For Quick Alerts
ALLOW NOTIFICATIONS  
For Daily Alerts

ಕೇಂದ್ರ ಬಜೆಟ್ ಎಂದರೇನು? ನಿಮಗಿದು ಗೊತ್ತೆ?

ಪ್ರತಿವರ್ಷ ಆದಾಯ (ತೆರಿಗೆ ಇತರ ಮೂಲಗಳಿಂದ) ಹಾಗೂ ಖರ್ಚುವೆಚ್ಚಗಳ ಬಾಬತ್ತನ್ನು ಯೋಜಿತ ರೀತಿಯಲ್ಲಿ ಸರ್ಕಾರ ಅಂದಾಜು ಮಾಡುತ್ತದೆ.

By Siddu
|

ಪ್ರತಿವರ್ಷ ಆದಾಯ (ತೆರಿಗೆ ಇತರ ಮೂಲಗಳಿಂದ) ಹಾಗೂ ಖರ್ಚುವೆಚ್ಚಗಳ ಬಾಬತ್ತನ್ನು ಯೋಜಿತ ರೀತಿಯಲ್ಲಿ ಸರ್ಕಾರ ಅಂದಾಜು ಮಾಡುತ್ತದೆ.

ಉದಾಹರಣೆಗೆ ಕುಟುಂಬದ ಆದಾಯಕ್ಕನುಗುಣವಾಗಿ ಸಂಸಾರ ತೂಗಿಸಿಕೊಂಡು ಹೋಗಲು ಗಂಡ-ಹೆಂಡತಿ ಮಾಡುವ ಯೋಜನೆಯಂತೆಯೇ ಇದು ದೇಶ ಖರ್ಚುವೆಚ್ಚಗಳನ್ನು ಸರಿದೂಗಿಸಿಕೊಂಡು ಹೋಗಲು ಮಾಡುವ ಯೋಜನೆ. ಇದನ್ನೇ ಸಾಮಾನ್ಯವಾಗಿ ಕೇಂದ್ರ ಬಜೆಟ್ ಎನ್ನಲಾಗುತ್ತದೆ.

ಬಜೆಟ್ ಮಂಡನೆ ಯಾವಾಗ?

ಬಜೆಟ್ ಮಂಡನೆ ಯಾವಾಗ?

ಕೇಂದ್ರ ಬಜೆಟ್ ಮಂಡನೆಯನ್ನು ಹಣಕಾಸು ಸಚಿವರು ಮಾಡುತ್ತಾರೆ. ಈ ವರ್ಷದ ಕೇಂದ್ರ ಬಜೆಟ್ ಮಂಡನೆ ಅರುಣ್ ಜೇಟ್ಲಿ ಮಾಡಲಿದ್ದಾರೆ. ಸಾಮಾನ್ಯವಾಗಿ ಪ್ರತಿವರ್ಷ ಫೆಬ್ರುವರಿ ಕೊನೆಯ ವಾರದಲ್ಲಿ ಬಜೆಟ್ ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ.

ಬಜೆಟ್ ಅನುಮೋದನೆ ಹೇಗೆ?

ಬಜೆಟ್ ಅನುಮೋದನೆ ಹೇಗೆ?

ಹಣಕಾಸು ಸಚಿವರು ಆಯವ್ಯಯವನ್ನು ಲೋಕಸಭೆಯಲ್ಲಿ ಮಂಡಿಸಿದ ನಂತರ ಅದರ ಮೇಲೆ ಮುಕ್ತವಾಗಿ ಚರ್ಚೆ ನಡೆಯುತ್ತದೆ. ಪ್ರತಿ ಸಚಿವಾಲಯವು ತನ್ನ ಅಗತ್ಯಕ್ಕೆ ಅನುಗುಣವಾಗಿ ಹಣ ಮಂಜೂರು ಮಾಡುವಂತೆ ಪ್ರಸ್ತಾವನೆ ಇಡುತ್ತದೆ. ಪ್ರತಿ ಕ್ಷೇತ್ರಕ್ಕೆ ನಿಗದಿಯಾಗುವ ಹಣಕ್ಕೆ ಸಮ್ಮತಿ ಪಡೆಯಲಾಗುತ್ತದೆ. ಎಲ್ಲಕ್ಕೂ ಸಮ್ಮತಿ ಸಿಕ್ಕ ನಂತರ ಬಜೆಟ್ ಮಾನ್ಯ ಮಾಡಲಾಗುತ್ತದೆ. ಈ ಒಟ್ಟು ಪ್ರಕ್ರಿಯೆಯನ್ನು ಬಜೆಟ್ ಅನುಮೋದನೆ ಎನ್ನುತ್ತಾರೆ.

ಬಜೆಟ್ ಜಾರಿ ಯಾವಾಗ?

ಬಜೆಟ್ ಜಾರಿ ಯಾವಾಗ?

ಫೆಬ್ರುವರಿ ಕೊನೆಯ ವಾರದಲ್ಲಿ ಬಜೆಟ್ ಮಂಡನೆ ಆದ ನಂತರ ಲೋಕಸಭೆಯಲ್ಲಿ ಅನುಮೋದನೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಪ್ರತಿವರ್ಷ ಏಪ್ರಿಲ್ 1ರಿಂದ ನೂತನ ಬಜೆಟ್ ಜಾರಿಗೆ ಬರುತ್ತದೆ. ಇದು ಏಪ್ರಿಲ್ ನಿಂದ ಮಾರ್ಚ್ ವರೆಗಿನ 12 ತಿಂಗಳ ಅವಧಿ ಹೊಂದಿರುತ್ತದೆ.

ದೇಶದ ಮೊದಲ ಬಜೆಟ್ ಮಂಡಿಸಿದ್ದು ಯಾರು?

ದೇಶದ ಮೊದಲ ಬಜೆಟ್ ಮಂಡಿಸಿದ್ದು ಯಾರು?

1947, ನವೆಂಬರ್ 26ರಂದು ಆರ್.ಕೆ. ಷಣ್ಮುಖಂ ಚೆಟ್ಟಿ ಅವರು ದೇಶದ ಮೊದಲ ಬಜೆಟ್ ಮಂಡಿಸಿದರು. ಇಲ್ಲಿಯವರೆಗೆ ಅತಿ ಹೆಚ್ಚು ಬಜೆಟ್ ಮಂಡಿಸಿದ ಹೆಗ್ಗಳಿಕೆ ಮೊರಾರ್ಜಿ ದೇಸಾಯಿ ಅವರಿಗೆ ಸಲ್ಲುತ್ತದೆ. ಎಂಟು ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ.

English summary

What is Union Budget? Must Know Few Things.

The Union Budget is being presented by Finance Minister, Arun Jaitley. This is perhaps the most eagerly watched event during the year by individuals across the country as it directly and indirectly impacts their finances.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X