For Quick Alerts
ALLOW NOTIFICATIONS  
For Daily Alerts

'ಪ್ರಧಾನ ಮಂತ್ರಿ ಜನ ಧನ ಖಾತೆ' ಯಾಕೆ ತೆರೆಯಬೇಕು?

ದೇಶದ ಪ್ರತಿಯೊಬ್ಬರಿಗೂ ಎಲ್ಲ ಬಗೆಯ ಬ್ಯಾಂಕಿಂಗ್ ಸೌಲಭ್ಯಗಳನ್ನು ಕಲ್ಪಿಸುವುದು ಪ್ರಧಾನಮಂತ್ರಿ ಜನಧನ ಯೋಜನೆಯ ಪ್ರಮುಖ ಧ್ಯೇಯವಾಗಿದೆ. ಈ ಯೋಜನೆ ಅಡಿಯಲ್ಲಿ ಬ್ಯಾಂಕ್ ಖಾತೆ, ವಿಮೆ ಮತ್ತು ಡೆಬಿಟ್ ಕಾರ್ಡ್ ಸೌಲಭ್ಯಗಳನ್ನು ಕಲ್ಪಿಸುವ ಗುರಿ ಹೊಂದಿದ

By Siddu
|

ದೇಶದ ಪ್ರತಿಯೊಬ್ಬರಿಗೂ ಎಲ್ಲ ಬಗೆಯ ಬ್ಯಾಂಕಿಂಗ್ ಸೌಲಭ್ಯಗಳನ್ನು ಕಲ್ಪಿಸುವುದು ಪ್ರಧಾನ ಮಂತ್ರಿ ಜನ ಧನ ಯೋಜನೆಯ ಪ್ರಮುಖ ಧ್ಯೇಯವಾಗಿದೆ. ಈ ಯೋಜನೆ ಅಡಿಯಲ್ಲಿ ಬ್ಯಾಂಕ್ ಖಾತೆ, ವಿಮೆ ಮತ್ತು ಡೆಬಿಟ್ ಕಾರ್ಡ್ ಸೌಲಭ್ಯಗಳನ್ನು ಕಲ್ಪಿಸುವ ಗುರಿ ಹೊಂದಿದೆ. ಸುಕನ್ಯಾ ಸಮೃದ್ಧಿ ಯೋಜನೆ: ಸರ್ಕಾರದ 8 ಹೊಸ ನಿಯಮಗಳು ಅನ್ವಯ

 

ಪ್ರಧಾನಿ ಮೋದಿಯವರ ಪ್ರಧಾನ ಮಂತ್ರಿ ಜನ ಧನ ಯೋಜನೆ ಯಶಸ್ವಿಯ ಉತ್ತುಂಗದಲ್ಲಿದ್ದು, ಗ್ರಾಮೀಣ ಮತ್ತು ಮಧ್ಯಮ ವರ್ಗದವರಿಗೆ ವರದಾನವಾಗಿ ಪರಿಣಮಿಸಿದೆ. ಜನಧನ ಯೋಜನೆ ಅಡಿಯಲ್ಲಿ ದೇಶದ ಲಕ್ಷಾಂತರ ಜನ ಖಾತೆ ತೆರೆದು ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.

ಜನಧನ ಯೋಜನೆ ಹಲವು ಪ್ರಯೋಜನಗಳನ್ನು ಕಲ್ಪಿಸುತ್ತಿದ್ದು ಅವುಗಳಲ್ಲಿ ಪ್ರಮುಖವಾದವುಗಳ ಪಟ್ಟಿ ಮಾಡಲಾಗಿದೆ.

1. ಅಪಘಾತ ವಿಮೆ

1. ಅಪಘಾತ ವಿಮೆ

ಪ್ರಧಾನಮಂತ್ರಿ ಜನಧನ ಯೋಜನೆಯಡಿ ಖಾತೆ ತೆರೆದರೆ ದೇಶದ ಪ್ರತಿಯೊಬ್ಬರಿಗೂ ಅಪಘಾತ ವಿಮೆ ದೊರೆಯುತ್ತದೆ. ಆಕಸ್ಮಿಕ ಅವಘಡ ಸಂಭವಿಸಿ ವ್ಯಕ್ತಿ ಮೃತನಾದರೆ 1 ಲಕ್ಷ ರೂ. ಅಪಘಾತ ವಿಮೆಯನ್ನು ಈ ಯೋಜನೆ ಅನ್ವಯ ಪಾವತಿ ಮಾಡಲಾಗುತ್ತದೆ. ಸರ್ಕಾರ ನೇರವಾಗಿ ಫಲಾನುಭವಿಯ ಖಾತೆಗೆ ಹಣ ಜಮೆ ಮಾಡುತ್ತದೆ.

