For Quick Alerts
ALLOW NOTIFICATIONS  
For Daily Alerts

ಕೆಲವೆ ನಿಮಿಷಗಳಲ್ಲಿ ಪ್ಯಾನ್ ಕಾರ್ಡ್ ಲಭ್ಯ!

ಕೆಲವೆ ನಿಮಿಷಗಳಲ್ಲಿ ಸಾರ್ವಜನಿಕರಿಗೆ ಪಾನ್ ಕಾರ್ಡ್(PAN) ದೊರಕಿಸುವ ಹೊಸ ಯೋಜನೆ ಶೀಘ್ರದಲ್ಲೇ ದೊರೆಯಲಿದೆ.

By Siddu
|

ದೇಶದಲ್ಲಿ ಪ್ರಸ್ತುತ ಪಾನ್ ಕಾರ್ಡ್ ಪಡೆಯಲು ಹೆಚ್ಚುಕಡಿಮೆ 15 ದಿನ ಪರದಾಡಬೇಕಾಗಿತ್ತು. ಆದರೆ ಇನ್ನುಮುಂದೆ ಅಷ್ಟೊಂದು ದಿನ ಕಾಯಬೇಕಾದ ಅಥವಾ ಪರದಾಡಬೇಕಾದ ಅಗತ್ಯ ಇರುವುದಿಲ್ಲ. ಇನ್ನುಮುಂದೆ ಕೆಲವೆ ನಿಮಿಷಗಳಲ್ಲಿ ಸಾರ್ವಜನಿಕರಿಗೆ ಪಾನ್ ಕಾರ್ಡ್(PAN) ಸಿಗಲಿದೆ.

ಹಾಗಿದ್ದರೆ ಈ ಹೊಸ ಯೋಜನೆ ಮೂಲಕ ಶೀಘ್ರದಲ್ಲಿ ಪಾನ್ ಕಾರ್ಡ್ ಹೇಗೆ ಪಡೆಯಬಹುದು, ಇದು ಯಾವ್ಯಾವ ಅಂಶಗಳನ್ನು, ಸೌಲಭ್ಯಗಳನ್ನು ಹೊಂದಿರಲಿದೆ ಎಂಬುದು ಕುತೂಹಲಕಾರಿ ಅಂಶವಾಗಿದೆ.

ಕೆಲವೆ ನಿಮಿಷಗಳಲ್ಲಿ ಪ್ಯಾನ್ ಕಾರ್ಡ್ ಲಭ್ಯ!

ಕೇಂದ್ರ ನೇರ ತೆರಿಗೆ ಮಂಡಳಿ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಈ ಯೋಜನೆಯನ್ನು ಅಭಿವೃದ್ಧಿಪಡಿಸುತ್ತಿದ್ದು, ಹೊಸ ಆಪ್ ನೂತನ ಸೌಲಭ್ಯಗಳನ್ನು ಒಳಗೊಂಡಿರಲಿದ್ದು, ಕೆಲವೆ ನಿಮಿಷಗಳಲ್ಲಿ ಸಾರ್ವಜನಿಕರಿಗೆ ಪಾನ್ ಕಾರ್ಡ್(PAN) ದೊರಕಿಸುವ ಹೊಸ ಯೋಜನೆ ನಿಮ್ಮ ಮುಂದೆ ಬರಲಿದೆ. ಸಾರ್ವಜನಿಕರು ಯಾವ ಮೂಲ ಸಂಗತಿಗಳನ್ನು ತಿಳಿದುಕೊಂಡಿರಬೇಕು ಎಂಬುದನ್ನು ಕೆಳಗೆ ನೀಡಲಾಗಿದೆ.

1. ಆಧಾರ್ ಮತ್ತು ಇ-ಕೆವೈಸಿ ಬಳಕೆ

1. ಆಧಾರ್ ಮತ್ತು ಇ-ಕೆವೈಸಿ ಬಳಕೆ

ಇನ್ನುಮುಂದೆ ಆಧಾರ್ ಕಾರ್ಡ್ ಹಾಗೂ ಇ-ಕೆವೈಸಿ ಬಳಸಿ ಕೆಲವೇ ನಿಮಿಷಗಳಲ್ಲಿ ಪಾನ್ ಕಾರ್ಡ್ ಅರ್ಜಿಯನ್ನು ಪರಿಶೀಲಿಸಿ ಪಾನ್ ನಂಬರ್ ನೀಡಲಾಗುವುದು. ಶೀಘ್ರದಲ್ಲೇ ಈ ಯೋಜನೆ ಕಾರ್ಯರೂಪಕ್ಕೆ ಬರಲಿದ್ದು, ಜನರು ಅತಿ ಸುಲಭವಾಗಿ ಹಾಗೂ ವೇಗವಾಗಿ ಪಾನ್ ಕಾರ್ಡ್ ಪಡೆದುಕೊಳ್ಳಲು ಸಾಧ್ಯ ಆಗಲಿದೆ.

