For Quick Alerts
ALLOW NOTIFICATIONS  
For Daily Alerts

ಮೊಬೈಲ್ ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಎಸ್ಎಂಎಸ್ ಆಧಾರಿತ ಯುಎಎನ್ ಸೌಲಭ್ಯ ಹೊಂದುವ ಮೂಲಕ ಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳಬಹುದಾಗಿದೆ.ಯುಎಎನ್ ನಂಬರ್ ಸಕ್ರಿಯಗೊಳಿಸಿದವರು ಈ ಸೌಲಭ್ಯ ಪಡೆಯಬಹುದು.

By Siddu
|

ನೌಕರರ ಭವಿಷ್ಯ ನಿಧಿ ಸಂಘಟನೆ(ಇಪಿಎಫ್ಓ) ಉದ್ಯೋಗಿಗಳು ತಕ್ಷಣದಲ್ಲಿ ತಮ್ಮ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಲು ಅನೇಕ ಉಪಕ್ರಮಗಳನ್ನು ಹೊರತಂದಿದೆ. ಈಗ ಇಪಿಎಫ್ಓ ಫೋರ್ಟಲ್ ಗೆ ಲಾಗಿನ್ ಆಗಿ ವಿವರಗಳನ್ನು ಒದಗಿಸಬೇಕಾಗಿಲ್ಲ. ಎಸ್ಎಂಎಸ್ ಆಧಾರಿತ ಯುಎಎನ್ ಸೌಲಭ್ಯ ಹೊಂದುವ ಮೂಲಕ ಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳಬಹುದಾಗಿದೆ.

 

ಯುಎಎನ್ ನಂಬರ್ ಸಕ್ರಿಯಗೊಳಿಸಿದವರು ಈ ಸೌಲಭ್ಯ ಪಡೆಯಬಹುದು. ಎಸ್ಎಂಎಸ್ ಮೂಲಕ ಇಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳಲು ಯುಎಎನ್ ನೋಂದಾಯಿತ ಮೊಬೈಲ್ ನಂಬರ್ ಬಳಸಬೇಕಾಗುತ್ತದೆ. ಪಿಎಫ್ ಬ್ಯಾಲೆನ್ಸ್ ತಕ್ಷಣದಲ್ಲಿ ಚೆಕ್ ಮಾಡುವ 5 ವಿಧಾನ ಗೊತ್ತೆ?

ಮೊಬೈಲ್ ಸಂಖ್ಯೆ

ಮೊಬೈಲ್ ಸಂಖ್ಯೆ

ಈ ಸೇವೆ ಪಡೆಯಲು ಬಳಕೆದಾರರು 7738299899 ನಂಬರಿಗೆ ಸಂದೇಶ ಕಳುಹಿಸಬೇಕು. ಒಂದು ಬಾರಿ ಸಕ್ರಿಯಗೊಂಡ ನಂತರ ಕ್ರೆಡಿಟ್, ಪಾಸ್ಬುಕ್ ಅಲರ್ಟ್ಸ್ ಗಳನ್ನು ಸ್ವೀಕರಿಸುತ್ತಿರಿ.

ಎಸ್ಎಂಎಸ್ ಸ್ವರೂಪ

ಎಸ್ಎಂಎಸ್ ಸ್ವರೂಪ

ಈ ಸಂದೇಶದ ಸ್ವರೂಪ EPFOHO UAN ಆಗಿರುತ್ತದೆ. ಇಲ್ಲಿ LAN ಮೊದಲ ಮೂರು ಅಕ್ಷರಗಳನ್ನು ನಮ್ಮ ಪ್ರಾಶಸ್ತ್ಯದ ಭಾಷೆಯನ್ನು ಸೂಚಿಸುತ್ತದೆ. ಚಂದಾದಾರರು ಸಂದೇಶವನ್ನು ಇಂಗ್ಲಿಷ್ ನಲ್ಲಿ ಪಡೆಯಲು ಇಚ್ಚಿಸಿದಲ್ಲಿ EPFOHO UAN ENG ಎಂಬುದಾಗಿ ಟೈಪ್ ಮಾಡಿ 07738299899 ನಂಬರಿಗೆ ಕಳುಹಿಸಬೆಕು.

ಭಾಷೆಗಳು
 

ಭಾಷೆಗಳು

ಪಿಎಫ್ ಬ್ಯಾಲೆನ್ಸ್ ವಿವರವನ್ನು ಅನೇಕ ಭಾಷೆಗಳಲ್ಲಿ ಪಡೆಯಬಹುದಾಗಿದೆ. ಪ್ರಸ್ತುತ ಎಸ್ಎಂಎಸ್ ಮೂಲಕ ಹತ್ತು ಭಾಷೆಗಳಲ್ಲಿ ಪಿಎಫ್ ಬ್ಯಾಲೆನ್ಸ್ ಸೌಲಭ್ಯ ಕಲ್ಪಿಸಲಾಗಿದೆ. ಅವುಗಳು ಈ ಕೆಳಗಿನಂತಿವೆ.
English: ENG
Hindi: HIN
Malayalam: MAL
Telugu: TEL
Panjabi: PUN
Gujarati: GUJ
Marathi: MAR
Kannada: KAN
Tamil: TAM
Bengali: BEN

