For Quick Alerts
ALLOW NOTIFICATIONS  
For Daily Alerts

ದೀಪಾವಳಿಗೆ ಚಿನ್ನದ ನಾಣ್ಯಗಳನ್ನು ಇಲ್ಲಿ ಖರೀದಿಸಿ

ಚಿನ್ನದ ಹಣ ಗಳಿಕೆ ಯೋಜನೆ ಅಡಿಯಲ್ಲಿ ಭಾರತೀಯ ಚಿನ್ನದ ನಾಣ್ಯಗಳನ್ನು ಮುದ್ರಿಸಲಾಗುತ್ತಿದೆ. ಈ ಚಿನ್ನದ ನಾಣ್ಯಗಳು 5 ಗ್ರಾಂ, 10 ಗ್ರಾಂ, 20 ಗ್ರಾಂ ಗುಂಪುಗಳಲ್ಲಿ ಲಭ್ಯವಿವೆ.

By Siddu
|

ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಚಿನ್ನದ ನಾಣ್ಯಗಳನ್ನು ಬಿಡುಗಡೆ ಮಾಡಿದರು. ಅಶೋಕ ಚಕ್ರ ಹೊಂದಿರುವ ಚಿನ್ನದ ನಾಣ್ಯಗಳು ಈ ಕಾರ್ಯಕ್ರಮದ ಭಾಗವಾಗಿತ್ತು.

 

ದೇಶೀಯ ಚಿನ್ನದ ಬೇಡಿಕೆಯನ್ನು ಪೂರೈಸುವುದಕ್ಕಾಗಿ ಬಂಗಾರದ ಅಮದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಭಾರತೀಯ ಚಿನ್ನದ ನಾಣ್ಯಗಳನ್ನು ಬಿಡುಗಡೆಗೊಳಿಸಲಾಗಿದೆ. ಭಾರತದಲ್ಲಿ ಚಿನ್ನದ ದರ

 

ಚಿನ್ನದ ಹಣ ಗಳಿಕೆ ಯೋಜನೆ ಅಡಿಯಲ್ಲಿ ಭಾರತೀಯ ಚಿನ್ನದ ನಾಣ್ಯಗಳನ್ನು ಮುದ್ರಿಸಲಾಗುತ್ತಿದೆ. ಈ ಚಿನ್ನದ ನಾಣ್ಯಗಳು 5 ಗ್ರಾಂ, 10 ಗ್ರಾಂ, 20 ಗ್ರಾಂ ಗುಂಪುಗಳಲ್ಲಿ ಲಭ್ಯವಿವೆ.

ದೀಪಾವಳಿಗೆ ಚಿನ್ನದ ನಾಣ್ಯಗಳನ್ನು ಇಲ್ಲಿ ಖರೀದಿಸಿ

ಭಾರತದಲ್ಲಿ ಭಾರತೀಯ ಚಿನ್ನದ ನಾಣ್ಯಗಳನ್ನು ಎಲ್ಲಿ ಖರೀಸುತ್ತಿರಿ?
ಈ ಚಿನ್ನದ ನಾಣ್ಯಗಳು ಪ್ರಸ್ತುತ ಭಾರತದಾದ್ಯಂತ ಇರುವ ಎಂಎಂಟಿಸಿ ಮಳಿಗೆಗಳಲ್ಲಿ ಲಭ್ಯ ಇದ್ದು, ಜತೆಗೆ ಈ ಕೆಳಗಿನ ಬ್ಯಾಂಕುಗಳ ಅಧಿಕೃತ ಶಾಖೆಗಳಲ್ಲಿ ನಾಣ್ಯಗಳು ಸಿಗುತ್ತವೆ.
- ಇಂಡಿಯನ್ ಒವರ್‌ಸಿಸ್ ಬ್ಯಾಂಕ್
- ಯೆಸ್ ಬ್ಯಾಂಕ್
- ಆಂಧ್ರಾ ಬ್ಯಾಂಕ್
- ಐಸಿಐಸಿಐ ಬ್ಯಾಂಕ್
- ವಿಜಯ ಬ್ಯಾಂಕ್
ದೇಶದ 383 ಮಳಿಗೆಗಳಲ್ಲಿ ಭಾರತೀಯ ಚಿನ್ನದ ನಾಣ್ಯಗಳು ಲಭ್ಯವಿವೆ. ಈ ಚಿನ್ನದ ನಾಣ್ಯಗಳು ಬ್ಯೂರೊ ಅಫ್ ಇಂಡಿಯನ್ ಸ್ಟಾಂಡರ್ಡ್ಸ್(BIS) ಹಾಲ್ ಮಾರ್ಕ್ ಮೂಲಕ ಪರಿಶುದ್ದ ಚಿನ್ನ ಎಂದು ಪ್ರಮಾಣೀಕರಿಸಲ್ಪಟ್ಟಿದೆ.

ರಾಷ್ಟ್ರೀಯ ಬ್ರ್ಯಾಂಡ್ ನಾಣ್ಯಗಳನ್ನು ಚಲಾವಣೆಗೆ ತರುವುದರಿಂದ ಏಕರೂಪದ ಬೆಲೆ, ಗುಣಮಟ್ಟದ ಖರೀದಿ ಹಾಗೂ ಮಾರಾಟ ಮತ್ತು ಕೊಳ್ಳುವಿಕೆ ನಡುವಿನ ನಂಬಿಕೆ ಕೊರತೆಯನ್ನು ಹೋಗಲಾಡಿಸುತ್ತದೆ.

ನಾಣ್ಯದ ಒಂದು ಮುಖದ ಮೇಲೆ ರಾಷ್ಟ್ರೀಯ ಲಾಂಛನ ಅಶೋಕ ಚಕ್ರ ಇದ್ದು, ಇನ್ನೊಂದು ಬದಿಗೆ ಮಹಾತ್ಮ ಗಾಂಧಿಯವರ ಚಿತ್ರವಿದೆ. ಇದು ಮೇಕ್ ಇನ್ ಇಂಡಿಯ ಯೋಜನೆಗೆ ಸರ್ಕಾರ ಕೊಡುತ್ತಿರುವ ಪ್ರಾಮುಖ್ಯತೆಯಾಗಿದೆ ಎಂದು ಬ್ಯೂರೊ ಅಫ್ ಇಂಡಿಯನ್ ಸ್ಟಾಂಡರ್ಡ್ಸ್(BIS) ಹೇಳಿದೆ.

ಚಿನ್ನದ ನಾಣ್ಯಗಳು 24 ಕ್ಯಾರೆಟ್, 999 ಉತ್ಕೃಷ್ಟ ಶುದ್ದತೆ, ತೂಕ ಮತ್ತು ಶುದ್ದತೆಯಲ್ಲಿ ಹೆಚ್ಚಿನ ಗುಣಮಟ್ಟ, ಉತ್ತಮ ಭದ್ರತೆಯೊಂದಿಗೆ ಪ್ಯಾಕಿಂಗ್ ಇತ್ಯಾದಿ ಅನನ್ಯ ಲಕ್ಷಣಗಳನ್ನು ಹೊಂದಿವೆ.

Read more about: gold gold coin ಚಿನ್ನ
English summary

Where To Buy Indian Gold Coins This Diwali?

Indian Gold Coins were launched last year by Indian Prime Minister Shri Narendra Modi. The Ashoka Chakra Gold Coin is a part of the Gold Monetisation Programme.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X