For Quick Alerts
ALLOW NOTIFICATIONS  
For Daily Alerts

ಎಟಿಎಂ ಮೂಲಕ ಈ 16 ವ್ಯವಹಾರಗಳನ್ನು ಮಾಡಬಹುದು

ಎಟಿಎಂ ಕೇಂದ್ರಗಳು ಕೆಲ ಸಂದರ್ಭಗಳಲ್ಲಿ ಮಿನಿ ಬ್ಯಾಂಕುಗಳಾಗಿ ಕಾರ್ಯನಿರ್ವಹಿಸುತ್ತವೆ. ಬ್ಯಾಂಕುಗಳಲ್ಲಿ ಎದುರಾಗುವ ಜನದಟ್ಟಣೆಯನ್ನು ಕಡಿಮೆಗೊಳಿಸುವ ಸಲುವಾಗಿ ಎಟಿಎಂ ಕೇಂದ್ರಗಳು ಮಹತ್ವದ ಪಾತ್ರ ವಹಿಸುತ್ತವೆ.

|

ಎಟಿಎಂ ಕೇಂದ್ರಗಳು ಕೆಲ ಸಂದರ್ಭಗಳಲ್ಲಿ ಮಿನಿ ಬ್ಯಾಂಕುಗಳಾಗಿ ಕಾರ್ಯನಿರ್ವಹಿಸುತ್ತವೆ. ಬ್ಯಾಂಕುಗಳಲ್ಲಿ ಎದುರಾಗುವ ಜನದಟ್ಟಣೆಯನ್ನು ಕಡಿಮೆಗೊಳಿಸುವ ಸಲುವಾಗಿ ಎಟಿಎಂ ಕೇಂದ್ರಗಳು ಮಹತ್ವದ ಪಾತ್ರ ವಹಿಸುತ್ತವೆ. ಹೆಚ್ಚಿನ ವ್ಯವಹಾರಗಳಿಗಾಗಿ ಬ್ಯಾಂಕುಗಳಿಗೆ ಹೋಗಬೇಕಾದ ಅಗತ್ಯವಿಲ್ಲ. ಹೀಗಾಗಿ ಎಟಿಎಂ ಕೇಂದ್ರಗಳಲ್ಲಿ ಇಷ್ಟೊಂದು ಕೆಲಸಗಳನ್ನು ಮಾಡಬಹುದಾ ಅಂತಾ ಅಶ್ಚರ್ಯ ಕೂಡ ಆಗಬಹುದು.

 

ಸಾಮಾನ್ಯವಾಗಿ ಈ ಹಿಂದೆ ಗ್ರಾಹಕರು ಎಟಿಎಂ ಕೇಂದ್ರಗಳನ್ನು ಹಣ ವಿತ್ ಡ್ರಾ ಮಾಡುವುದಕ್ಕಾಗಿ ಮಾತ್ರ ಬಳಸುತಿದ್ದರು. ಆದರೆ ಇದೀಗ ಇನ್ನೂ ಅನೇಕ ವ್ಯವಹಾರಗಳನ್ನು ಎಟಿಎಂ ಯಂತ್ರಗಳ ಮೂಲಕ ಮಾಡಬಹುದಾಗಿದೆ. ಮೊಬೈಲ್/ಆನ್ಲೈನ್ ಮೂಲಕ ಜಾತಿ, ಆದಾಯ ಪ್ರಮಾಣ ಪತ್ರ ಪಡೆಯೋದು ಹೇಗೆ?

ಎಟಿಎಂ ಯಂತ್ರಗಳ ಮೂಲಕ ಕೈಗೊಳ್ಳಬಹುದಾದ 16 ಪ್ರಮುಖ ವ್ಯವಹಾರಗಳ ಪಟ್ಟಿ ಇಲ್ಲಿ ಮಾಡಲಾಗಿದೆ.

