For Quick Alerts
ALLOW NOTIFICATIONS  
For Daily Alerts

ಖಾತೆ ತೆರೆಯಲು ಯಾವ ಬ್ಯಾಂಕ್ ಉತ್ತಮ?

ಬ್ಯಾಂಕಿಂಗ್ ವ್ಯವಸ್ಥೆ ಈಗ ತುಂಬಾ ವೇಗವಾಗಿ ವೈಜ್ಞಾನಿಕ ಮತ್ತು ತಾಂತ್ರಿಕವಾಗಿ ರೂಪಾಂತರಗೊಳ್ಳುತ್ತಿದೆ. ಇಂದು ಬ್ಯಾಂಕಿಂಗ್ ಸೇವೆಯನ್ನು ಪಡೆಯದ ನಾಗರಿಕರೇ ಇಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ.

By Siddu
|

ಬ್ಯಾಂಕಿಂಗ್ ವ್ಯವಸ್ಥೆ ಈಗ ತುಂಬಾ ವೈಜ್ಞಾನಿಕವಾಗಿ ಮತ್ತು ತಾಂತ್ರಿಕವಾಗಿ ರೂಪಾಂತರಗೊಳ್ಳುತ್ತಿದೆ. ಇಂದು ಬ್ಯಾಂಕಿಂಗ್ ಸೇವೆಯನ್ನು ಪಡೆಯದ ನಾಗರಿಕರೇ ಇಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಡಿಜಿಟಲೀಕರಣ, ನಗದುರಹಿತ ವ್ಯವಹಾರ ಮತ್ತು ಜನಧನದಂತಹ ಯೋಜನೆಗಳು ಎಲ್ಲರಿಗೂ ಬ್ಯಾಂಕಿಂಗ್ ತಿಳಿವಳಿಕೆ ನೀಡಿವೆ.

 

ಎಲ್ಲ ಬ್ಯಾಂಕ್ ಗಳಲ್ಲೂ ನಿರ್ದಿಷ್ಟ ದಾಖಲೆ ನೀಡಿ ಬ್ಯಾಂಕ್ ಖಾತೆ ತೆರೆಯಬಹುದು. ಯಾವ ಬ್ಯಾಂಕು ಉಳಿತಾಯ ಖಾತೆ ತೆರೆಯಲು ಉತ್ತಮ? ಹೊಸದಾಗಿ ಬ್ಯಾಂಕ್ ಖಾತೆ ತೆರೆಯುವ ಮುನ್ನ ಯಾವ ಯಾವ ವಿಚಾರಗಳನ್ನು ನಾವು ತಿಳಿದುಕೊಂಡಿರಬೇಕು ಎಂಬುದರ ಬಗ್ಗೆ ನೋಡೋಣ ಬನ್ನಿ...

1. ಸ್ಥಳ

1. ಸ್ಥಳ

ನಿಮ್ಮ ವಾಸದ ಜಾಗಕ್ಕೆ ಬ್ಯಾಂಕ್ ಹತ್ತಿರದಲ್ಲಿದ್ದರೆ ಬಹಳ ಒಳ್ಳೆಯದು. ಅಂಥ ಬ್ಯಾಂಕ್ ನಲ್ಲಿಯೇ ಖಾತೆ ತೆರೆಯುವುದು ಉತ್ತಮ.

2. ಎಟಿಎಂ

2. ಎಟಿಎಂ

ಎಟಿಎಂ ಬಳಕೆ ಬಗ್ಗೆ ಹೊಸದಾಗಿ ಹೇಳುವುದು ಏನೂ ಉಳಿದಿಲ್ಲ. ಆದರೆ ಕೆಲವೊಂದು ಬ್ಯಾಂಕ್ ಗಳು ಎಟಿಎಂ ಟ್ರಾನ್ಸಾಕ್ಷನ್ ಮೇಲೆ ನಿರ್ಬಂಧ ಹೇರಿವೆ. ಇಂತಿಷ್ಟು ಸಾರಿ ಮಾತ್ರ ಉಚಿತವಾಗಿ ಹಣ ಡ್ರಾ ಮಾಡಬಹುದು ಎಂಬ ಕಾನೂನು ಮಾಡಿಕೊಂಡಿವೆ. ಇದೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಖಾತೆ ತೆರೆಯುವುದು ಉತ್ತಮ.

3. ಸರಾಸರಿ ಬ್ಯಾಲೆನ್ಸ್
 

3. ಸರಾಸರಿ ಬ್ಯಾಲೆನ್ಸ್

ವ್ಯಕ್ತಿಯೊಬ್ಬ ಬ್ಯಾಂಕ್ ಸೂಚಿಸಿದಂತೆ ಮಾಸಿಕ ಲೆಕ್ಕದಲ್ಲಿ ಅಥವಾ ತ್ರೈಮಾಸಿಕ ಲೆಕ್ಕದಲ್ಲಿ ಕನಿಷ್ಠ ಬ್ಯಾಲೆನ್ಸ್ ಇಡಬೇಕಾಗುತ್ತದೆ. ಅಥವಾ ನಿರ್ದಿಷ್ಟ ಮೊತ್ತದ ವ್ಯವಹಾರ ನಡೆಸಿರಬೇಕು. ಬ್ಯಾಂಕ್ ನಿಂದ ಬ್ಯಾಂಕ್ ಗೆ, ಖಾಸಗಿ ಬ್ಯಾಂಕ್ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗೆ ಇದು ವ್ಯತ್ಯಾಸವಾಗುತ್ತದೆ. ನಿಮಗೆ ಅಗತ್ಯವಿರುವ ಖಾತೆ ಮತ್ತು ವ್ಯವಹಾರವನ್ನು ಗಮನದಲ್ಲಿ ಇಟ್ಟುಕೊಂಡು ಖಾತೆ ತೆರೆಯುವುದು ಉತ್ತಮ.

