For Quick Alerts
ALLOW NOTIFICATIONS  
For Daily Alerts

ರೂ. 500 - 1000 ನೋಟುಗಳ ರದ್ದತಿ: ಸಾರ್ವಜನಿಕರು ತಿಳಿದುಕೊಳ್ಳಬೇಕಾದ ಅಂಶಗಳೇನು?

ಕೇಂದ್ರ ಸರ್ಕಾರ ಮಂಗಳವಾರ ಮಧ್ಯರಾತ್ರಿಯಿಂದಲೇ ರೂ. 500, 1000 ಮುಖಬೆಲೆಯ ನೋಟುಗಳ ಚಲಾವಣೆ ರದ್ದುಪಡಿಸಿದ್ದು, ಕಪ್ಪುಹಣ, ಖೋಟಾ ನೋಟು, ಭ್ರಷ್ಟಾಚಾರ, ಭಯೋತ್ಪಾಧನೆ ತಡೆಗೆ ಮಹತ್ವದ ಹೆಜ್ಜೆ ಇಟ್ಟಿದೆ.

By Siddu
|

ದೇಶದ ಅರ್ಥವ್ಯವಸ್ಥೆ ಒಂದು ಮಹಾ ಕ್ರಾಂತಿಗೆ ಮುನ್ನುಡಿ ಬರೆದಿದೆ. ಕೇಂದ್ರ ಸರ್ಕಾರ ಮಂಗಳವಾರ ಮಧ್ಯರಾತ್ರಿಯಿಂದಲೇ ರೂ. 500, 1000 ಮುಖಬೆಲೆಯ ನೋಟುಗಳ ಚಲಾವಣೆ ರದ್ದುಪಡಿಸಿದ್ದು, ಕಪ್ಪುಹಣ, ಖೋಟಾ ನೋಟು, ಭ್ರಷ್ಟಾಚಾರ, ಭಯೋತ್ಪಾಧನೆ ತಡೆಗೆ ಮಹತ್ವದ ಹೆಜ್ಜೆ ಇಟ್ಟಿದೆ.

ಕಳೆದ ಕೆಲ ವರ್ಷಗಳಿಂದ ಕಪ್ಪುಹಣ, ಖೋಟಾ ನೋಟು, ಭ್ರಷ್ಟಾಚಾರ ನಿಯಂತ್ರಣ ಕುರಿತು ಹಲವು ಚರ್ಚೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿಯೇ ಅನಿರೀಕ್ಷಿತವಾಗಿ ಮೊದಲ ಬಾರಿ ಸುದ್ದಿ ವಾಹಿನಿಗಳ ಮೂಲಕ ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿ, ರೂ. 500, 1000 ಮುಖಬೆಲೆಯ ನೋಟುಗಳ ಚಲಾವಣೆ ನಿರ್ಬಂಧಿಸುವ ನಿರ್ಧಾರ ಪ್ರಕಟಿಸಿದರು.

500, 1000 ನೋಟುಗಳ ರದ್ದತಿ ಹಿನ್ನೆಲೆಯಲ್ಲಿ ಜನಸಾಮಾನ್ಯರು ಮಾಡಬೇಕಾದ ಹಾಗೂ ತಿಳಿದುಕೊಳ್ಳಬೇಕಾದ ಕೆಲ ಪ್ರಮುಖ ಅಂಶಗಳು ಇಲ್ಲಿವೆ ನೋಡಿ....

1. ಹಳೆ ನೋಟುಗಳನ್ನು ಏನು ಮಾಡಬೇಕು?

1. ಹಳೆ ನೋಟುಗಳನ್ನು ಏನು ಮಾಡಬೇಕು?