1. ನಗದು ವಿತ್ ಡ್ರಾ

1. ನಗದು ವಿತ್ ಡ್ರಾ

ಎಟಿಎಂ ಕೇಂದ್ರಗಳಲ್ಲಿ ಹಣ ವಿತ್ ಡ್ರಾ ಮಾಡಿಕೊಳ್ಳುವ ಸೇವೆ ಜನಜನಿತವಾಗಿದೆ. ಮುಖ್ಯವಾಗಿ ಪ್ರತಿಯೊಬ್ಬರೂ ನಗದು ವಿತ್ ಡ್ರಾ ವ್ಯವಹಾರ ಮಾಡಿರುತ್ತಾರೆ. ನೋಟು ನಿಷೇಧದ ನಂತರ ಒಂದು ದಿನಕ್ಕೆ ಅಥವಾ ಒಂದು ವಾರಕ್ಕೆ 50 ಸಾವಿರ ನಗದು ವಿತ್ ಡ್ರಾ ಮಾಡಬಹುದಾಗಿದೆ.

2. ಬ್ಯಾಲೆನ್ಸ್ ಪರಿಶೀಲನೆ

2. ಬ್ಯಾಲೆನ್ಸ್ ಪರಿಶೀಲನೆ

ಬ್ಯಾಂಕು ಗ್ರಾಹಕರು ತಮ್ಮ ಖಾತೆಯಲ್ಲಿನ ಮೊತ್ತವನ್ನು, ಪ್ರಸ್ತುತ ಲಭ್ಯವಿರುವ ಒಟ್ಟು ಮೊತ್ತವನ್ನು ಪರಿಶೀಲನೆ ಮಾಡಬಹುದು. ಎಟಿಎಂ ಕಾರ್ಡ್ ಸ್ವೈಪ್ ಮಾಡಿದ ನಂತರ ಪರದೆ ಮೇಲೆ Balance enquiry ಆಯ್ಕೆ ಬರುತ್ತದೆ.

3. ಫಂಡ್ ವರ್ಗಾವಣೆ
 

3. ಫಂಡ್ ವರ್ಗಾವಣೆ

ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದು ಖಾತೆಗೆ ಫಂಡ್ಸ್ ವರ್ಗಾವಣೆ ಮಾಡಬಹುದು. ಫಂಡ್ ವರ್ಗಾವಣೆ ಮಾಡುವಾಗ ಕಳಿಸಬೇಕಾಗಿರುವ ವ್ಯಕ್ತಿಯ ಕಾರ್ಡ್ ಮೇಲಿರುವ 16 ಡಿಜಿಟ್ ಸಂಖ್ಯೆಗಳು ಗೊತ್ತಿರಬೇಕಾಗುತ್ತದೆ. ರೂ. 5000 ದಿಂದ ರೂ. 49000ರ ವರೆಗೆ ಮೊತ್ತವನ್ನು ವರ್ಗಾವಣೆ ಮಾಡಬಹುದು.

4. ಮಿನಿ ಸ್ಟೇಟ್ಮೆಂಟ್

4. ಮಿನಿ ಸ್ಟೇಟ್ಮೆಂಟ್

ನಿಮ್ಮ ಖಾತೆ ಬಗೆಗಿನ ವ್ಯವಹಾರಗಳ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲು ಈ ಮಿನಿ ಸ್ಟೇಟ್ಮೆಂಟ್ ಪಡೆದುಕೊಳ್ಳಬಹುದು. ಈ ಮಿನಿ ಹೇಳಿಕೆಯಲ್ಲಿ ಹಿಂದಿನ ಹತ್ತು ವ್ಯವಹಾರಗಳ ಮಾಹಿತಿ ಇರುತ್ತದೆ.

5. ಪಿನ್ ಬದಲಾವಣೆ

5. ಪಿನ್ ಬದಲಾವಣೆ

ಎಟಿಎಂ ಕೇಂದ್ರಗಳಲ್ಲಿ ಗ್ರಾಹಕರು ತಮ್ಮ ಡೆಬಿಟ್ ಕಾರ್ಡಿನ ನಾಲ್ಕು ಅಂಕೆಗಳ ಪಿನ್ ನಂಬರ್ ಬದಲಾವಣೆ ಮಾಡಬಹುದು. ಇದು ಎಲ್ಲ ಎಟಿಎಂ ಕೇಂದ್ರಗಳಲ್ಲಿ ಈ ಸೌಲಭ್ಯ ಒದಗಿಸಲಾಗಿದೆ. ನಿಯಮಿತವಾಗಿ ಪಿನ್ ನಂಬರ್ ಬದಲಾವಣೆ ಮಾಡುತ್ತಿರಬಹುದು.

