For Quick Alerts
ALLOW NOTIFICATIONS  
For Daily Alerts

ಆಧಾರ್ ಲಿಂಕ್ಡ್ ಡಿಜಿಟಲ್ ಲಾಕರ್ ಉಚಿತವಾಗಿ ತೆರೆಯುವುದು ಹೇಗೆ?

ಡಿಜಿಟಲ್ ಲಾಕರ್ ಎಂದರೆ ನಿಮ್ಮ ಎಲ್ಲ ಎಲೆಕ್ಟ್ರಾನಿಕ್ ದಾಖಲೆಗಳನ್ನು ಸುರಕ್ಷಿತ ಮತ್ತು ಸುಭದ್ರವಾಗಿ ಇಡುವ ಸ್ಥಳ. ಆಧಾರ್ ಕಾರ್ಡ್ ಸಂಖೆಯೊಂದಿಗೆ ಇದನ್ನು ಲಿಂಕ್ ಮಾಡಲಾಗುತ್ತದೆ.

By Siddu
|

ದೇಶದಲ್ಲಿ ಪ್ರಸ್ತುತ ಎಲ್ಲರೂ ನಗದು ರಹಿತ ವ್ಯವಹಾರ, ಇ-ಪೇಮೆಂಟ್ಸ್ ಮತ್ತು ಡಿಜಿಟಲೀಕರಣದ ಕಡೆಗೆ ಒಲವು ತೋರಿಸುತ್ತಿದ್ದು, ಡಿಜಿಟಲ್ ಲಾಕರ್ ಕೂಡ ಪ್ರಮುಖ ಪಾತ್ರ ವಹಿಸುತ್ತಿದೆ.

ಡಿಜಿ ಲಾಕರ್ ಎಂದರೆ ನಿಮ್ಮ ಎಲ್ಲ ಎಲೆಕ್ಟ್ರಾನಿಕ್ ದಾಖಲೆಗಳನ್ನು ಸುರಕ್ಷಿತ ಮತ್ತು ಸುಭದ್ರವಾಗಿ ಇಡುವ ಸ್ಥಳ. ಆಧಾರ್ ಕಾರ್ಡ್ ಸಂಖೆಯೊಂದಿಗೆ ಇದನ್ನು ಲಿಂಕ್ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಕನಸಿನ ಡಿಜಿಟಲ್ ಇಂಡಿಯಾ ಅಭಿಯಾನ ಈ ಅವಕಾಶವನ್ನು ಕಲ್ಪಿಸಿಕೊಡುತ್ತಿದೆ. ನಿಮ್ಮ ಪ್ಯಾನ್ ಕಾರ್ಡ್, ಮತದಾನ ಗುರುತಿನ ಪತ್ರ, ಸರ್ಕಾರಗಳು ಕೊಟ್ಟಿರುವ ದಾಖಲೆಗಳು, ಪಾಸ್ ಪೋರ್ಟ್, ಜನ್ಮ ದಾಖಲೆ, ಮದುವೆ ದಾಖಲೆ ಎಲ್ಲವನ್ನು ಇಲ್ಲಿ ಸಂರಕ್ಷಿಸಿಡಬಹುದು.

1. ಡಿಜಿ ಲಾಕರ್ ನಲ್ಲಿ ದಾಖಲೆ ಇಟ್ಟರೆ ಏನು ಲಾಭ?

1. ಡಿಜಿ ಲಾಕರ್ ನಲ್ಲಿ ದಾಖಲೆ ಇಟ್ಟರೆ ಏನು ಲಾಭ?

- ನಿಮ್ಮ ದಾಖಲೆಗಳ ಅನವಶ್ಯಕ ಉಪಯೋಗ ತಡೆದು ಸವಕಳಿ ಆಗದಂತೆ ಮಾಡುತ್ತದೆ.
- ದಾಖಲೆಗಳ ನಕಲಿ ಬಳಕೆ ಮಾಡಲು ಅವಕಾಶ ಇರುವುದಿಲ್ಲ.
- ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ದಾಖಲೆಗಳನ್ನು ಪಡೆದುಕೊಳ್ಳಬಹುದು
- ನಿಮ್ಮ ಬಳಿ 10 MB ಡೇಟಾ ಅವಕಾಶ ಇರುತ್ತದೆ
- ದಾಖಲೆಗಳನ್ನು ಸುರಕ್ಷಿತ ಮಾರ್ಗದಲ್ಲಿ ಹಂಚಿಕೆ ಮಾಡಬಹುದು.

