For Quick Alerts
ALLOW NOTIFICATIONS  
For Daily Alerts

ನಿಮ್ಮ ಈ ಚಿನ್ನಾಭರಣಗಳ ಮೇಲೆ ತೆರಿಗೆ ಇಲ್ಲ

ಕಪ್ಪುಹಣವನ್ನು ಬಿಳಿ ಹಣವನ್ನಾಗಿ ಬದಲಾಯಿಸಿಕೊಳ್ಳಲು ಚಿನ್ನಾಭರಣಗಳನ್ನು ಖರೀದಿಸುತ್ತಿದ್ದಾರೆಂಬ ಆರೋಪಗಳ ಹಿನ್ನೆಲೆಯಲ್ಲಿ ಅದಕ್ಕೆ ಸೂಕ್ತ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.

By Siddu
|

ಕಪ್ಪುಹಣ, ಖೋಟಾ ನೋಟು ನಿಯಂತ್ರಣಕ್ಕಾಗಿ ನೋಟು ನಿಷೇಧ ಮಾಡಿರುವ ಕೇಂದ್ರ ಸರ್ಕಾರ ಇದರ ಜತೆ ಇನ್ನು ಹಲವು ಕಟ್ಟುನಿಟ್ಟಿನ ಕಾರ್ಯ ಯೋಜನೆಗಳನ್ನು ರೂಪಿಸುವಲ್ಲಿ ನಿರತವಾಗಿದೆ. ಭಾರತದಲ್ಲಿ ಚಿನ್ನದ ದರ

ಈಗಾಗಲೇ ಚಿನ್ನಾಭರಣಗಳ ಮೇಲೆಯೂ ಸರ್ಕಾರ ತೆರಿಗೆ ವಿಧಿಸಲಿದೆ ಎಂಬ ಆತಂಕ ಸಾರ್ವಜನಿಕರಲ್ಲಿ ಇತ್ತು. ಇದಕ್ಕೆ ವಿವರಣೆ ನೀಡಿರುವ ಕೇಂದ್ರ ಹಣಕಾಸು ಇಲಾಖೆ ನಿಗದಿತ ಮಿತಿಯೊಳಗಿರುವ ಚಿನ್ನಕ್ಕೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ನೋಟು ರದ್ದು ಎಫೆಕ್ಟ್: ಚಿನ್ನದ ಬೆಲೆ ಹಾಗೂ ಬೇಡಿಕೆಯಲ್ಲಿ ಇಳಿಕೆ!

ಆದರೆ ಕಪ್ಪುಹಣವನ್ನು ಬಿಳಿ ಹಣವನ್ನಾಗಿ ಬದಲಾಯಿಸಿಕೊಳ್ಳಲು ಚಿನ್ನಾಭರಣಗಳನ್ನು ಖರೀದಿಸುತ್ತಿದ್ದಾರೆಂಬ ಆರೋಪಗಳ ಹಿನ್ನೆಲೆಯಲ್ಲಿ ಅದಕ್ಕೆ ಸೂಕ್ತ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.

ಯಾವ ಚಿನ್ನಾಭರಣಗಳ ಮೇಲೆ ಕೇಂದ್ರ ಹಣಕಾಸು ಇಲಾಖೆ ತೆರಿಗೆ ವಿಧಿಸಿದೆ ಹಾಗೂ ಯಾವುದು ತೆರಿಗೆ ಮುಕ್ತವಾಗಿದೆ ಎಂಬುದನ್ನು ನೋಡೋಣ...

1. ಮಸೂದೆ ತಿದ್ದುಪಡಿ ವದಂತಿ

1. ಮಸೂದೆ ತಿದ್ದುಪಡಿ ವದಂತಿ

ಚಿನ್ನಾಭರಣಗಳ ಮೇಲೆ ತೆರಿಗೆ ವಿಧಿಸಲು ಮಸೂದೆಯಲ್ಲಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ ಎಂಬ ವದಂತಿಯನ್ನು ಕೇಂದ್ರ ಅಲ್ಲಗಳೆದಿದ್ದು, , ಘೋಷಿತ ಆದಾಯದಲ್ಲಿ ಚಿನ್ನಾಭರಣ ತೆಗೆದುಕೊಂಡರೆ ಅದಕ್ಕೆ ಆದಾಯ ತೆರಿಗೆ ಕಾಯಿದೆ ಅನ್ವಯಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಪಡಿಸಿದೆ.

2. ಇವುಗಳ ಮೇಲೆ ತೆರಿಗೆ ಇಲ್ಲ?

2. ಇವುಗಳ ಮೇಲೆ ತೆರಿಗೆ ಇಲ್ಲ?