ಯಾರು ರೂ. 500, 1000 ಮುಖಬೆಲೆಯ ನೋಟುಗಳನ್ನು ಹೊಂದಿದ್ದಾರೆ ಅವರು ನೋಟುಗಳನ್ನು ಬ್ಯಾಂಕುಗಳಿಗೆ ಮತ್ತು ಪೋಸ್ಟ್ ಆಫೀಸ್ ಗಳಲ್ಲಿನ ಖಾತೆಗಳಿಗೆ ಜಮಾವಣೆ ಮಾಡಬೇಕಾಗುತ್ತದೆ. ರೂ. 500, 1000 ಮುಖಬೆಲೆಯ ನೋಟುಗಳ ಜಮಾವಣೆಗೆ ನವೆಂಬರ್ 10 ರಿಂದ ಡಿಸೆಂಬರ್ 30 ರವರೆಗೆ ಸಮಯವಕಾಶ ಕಲ್ಪಿಸಲಾಗಿದೆ.

2. ಬದಲಾವಣೆಗೆ ಅವಕಾಶ ಇದೆಯೆ?

2. ಬದಲಾವಣೆಗೆ ಅವಕಾಶ ಇದೆಯೆ?

ಸಾರ್ವಜನಿಕರು ತಮ್ಮ ಬಳಿ ಹೊಂದಿರುವ ರೂ. 500, 1000 ಮುಖಬೆಲೆಯ ನೋಟುಗಳನ್ನು ಬ್ಯಾಂಕು ಅಥವಾ ಪೋಸ್ಟ್ ಆಫೀಸ್ ಗಳ ಮೂಲಕ ನೋಟುಗಳ ವಿನಿಮಯ ಮಾಡಿಕೊಳ್ಳಬಹುದಾಗಿದೆ. ನೋಟುಗಳನ್ನು ಬದಲಾವಣೆ ಮಾಡಿಕೊಳ್ಳುವಾಗ ಪ್ಯಾನ್ ಕಾರ್ಡ್, ಆಧಾರ್ ನಂಬರ್, ಮತದಾರರ ಚೀಟಿ ಮುಂತಾದ ದಾಖಲಾತಿಗಳನ್ನು ನೀಡುವುದು ಕಡ್ಡಾಯ ಮಾಡಿದೆ. ಒಂದು ದಿನಕ್ಕೆ ಒಬ್ಬ ವ್ಯಕ್ತಿ ನಾಲ್ಕು ಸಾವಿರ ಮೊತ್ತದ ನೋಟುಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

3. ಹೊಸ ನೋಟು ಚಲಾವಣೆ

3. ಹೊಸ ನೋಟು ಚಲಾವಣೆ

ಪ್ರಧಾನಿ ಮೋದಿ ಮಂಗಳವಾರ ಮಾಡಿದ ಭಾಷಣದಲ್ಲಿ ರೂ. 500, 1000 ಮುಖಬೆಲೆಯ ನೋಟುಗಳು ಅತಿ ಶೀಘ್ರದಲ್ಲಿಯೇ ಚಲಾವಣೆಗೆ ಬರಲಿವೆ ಎಂದು ಭರವಸೆ ನೀಡಿದ್ದಾರೆ. ಈ ನೋಟುಗಳು ಗುರುವಾರದಿಂದಲೇ ಚಾಲ್ತಿಗೆ ಬರುವ ನಿರೀಕ್ಷೆ ಇದೆ ಎನ್ನಲಾಗಿದೆ. ರೂ. 100 ಮುಖಬೆಲೆಯ ನೋಟುಗಳು ಮತ್ತು ಅದಕ್ಕಿಂತ ಕಡಿಮೆ ಬೆಲೆಯ ನೋಟು ಹಾಗೂ ನಾಣ್ಯಗಳು ಚಲಾವಣೆಯಲ್ಲಿ ಇರುತ್ತವೆ.

4. ಎಟಿಎಂನಿಂದ ಹಣ ಪಡೆಯುವ ಮಿತಿ ಎಷ್ಟು?

4. ಎಟಿಎಂನಿಂದ ಹಣ ಪಡೆಯುವ ಮಿತಿ ಎಷ್ಟು?

