಕುವ ವೆಚ್ಚದಲ್ಲಿ ನಡೆಸಬಹುದಾಗಿದ್ದು, ಉದ್ಯಮದಲ್ಲಿ ಕಾರ್ಡ್ ಬಳಕೆ ಹೆಚ್ಚಿಸಬಹುದು.

2. ಕಸ್ಟಮೈಸ್ಡ್ ಉತ್ಪನ್ನಗಳು
ಈ ದೇಶಿಯ ಯೋಜನೆ ಕಸ್ಟಮೈಸ್ಡ್ ಉತ್ಪನ್ನಗಳ ಅಭಿವೃದ್ಧಿಗೆ ಬದ್ದವಾಗಿದ್ದು, ಭಾರತೀಯ ಗ್ರಾಹಕರಿಗೆ ಉತ್ತಮ ಆಫರ್ ಗಳನ್ನು ಒದಗಿಸುತ್ತದೆ.

3. ಭಾರತೀಯ ಗ್ರಾಹಕರಿಗೆ ಸಂಬಂಧಿತ ಮಾಹಿತಿ ರಕ್ಷಣೆ
ರುಪೇ ಕಾರ್ಡ್ ವ್ಯವಹಾರ ದೇಶೀಯವಾಗಿ ನಡೆಯುವುದರಿಂದ ವ್ಯವಹಾರ ಮತ್ತು ಗ್ರಾಹಕರ ಡೇಟಾ ಸಂಬಂಧಿತ ಮಾಹಿತಿ ದೇಶೀಯವಾಗಿಯೇ ಉಳಿಯುತ್ತದೆ. ಗ್ರಾಹಕರ ಮಾಹಿತಿ ದುರುಪಯೋಗಕ್ಕೆ ಅವಕಾಶವಿರುವುದಿಲ್ಲ.

4. ವಿದ್ಯುನ್ಮಾನ ಉತ್ಪನ್ನ ಆಯ್ಕೆಗೆ ಅವಕಾಶ
ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು ಪಡೆಯಲು ಅವಕಾಶವಿರುವುದಿಲ್ಲ. ಆದರಿಂದ ರುಪೇ ಉತ್ಪನ್ನಗಳ ಮೂಲಕ ಬ್ಯಾಂಕುಗಳು ತನ್ನ ಗ್ರಾಹಕರಿಗೆ ಆರ್ಥಿಕವಾಗಿ ಅನುಕೂಲವಾಗುವಂತೆ ಆಫರ್ ನೀಡಲಿವೆ. ಜತೆಗೆ ಸಂಬಂಧಿತ ಉತ್ಪನ್ನ ರೂಪಾಂತರಗಳ ಬಗ್ಗೆ ನಿರ್ದೇಶಿಸಬಹುದು.

5. ಪಾವತಿ ವಾಹಿನಿ ಮತ್ತು ಉತ್ಪನ್ನಗಳ ಮಧ್ಯೆ ಚಲನಶೀಲತೆ
ರುಪೇ ಕಾರ್ಡ್ ವಿವಿಧ ಪಾವತಿ ವಾಹಿನಿ ಮತ್ತು ಉತ್ಪನ್ನಗಳ ಮಧ್ಯೆ ಉತ್ತಮ ಚಲನಶೀಲತೆಯನ್ನು ಹೊಂದಲು ಸಹಕಾರಿಯಾಗಬಲ್ಲದು. ಪ್ರಸ್ತುತ NPCI ಎಟಿಎಂ, ಮೊಬೈಲ್ ತಂತ್ರಜ್ಞಾನ, ಚೆಕ್ ಸೇರಿದಂತೆ ಇತ್ಯಾದಿ ವೇದಿಕೆಗಳಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ.

6. ರುಪೇ ಡೆಬಿಟ್ ಕಾರ್ಡ್ ಆಫರ್ಸ್
* ಸಹಾಯ ಸೇವೆಗಳು
* ಇಂಧನ ಮೇಲ್ತೆರಿಗೆ ಮನ್ನಾ
* ಐಆರ್ಟಿಸಿ ಕ್ಯಾಶ್ ಬ್ಯಾಕ್
* ಯುಟಿಲಿಟಿ ಬಿಲ್ ಪಾವತಿ ಕ್ಯಾಶ್ ಬ್ಯಾಕ್
* ದೇಶೀಯವಾಗಿ ಪ್ರವೇಶ

English summary

Benefits of RuPay Card

The Indian market offers huge potential for cards penetration despite the challenges. RuPay Cards will address the needs of Indian consumers, merchants and banks.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X