4. ಆನ್ ಲೈನ್ ಬ್ಯಾಂಕಿಂಗ್

4. ಆನ್ ಲೈನ್ ಬ್ಯಾಂಕಿಂಗ್

ಇಂದು ಸಾಮಾನ್ಯವಾಗಿ ಎಲ್ಲ ಬ್ಯಾಂಕ್ ಗಳು ಆನ್ ಲೈನ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ಟೆಕ್ನಾಲಜಿಯನ್ನು ಅಳವಡಿಕೆ ಮಾಡಿಕೊಂಡ ಬ್ಯಾಂಕ್ ನಲ್ಲೇ ಖಾತೆ ತೆರೆದರೆ ವ್ಯವಹಾರ ಸುಲಭವಾಗುತ್ತದೆ.

5. ಅಪ್ಲಿಕೇಶನ್ ಗಳು

5. ಅಪ್ಲಿಕೇಶನ್ ಗಳು

ಬ್ಯಾಂಕ್ ಗಳು ತಮ್ಮ ಗ್ರಾಹಕರನ್ನು ಗಮನದಲ್ಲಿ ಇಟ್ಟುಕೊಂಡು ಅಪ್ಲಿಕೇಶನ್ ಗಳನ್ನು ಬಿಡುಗಡೆ ಮಾಡಿವೆ. ಗ್ರಾಹಕ ಸ್ನೇಹಿ ಅಪ್ಲಿಕೇಶನ್ ಮೂಲಕ ವ್ಯವಹಾರ ನಡೆಸುವುದು ಸಾಧ್ಯವಾಗುತ್ತಿದೆ. ಅಪ್ಲಿಕೇಶನ್ ಇರುವ ಬ್ಯಾಂಕ್ ಅನ್ನೇ ನೆಚ್ಚಿಕೊಳ್ಳುವುದು ಉತ್ತಮ.

6. ಬಡ್ಡಿ ದರ

6. ಬಡ್ಡಿ ದರ

ನಿಮ್ಮ ಉಳಿತಾಯ ಖಾತೆಯಲ್ಲಿ ಇರುವ ಹಣಕ್ಕೆ ನೀಡುವ ಬಡ್ಡಿ ದರ ಸಹ ಮುಖ್ಯವಾಗುತ್ತದೆ. ಸಾಲ ಪಡೆದರೇ ಅದಕ್ಕೆ ವಿಧಿಸುವ ಬಡ್ಡಿ ದರವನ್ನು ಗಮನಿಸಬೇಕು. ಯೆಸ್ ಬ್ಯಾಂಕ್, ಇಂಡಸ್ ಲೆಂಡ್ ಬ್ಯಾಂಕ್ ಗಳು ಗ್ರಾಹಕರಿಗೆ ಹೆಚ್ಚನ ಬಡ್ಡಿ ದರ ನೀಡಿಕೆ ಮಾಡುತ್ತಿವೆ.

7. ಶಾಖೆಗಳು

7. ಶಾಖೆಗಳು

ನಿಮ್ಮ ಮನೆ ಸಮೀಪ ಅಥವಾ ನಡೆದುಕೊಂಡು ಹೋಗುವಷ್ಟು ದೂರದಲ್ಲಿ ಬ್ಯಾಂಕ್ ಶಾಖೆಗಳಿದ್ದರೆ ವ್ಯವಹಾರ ಸುಲಭ

8. ಸೇವಾ ಶುಲ್ಕಗಳು

8. ಸೇವಾ ಶುಲ್ಕಗಳು

ಸೇವೆ ಮತ್ತು ಅದಕ್ಕೆ ವಿಧಿಸುವ ಶುಲ್ಕಗಳು ಸಹ ಬ್ಯಾಂಕ್ ನಿಂದ ಬ್ಯಾಂಕ್ ಗೆ ಬದಲಾಗುತ್ತಿರುತ್ತವೆ. ಖಾಸಗಿ ವಲಯದ ಬ್ಯಾಂಕ್ ಗಳು ಉತ್ತಮ ಸೇವೆ ನೀಡುತ್ತವೆ ಎಂದು ಹೆಸರು ಪಡೆದುಕೊಂಡಿವೆ. ಸೇವಾ ಶುಲ್ಕದಲ್ಲಿ ಅಂಥ ವ್ಯತ್ಯಾಸಗಳೇನು ಇರುವುದಿಲ್ಲ.

ಕೊನೆ ಮಾತು:

ಕೊನೆ ಮಾತು:

ಬ್ಯಾಂಕ್ ಸೇವೆ, ಶಾಖೆ ಲಭ್ಯತೆ, ಸೇವಾ ಶುಲ್ಕ ಮತ್ತು ಬಡ್ಡಿ ದರ ಎಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಖಾತೆ ತೆರೆಯಬೇಕಾಗುತ್ತದೆ. ಕೆಲವೊಂದು ಸಾರಿ ಬ್ಯಾಂಕ್ ಗಳು ಖಾತೆ ತೆರೆಯಲು ವಿಶೇಷ ಆಫರ್ ಗಳನ್ನು ನೀಡಬಲ್ಲವು.

English summary

How choose The Best Savings Bank Account India

Banking has transformed like never before. The unbanked are getting banking services, through the government's Jan Dhan Yojana, while those that have banking accounts are seeing a digital revolution.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X