For Quick Alerts
ALLOW NOTIFICATIONS  
For Daily Alerts

ಸಿಬಿಲ್ ಕ್ರೆಡಿಟ್ ಸ್ಕೋರ್ ಹೆಚ್ಚಿಸುವುದು ಹೇಗೆ?

ಸಿಬಿಲ್​ ಕ್ರೆಡಿಟ್ ಸ್ಕೋರ್ ಹೆಚ್ಚಿಸುವುದು ಹೇಗೆ, ಉತ್ತಮ ಅಂಕಗಳ ಮೂಲಕ ಹೆಚ್ಚು ಸಾಲ ಪಡೆಯುವುದು ಹೇಗೆ ಹಾಗೂ ಯಾವ ಅಂಶಗಳು ಪ್ರಮುಖವಾಗಿರುತ್ತವೆ ಎಂಬುದರ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ...

By Siddu
|

ಈಗಂತೂ ಪ್ರತಿಯೊಬ್ಬರ ಬಳಿ ಕ್ರೆಡಿಟ್ ಕಾರ್ಡ್ ಇರುತ್ತದೆ. ಆದರೆ ಕೆಲವರು ಹೆಚ್ಚು ಬಳಕೆ ಮಾಡಿರುವುದಿಲ್ಲ. ಬ್ಯಾಂಕುಗಳಿಂದ ಪಡೆದಿರುವ ಸಾಲವನ್ನು ಒಂದೆರಡು ಕಂತುಗಳಲ್ಲಿ ತೀರಿಸಿದ್ದರೂ ಇನ್ನೊಮ್ಮೆ ಸಾಲ ಕೇಳಲು ಹೋದಾಗ ಬ್ಯಾಂಕುಗಳು ಸಾಲ ಕೊಡುವುದಕ್ಕೆ ಮೀನಮೇಷ ಎಣಿಸುತ್ತಾರೆ. ಸಾಲ ಕೊಡುವುದಿಲ್ಲ ಎನ್ನುವುದು ನಮ್ಮಲ್ಲಿ ಅನೇಕರ ಅಭಿಪ್ರಾಯ ಹಾಗೂ ಆರೋಪ ಕೂಡ. ಕೆಲವೊಮ್ಮೆ ಸಿಬಿಲ್ ಬ್ಯಾಂಕುಗಳಿಗೆ ನೀಡುವ ತಪ್ಪು ಅಂಕಿ-ಅಂಶ ಹಾಗೂ ಮಾಹಿತಿಗಳು ಕೂಡ ಗ್ರಾಹಕರ ಕ್ರೆಡಿಟ್ ಸ್ಕೋರ್ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಸಿಬಿಲ್ ಕ್ರೆಡಿಟ್ ಸ್ಕೋರ್ ಬಗ್ಗೆ ನಿಮಗೆಷ್ಟು ಗೊತ್ತು?

ಹೀಗಾಗಿ ಸಿಬಿಲ್​ ಕ್ರೆಡಿಟ್ ಸ್ಕೋರ್ ಹೆಚ್ಚಿಸುವುದು ಹೇಗೆ, ಉತ್ತಮ ಅಂಕಗಳ ಮೂಲಕ ಹೆಚ್ಚು ಸಾಲ ಪಡೆಯುವುದು ಹೇಗೆ ಹಾಗೂ ಯಾವ ಅಂಶಗಳು ಪ್ರಮುಖವಾಗಿರುತ್ತವೆ ಎಂಬುದರ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ...

1. ಸಾಲ ಪಡೆಯುವ ಮಾನದಂಡ

1. ಸಾಲ ಪಡೆಯುವ ಮಾನದಂಡ

ವ್ಯಕ್ತಿಯೊಬ್ಬ ಬ್ಯಾಂಕಿಗೆ ಸಾಲ ಕೇಳಲು ಹೋದ ಕೂಡಲೇ ಬ್ಯಾಂಕಿನವರು ಸಿಬಿಲ್(CIBIL-ಕ್ರೆಡಿಟ್ ಇನ್ಪಾರ್ವೆಷನ್ ಬ್ಯುರೋ ಇಂಡಿಯ ಲಿಲಿಟೆಡ್) ಅಂಕಗಳನ್ನು ಪರಿಶೀಲಿಸುತ್ತಾರೆ ಎಂಬುದು ತುಂಬಾ ಜನರಿಗೆ ತಿಳಿದಿರುವುದಿಲ್ಲ. ಬ್ಯಾಂಕುಗಳು ಯಾವುದೇ ಗ್ರಾಹಕನಿಗೆ ಸಾಲ ನೀಡಬೇಕಾದರೂ ಸಿಬಿಲ್ ಅಂಕಗಳನ್ನು ಪರಿಶೀಲನೆ ಮಾಡುತ್ತವೆ.

