For Quick Alerts
ALLOW NOTIFICATIONS  
For Daily Alerts

ಎಫ್‌ಡಿಗಿಂತ ಮ್ಯೂಚುವಲ್ ಫಂಡ್ ಹೇಗೆ ವಿಭಿನ್ನ?

ಹೆಚ್ಚಿನ ಭಾರತೀಯರಿಗೆ ಬ್ಯಾಂಕುಗಳ ಸ್ಥಿರ ಠೇವಣಿಗಳು ಜನಪ್ರಿಯ ಹಾಗೂ ನೆಚ್ಚಿನ ಹೂಡಿಕೆಯ ಸಾಧನಗಳೆನಿಸಿವೆ. ಪ್ರಸ್ತುತ ಒಂದು ವರ್ಷದ ಅವಧಿಗೆ ಸುಮಾರು ಸರಾಸರಿ ಶೇ. 7 ರ ಆಸುಪಾಸಿನಲ್ಲಿ ಆಕರ್ಷಕ ಬಡ್ಡಿ ದರಗಳನ್ನು ಒದಗಿಸುತ್ತಿವೆ.

By Siddu
|

ಹೆಚ್ಚಿನ ಭಾರತೀಯರಿಗೆ ಬ್ಯಾಂಕುಗಳ ಸ್ಥಿರ ಠೇವಣಿಗಳು ಜನಪ್ರಿಯ ಹಾಗೂ ನೆಚ್ಚಿನ ಹೂಡಿಕೆಯ ಸಾಧನಗಳೆನಿಸಿವೆ. ಪ್ರಸ್ತುತ ಒಂದು ವರ್ಷದ ಅವಧಿಗೆ ಸುಮಾರು ಸರಾಸರಿ ಶೇ. 7 ರ ಆಸುಪಾಸಿನಲ್ಲಿ ಆಕರ್ಷಕ ಬಡ್ಡಿ ದರಗಳನ್ನು ಒದಗಿಸುತ್ತಿವೆ. ಸ್ಥಿರ ಠೇವಣಿಗಳಲ್ಲಿ ಮಾಡುವ ಹೂಡಿಕೆಗೆ ಬಹುತೇಕ ಯಾವುದೇ ಅಪಾಯಗಳಿರುವುದಿಲ್ಲ. ಮ್ಯೂಚುವಲ್ ಫಂಡ್ ಎಂದರೇನು? ಅದರ ಪ್ರಕಾರಗಳ್ಯಾವವು?

 

ಎಫ್‌ಡಿ ನಕರಾತ್ಮಕ ಅಂಶಗಳೇನು?

ಎಫ್‌ಡಿ ನಕರಾತ್ಮಕ ಅಂಶಗಳೇನು?

ಆದರೆ ಇದರಲ್ಲಿ ನಕಾರಾತ್ಮಕ ಅಂಶಗಳು ಇಲ್ಲವೆಂದು ಹೇಳಲಾಗದು. ಸ್ಥಿರ ಠೇವಣಿಯ ಹೂಡಿಕೆಯಿಂದ ಸಿಗುವ ಬಡ್ಡಿಯನ್ನು ಹೂಡಿಕೆದಾರನ ಆದಾಯವೆಂದು ಪರಿಗಣಿಸಿ ಅದರ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಹೂಡಿಕೆದಾರ ಯಾವ ತೆರಿಗೆ ಶ್ರೇಣಿಗೆ ಒಳಗಾಗುತ್ತಾನೋ ಅದಕ್ಕೆ ಅನುಗುಣವಾಗಿ ತೆರಿಗೆ ಪಾವತಿಸಬೇಕಾಗುತ್ತದೆ.

ಮ್ಯೂಚುವಲ್ ಫಂಡ್

ಮ್ಯೂಚುವಲ್ ಫಂಡ್

ಹೂಡಿಕೆದಾರರು ಸಾಲನಿಧಿ ಆಧರಿತ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ ಎನ್ನುವುದು ತಜ್ಞರ ಅಭಿಪ್ರಾಯ. ಸಾಲನಿಧಿಗಳನ್ನು ಆಧರಿಸಿದ ಮ್ಯೂಚುವಲ್ ಫಂಡ್‌ಗಳು ಸುಮಾರು ಎಫ್ಡಿ ಗಳಷ್ಟೇ ಆದಾಯ ಕೊಡುತ್ತವೆಯಾದರೂ, ತೆರಿಗೆಯಿಂದ ರಕ್ಷಣೆಯನ್ನು ಒದಗಿಸುತ್ತವೆ. ಡೆಬ್ಟ್ ಮ್ಯೂಚುವಲ್ ಫಂಡ್‌ಗಳಲ್ಲಿ ದೀರ್ಘಕಾಲೀನ ಸರ್ಕಾರಿ ಬಾಂಡ್‌ಗಳಲ್ಲಿ ಹೂಡಿಕೆದಾರರ ಹಣವನ್ನು ತೊಡಗಿಸಿಕೊಳ್ಳಲಾಗುತ್ತದೆ.

ನೋಟು ರದ್ದತಿ ನಂತರ ಹೆಚ್ಚಿದ ಹೂಡಿಕೆ
 

ನೋಟು ರದ್ದತಿ ನಂತರ ಹೆಚ್ಚಿದ ಹೂಡಿಕೆ

ಕಳೆದ ಆರು ತಿಂಗಳಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಗಣನೀಯವಾದ ಏರಿಕೆ ಕಂಡುಬಂದಿದೆ. ಏಪ್ರಿಲ್‌-ಅಕ್ಟೋಬರ್‌ ಅವಧಿಯಲ್ಲಿ ಮ್ಯೂಚುವಲ್ ಫಂಡ್ ಕಂಪನಿಗಳು ಸಾಲಪತ್ರಗಳ ವಹಿವಾಟಿನಲ್ಲಿ ರೂ. 1.78 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡಿವೆ. ಚಿಲ್ಲರೆ ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಇದೇ ಏಪ್ರಿಲ್‌-ಅಕ್ಟೋಬರ್‌ ಅವಧಿಯಲ್ಲಿ ಷೇರುಪೇಟೆಯಲ್ಲಿ ರೂ. 21 ಸಾವಿರ ಕೋಟಿ ಹೂಡಿಕೆ ಮಾಡಲಾಗಿದೆ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮಾಹಿತಿ ನೀಡಿದೆ. ಪ್ರಸ್ತುತ ಮ್ಯೂಚುವಲ್ ಫಂಡ್ ಮಾರುಕಟ್ಟೆಯಲ್ಲಿ ಧನಾತ್ಮಕ ಬೆಳವಣಿಗೆ ಕಂಡುಬರುತ್ತಿದೆ.

English summary

How Mutual Funds different from Fixed Deposit?

Fixed deposits of banks in the most popular and favorite investment tools for Indians. The average of the current one-year term. It was around 7 offers attractive interest rates.
Story first published: Saturday, January 28, 2017, 12:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X