2. ಠೇವಣಿಗೆ ಒತ್ತಾಯ ಇಲ್ಲ

2. ಠೇವಣಿಗೆ ಒತ್ತಾಯ ಇಲ್ಲ

ಉಳಿತಾಯ ಖಾತೆ ತೆರೆಯುವಾಗ ಇಂತಿಷ್ಟು ಮೊತ್ತದ ಹಣ ಠೇವಣಿ ಇಡಬೇಕು ಎಂಬ ನಿಯಮ ಇರುತ್ತದೆ. ಆದರೆ ಜನಧನ ಯೋಜನೆಯಲ್ಲಿ ಇಂತಿಷ್ಟು ಪ್ರಮಾಣದ ಹಣ ಇಡಲೇಬೇಕೆಂಬ ನಿಯಮವಾಗಲಿ ಒತ್ತಾಯವಾಗಲಿ ಇಲ್ಲ. ಇದು ಶೂನ್ಯ ಬ್ಯಾಲೆನ್ಸ್ ಆಗಿದ್ದು, ಕನಿಷ್ಟ ಮೊತ್ತ ಇಡಬೇಕಾಗಿಲ್ಲ.

3. ಹಣ ವರ್ಗಾವಣೆ ಸುಲಭ
 

3. ಹಣ ವರ್ಗಾವಣೆ ಸುಲಭ

ದೇಶದಾದ್ಯಂತ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣ ರವಾನಿಸುವುದು ಅಥವಾ ವರ್ಗಾಯಿಸುವುದು ಜನಧನ ಯೋಜನೆಯಲ್ಲಿ ಅತ್ಯಂತ ಸುಲಭ. ಗ್ರಾಮೀಣ ಮತ್ತು ಮಧ್ಯಮ ವರ್ಗದ ಜನರಿಗೆ ಇದು ತುಂಬಾ ಸಹಕಾರಿ ಆಗಲಿದೆ.

4. ಅಪಘಾತ ಪರಿಹಾರ ವಿಮೆ

4. ಅಪಘಾತ ಪರಿಹಾರ ವಿಮೆ

ಜನಧನ ಯೋಜನೆ ಗ್ರಾಮೀಣ ಮತ್ತು ಮಧ್ಯಮ ವರ್ಗದವರಿಗೆ ಹೆಚ್ಚು ಸಹಕಾರಿಯಾಗಲಿದ್ದು, ಫಲಾನುಭವಿಗಳಿಗೆ ಅಪಘಾತ ಪರಿಹಾರ ವಿಮೆಯಾಗಿ(ಲೈಫ್ ಕವರೆಜ್) ರೂ. 30,000 ಒದಗಿಸಲಿದೆ. ಆದರೆ ಷರತ್ತುಗಳು ಅನ್ವಯಿಸುತ್ತವೆ.

5. ಸಬ್ಸಿಡಿ ಸೌಲಭ್ಯ

5. ಸಬ್ಸಿಡಿ ಸೌಲಭ್ಯ

ಸರ್ಕಾರದ ವಿವಿಧ ಯೋಜನೆಗಳ ಮುಖಾಂತರ ಪಡೆಯುವ ಸಬ್ಸಿಡಿ ಜನಧನ ಖಾತೆಯೊಂದಿಗೆ ನೇರ ಸಂಪರ್ಕ ಪಡೆದುಕೊಳ್ಳುತ್ತದೆ. ಫಲಾನುಭವಿಗಳು ಎಲ್ಪಿಜಿ ಸಬ್ಸಿಡಿ ಮತ್ತಿತರ ಯೋಜನೆಗಳ ಲಾಭ ಪಡೆದುಕೊಳ್ಳಬಹುದಾಗಿದೆ.