6. ಸ್ಥಿರ ಠೇವಣಿ ತೆರೆಯಿರಿ

6. ಸ್ಥಿರ ಠೇವಣಿ ತೆರೆಯಿರಿ

ಬ್ಯಾಂಕ್ ಗ್ರಾಹಕರು ಎಟಿಎಂ ಬಳಸಿ ಸ್ಥಿರ ಠೇವಣಿ ಖಾತೆಯನ್ನು ತೆರೆಯಬಹುದು. ಖಾತೆಯ ಅವಧಿಯನ್ನು ಆಯ್ಕೆ ಮಾಡುವ ಅವಕಾಶ ಇದ್ದು, ಕನಿಷ್ಟ ರೂ. 5000 ರಿಂದ ಗರಿಷ್ಠ ರೂ. 49000 ವ್ಯಾಪ್ತಿಯಲ್ಲಿ ಮೊತ್ತ ಡಿಪಾಸಿಟ್ ಮಾಡಬಹುದು.

7. ಪ್ರೀಮಿಯಂ ಪೇಮೆಂಟ್

7. ಪ್ರೀಮಿಯಂ ಪೇಮೆಂಟ್

ಎಟಿಎಂ ಮೂಲಕ ಐಸಿಐಸಿಐ, ಎಷ್ಡಿಎಫ್ಸಿ, ಎಕ್ಸಿಸ್ ಬ್ಯಾಂಕುಗಳು ಮ್ಯೂಚುವಲ್ ಫಂಡ್ ಮತ್ತು ಎಲ್ಐಸಿ ಪ್ರೀಮಿಯಂ ಪಾವತಿಗೆ ಸೌಲಭ್ಯ ಕಲ್ಪಿಸಿದೆ. ಎಟಿಎಂ ಮೂಲಕ ಪ್ರೀಮಿಯಂ ಪಾವತಿ ಸಂದರ್ಭದಲ್ಲಿ ಪಾಲಿಸಿ ನಂಬರ್ ಮತ್ತು ಖಾತೆ ವಿವರಗಳನ್ನು ಹೊಂದಿರಬೇಕು.

8. ಆದಾಯ ತೆರಿಗೆ ಪಾವತಿಸಿ

8. ಆದಾಯ ತೆರಿಗೆ ಪಾವತಿಸಿ

ನೇರವಾಗಿ ಆದಾಯ ತೆರಿಗೆ ಪಾವತಿಸುವುದಕ್ಕಾಗಿ ನೋಂದಣಿ ಮಾಡಿಸಬೇಕಾಗುತ್ತದೆ. ತೆರಿಗೆ ಪಾವತಿಯ ಮೊತ್ತ ನಿಮ್ಮ ಖಾತೆಯಿಂದ ಕಡಿತವಾಗುತ್ತದೆ. Special Information Number(SIN) ಆಯ್ಕೆ ಮೂಲಕ ನಿಮಗೆ ರಸೀತಿ ಲಭ್ಯವಾಗುತ್ತದೆ. ತೆರಿಗೆ ರಿಟರ್ನ್ಸ್ ಫೈಲಿಂಗ್ ಮಾಡುವಾಗ SIN ಸಂಖ್ಯೆ ಒದಗಿಸಬೇಕಾಗುತ್ತದೆ.

