For Quick Alerts
ALLOW NOTIFICATIONS  
For Daily Alerts

ಪೇಟಿಎಂ ನಿಂದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಹೇಗೆ?

ನೋಟುಗಳ ನಿಷೇಧದ ನಂತರ ಕೇಂಧ್ರ ಸರ್ಕಾರ ನಗದು ರಹಿತ ವ್ಯವಹಾರಕ್ಕೆ ಹೆಚ್ಚು ಪ್ರೋತ್ಸಾಹಿಸುತಿದ್ದು, ಹಲವು ಯೋಜನೆಗಳಿಗೆ ಮುನ್ನುಡಿ ಬರೆಯುತ್ತಿದೆ. ನಗದು ಹಣ ಇಲ್ಲದೆ ಆನ್ಲೈನ್ ಮೂಲಕ ವ್ಯವಹಾರ ಕೈಗೊಳ್ಳುವ ಉತ್ತುಂಗದ ಸಮಯ ಎಂದೇ ಹೇಳಬಹುದು.

By Siddu
|

ಪೇಟಿಎಂ (Paytm) ದೇಶದ ಇ-ಕಾಮರ್ಸ್ ಕ್ಷೇತ್ರದ ಅತಿದೊಡ್ಡ ವೇದಿಕೆ ಆಗಿದ್ದು, ಡಿಜಿಟಲ್ ವಾಲೆಟ್ ಸೌಲಭ್ಯ ಒದಗಿಸುತ್ತಿದೆ. ಪ್ರಾರಂಭದಲ್ಲಿ ಮೊಬೈಲ್ ರೀಚಾರ್ಜ್ ಮತ್ತು ಯುಟಿಲಿಟಿ ಬಿಲ್ ಪಾವತಿ ಮೂಲಕ ಕಾರ್ಯ ಆರಂಭಿಸಿದ ಪೇಟಿಎಂ ಇಂದು ಮೊಬೈಲ್ ಆಪ್ ಮೂಲಕ ಎಲ್ಲ ಮಾರುಕಟ್ಟೆಯನ್ನು ಆಕ್ರಮಿಸುತ್ತಿದೆ. ಅಂತರ್ಜಾಲ ಸಂಪರ್ಕ ಇಲ್ಲದೆಯೂ ವ್ಯವಹಾರ ನಡೆಸುವ ಸೌಲಭ್ಯ ಕಲ್ಪಿಸಿದೆ. ಬೆಸ್ಟ್ ಮೊಬೈಲ್ ವಾಲೆಟ್ ಆಪ್ ಯಾವವು ಗೊತ್ತೆ?

 

ನೋಟುಗಳ ನಿಷೇಧದ ನಂತರ ಕೇಂದ್ರ ಸರ್ಕಾರ ನಗದು ರಹಿತ ವ್ಯವಹಾರಕ್ಕೆ ಹೆಚ್ಚು ಪ್ರೋತ್ಸಾಹಿಸುತಿದ್ದು, ಹಲವು ಯೋಜನೆಗಳಿಗೆ ಮುನ್ನುಡಿ ಬರೆಯುತ್ತಿದೆ. ಹೀಗಾಗಿ ನಗದು ಹಣ ಇಲ್ಲದೆ ಆನ್ಲೈನ್ ಮೂಲಕ ವ್ಯವಹಾರ ಕೈಗೊಳ್ಳುವ ಉತ್ತುಂಗದ ಸಮಯ ಎಂದೇ ಹೇಳಬಹುದು. ನಗದು ರಹಿತ ವ್ಯವಹಾರ ಹೇಗೆ? ಇಲ್ಲಿವೆ 6 ಮಾರ್ಗ

ಪೇಟಿಎಂ ನಿಂದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಹೇಗೆ ಎಂಬುದನ್ನು ನೋಡೋಣ...

ಹಣ ವರ್ಗಾವಣೆ ಹೇಗೆ?