6. ಸಾಲ/ಓವರ್ ಡ್ರಾಪ್ಟ್ ಸೌಲಭ್ಯ

6. ಸಾಲ/ಓವರ್ ಡ್ರಾಪ್ಟ್ ಸೌಲಭ್ಯ

ಜನಧನ ಖಾತೆಯ ಮೇಲೆ ಓವರ್ ಡ್ರಾಪ್ಟ್ ಸೌಲಭ್ಯಗಳನ್ನು ಪಡೆಯಬಹುದು. ಒಂದು ಕುಟುಂಬದ ಒಬ್ಬ ಸದಸ್ಯ ರೂ. 5000 ವರೆಗೆ ಓವರ್ ಡ್ರಾಪ್ಟ್ ಸೌಲಭ್ಯ ಪಡೆಯಬಹುದಾಗಿದ್ದು, ಮಹಿಳೆಗೆ ಮೊದಲ ಆದ್ಯತೆ ನೀಡಲಾಗುತ್ತದೆ.

7. ಇನ್ನಿತರ ಹಣಕಾಸು ಸೌಲಭ್ಯ

7. ಇನ್ನಿತರ ಹಣಕಾಸು ಸೌಲಭ್ಯ

ಜನಧನ ಖಾತೆದಾರರು ಮುಖ್ಯವಾಗಿ ಪಿಂಚಣಿ ಸೌಲಭ್ಯ ವ್ಯವಹಾರ ನಿಭಾಯಿಸಬಹುದು. ರುಪೇ ಕಾರ್ಡುದಾರರು ವೈಯಕ್ತಿಕ ಅಪಘಾತ ವಿಮೆ ಪರಿಹಾರ ಪಡೆಯಬಹುದು. ಯಾವುದೇ ಬ್ಯಾಂಕು, ಬ್ಯಾಂಕ್ ಮಿತ್ರ, ಎಟಿಎಂ, ಪಿಒಎಸ್(POS), E.Com ಇತ್ಯಾದಿ ವ್ಯವಹಾರಗಳನ್ನು ನಡೆಸಬಹುದು.

8. ಮೊಬೈಲ್ ಬ್ಯಾಂಕಿಂಗ್ ಸೇವೆ

8. ಮೊಬೈಲ್ ಬ್ಯಾಂಕಿಂಗ್ ಸೇವೆ

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯ ಹೊಸ ತಂತ್ರಜ್ಞಾನ ಪರಿಚಯಿಸಿದ್ದು, ಸ್ಮಾರ್ಟ್ ಫೋನ್ ಇಲ್ಲದವರು ಸಾಮಾನ್ಯ ಫೋನ್ ಬಳಸಿ ಫಂಡ್ಸ್ ವರ್ಗಾವಣೆ ಮತ್ತು ಬ್ಯಾಲೆನ್ಸ್ ಚೆಕ್ ಮಾಡಬಹುದು. ಜನಧನ ಯೋಜನೆ ಮುಖಾಂತರ ಎಲ್ಲರೂ ಮೊಬೈಲ್ ಬ್ಯಾಂಕಿಂಗ್ ಸೇವೆ ಪಡೆದುಕೊಳ್ಳಬಹುದು.

9. ಜನಧನ ಯೋಜನೆಯ ಧ್ಯೇಯ ಮತ್ತು ಉದ್ದೇಶ

9. ಜನಧನ ಯೋಜನೆಯ ಧ್ಯೇಯ ಮತ್ತು ಉದ್ದೇಶ

1. ಮೂಲಭೂತವಾಗಿ ಅಪಘಾತ ವಿಮೆ, ಡೆಬಿಟ್ ಕಾರ್ಡ್, ಅಪಘಾತ ವಿಮೆ ಹೀಗೆ ಎಲ್ಲ ಬಗೆಯ ಬ್ಯಾಂಕಿಂಗ್‌ ಕ್ಷೇತ್ರದ ಸೌಲಭ್ಯಗಳನ್ನು ಯೋಜನೆ ಒಳಗೊಂಡಿದೆ. 