ಇಪಿಎಫ್ಓ ಸಂದೇಶ

ಇಪಿಎಫ್ಓ ಸಂದೇಶ

ಒಂದು ಬಾರಿ 738299899 ನಂಬರಿಗೆ ಸಂದೇಶ ಕಳುಹಿಸಿದರೆ ಕೆವಾಯ್ಸಿ, ಕೊನೆ ಕೊಡುಗೆ ಮತ್ತು ಇಪಿಎಫ್ ಬ್ಯಾಲೆನ್ಸ್ ಒಳಗೊಂಡಂತೆ ಸದಸ್ಯರ ವಿವರವನ್ನು ಇಪಿಎಫ್ಓ ಕಳುಹಿಸುತ್ತದೆ.

ಟೋಲ್ ಫ್ರೀ ನಂಬರ್

ಟೋಲ್ ಫ್ರೀ ನಂಬರ್

ಒಂದು ವೇಳೆ ನಿಮಗೆ ಎಸ್ಎಂಎಸ್ ಬರದಿದ್ದರೆ ನಿಮ್ಮ ಪ್ರಸ್ತುತ ಉದ್ಯೋಗದಾತ ಸಂಸ್ಥೆಯನ್ನು ಸಂಪರ್ಕಿಸಿ ವಿಚಾರಿಸಬಹುದು. UAN/KYC ವಿಚಾರಣೆಗಳಿಗಾಗಿ ಇಪಿಎಫ್ಓ ಟೋಲ್ ಫ್ರೀ ನಂಬರ್ 1800118005 ಗೆ ಸಂಪರ್ಕಿಸಬಹುದು. ವಾರದ ಏಳು ದಿನಗಳು ಈ ಸೇವೆ ಲಭ್ಯವಿದ್ದು, ಬೆಳಿಗ್ಗೆ 9.15 ರಿಂದ 5.45ರವರೆಗೆ ಕರೆ ಮಾಡಬಹುದು.

UAN

UAN

ಯುಎಎನ್ ಎನ್ನುವುದು ಸಾರ್ವತ್ರಿಕ ಖಾತೆ ಸಂಖ್ಯೆ ಆಗಿದೆ. ಇದು ಇಪಿಎಫ್ಓ ಮೂಲಕ ಎಲ್ಲಾ ನೌಕರರಿಗೆ ನೀಡಲಾಗಿರುತ್ತದೆ. ಸದಸ್ಯ ಗುರುತಿನ ಸಂಖ್ಯೆಯನ್ನು(Member ID) ಯುಎಎನ್ ಗೆ ಲಿಂಕ್ ಮಾಡಿದರೆ ನೌಕರರಿಗೆ ಸಂಬಂಧಿತ ಎಲ್ಲಾ ಮಾಹಿತಿಯನ್ನು ಒದಗಿಸುತ್ತದೆ.

ಇಪಿಎಫ್ ಬ್ಯಾಲೆನ್ಸ್

ಇಪಿಎಫ್ ಬ್ಯಾಲೆನ್ಸ್

ಪ್ರಸ್ತುತ ನಿಮ್ಮ ಇಪಿಎಫ್ ಖಾತೆಯಲ್ಲಿರುವ ನಗದನ್ನು ಮಾತ್ರ ಇಪಿಎಫ್ ಬ್ಯಾಲೆನ್ಸ್ ಸೂಚಿಸುತ್ತದೆ. ಇಪಿಎಫ್ ಬ್ಯಾಲೆನ್ಸ್ ನಿವೃತ್ತಿ ನಿಧಿ ಲೆಕ್ಕ ಹಾಕಲು ಸಹಾಯಕವಾಗುತ್ತದೆ. ಪ್ರತಿ ತಿಂಗಳು ನಿಮ್ಮ ಸಂಬಳದಿಂದ ಕಡಿತವಾಗುವ ಮೊತ್ತ ಮತ್ತು ನೀವು ಕೆಲಸ ಮಾಡುತ್ತಿರುವ ಕಂಪನಿ ನಿಮ್ಮ ಇಪಿಎಫ್ ಖಾತೆಗೆ ನೀಡುವ ಕೊಡುಗೆ ಮೊತ್ತವನ್ನು ಒಳಗೊಂಡಿರುತ್ತದೆ. ಹೀಗಾಗಿ ನಿಮ್ಮ ಇಪಿಎಫ್ ಖಾತೆಯ ಸ್ಟೇಟಸ್ ತಿಳಿದುಕೊಳ್ಳುತ್ತಿರುವುದು ಮುಖ್ಯ.

English summary

How To Check EPF Balance Through Mobile SMS?

Now, you don't need to login to the EPFO portal and provide details. SMS based UAN activation facility is useful for those who know how to use the smartphone and M-epf app.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X