ಹಣ ವರ್ಗಾವಣೆ ಹೇಗೆ?

1. ಪೇಟಿಎಂ ಆಪ್ ತೆರೆಯಿರಿ
2. ಪಾಸ್ ಬುಕ್ ಆಯ್ಕೆಯನ್ನು ಕ್ಲಿಕ್ ಮಾಡಿ
3. ಇದು ನಿಮ್ಮ ಪೇಟಿಎಂ ವಾಲೆಟ್ ನಲ್ಲಿರುವ ಮೊತ್ತವನ್ನು ತೋರಿಸುತ್ತದೆ. ಅಲ್ಲಿ ಕೆಳಗಡೆ ಬ್ಯಾಂಕಿಗೆ ಹಣ ಕಳುಹಿಸಿ(send money) ಮತ್ತು ವಾಲೆಟ್ ಗೆ ಹಣ ಸೇರಿಸಿ(add money) ಆಯ್ಕೆಗಳಿರುತ್ತವೆ. ನಂತರ ಬ್ಯಾಂಕಿಗೆ ಹಣ ಕಳುಹಿಸಿ(send money to bank) ಮೇಲೆ ಕ್ಲಿಕ್ ಮಾಡಿ.
4. ಮುಂದಿನ ಪುಟದಲ್ಲಿ ಬಲಗಡೆಯಲ್ಲಿರುವ ವರ್ಗಾವಣೆ ಆಯ್ಕೆಯನ್ನು(transfer option) ಕ್ಲಿಕ್ ಮಾಡಿ.
5. ಪೇಟಿಎಂ ನಿಂದ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬೇಕಾಗಿರುವ ಮೊತ್ತ, ಖಾತೆ ಸಂಖ್ಯೆ, IFSC ಕೋಡ್ ಗಳನ್ನು ನಮೂದಿಸಬೇಕು.
6. ಕೊನೆಯದಾಗಿ ಕಳುಹಿಸಿ(send) ಮೇಲೆ ಕ್ಲಿಕ್ ಮಾಡಿ.

ಪೇಟಿಎಂ ವಾಲೆಟ್ ಮೂಲಕ ಬಿಲ್ ಪಾವತಿ ಹೇಗೆ?
 

ಪೇಟಿಎಂ ವಾಲೆಟ್ ಮೂಲಕ ಬಿಲ್ ಪಾವತಿ ಹೇಗೆ?

1. ಪೇಟಿಎಂ ಆಪ್ ಅಥವಾ ವೆಬ್ಸೈಟ್ ನಲ್ಲಿ ಎಲೆಕ್ಟ್ರಿಸಿಟಿ ಐಕಾನ್ ಆಯ್ಕೆ ಮಾಡಿ.
2. ಎಲೆಕ್ಟ್ರಿಸಿಟಿ ಬೋರ್ಡ್ ಆಯ್ಕೆ ಮಾಡಿ
3. ವಿದ್ಯುತ್ ಬಿಲ್ ಮೇಲೆ ನಮೂದಿಸಿರುವಂತೆ ಗ್ರಾಹಕರ ಹೆಸರನ್ನು ನಮೂದಿಸಿ.
4. ಬಿಲ್ ಮಾಹಿತಿ ಪಡೆಯಲು Proceed ಮೇಲೆ ಕ್ಲಿಕ್ ಮಾಡಿ.
5. ಬಿಲ್ ವಿವರವನ್ನು ಪರಿಶೀಲಿಸಿ.
6. ನಿಶ್ಚಿತ ಮೊತ್ತವನ್ನು ನಮೂದಿಸಿ ಪಾವತಿಸಿ.
7. ನಂತರ ಕೂಪನ್ಸ್/ಪ್ರೋಮೊ ಕೋಡ್ ಸ್ಕ್ರೀನ್ ಗೆ ಹೊಗುವಿರಿ.
8. ಪ್ರೋಮೊ ಕೋಡ್ ಇದ್ದವರು ಈ ಸ್ಕ್ರೀನ್ ಮೇಲೆ ಅಪ್ಲೈ ಮಾಡಿ. ಅದೇ ರೀತಿ ಕೂಪನ್ಸ್ ಮೇಲೆ ಆಸಕ್ತಿ ಇದ್ದರೆ ಅದನ್ನು ಆಯ್ಕೆ ಮಾಡಿ.
9. ಪಾವತಿಯ ವಿಧಾನ ಆಯ್ಕೆ ಮಾಡಿ ಮತ್ತು ವಿವರವನ್ನು ನಮೂದಿಸಿ.
10 ಬಿಲ್ ಪಾವತಿಯ ವಿವರವನ್ನು ಪಡೆಯಿರಿ.