9. ದೇಣಿಗೆ ಮಾಡಿ

9. ದೇಣಿಗೆ ಮಾಡಿ

ಎಟಿಎಂಗಳ ಮೂಲಕ ದೇಣಿಗೆಯನ್ನು ನೀಡಬಹುದು. ನಿಮಗೆ ಇಷ್ಟವಾದ NGO ಅಥವಾ ದೇವಸ್ಥಾನದ ಟ್ರಸ್ಟ್ ಗಳಿಗೆ ದೇಣಿಗೆ ನೀಡಲು ಎಟಿಎಂ ಯಂತ್ರದಲ್ಲಿ ಅವಕಾಶ ಕಲ್ಪಿಸಲಾಗಿರುತ್ತದೆ. ಉದಾ: ರಾಮಕೃಷ್ಣ ಮಿಷನ್, ತಿರುಪತಿ, ಇಸ್ಕಾನ್, ಕಾಶಿ ವಿಶ್ವನಾಥ ಹೀಗೆ ನಿಮಗೆ ಇಷ್ಟವಾದ ಚಾರಿಟಿ ಸಂಸ್ಥೆ/ದೇವಸ್ಥಾನಗಳಿಗೆ ಡೊನೆಟ್ ಮಾಡಬಹುದು. ಒಂದು ಸಲ ದೇಣಿಗೆ ಪಾವತಿಸಿದ ನಂತರ ರಸೀತಿ ಪಡೆಯಬಹುದು. ಇದನ್ನು ತೆರಿಗೆ ಫೈಲಿಂಗ್ ಮಾಡುವ ವೇಳೆ ಬಳಸಬಹುದು.

10. ಟ್ಯೂಷನ್ ಮತ್ತು ಯುಟಿಲಿಟಿ ಬಿಲ್

10. ಟ್ಯೂಷನ್ ಮತ್ತು ಯುಟಿಲಿಟಿ ಬಿಲ್

ಟ್ಯೂಷನ್ ಬಿಲ್, ವಿದ್ಯುತ್ ಬಿಲ್ ಪಾವತಿ, ಗ್ಯಾಸ್ ಬಿಲ್ ಪಾವತಿ ಮತ್ತು ಲ್ಯಾಂಡ್ ಲೈನ್ ಬಿಲ್ ಪಾವತಿಯಂತಹ ಯುಟಿಲಿಟಿ ಬಿಲ್ ಪಾವತಿ ಮಾಡಬಹುದು. ಕೆಲ ಬ್ಯಾಂಕುಗಳು ಇವುಗಳ ಮೇಲೆ ಕ್ಯಾಶ್ ಬ್ಯಾಕ್ ಆಫರ್ ಕೂಡ ನೀಡುತ್ತವೆ.

11. ಚೆಕ್ ಬುಕ್ ಗಾಗಿ ಕೋರಿಕೆ

11. ಚೆಕ್ ಬುಕ್ ಗಾಗಿ ಕೋರಿಕೆ

ಗ್ರಾಹಕರು ಚೆಕ್ ಬುಕ್ ಕೋರಿ ಮನವಿಯನ್ನು ನೀಡಲು ಬ್ಯಾಂಕುಗಳಿಗೆ ಹೋಗಬೇಕಾಗಿಲ್ಲ. ಎಟಿಎಂ ಕೇಂದ್ರಗಳಿಗೆ ಭೇಟಿ ಕೊಟ್ಟು ಹೊಸ ಚೆಕ್ ಬುಕ್ ಗಾಗಿ ಮನವಿ ಸಲ್ಲಿಸಬಹುದು. ನಿಮ್ಮ ನೋಂದಾಯಿತ ವಿಳಾಸವನ್ನು ನಮೂದಿಸಲು ಮರೆಯಬೇಡಿ. ಈ ಸೌಲಭ್ಯವನ್ನು ICICI ಮತ್ತು SBI ಬ್ಯಾಂಕುಗಳು ನೀಡಿವೆ.

12. ಖಾತೆ ವರ್ಗಾವಣೆ

12. ಖಾತೆ ವರ್ಗಾವಣೆ

ದೇಶದೊಳಗೆ ಖಾತೆ ವರ್ಗಾವಣೆಯನ್ನು ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕಿಗೆ ಅದೇ ಗ್ರಾಹಕನಿಗೆ ಅಥವಾ ಬೇರೆ ಗ್ರಾಹಕನಿಗೆ ವರ್ಗಾವಣೆ ಮಾಡಬಹುದು. ICICI ಮತ್ತು SBI ಬ್ಯಾಂಕುಗಳು ಸೇರಿದಂತೆ ಹಲವು ಬ್ಯಾಂಕುಗಳು ಈ ಸೌಲಭ್ಯ ಒದಗಿಸುತ್ತಿವೆ. ಇದಕ್ಕೆ ನಿಮ್ಮ ಡೆಬಿಟ್ ಕಾರ್ಡ್, ಪಿನ್ ನಂಬರ್ ಮತ್ತು ಫಲಾನುಭವಿಯ ಡೆಬಿಟ್ ಕಾರ್ಡ್ ನಂಬರ್ ಬೇಕಾಗುತ್ತದೆ.