2. ತೆರಿಗೆ ಪಾವತಿ

2. ತೆರಿಗೆ ಪಾವತಿ

ತೆರಿಗೆ ಮಂಡಳಿ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಈ ಆಪ್ ಅಭಿವೃದ್ಧಿ ಮಾಡಿದ ನಂತರ ಸ್ಮಾರ್ಟ್‌ಫೋನ್‌ ಮೂಲಕ ತೆರಿಗೆ ಪಾವತಿಸಲು ಹಾಗೂ ನಿಮಿಷದೊಳಗೆ ಪಾನ್ ಕಾರ್ಡ್‌ ಪಡೆಯಲು ಈ ಯೋಜನೆ ಸಹಕಾರಿಯಾಗಲಿದೆ.

3. ಆಧಾರ್ ಕಾರ್ಡ್‌ ಲಿಂಕ್‌

3. ಆಧಾರ್ ಕಾರ್ಡ್‌ ಲಿಂಕ್‌

ಗ್ರಾಹಕರು ಆಧಾರ್‌ ಕಾರ್ಡ್‌ ಲಿಂಕ್‌ ಮಾಡುವುದರೊಂದಿಗೆ ಈ ಹೊಸ ಆಪ್ ನ ಎಲ್ಲ ಸೌಲಭ್ಯಗಳನ್ನು ತಮ್ಮ ಸ್ಮಾರ್ಟ್‌ಫೋನ್‌ ಗಳ ಮೂಲಕ ಪಡೆಯಬಹುದಾಗಿದೆ.

4. ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಕೆ

4. ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಕೆ

ಈ ಆಪ್ ಮೂಲಕ ಆನ್‌ಲೈನ್‌ ತೆರಿಗೆ ಪಾವತಿ ಮತ್ತು ಲೆಕ್ಕಪತ್ರ ವಿವರ ಸಲ್ಲಿಕೆ(ಟ್ಯಾಕ್ಸ್ ರಿಟರ್ನ್ಸ್) ಮಾಹಿತಿಯನ್ನು ಸಹ ಪಡೆಯಬಹುದಾಗಿದೆ.

5. ಪ್ರತಿವರ್ಷ 2.5 ಕೋಟಿ ಅರ್ಜಿ

5. ಪ್ರತಿವರ್ಷ 2.5 ಕೋಟಿ ಅರ್ಜಿ

 ಈಗಾಗಲೇ ದೇಶದಲ್ಲಿ 25 ಕೋಟಿ ಜನ ಪಾನ್‌ಕಾರ್ಡ್‌ ಹೊಂದಿದ್ದಾರೆ. ಪ್ರತಿವರ್ಷ ಹೊಸ ಪಾನ್ ಕಾರ್ಡ್‌ಗಾಗಿ 2.5 ಕೋಟಿ ಜನ ಅರ್ಜಿ ಸಲ್ಲಿಸುತ್ತಿದ್ದಾರೆ. ಹೀಗಾಗಿ ಹೊಸ ಪಾನ್ ಕಾರ್ಡ್ ಗಳನ್ನು ವಿತರಿಸುವಾಗ ಉಂಟಾಗುತ್ತಿರುವ ವಿಳಂಬವನ್ನು ತಪ್ಪಿಸಲು ಈ ನೂತನ ಯೋಜನೆಗೆ ಇಲಾಖೆ ಮುಂದಾಗಿದೆ.

6. ಹಿಂದಿ ಮತ್ತು ಇಂಗ್ಲಿಷ್ ಭಾಷೆ

6. ಹಿಂದಿ ಮತ್ತು ಇಂಗ್ಲಿಷ್ ಭಾಷೆ

ಜನವರಿ 1ರ ನಂತರ ಆದಾಯ ತೆರಿಗೆ ಇಲಾಖೆ ಸಾರ್ವಜನಿಕರಿಗೆ ಹೊಸ ಪಾನ್ ಕಾರ್ಡ್‌ಗಳನ್ನು ವಿತರಿಸುತ್ತಿದ್ದು, ಪಾನ್ ಕಾರ್ಡ್ ಗಳ ಮೇಲೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿವರಗಳನ್ನು ನಮೂದಿಸಲಾಗಿದೆ.