2. ಡಿಜಿ ಲಾಕರ್ ತೆರೆಯುವುದು ಹೇಗೆ?

2. ಡಿಜಿ ಲಾಕರ್ ತೆರೆಯುವುದು ಹೇಗೆ?

ಆಧಾರ್ ಕಾರ್ಡ್ ಹೊಂದಿರುವ ವ್ಯಕ್ತಿ ಡಿಜಿಟಲ್ ಲಾಕರ್ ಗೆ ಲಾಗ್ ಇನ್ ಆಗಬಹುದು. ಲಾಗ್ ಇನ್ ಆಗುವ ಮೊದಲು ನಿಮ್ಮ ಮೊಬೈಲ್ ಸಂಖ್ಯೆ ಆಧಾರ್ ಸಂಖ್ಯೆಯೊಂದಿಗೆ ಲಾಗ್ ಇನ್ ಆಗಿರಬೇಕು.
ಮೊದಲ ಹಂತ
- ಡಿಜಿಟಲ್ ಲಾಕರ್ ವೆಬ್ ತಾಣಕ್ಕೆ ಭೇಟಿ ನೀಡಿ
- ನಿಮ್ಮ 12 ಡಿಜಿಟ್ ನ ಆಧಾರ್ ಸಂಖ್ಯೆಯನ್ನು ನಮೂದಿಸಿ
- ಒಟಿಪಿ ಅತವಾ ಫಿಂಗರ್ ಪ್ರಿಂಟ್ ಬಳಸಿ ಮುಂದಕ್ಕೆ ಸಾಗಿರಿ

3. ಒಟಿಪಿ ಆಯ್ಕೆ
 

3. ಒಟಿಪಿ ಆಯ್ಕೆ

- ನೀವು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಬಂದಿರುತ್ತದೆ.
- ಒಟಿಪಿ ಬಟನ್ ಕ್ಲಿಕ್ ಮಾಡಿ
- ಯುಸರ್ ನೇಮ್ ಮತ್ತು ಪಾಸ್ ವರ್ಡ್ ಕ್ರಿಯೆಟ್ ಮಾಡಿಕೊಳ್ಳಿ

4. ಫಿಂಗರ್ ಪ್ರಿಂಟ್ ಆಯ್ಕೆ

4. ಫಿಂಗರ್ ಪ್ರಿಂಟ್ ಆಯ್ಕೆ

ಇದು ಸ್ಕ್ಯಾನ್ ಮಾಡಿರುವ ಫಿಂಗರ್ ಪ್ರಿಂಟ್ ನ್ನು ಕೇಳುತ್ತದೆ. ಫಿಂಗರ್ ಪ್ರಿಂಟ್ ಬಟನ್ ಮೇಲೆ ಕ್ಲಿಕ್ ಮಾಡಿದಾಗ ಮೊಬೈಲ್ ಅಂಕೆ ಬದಲು ಆಧಾರ್ ಸಂಖ್ಯೆಯನ್ನು ನಮೂದು ಮಾಡಬೇಕಾಗುತ್ತದೆ. ಆಧಾರ್ ನೊಂದಿಗೆ ಮೊಬೈಲ್ ಸಂಖ್ಯೆ ಲಿಂಕ್ ಆಗದಿದ್ದ ಸಂದರ್ಭದಲ್ಲಿ ಇದು ನೆರವಿಗೆ ಬರುತ್ತದೆ. ಫಿಂಗರ್ ಪ್ರಿಂಟ್ ಸ್ಕ್ಯಾನರ್ ನ ಮೂಲಕ ದಾಖಲೆ ಮಾಡಿ ಸಲ್ಲಿಸಬೇಕಾಗುತ್ತದೆ. ಒಮ್ಮೆ ಹೊಂದಾಣಿಕೆ ಆದ ನಂತರದಲ್ಲಿ ನಿಮ್ಮ ಖಾತೆ ತೆರೆದುಕೊಳ್ಳಬಹುದು.