ಇಂಟರ್ನೆಟ್ ಕನೆಕ್ಷನ್ ಇಲ್ಲದೆ ಹಣ ವರ್ಗಾವಣೆ

ಇಂಟರ್ನೆಟ್ ಕನೆಕ್ಷನ್ ಇಲ್ಲದೆ ಹಣ ವರ್ಗಾವಣೆ

ಗ್ರಾಹಕರು ಮತ್ತು ವ್ಯಾಪಾರಿಗಳು ಟೋಲ್ ಫ್ರೀ ನಂಬರ್ 1800-1800-1234 ಮೂಲಕ ಹಣ ಪಾವತಿ, ಮೊಬೈಲ್ ರೀಚಾರ್ಜ್, ಹಣ ಸ್ವೀಕೃತಿಗಳನ್ನು ಇಂಟರ್ನೆಟ್ ಬಳಕೆ ಇಲ್ಲದೆಯೇ ಮಾಡುವ ಸೌಲಭ್ಯವನ್ನು ಪೇಟಿಎಂ ಕಲ್ಪಿಸಿದೆ.

ಈ ಸೌಲಭ್ಯ ಪಡೆಯುವುದು ಹೇಗೆ?
* ಪೇಟಿಎಂನೊಂದಿಗೆ ಗ್ರಾಹಕರು ಮತ್ತು ವ್ಯಾಪಾರಿಗಳು ಮೊಬೈಲ್ ನಂಬರ್ ನೋಂದಣಿ ಮಾಡಿಸಬೇಕು.
* ನಾಲ್ಕು ಅಂಕೆಗಳ ಪೇಟಿಎಂ ಪಿನ್ ಸೆಟ್ ಮಾಡಿ
* ಒಂದು ಪೇಟಿಎಂ ವಾಲೆಟ್ ನಿಂದ ಇನ್ನೊಂದು ವಾಲೆಟ್ ಗೆ ಹಣ ವರ್ಗಾವಣೆ ಮಾಡಲು ಸ್ವೀಕರಿಸುವವರ ಮೊಬೈಲ್ ನಂಬರ್, ಮೊತ್ತ ಮತ್ತು ಪೇಟಿಎಂ ಪಿನ್ ನಮೂದಿಸಬೇಕು.

ಸ್ಮಾರ್ಟ್ ಫೋನ್ ಮತ್ತು ಅಂತರ್ಜಾಲ ಇಲ್ಲದೇ ಕೇವಲ ಟೋಲ್ ಫ್ರೀ ನಂಬರ್ ಗೆ ಕರೆ ಮಾಡುವುದರ ಮೂಲಕ ಪ್ರತಿಯೊಬ್ಬರೂ ಈ ಸೌಲಭ್ಯ ಪಡೆಯಬಹುದಾಗಿದೆ.

Read more about: paytm money bank finance news
English summary

How To Transfer Money From Paytm Wallet To Bank Account?

Paytm which started as a prepaid mobile recharge website in 2010, launched its wallet in 2014 for enabling cashless transactions. The payment gaint is planning to start India's first payment bank for which it has already received licence from Reserve Bank of India.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X