2. ಸಾಲ ಅವಧಿ ಮತ್ತು ಕ್ರೆಡಿಟ್ ಕಾರ್ಡ್​ನ ಬಳಕೆ

2. ಸಾಲ ಅವಧಿ ಮತ್ತು ಕ್ರೆಡಿಟ್ ಕಾರ್ಡ್​ನ ಬಳಕೆ

ಸಿಬಿಲ್ ವ್ಯಕ್ತಿಗಳ ಮತ್ತು ವಾಣಿಜ್ಯ ಸಂಸ್ಥೆಗಳ ಕ್ರೆಡಿಟ್ ದಾಖಲೆಗಳ ಸಂಗ್ರಹಣೆ ಮತ್ತು ನಿರ್ವಹಣೆ ಈ ಕಂಪನಿ ಆಗಿದೆ. ಯಾವ ವ್ಯಕ್ತಿಯೇ ಆದರೂ ಈ ಹಿಂದೆ ಪಡೆದುಕೊಂಡಿರುವ ಸಾಲ, ಅದನ್ನು ತೀರಿಸಿರುವ ಅವಧಿ ಮತ್ತು ಕ್ರೆಡಿಟ್ ಕಾರ್ಡ್​ನ ಬಳಕೆ ಮತ್ತಿತರ ಅಂಶಗಳನ್ನು ಆಧರಿಸಿ ಆ ವ್ಯಕ್ತಿಗೆ ಅಂಕ ನೀಡಿರುತ್ತದೆ.

3. ಕ್ರೆಡಿಟ್ ಸ್ಕೋರ್ ಎಷ್ಟಿರಬೇಕು?

3. ಕ್ರೆಡಿಟ್ ಸ್ಕೋರ್ ಎಷ್ಟಿರಬೇಕು?

ಗ್ರಾಹಕ 750-900 ಅಂಕ ಪಡೆದಿದ್ದರೆ ಬ್ಯಾಂಕುಗಳು ಆತನನ್ನು ಅತ್ಯುತ್ತಮ ಗ್ರಾಹಕನೆಂದು ಪರಿಗಣಿಸಿ ಕೂಡಲೇ ಸಾಲವನ್ನು ನೀಡುತ್ತವೆ. 700-750 ಅಂಕಗಳಿದ್ದರೆ ಒಂದು ಮಟ್ಟಿಗೆ ಉತ್ತಮ ಗ್ರಾಹಕ ಎನಿಸಿಕೊಳ್ಳುತ್ತಾರೆ. 550-750 ಕಡಿಮೆ ಸ್ಕೋರ್ ಎಂದು ಪರಿಣಿಸಲಾಗುತ್ತದೆ. 300-500 ಅ<ಕಗಳನ್ನು ಅತಿ ಕಡಿಮೆ ಸ್ಕೋರ್ ಎನ್ನಲಾಗುತ್ತದೆ. ಇಂತಹ ಸಂದರ್ಭದಲ್ಲಿ ಸಾಲ ಪಡೆಯುವುದು ತುಂಬಾ ಕಷ್ಟ. ಕಡಿಮೆ ಅಂಕ ಇದ್ದಲ್ಲಿ ಇನ್ನಷ್ಟು ಪರಿಶೀಲನೆ ನಡೆಸುತ್ತದೆ.