7. ಪ್ರಾಯೋಗಿಕ ಹಂತ

7. ಪ್ರಾಯೋಗಿಕ ಹಂತ

ಪ್ರಸ್ತುತ ಆಪ್ ಅಭಿವೃದ್ಧಿ ಕಾರ್ಯ ಪ್ರಾಯೋಗಿಕ ಹಂತದಲ್ಲಿದ್ದು, ಯೋಜನೆಗೆ ಕೇಂದ್ರ ಹಣಕಾಸು ಸಚಿವಾಲಯ ಅನುಮೋದನೆ ನೀಡಿದ ನಂತರ ಸಾರ್ವಜನಿಕ ಬಳಕೆಗೆ ಬಿಡುಗಡೆ ಆಗಲಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

8. ತ್ವರಿತಗತಿಯ ಸೇವೆ

8. ತ್ವರಿತಗತಿಯ ಸೇವೆ

ಭ್ರಷ್ಟಾಚಾರ, ತೆರಿಗೆ ವಂಚನೆ ತಡೆ ಮತ್ತು ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ಸೇವೆಗಳನ್ನು ಒದಗಿಸಲು ಈ ಹೊಸ ಯೋಜನೆ ರೂಪಿಸಿರುವುದಾಗಿ ಆದಾಯ ತೆರಿಗೆ ಇಲಾಖೆ ಹೇಳಿದೆ.

9. ಹೊಸ ಆಪ್ ಉದ್ದೇಶ

9. ಹೊಸ ಆಪ್ ಉದ್ದೇಶ

ಕೇಂದ್ರ ಸರ್ಕಾರದ ನಗದು ರಹಿತ ವ್ಯವಹಾರ ಹಾಗೂ ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಸಾಥ್ ನೀಡುವುದಕ್ಕೆ ಆದಾಯ ತೆರಿಗೆ ಇಲಾಖೆ ಮುಂದಾಗಿದ್ದು, ಜನರು ತಮ್ಮ ಸ್ಮಾರ್ಟ್ ಫೋನ್ ಮೂಲಕ ಆದಾಯ ತೆರಿಗೆಯನ್ನು ಪಾವತಿಸಲು ಹಾಗೂ ಪಾನ್ ಕಾರ್ಡ್ ಪಡೆಯಲು ಸಾಧ್ಯ ಆಗಲಿದೆ. ಈ ನಿಟ್ಟಿನಲ್ಲಿ ಆಪ್ ಅಭಿವೃದ್ಧಿ ಪಡೆಸಲಾಗುತ್ತಿದೆ.

10. ಪಾನ್ ಕಾರ್ಡ್ ಕಡ್ಡಾಯ

10. ಪಾನ್ ಕಾರ್ಡ್ ಕಡ್ಡಾಯ

50 ಸಾವಿರಕ್ಕಿಂತ ಹೆಚ್ಚು ನಗದು ವಹಿವಾಟು ಮಾಡಲು ಮತ್ತು 2 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಖರೀದಿಗೆ
ಸರ್ಕಾರ ಪಾನ್ ಕಡ್ಡಾಯಗೊಳಿಸಿದ್ದು, ಪಾನ್ ನಂಬರ್ ನಮೂದಿಸಬೇಕಾಗಿದೆ. ಹೀಗಾಗಿ ದೇಶಾದ್ಯಂತ ಪ್ರತಿ ವರ್ಷ 2.5 ಕೋಟಿ ಜನ ಪಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುತ್ತಿದ್ದು, ಈಗಾಗಲೇ 25 ಕೋಟಿ ಜನ ಪಾನ್ ಕಾರ್ಡ್ ಹೊಂದಿದ್ದಾರೆ.

English summary

How To Apply And How To Get Pan Card Within Few Minutes

Soon people will be able to get PAN Card number in minutes. Individuals can also pay income tax through their smartphone, says reports. Now, it usually it takes around 2-3 weeks to receive PAN card. According to CBDT's plans, a person will be allotted PAN number within 5-6 minutes after aadhar linked.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X