For Quick Alerts
ALLOW NOTIFICATIONS  
For Daily Alerts

ರುಪೇ ಕಾರ್ಡ್ ಬಳಕೆಯಿಂದ ದೇಶಕ್ಕೆ ಕೋಟಿ ಕೋಟಿ ಲಾಭ

ಭಾರತ ಸರ್ಕಾರ ರುಪೇ ಕಾರ್ಡ್ ಅಭಿವೃದ್ಧಿ ಪಡಿಸಿದ್ದು, ನಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯ ಮೂಲಕ ನಿಯಂತ್ರಿಸಲ್ಪಟ್ಟಿದೆ.

By Siddu
|

ದೇಶದಲ್ಲಿ ವಿದೇಶಿ ಕಂಪೆನಿಗಳ ಕ್ರೆಡಿಟ್‌ ಕಾರ್ಡ್‌ ಬಳಸುತ್ತಿದ್ದರಿಂದ ಸುಮಾರು ರೂ. 5 ಸಾವಿರ ಕೋಟಿ ವಿದೇಶಗಳ ಪಾಲಾಗುತ್ತಿತ್ತು. ಕೇಂದ್ರ ಸರ್ಕಾರ ಅಭಿವೃದ್ಧಿ ಪಡಿಸಿದ ರುಪೇ ಕಾರ್ಡ್‌ ಬಳಕೆಯಿಂದ ಆ ಹಣ ದೇಶದಲ್ಲೇ ಉಳಿಯುತ್ತಿದೆ ಬೆಂಗಳೂರು ನಬಾರ್ಡ್ ಅಧಿಕಾರಿ ತಿಳಿಸಿದ್ದಾರೆ. ರುಪೇ ಕಾರ್ಡ್ ಇದ್ದರೆ ಈ ಪ್ರಯೋಜನ ಪಡೆಯಬಹುದು

 

ಭಾರತ ಸರ್ಕಾರ ರುಪೇ ಕಾರ್ಡ್ ಅಭಿವೃದ್ಧಿ ಪಡಿಸಿದ್ದು, ನಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯ ಮೂಲಕ ನಿಯಂತ್ರಿಸಲ್ಪಟ್ಟಿದೆ.

ರುಪೇ ಕಾರ್ಡ್ ಪ್ರಯೋಜನ

ರುಪೇ ಕಾರ್ಡ್ ಪ್ರಯೋಜನ

ಕೇವಲ ವಿದೇಶ ಕಂಪನಿಗಳ ವೀಸಾ ಮತ್ತು ಮಾಸ್ಟರ್ ಕಾರ್ಡ್ ಗೆ ಸೀಮಿತವಾಗಿದ್ದ ಇ-ಕಾಮರ್ಸ್ ವ್ಯವಹಾರಗಳನ್ನು ರುಪೇ ಕಾರ್ಡ್ ಮೂಲಕ ನಡೆಸಬಹುದಾಗಿದೆ. ರುಪೇ ಕಾರ್ಡ್ ಮೂಲಕ ಬ್ಯಾಂಕು, ಶಾಪಿಂಗ್, ವ್ಯಾಪಾರ ಮತ್ತು ಭಾರತೀಯ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಬಳಸಲಾಗುತ್ತದೆ. ಗಿಪ್ಟ್ ಡೆಲಿವರಿ ನೆರವು, ಕೊರಿಯರ್ ಸೇವೆ, ಕಾರು ಬಾಡಿಗೆ, ಗಾಲ್ಫ್ ಮೀಸಲಾತಿ, ಐಟಿ ರಿಟರ್ನ್ಸ್ ಮತ್ತು ಫೈಲಿಂಗ್ ನೆರವು, ಹೂಡಿಕೆ ಕನ್ಸಲ್ಟೆನ್ಸಿ- ರಿಯಲ್ ಎಸ್ಟೇಟ್, ಮ್ಯೂಚುಯಲ್ ಫಂಡ್, ಈಕ್ವಿಟಿ, ಡೆಬಿಟ್ಸ್ ಮುಂತಾದ ಸಹಾಯ ಸೇವೆಗಳನ್ನು ಪಡೆಯಬಹುದು.

85%ರೈತರಿಗೆ ಕಾರ್ಡ್‌

85%ರೈತರಿಗೆ ಕಾರ್ಡ್‌

ಮುಖ್ಯವಾಗಿ ರೈತರ ಪ್ರಯೋಜನಕ್ಕಾಗಿ ರುಪೇ ಕಾರ್ಡ್‌ ಜಾರಿಗೆ ತರಲಾಗಿದ್ದು, ಶೇ. 85ರಷ್ಟು ರೈತರಿಗೆ ಈ ಕಾರ್ಡ್‌ ವಿತರಿಸಲಾಗಿದೆ. ಮಾರ್ಚ್‌ ಒಳಗಾಗಿ 100% ಗುರಿ ಸಾಧಿಸಲಾಗುವುದು.

ರೈತರ ಹಣಕಾಸು ವ್ಯವಹಾರ
 

ರೈತರ ಹಣಕಾಸು ವ್ಯವಹಾರ

ರೈತರ ಸ್ವಸಹಾಯ ಸಂಘಗಳ ಹಣಕಾಸು ವಹಿವಾಟನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆದ್ದು, ರೈತರು ಡಿಜಿಟಲ್‌ ವ್ಯವಹಾರಗಳನ್ನು ಅಳವಡಿಸಬೇಕು. ಜತೆಗೆ ಮೊಬೈಲ್‌ ಬ್ಯಾಂಕಿಂಗ್‌ ಹಾಗೂ ರುಪೇ ಕಾರ್ಡ್‌ ಬಳಕೆ ಹೆಚ್ಚಾಗಬೇಕು.

ಭಾರತೀಯ ಗ್ರಾಹಕರಿಗೆ ಸಂಬಂಧಿತ ಮಾಹಿತಿ ರಕ್ಷಣೆ

ಭಾರತೀಯ ಗ್ರಾಹಕರಿಗೆ ಸಂಬಂಧಿತ ಮಾಹಿತಿ ರಕ್ಷಣೆ

ರುಪೇ ಕಾರ್ಡ್ ವ್ಯವಹಾರ ದೇಶೀಯವಾಗಿ ನಡೆಯುವುದರಿಂದ ವ್ಯವಹಾರ ಮತ್ತು ಗ್ರಾಹಕರ ಡೇಟಾ ಸಂಬಂಧಿತ ಮಾಹಿತಿ ದೇಶೀಯವಾಗಿಯೇ ಉಳಿಯುತ್ತದೆ. ಗ್ರಾಹಕರ ಮಾಹಿತಿ ದುರುಪಯೋಗಕ್ಕೆ ಅವಕಾಶವಿರುವುದಿಲ್ಲ.

English summary

Rupay Card Benefits for Country and customers

The Indian market offers huge potential for cards penetration despite the challenges. RuPay Cards will address the needs of Indian consumers, merchants and banks.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X