5. ಬಳಕೆದಾರರ ಐಡಿ

5. ಬಳಕೆದಾರರ ಐಡಿ

- ಯುಸರ್ ನೇಮ್ ಮತ್ತು ಪಾಸ್ ವರ್ಡ್ ಕ್ರಿಯೆಟ್ ಮಾಡಿಕೊಳ್ಳಿ
- ನಿಮ್ಮ ಪಾಸ್ ವರ್ಡ್ ಮತ್ತು ಯುಸರ್ ನೇಮ್ ದಾಖಲು ಮಾಡಿ
- ಸಬ್ಮಿಟ್ ಬಟನ್ ಆಯ್ಕೆ ಒತ್ತಿ
- ಮೈ ಸರ್ಟಿಫಿಕೇಟ್ ಆಯ್ಕೆ ತೆರೆದುಕೊಳ್ಳುತ್ತದೆ

6. ಸೈನ್ ಇನ್

6. ಸೈನ್ ಇನ್

- ಸೈನ್ ಇನ್ ಮೇಲೆ ಕ್ಲಿಕ್ ಮಾಡಿ
- https://digitallocker.gov.in ವೆಬ್ಸೈಟ್ ಗೆ ತೆರಳಿ
- ಆಮೇಲೆ ಸೈನ್ ಇನ್ ಆಯ್ಕೆ ಬಳಸಿಕೊಳ್ಳಿ
- ಇಲ್ಲಿ ಮೂರು ವಿಧಾನದ ಮೂಲಕ ಲಾಗ್ ಇನ್ ಆಗಬಹುದು
- ಆಧಾರ್ ನಂಬರ್ ಮತ್ತು ಒಟಿಪಿ
- ಯುಸರ್ ನೇಮ್ ಮತ್ತು ಪಾಸ್ ವರ್ಡ್(ಖಾತೆ ತೆರೆಯುವಾಗ ನೀಡಿದ್ದು)
- ಗೂಗಲ್ ಅಥವಾ ಫೇಸ್ ಬುಕ್ ಐಡಿ ಮೂಲಕ ಲಾಗ್ ಇನ್

7. ದಾಖಲೆಗಳನ್ನು ಡಿಜಿ ಲಾಕರ್ ಗೆ ಅಪ್ಲೋಡ್ ಮಾಡುವುದು ಹೇಗೆ?

7. ದಾಖಲೆಗಳನ್ನು ಡಿಜಿ ಲಾಕರ್ ಗೆ ಅಪ್ಲೋಡ್ ಮಾಡುವುದು ಹೇಗೆ?

 ಮೈ ಸರ್ಟಿಫಿಕೇಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿದ ನಂತರ ಅಪ್ಲೋಡ್ ಡಾಕ್ಯೂಮೆಂಟ್ಸ್ ಆಯ್ಕೆ ದೊರೆಯುತ್ತದೆ. ಒಂದು ಸಲ ಒಂದು ದಾಖಲೆ ಮಾತ್ರ ಅಪ್ಲೋಡ್ ಮಾಡಬಹುದು
- ನೀವು ಅಪ್ಲೋಡ್ ಮಾಡುತ್ತಿರುವ ಡಾಕ್ಯೂಮೆಂಟ್ ನ ಬಗೆಯನ್ನು ಆಯ್ಕೆ ಮಾಡಿಕೊಳ್ಳಿ
- ಲೊಕೇಶನ್ ಮತ್ತ ಫೈಲ್ ಸೆಲೆಕ್ಟ್ ಮಾಡಿ
- ದಾಖಲಾತಿಗೆ ಸಂಬಂಧಿಸಿದ ಚಿಕ್ಕ ಮಾಹಿತಿಯನ್ನು ದಾಖಲು ಮಾಡಿ
- ಎಲ್ಲ ದಾಖಲೆಗಳ ಸಲ್ಲಿಕೆಯಾದ ನಂತರ ಅಪಲೋಡ್ ಬಟನ್ ಕ್ಲಿಕ್ ಮಾಡಿ

ಡಿಜಿ ಲಾಕರ್ ವಿಧಾನ ಬಹುಪಯೋಗಿಯಾಗಿದ್ದು ಇ ಆಡಳಿತ ಮತ್ತು ಸುಲಭ ದಾಖಲೆ ವೀಕ್ಷಣೆಗೆ ಸಹಾಯಕಾರಿಯಾಗಿದೆ. (kannada goodreturns.in)

English summary

Aadhaar Linked DigiLocker: How To Hold Documents In DigiLocker For Free?

digi locker, digital locker, digital locker in kannada, digital india, how to use digilocker, digi locker uses in kannada, how to use digital locker, how to upload documents to digi locker, what is digi locker, what is digital locker, ಡಿಜಿಟಲ್ ಲಾಕರ್, ಡಿಜಿ ಲಾಕರ್ ಬಳಕೆ, ಆಧಾರ್ ಲಿಂಕ್ಡ್ ಡಿಜಿಟಲ್ ಲಾಕರ್
Story first published: Thursday, February 9, 2017, 16:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X