For Quick Alerts
ALLOW NOTIFICATIONS  
For Daily Alerts

ಏನಿದು ಗೋಲ್ಡ್ ಮಾನಿಟೈಸೇಶನ್ ಯೋಜನೆ?

ಚಿನ್ನವೆಂದರೆ ಭಾರತೀಯರಿಗೆ ಅತಿಯಾದ ವ್ಯಾಮೋಹ. ಇಂದು ಚಿನ್ನದ ಬಳಕೆ ಕೇವಲ ಆಭರಣಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಾಲ ಪಡೆಯಲು, ಬಂಡವಾಳದ ರೂಪದಲ್ಲಿ, ಚಿನ್ನದ ಪತ್ರಗಳ ಹೆಸರಿನಲ್ಲಿ ಹೀಗೆ ನೂರಾರು ಬಗೆಯಲ್ಲಿ ಅಗತ್ಯಕ್ಕೆ ತಕ್ಕಂತೆ ಬಳಕೆಯಾಗುತ್ತಿದೆ.

By Siddu
|

ಚಿನ್ನವೆಂದರೆ ಭಾರತೀಯರಿಗೆ ಅತಿಯಾದ ವ್ಯಾಮೋಹ. ಇಂದು ಚಿನ್ನದ ಬಳಕೆ ಕೇವಲ ಆಭರಣಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಾಲ ಪಡೆಯಲು, ಬಂಡವಾಳದ ರೂಪದಲ್ಲಿ, ಚಿನ್ನದ ಪತ್ರಗಳ ಹೆಸರಿನಲ್ಲಿ ಹೀಗೆ ನೂರಾರು ಬಗೆಯಲ್ಲಿ ಜನರ ಅಗತ್ಯಕ್ಕೆ ತಕ್ಕಂತೆ ಬಳಕೆಯಾಗುತ್ತಿದೆ.

 

ಚಿನ್ನದ ಪ್ರಾಮುಖ್ಯತೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 'ಗೋಲ್ಡ್ ಮಾನಿಟೈಸೇಶನ್' ಯೋಜನೆ ಜಾರಿ ಮಾಡಿದ್ದು, ಈಗಾಗಲೇ ರೂಪು ರೇಷೆಗಳ ಬಗ್ಗೆ ಸ್ಪಷ್ಟವಾದ ವಿವರಣೆ ನೀಡಿದೆ. ಚಿನ್ನದ ಮಾರುಕಟ್ಟೆ ಮೇಲೆ ಸಕಾರಾತ್ಮಕ ಹಿಡಿತ ಸಾಧಿಸುವುದು ಮತ್ತು ಸಾಲ ಪಡೆಯುವಿಕೆಯ ಚಿನ್ನ ಹೇಗಿರಬೇಕು ಇತ್ಯಾದಿ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಯೋಜನೆಗೆ ಅನೇಕ ಮೂಲ ಸೌಕರ್ಯಗಳ ಅಗತ್ಯವಿದೆ. ಹಾಗಾಗಿ ಕೇಂದ್ರ ಸರ್ಕಾರ ಆಯ್ಕೆ ಮಾಡಿದ ನಗರಗಳಲ್ಲಿ ಮಾತ್ರ ಯೋಜನೆ ಕಾರ್ಯಗತ ಮಾಡಲು ಮುಂದಾಗಿದೆ.

ಏನಿದು ಗೋಲ್ಡ್ ಮಾನಿಟೈಸೇಶನ್ ಯೋಜನೆ?

ಏನಿದು ಗೋಲ್ಡ್ ಮಾನಿಟೈಸೇಶನ್ ಯೋಜನೆ?

ಚಿನ್ನವನ್ನು ಬಂಡವಾಳ ಅಥವಾ ಹೂಡಿಕೆ ರೂಪದಲ್ಲಿ ಬಳಕೆ ಮಾಡಿಕೊಳ್ಳಬಹುದು (ಚಿನ್ನದ ಪತ್ರಗಳನ್ನು ಹೊರತುಪಡಿಸಿ). ಹೂಡಿಕೆಗೂ ಮುನ್ನ ನಿಮ್ಮ ಬಳಿ ಇರುವ ಚಿನ್ನವನ್ನು ಅನೇಕ ಪರೀಕ್ಷೆಗೆ ಒಡ್ಡಬೇಕಾಗುತ್ತದೆ. ಅಂದರೆ ಪರಿಶುದ್ಧತೆಯನ್ನು ಲೆಕ್ಕ ಹಾಕಬೇಕಾಗುತ್ತದೆ. ಈ ಪರೀಕ್ಷೆಗಳ ಸ್ಪಷ್ಟ ವಿಧಾನವನ್ನು ತಿಳಿಸುವುದೇ ಗೋಲ್ಡ್ ಮಾನಿಟೈಸೇಶನ್ ಯೋಜನೆ.