ಇದು ತುಂಬಾ ಮುಖ್ಯ ವಿಚಾರವಾಗಿದೆ. ಬ್ಯಾಂಕಿನಿಂದ ಡ್ರಾ ಮಾಡಿಕೊಳ್ಳಬಹುದಾದ ಮೊತ್ತದ ಮೇಲೆ ಸರ್ಕಾರ ನಿಯಮಗಳನ್ನು ಹಾಕಿದೆ.
- ಒಂದು ದಿನಕ್ಕೆ ಎಟಿಎಂನಿಂದ ಗರಿಷ್ಠ ರೂ. 2000 ಮಾತ್ರ ಡ್ರಾ ಮಾಡಿಕೊಳ್ಳಬಹುದು. ಬರುವ ದಿನಗಳಲ್ಲಿ ಇದರ ಪ್ರಮಾಣ ರೂ. 4000 ಹೆಚ್ಚಿಸುವ ನಿರೀಕ್ಷೆ ಇದೆ.
- ಒಂದು ದಿನಕ್ಕೆ ಬ್ಯಾಂಕುಗಳಿಂದ ಗ್ರಾಹಕರು ಗರಿಷ್ಠ ರೂ. 10000 ಹಾಗೂ ಒಂದು ವಾರಕ್ಕೆ ರೂ. 20000 ಗಳನ್ನು ಡ್ರಾ ಮಾಡಿಕೊಳ್ಳಬಹುದು.
- ಹಣ ಡ್ರಾ ಮಾಡಿಕೊಳ್ಳಲು ಸರ್ಕಾರ ವಿಧಿಸಿರುವ ಮಿತಿಗಳನ್ನು ಬರುವ ದಿನಗಳಲ್ಲಿ ಏರಿಸಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.

5. ಬ್ಯಾಂಕು ವ್ಯವಹಾರ ಸ್ಥಗಿತ

5. ಬ್ಯಾಂಕು ವ್ಯವಹಾರ ಸ್ಥಗಿತ

ರೂ. 500, 1000 ನೋಟುಗಳ ರದ್ದತಿ ಹಿನ್ನೆಲೆಯಲ್ಲಿ ಬ್ಯಾಂಕುಗಳು ಬುಧವಾರ ವ್ಯವಹಾರಗಳನ್ನು ನಡೆಸುವುದಿಲ್ಲ. ಬದಲಿಗೆ ಹೆಚ್ಚುವರಿ ಕೌಂಟರ್ ಗಳ ಮೂಲಕ ಹಳೆ ನೋಟುಗಳ ರದ್ದತಿ ಹಾಗೂ ಹೊಸ ನೋಟುಗಳ ಚಲಾವಣೆಗಾಗಿ ಕಾರ್ಯನಿರ್ವಹಿಸಲಿದೆ. ಜತೆಗೆ ಬುಧವಾರ ಹಾಗೂ ಗುರುವಾರ ಎಟಿಎಂ ಯಂತ್ರಗಳು ತೆರೆದಿರುವುದಿಲ್ಲ ಎಂಬುದನ್ನು ಸಾರ್ವಜನಿಕರು ಗಮನಿಸಬೇಕು.

6. ನೋಟುಗಳ ಚಲಾವಣೆಗೆ ಅವಕಾಶ ಎಲ್ಲಿ?

6. ನೋಟುಗಳ ಚಲಾವಣೆಗೆ ಅವಕಾಶ ಎಲ್ಲಿ?