13. ಮೊಬೈಲ್ ಬ್ಯಾಂಕಿಂಗ್ ನೋಂದಣಿ

13. ಮೊಬೈಲ್ ಬ್ಯಾಂಕಿಂಗ್ ನೋಂದಣಿ

ಗ್ರಾಹಕರು ಮೊಬೈಲ್ ಬ್ಯಾಂಕಿಂಗ್ ಸೇವೆಗಾಗಿ ಎಟಿಎಂ ಕೇಂದ್ರಗಳಲ್ಲಿ ನೋಂದಣಿ ಮಾಡಿಸಬಹುದು. ಮೊಬೈಲ್ ಬ್ಯಾಂಕಿಂಗ್ ಅರ್ಜಿಗಳನ್ನು ನೋಂದಣಿ ಮಾಡಿಸಬಹುದು ಇಲ್ಲವೆ ಅಪನೋಂದಣಿ ಮಾಡಬಹುದು.

14. ಕ್ರೆಡಿಟ್ ಕಾರ್ಡ್ ಬಿಲ್

14. ಕ್ರೆಡಿಟ್ ಕಾರ್ಡ್ ಬಿಲ್

ಕ್ರೆಡಿಟ್ ಕಾರ್ಡ್ ಬಿಲ್ ಗಳನ್ನು ಪಾವತಿ ಮಾಡುವುದೇ ಒಂದು ತಲೆನೋವಿನ ವಿಚಾರ. ಎಟಿಎಂ ಕೇಂದ್ರಗಳಲ್ಲಿ ಕ್ರೆಡಿಟ್ ಕಾರ್ಡ್ ಬಿಲ್ ಗಳನ್ನು ಡೆಬಿಟ್ ಕಾರ್ಡುಗಳ ಮೂಲಕ ಪಾವತಿ ಮಾಡಬಹುದು. ಎಟಿಎಂ ಯಂತ್ರದಲ್ಲಿ ಡೆಬಿಟ್ ಕಾರ್ಡ್ ಸ್ವೈಪ್ ಮಾಡಿ 'Bill Pay' ಆಪ್ಸನ್ ಆಯ್ಕೆ ಮಾಡಿದ ನಂತರ ಕಾರ್ಡ್ ನಂಬರ್ ನಮೂದಿಸಿ ಬಿಲ್ ಪಾವತಿ ಮಾಡಿ.

15. ರೈಲ್ವೆ ಬುಕಿಂಗ್

15. ರೈಲ್ವೆ ಬುಕಿಂಗ್

ಎಟಿಎಂ ಮುಖಾಂತರ ಎಸ್ಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್ ನಂತಹ ಕೆಲ ಬ್ಯಾಂಕುಗಳು ರೈಲ್ವೆ ಟಿಕೇಟ್ ಬುಕಿಂಗ್ ಮಾಡಲು ಅವಕಾಶ ಕಲ್ಪಸಿವೆ.

16. ಮೊಬೈಲ್ ರಿಚಾರ್ಜ್

16. ಮೊಬೈಲ್ ರಿಚಾರ್ಜ್

ಮೊಬೈಲ್ ರಿಚಾರ್ಜ್, ಡಿಟಿಎಚ್ ರೀಚಾರ್ಜ್ ನಂತಹ ಹಲವಾರು ವ್ಯವಹಾರಗಳನ್ನು ಎಟಿಎಂ ಯಂತ್ರದ ಮೂಲಕ ನಿರ್ವಹಿಸಬಹುದು. ಮೊಬೈಲ್ ಚಾರ್ಜ್ ಕಡಿಮೆ ಇದ್ದಾಗ ರಿಟೇಲ್ ಶಾಪ್ ಹುಡುಕುವ ಬದಲು ಎಟಿಎಂ ಕೇಂದ್ರಗಳನ್ನು ರಿಚಾರ್ಜ್ ಮಾಡಬಹುದು.

Read more about: atm credit card banking finance news
English summary

Top 16 Things You Can Do At An ATM

Automated Teller Machine (ATM) sometimes function as a mini bank. ATM allows you as a customer to make basic bank transactions. ATMs provides customers easy access to their bank accounts.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X