* ಘೋಷಿತ ಚಿನ್ನಾಭರಣಗಳ ಮೇಲೆ ತೆರಿಗೆ ವಿಧಿಸಲಾಗುವುದಿಲ್ಲ.
* ಕೃಷಿ ಆದಾಯದಲ್ಲಿ ಖರೀದಿಸಿದ ಚಿನ್ನಾಭರಣಗಳ ಮೇಲೆ ತೆರಿಗೆ ಇಲ್ಲ.
* ವಂಶ ಪಾರಂಪರ್ಯವಾಗಿ ಬಳುವಳಿಯಾಗಿ ಬಂದಿರುವ ಚಿನ್ನಾಭರಣಗಳ ಮೇಲೆ ತೆರಿಗೆ ಇಲ್ಲ.
* ಸಣ್ಣ ಉಳಿತಾಯಗಳಿಂದ ಖರೀದಿಸಿದ ಚಿನ್ನದ ಮೇಲೆ ತೆರಿಗೆ ಇಲ್ಲ

3. ತೆರಿಗೆ ಇರುವ ಚಿನ್ನಾಭರಣಗಳು

3. ತೆರಿಗೆ ಇರುವ ಚಿನ್ನಾಭರಣಗಳು

* ಚಿನ್ನಾಭರಣಗಳ ಖರೀದಿಯ ಆದಾಯದ ಮೂಲಗಳು ನಿಗೂಢವಾಗಿದ್ದಲ್ಲಿ ದಂಡ ಹಾಗೂ ತೆರಿಗೆ ಕಟ್ಟಬೇಕಾದ ಸಾಧ್ಯತೆ
* ಬ್ಯಾಂಕ್ ಲಾಕರ್ ಗಳ ಮೇಲೂ ಸಹ ಕೇಂದ್ರ ಸರ್ಕಾರ ನಿಗಾ ವಹಿಸಬಹುದು.
* ಸೂಕ್ತ ದಾಖಲೆಗಳ ಜತೆ ಎಷ್ಟೇ ಚಿನ್ನಾಭರಣಗಳಿದ್ದರೂ ಭಯ ಪಡಬೇಕಾಗಿಲ್ಲ

4. ಈ ಚಿನ್ನಾಭರಣಗಳಿಗೆ ಭಯ ಇಲ್ಲ

4. ಈ ಚಿನ್ನಾಭರಣಗಳಿಗೆ ಭಯ ಇಲ್ಲ

* ವಿವಾಹಿತ ಮಹಿಳೆ ಗರಿಷ್ಠ 500 ಗ್ರಾಂ ಚಿನ್ನಾಭರಣ ಇಟ್ಟುಕೊಳ್ಳಲು ಅವಕಾಶ
* ಅವಿವಾಹಿತ ಮಹಿಳೆ ಗರಿಷ್ಠ 250 ಗ್ರಾಂ ಚಿನ್ನಾಭರಣ ಹೊಂದಬಹುದು
* ಪುರುಷ ಗರಿಷ್ಠ 100 ಗ್ರಾಂ ಚಿನ್ನ ಇಟ್ಟುಕೊಳ್ಳಲು ಅವಕಾಶ

5. ಸಿಬಿಡಿಟಿ ಸ್ಪಷ್ಟನೆ

5. ಸಿಬಿಡಿಟಿ ಸ್ಪಷ್ಟನೆ

ಈಗಾಗಲೇ ತಿದ್ದುಪಡಿ ಮಾಡಲಾದ ಕಾನೂನಿನ 115ಬಿಬಿಇ ಸೆಕ್ಷನ್ ಅನ್ವಯ ಕಪ್ಪು ಹಣದ ಮೇಲೆ ಶೇ 50ರಷ್ಟು ತೆರಿಗೆ ಮತ್ತು ಶೇ 25ರಷ್ಟು ದಂಡ ವಿಧಿಸಬಹುದಾಗಿದೆ. ಇದರ ಜತೆಗೆ ಅಘೋಷಿತ ಆಸ್ತಿ ಅಥವಾ ಸಂಪತ್ತು ಕಪ್ಪು ಹಣವೆಂದು ಖಚಿತವಾದಲ್ಲಿ ಅದರ ಮೇಲೆ ಶೇ. 10ರಷ್ಟು ಹೆಚ್ಚುವರಿ ದಂಡ ವಿಧಿಸುವ ಸಲುವಾಗಿ ಇನ್ನೊಂದು ಸೆಕ್ಷನ್ ಸೇರಿಸಲಾಗಿದೆ ಎಂದು ಸಿಬಿಡಿಟಿ ಸ್ಪಷ್ಟಪಡಿಸಿದೆ.

Read more about: gold silver narendra modi money rbi
English summary

No tax on ancestral jewellery, purchase from disclosed income

Amendments to the I-T laws do not seek to tax inherited gold and jewellery as also those items that are purchased through disclosed or agriculture income, the government said on Thursday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X