2. ಆಧಾರ್‌ ಕಾರ್ಡ್ ಸಂಬಂಧಿತ ಐದು ಸಾವಿರಕ್ಕೂ ಹೆಚ್ಚು ಬ್ಯಾಂಕ್‌ ಖಾತೆಗಳಿಗೆ ಓವರ್‌ ಡ್ರಾಪ್ಟ್‌ ಸೌಲಭ್ಯ ಕಲ್ಪಿಸಲಾಗುವುದು.
3. ರುಪೇ ಕಾರ್ಡ್(ಡೊಮೆಸ್ಟಿಕ್ ಡೆಬಿಟ್ ಕಾರ್ಡ್) ಸೇವೆಯನ್ನು ನಗರ ಮತ್ತು ಗ್ರಾಮೀಣ ಜನತೆಗೆ ಒದಗಿಸುವುದು.
4. ಆರು ತಿಂಗಳ ನಂತರ ರುಪೇ ಡೆಬಿಟ್ ಕಾರ್ಡ್ ರೂ. 1 ಲಕ್ಷ ವರೆಗಿನ ಅಪಘಾತ ವಿಮೆ ಒಳಗೊಂಡಿರುತ್ತದೆ.
5. ಖಾತೆದಾರ ವ್ಯಕ್ತಿ 6 ತಿಂಗಳ ನಂತರ ರೂ. 5000 ಓವರ್‌ ಡ್ರಾಪ್ಟ್‌ಗೆ ಭಾಜನನಾಗುತ್ತಾನೆ.
6. ಬ್ಯಾಂಕ್‌ ಖಾತೆ ಹೊಂದಿರದ 7.5 ಕೋಟಿ ಜನರಿಗೆ ಬ್ಯಾಂಕಿಂಗ್‌ ಸೌಲಭ್ಯ ಕಲ್ಪಿಸುವುದು.
7. ಸ್ಮಾರ್ಟ್ ಫೋನ್ ಇಲ್ಲದವರು ಸಾಮಾನ್ಯ ಫೋನ್ ಬಳಸಿ ಫಂಡ್ಸ್ ವರ್ಗಾವಣೆ ಮತ್ತು ಬ್ಯಾಲೆನ್ಸ್ ಚೆಕ್ ಮಾಡಬಹುದು. ಜನಧನ ಯೋಜನೆ ಮುಖಾಂತರ ಬಡವರಿಗೆ ಮೊಬೈಲ್ ಬ್ಯಾಂಕಿಂಗ್ ಸೇವೆ ಒದಗಿಸುವ ಗುರಿ ಹೊಂದಿದೆ.

ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮತ್ತು ಬಡ ಜನರನ್ನು ಮುಖ್ಯ ವಾಹಿನಿಗೆ ಕರೆತರುವಲ್ಲಿ ಜನಧನ ಯೋಜನೆ ಪ್ರಮುಖ ಪಾತ್ರ ನಿರ್ವಹಿಸಲಿದೆ. ದೇಶದ ಬಡ ಮತ್ತು ಅತಿ ಬಡ ವರ್ಗದವರಿಗೆ ಜನಧನ ಯೋಜನೆ ಮುಖಾಂತರ ಬ್ಯಾಂಕ್‌ ಖಾತೆ ಹೊಂದಲು ಅವಕಾಶವಿದೆ. ದೇಶದ ಕೋಟ್ಯಂತರ ಕುಟುಂಬಗಳು ಮೊಬೈಲ್‌ ಹೊಂದಿವೆ. ಆದರೆ ಬ್ಯಾಂಕ್‌ ಖಾತೆ ಹೊಂದಿಲ್ಲ. ದೇಶದ ಆರ್ಥಿಕ ಅಭಿವೃದ್ಧಿಗಾಗಿ ಇಂತಹ ಪರಿಸ್ಥಿತಿಯ ಬದಲಾವಣೆ ಮಾಡಬೇಕಾಗಿದೆ.

English summary

What are the Benefits of Pradhan mantri jan dhan account (pmjdy)?

The Pradhan Mantri Jan Dhan Yojana has met with huge success ever since it was launched by Indian Prime Minister Narendra Modi. The Government has left no stone unturned in ensuring success of the scheme. Here are some benefits of the PMJDY.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X