ರೂ. ರೂ. 500, 1000 ಮುಖಬೆಲೆಯ ನೋಟುಗಳ ಚಲಾವಣೆಗೆ ಆಸ್ಪತ್ರೆ, ಪೆಟ್ರೋಲ್ ಬಂಕ್, ಸರ್ಕಾರಿ ಬಸ್ ಟಿಕೆಟ್ ಬುಕಿಂಗ್, ರೇಲ್ವೆ ಮತ್ತು ವಿಮಾನ ಟಿಕೆಟ್ ಬುಕಿಂಗ್ ಕೌಂಟರ್ ಗಳಲ್ಲಿ ಅವಕಾಶ ನೀಡಲಾಗಿದೆ. ಇದಕ್ಕೆ ನವೆಂಬರ್ 11 ರ ಮಧ್ಯರಾತ್ರಿವರೆಗೆ ಸಮಯವಕಾಶ ಒದಗಿಸಲಾಗಿದೆ.

7. ಮಿತಿಯಿಲ್ಲದ ವ್ಯವಹಾರ

7. ಮಿತಿಯಿಲ್ಲದ ವ್ಯವಹಾರ

ಎಟಿಎಂ ಮತ್ತು ಬ್ಯಾಂಕು ವಹಿವಾಟಿಗೆ ಮಿತಿ ನಿರ್ಬಂಧಿಸಲಾಗಿದೆ ಆದರೆ ಚೆಕ್, ಡಿಡಿ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುಗಳ ಮೂಲಕ ನಡೆಸುವ ವ್ಯವಹಾರಗಳಿಗೆ ಯಾವುದೇ ಮಿತಿಗಳು ಇರುವುದಿಲ್ಲ. ಜತೆಗೆ ವಿದ್ಯುನ್ಮಾನ ಹಣ ವರ್ಗಾವಣೆಗೆ ಯಾವುದೇ ನಿರ್ಬಂಧ ಇರುವುದಿಲ್ಲ.

8. ಹಾಗಿದ್ದರೆ ನೀವೇನು ಮಾಡಬೇಕು?

8. ಹಾಗಿದ್ದರೆ ನೀವೇನು ಮಾಡಬೇಕು?

- ಬ್ಯಾಂಕು ಅಥವಾ ಪೋಸ್ಟ್ ಆಫೀಸ್ ಗಳ ಖಾತೆಗೆ ರೂ. 500, 1000 ಮುಖಬೆಲೆಯ ನೋಟುಗಳನ್ನು ಡಿಸೆಂಬರ್ 30ರ ವರೆಗೆ ಜಮಾ ಮಾಡಬಹುದು.
- ಪಾನ್ ಕಾರ್ಡ್, ಆಧಾರ್ ನಂಬರ್ ಅಥವಾ ಮತದಾರರ ಚೀಟಿ ಒಂದನ್ನು ತೋರಿಸುವುದರ ಮೂಲಕ ಬ್ಯಾಂಕು ಅಥವಾ ಪೋಸ್ಟ್ ಆಫೀಸ್ ಗಳಲ್ಲಿ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು.
- ಒಂದು ದಿನಕ್ಕೆ ಹೆಚ್ಚೆಂದರೆ ರೂ. 4000 ವರೆಗೆ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು. ಮತ್ತೆ ಬದಲಾಯಿಸಿಕೊಳ್ಳಬೇಕೆಂದರೆ ಇನ್ನೊಂದು ದಿನ ಹೋಗಬಹುದು.
- ಒಂದು ದಿನಕ್ಕೆ ಎಟಿಎಂನಿಂದ ಗರಿಷ್ಠ ರೂ. 2000, ಬ್ಯಾಂಕುಗಳಿಂದ ಗರಿಷ್ಠ ರೂ. 10000 ಹಾಗೂ ಒಂದು ವಾರಕ್ಕೆ ರೂ. 20000 ಗಳನ್ನು ಡ್ರಾ ಮಾಡಿಕೊಳ್ಳಬಹುದು.

English summary

Rs 500, Rs 1000 Notes Trashed: Things You Need To Know

Government of India on Tuesday decided to cancel the legal tender character of the high denomination bank notes of Rs 500 and Rs 1000 denominations issued by RBI till now. This will take effect from the expiry of the 8th November, 2016.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X