4. ಸಾಲ ಮರುಪಾವತಿ ನಿರ್ಲಕ್ಷಿಸಬೇಡಿ

4. ಸಾಲ ಮರುಪಾವತಿ ನಿರ್ಲಕ್ಷಿಸಬೇಡಿ

ಬ್ಯಾಂಕುಗಳಿಂದ ಸಾಲ ಪಡೆದುಕೊಂಡಿದ್ದರೆ ಸಮಯಕ್ಕೆ ಸರಿಯಾಗಿ ನಿಗದಿತ ಸಮಯದಲ್ಲಿ ಸಾಲ ಮರುಪಾವತಿ ಮಾಡಬೇಕು. ಉದಾಹರಣೆಗೆ ಒಬ್ಬ ವ್ಯಕ್ತಿ ಸಾಲದ ಕಂತನ್ನು ಪ್ರತಿ ತಿಂಗಳಿನ 10ನೇ ದಿನಾಂಕದೊಳಗೆ ಪಾವತಿ ಮಾಡಬೇಕಿರುತ್ತದೆ. ಆದರೆ ಆಗ ಆತನ ಖಾತೆಯಲ್ಲಿ ಹಣ ಇರದಿರುವುದರಿಂದ ಪ್ರತಿ ತಿಂಗಳು 7 ದಿನ ತಡವಾಗಿ ಅಂದರೆ 17ನೇ ದಿನಾಂಕದಂದು ಸಾಲದ ಕಂತನ್ನು ಖಾತೆಯಿಂದ ಡೆಬಿಟ್ ಮಾಡಿಕೊಳ್ಳುವಂತೆ ಬ್ಯಾಂಕಿನವರಿಗೆ ಸೂಚಿಸುತ್ತಾನೆ ಎಂದುಕೊಂಡರೆ ಆತನನ್ನು ಸುಸ್ಥಿರ ಗ್ರಾಹಕನಲ್ಲ ಎಂದು ಸಿಬಿಲ್ ಪರಿಗಣಿಸುತ್ತದೆ.

5. ಕ್ರೆಡಿಟ್ ಕಾರ್ಡ್ ಬಳಸುವಾಗ ಎಚ್ಚರವಿರಲಿ

5. ಕ್ರೆಡಿಟ್ ಕಾರ್ಡ್ ಬಳಸುವಾಗ ಎಚ್ಚರವಿರಲಿ

ಬ್ಯಾಂಕು​ಗಳಿಂದ ಕ್ರೆಡಿಟ್ ಕಾರ್ಡ್ ಪಡೆದುಕೊಂಡು ನಂತರ ಅದನ್ನು ಬಳಸುತ್ತಿಲ್ಲವೆಂದರೆ ನೀವು ಪಡೆದ ಸಾಲ ಮರು ಪಾವತಿಗೆ ಶಕ್ತರಾಗಿಲ್ಲ. ಹೀಗಾಗಿ ಕಾರ್ಡ್ ಬಳಸುತ್ತಿಲ್ಲ ಎಂದು ಪರಿಗಣಿಸಲಾಗುತ್ತದೆ. ಅಲ್ಲದೇ ಪದೆಪದೆ ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಡೆಯುತ್ತಿದ್ದರೆ ಅಂತವರನ್ನೂ ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡುತ್ತಿದ್ದಾರೆಂದು ಪರಿಗಣಿಸಿ ಅಂಕ ಕಡಿತ ಮಾಡಲಾಗುತ್ತದೆ. ಹೀಗಾಗಿ ಕಾರ್ಡ್ ನ ಅತಿಯಾದ ಬಳಕೆ ಹಾಗೂ ಬಳಕೆ ಮಾಡದಿರುವ ಎರಡು ಅಂಶಗಳು ಸ್ಕೋರ್ ಮೇಲೆ ಪರಿಣಾಮ ಬೀರುತ್ತವೆ.