ಯೋಜನೆಯ ಪ್ರಮುಖ ಅಂಶಗಳು

ಯೋಜನೆಯ ಪ್ರಮುಖ ಅಂಶಗಳು

1. ಚಿನ್ನದ ಪರಿಶುದ್ಧತೆ
ಸದ್ಯ ಭಾರತದಲ್ಲಿ (ಬಿಎಸ್ ಐ) 350 ಹಾಲ್ ಮಾರ್ಕಿಂಗ್ ಕೇಂದ್ರಗಳಿವೆ. ಚಿನ್ನದ ಆಭರಣದ ಪರಿಶುದ್ಧತೆಯನ್ನು ಇವೇ ನಿರ್ಧರಿಸುತ್ತಿವೆ. ಇಲ್ಲಿ ಚಿನ್ನದ ಪರಿಶುದ್ಧತೆ ಅಳೆಯಲಾಗುವುದು.

2. ಪ್ರಾಥಮಿಕ ಪರೀಕ್ಷೆ
 

2. ಪ್ರಾಥಮಿಕ ಪರೀಕ್ಷೆ

ಎಕ್ಸ್ಆರ್ಎಫ್ ಯಂತ್ರದ ಮೂಲಕ ಚಿನ್ನದ ಪರಿಶುದ್ಧತೆಯ ಲೆಕ್ಕ ಮಾಡಲಾಗುತ್ತದೆ. ಚಿನ್ನ ಪರಿಶೀಲನೆ ಮಾಡಬೇಕಾದವರು ಕೆವೈಸಿ ಸೇರಿದಂತೆ ವಿವಿಧ ಮಾಹಿತಿಯನ್ನು ನೀಡಬೇಕಾಗುತ್ತದೆ.

3. ಚಿನ್ನದ ಪರೀಕ್ಷೆ

3. ಚಿನ್ನದ ಪರೀಕ್ಷೆ

ಚಿನ್ನವನ್ನು ಪರೀಕ್ಷೆಗೆ ಒಳಪಡಿಸಿದಾಗ ಕೆಲ ಪ್ರಮಾಣದ ನಷ್ಟವಾಗುತ್ತದೆ ಎಂದು ಹೆಚ್ಚಿನವರು ಇಂದಿಗೂ ನಂಬಿಕೊಂಡಿದ್ದಾರರೆ. ಕೆಲವೊಂದು ಸಂದರ್ಭದಲ್ಲಿ ಎಲ್ಲ ಬಗೆಯ ಪರಿಶೀಲನೆ ನೋಡುವ ಅವಕಾಶವೂ ಆಭರಣ ಮಾಲೀಕರಿಗೆ ಇರುವುದಿಲ್ಲ.

4. ಚಿನ್ನ ಪರಿಶೀಲನಾ ಪ್ರಮಾಣ ಪತ್ರ

4. ಚಿನ್ನ ಪರಿಶೀಲನಾ ಪ್ರಮಾಣ ಪತ್ರ

ಚಿನ್ನದ ಪರಿಶುದ್ಧತೆ ಫಲಿತಾಂಶ ಬಂದ ನಂತರ ಗ್ರಾಹಕ ಅದನ್ನು ಒಪ್ಪಿಕೊಳ್ಳಬಹುದು ಅಥವಾ ತಿರಸ್ಕರಿಸಲುಬಹುದು. ತಿರಸ್ಕಾರ ಮಾಡುವುದಾದರೆ ನಿರ್ದಿಷ್ಟ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಒಪ್ಪಿಕೊಂಡರೆ ಪರಿಶೀಲನೆಯ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದು.

5. ನಿಯಮಾವಳಿಗಳು

5. ನಿಯಮಾವಳಿಗಳು

ಪರೀಕ್ಷೆಗೆ ಒಳಪಡಿಸಲು ಕನಿಷ್ಠ 30 ಗ್ರಾಂ ಚಿನ್ನವನ್ನಾದರೂ ಹೊಂದಿರಬೇಕಾಗುತ್ತದೆ. ಸಣ್ಣ ಪ್ರಮಾಣದ ಹೂಡಿಕೆ ಮಾಡಲು ಇಂಥ ಕ್ರಮಗಳು ನೆರವಾಗುತ್ತದೆ ಎಂದು ಭಾವಿಸಲಾಗಿದೆ

English summary

Gold monetisation scheme: Top 5 things to know

The Reserve Bank of India (RBI) announced details of the gold monetisation scheme last week and we explain here all that you need to know in 5 quick points.
Story first published: Thursday, April 20, 2017, 16:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X