6. ಹೆಚ್ಚು ಸ್ಕೋರ್ ಬೇಕಾದಲ್ಲಿ ಒಂದೇ ಬಾರಿ ಸಾಲ ತೀರಿಸುವಂತಿಲ್ಲ

6. ಹೆಚ್ಚು ಸ್ಕೋರ್ ಬೇಕಾದಲ್ಲಿ ಒಂದೇ ಬಾರಿ ಸಾಲ ತೀರಿಸುವಂತಿಲ್ಲ

ಗ್ರಾಹಕ ಹೆಚ್ಚಿನ ಮೊತ್ತದ ಸಾಲ ಪಡೆದುಕೊಂಡಿದ್ದು, ಒಂದೆರಡು ಕಂತು ಕಟ್ಟಿದ ನಂತರ ಒಂದೇ ಬಾರಿ ಉಳಿದೆಲ್ಲ ಮೊತ್ತವನ್ನು ಪಾವತಿಸಿದರೆ ಅದರಿಂದಲೂ ಸಿಬಿಲ್ ಸ್ಕೋರ್ ಇಳಿಕೆಯಾಗುತ್ತದೆ. ಜತೆಗೆ ಸಾಲ ಪಡೆಯುವುದಕ್ಕಾಗಿ ಹಲವು ಬ್ಯಾಂಕುಗಳಿಗೆ ತಿರುಗಾಡಿದ ನಂತರ ಯಾವ ಬ್ಯಾಂಕಿನಿಂದಲೂ ಸಾಲ ಸಿಗದೆ ಇದ್ದರೆ ಇದರಿಂದಲೂ ಕೂಡ ಸಿಬಿಲ್ ಸ್ಕೋರ್ ಕಡಿತವಾಗುತ್ತದೆ.

7. ಇಎಂಐನಲ್ಲಿ ತೀರಿಸಿದ್ರೂ ತಪ್ಪು

7. ಇಎಂಐನಲ್ಲಿ ತೀರಿಸಿದ್ರೂ ತಪ್ಪು

ಕ್ರೆಡಿಟ್ ಕಾರ್ಡ್​ನ ಮೂಲಕ ಸರಕುಗಳನ್ನು ಖರೀದಿಸಿದ ನಂತರ ನಿಮಗೆ ಆ ಮೊತ್ತವನ್ನು ನಿಗದಿತ ಸಮಯದಲ್ಲಿ ಭರಿಸಲು ಸಾಧ್ಯವಾಗುವುದಿಲ್ಲ. ಅದನ್ನು ಸಾಲವಾಗಿ ಬದಲಾಯಿಸಿ EMI ರೂಪದಲ್ಲಿ ಸಾಲದ ಮರುಪಾವತಿ ಮಾಡುತ್ತೀರಿ ಎಂದಾದರೆ ಅದೂ ತಪ್ಪಾಗುತ್ತದೆ. ಇದು ಕೂಡ ಗ್ರಾಹಕನೊಬ್ಬನ ಮರುಪಾವತಿ ಸಾಮರ್ಥ್ಯವನ್ನು ಅಳೆಯುವ ಮಾನದಂಡವಾಗುತ್ತದೆ.
ಹಲವು ಸಂದರ್ಭಗಳಲ್ಲಿ ಅನೇಕ ಮಾನದಂಡಗಳು ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಇಂತಹ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ.

8. ಸಿಬಿಲ್ ಹೇಗೆ ಕೆಲಸ ಮಾಡುತದೆ?

8. ಸಿಬಿಲ್ ಹೇಗೆ ಕೆಲಸ ಮಾಡುತದೆ?

ಸಿಬಿಲ್ ಸಾಲವನ್ನು ಅನುಮೋದಿಸಬೇಕಾದರೆ, ಕ್ರೆಡಿಟ್ ಕೇಳುವ ಸಂಸ್ಥೆ ಅದಕ್ಕೆ ತಕ್ಕಂತೆ ಮಾಹಿತಿ ಒದಗಿಸಬೇಕು. ಹಣವನ್ನು ತಿರುಗಿಸುವ ಸಾಮರ್ಥ್ಯ ಇದ್ದರೆ ಮಾತ್ರ ಸಾಲ ಕೊಡಲಾಗುತ್ತದೆ. ಸಿಬಿಲ್ ಎಲ್ಲರ ಡೇಟಾ ಸಂಗ್ರಹಿಸಿ ಅದನ್ನು ಎಲ್ಲಾ ಬ್ಯಾಂಕುಗಳಿಗೆ ಕೊಡುತ್ತದೆ. ಇದರ ಆಧಾರದ ಮೇಲೆ ಬ್ಯಾಂಕುಗಳು ಸಾಲ ಕೊಡಬೇಕೆ ಅಥವಾ ಬೇಡವೇ ಎಂಬುದನ್ನು ತೀರ್ಮಾನಿಸುತ್ತವೆ. ಸಿಬಿಲ್ ಬ್ಯಾಂಕ್ ಗಳನ್ನು ತುಂಬ ದಕ್ಷವಾಗಿ ಕೆಲಸ ಮಾಡುವುದಕ್ಕೆ ಸಹಾಯಕವಾಗುತ್ತದೆ.

English summary

How to improve your CIBIL Credit Score

Your CIBIL score or credit score is an important factor in determining whether you will be approved for a loan or not. CIBIL scores are generated based on your credit history which includes past credit taken and payment patterns in relation to them.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X