For Quick Alerts
ALLOW NOTIFICATIONS  
For Daily Alerts

ಷೇರುಪೇಟೆಯಲ್ಲಿ 'ಪ್ರಮೋಟರ್ ಸ್ಟೇಕ್' ಹೆಚ್ಚು ಪ್ರಭಾವಿ ಅಂಶ ಹೇಗೆ?

ಷೇರುಪೇಟೆಯ ಏರಿಕೆಯ ಲಾಭವನ್ನು ಪಡೆದುಕೊಳ್ಳಲು ಎಲ್ಲಾ ರೀತಿಯ ಹೂಡಿಕೆದಾರರು ಹಾತೊರೆಯುತ್ತಿರುತ್ತಾರೆ. ಕೇವಲ ಹೂಡಿಕೆದಾರರು ಮಾತ್ರವಲ್ಲ, ಮೆನೆಜ್ ಮೆಂಟ್ ಗಳು, ಕೇಂದ್ರ ಸರ್ಕಾರ ಹಾಗೂ ಪ್ರಮೋಟರ್ಸ್ ಸಹ ಪೇಟೆಯ ಏರಿಕೆಯನ್ನು ಸ್ವಾಗತಿಸುತ್ತಾರೆ.

By Krupal
|

ಷೇರುಪೇಟೆಯ ಏರಿಕೆಯ ಲಾಭವನ್ನು ಪಡೆದುಕೊಳ್ಳಲು ಎಲ್ಲಾ ರೀತಿಯ ಹೂಡಿಕೆದಾರರು ಹಾತೊರೆಯುತ್ತಿರುತ್ತಾರೆ. ಕೇವಲ ಹೂಡಿಕೆದಾರರು ಮಾತ್ರವಲ್ಲ, ಮೆನೆಜ್ ಮೆಂಟ್ ಗಳು, ಕೇಂದ್ರ ಸರ್ಕಾರ ಹಾಗೂ ಪ್ರಮೋಟರ್ಸ್ ಸಹ ಪೇಟೆಯ ಏರಿಕೆಯನ್ನು ಸ್ವಾಗತಿಸುತ್ತಾರೆ.

 

ಹೂಡಿಕೆದಾರರು ತಾವು ಹೂಡಿಕೆ ಮಾಡಿದ ಹಣದ ಬೆಳವಣಿಗೆಯಿಂದ ಪೇಟೆಯ ಏರಿಕೆ ನಿರೀಕ್ಷೆ ಮಾಡಿದರೆ, ಮೆನೆಜ್ಮೆಂಟ್ ಗಳು ಮತ್ತು ಪ್ರವರ್ತಕರು ಪೇಟೆಯ ಏರಿಕೆಯನ್ನು ಕಂಪನಿಯ ಅಗತ್ಯಕ್ಕೆ ತಕ್ಕಂತೆ ಸಂಪನ್ಮೂಲ ಸಂಗ್ರಹಣೆಗೆ ಮುಂದಾಗಲು ಅವಕಾಶವಾಗುವುದಲ್ಲದೆ, ಪ್ರವರ್ತಕರು ತಮ್ಮಲ್ಲಿರುವ ಸ್ಟೇಕ್ ನ್ನು ಮಾರಾಟ ಮಾಡಿ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಮುಂದಾಗುವರು. ಇನ್ನು ಕೇಂದ್ರ ಸರ್ಕಾರವು ಪೇಟೆಗಳು ಉತ್ತುಂಗದಲ್ಲಿದ್ದಾಗ ತನ್ನ ಬಂಡವಾಳ ಹಿಂತೆಗೆತದ ಕಾರ್ಯಕ್ರಮದಂತೆ ಆಫರ್ ಫಾರ್ ಸೇಲ್ ಮೂಲಕ ಷೇರು ಮಾರಾಟ ಮಾಡಲು ಮುಂದಾಗಬಹುದಲ್ಲದೆ ಎಸ್ ಸಿ ಯು ಟಿ ಐ ನ ಆಕ್ಸಿಸ್ ಬ್ಯಾಂಕ್, ಲಾರ್ಸನ್ ಅಂಡ್ ಟೋಬ್ರೋ, ಐಟಿಸಿ ಷೇರುಗಳ ಮಾರಾಟಕ್ಕೂ ಯೋಚಿಸಬಹುದು. ಈ ಹಿಂದೆ ಅಂದರೆ ಈ ವರ್ಷದ ಫೆಬ್ರವರಿಯಲ್ಲಿ ಐಟಿಸಿ ಷೇರಿನ ಬೆಲೆಯು ರೂ.290 ರ ಸಮೀಪಕ್ಕೆ ಜಿಗಿದಾಗ ಕೇಂದ್ರ ಸರ್ಕಾರ ಶೇ.2% ರಷ್ಟರ ಷೇರುಗಳನ್ನು ಮಾರಾಟ ಮಾಡಿ ರೂ. 6,700 ಕೋಟಿ ಹಣ ಸಂಗ್ರಹಿಸಿತು. ಮಾರ್ಚ್ ಮೊದಲ ವಾರದಲ್ಲಿ ಖಾಸಗಿ ವಲಯದ ಕೋಟಕ್ ಮಹಿಂದ್ರಾ ಬ್ಯಾಂಕ್ ನ ಪ್ರಮೋಟರ್ ರವರು ಷೇರಿನ ಬೆಲೆ ಗಗನಕ್ಕೇರಿದ ಸಂದರ್ಭದಲ್ಲಿ ಶೇ. 1.5 ರಷ್ಟು ಸ್ಟೇಕ್ ನ್ನು ಮಾರಾಟ ಮಾಡಿ ಸುಮಾರು ರೂ. 2,200 ಕೋಟಿ ಸಂಪನ್ಮೂಲ ಸಂಗ್ರಹಿಸಿದರು.

ಪರಿಸ್ಥಿತಿಯ ಲಾಭ

ಪರಿಸ್ಥಿತಿಯ ಲಾಭ

ಹಿಂದಿನ ವರ್ಷ ಇನ್ಫೋಸಿಸ್ ಕಂಪನಿಯ ಪ್ರಮೋಟರ್ ತಮ್ಮ ಸ್ಟೇಕ್ ನ್ನು ಭಾಗಶಃ ಮಾರಾಟ ಮಾಡಿದ್ದಾರೆ . ಭಾರತಿ ಏರ್ಟೆಲ್ ತನ್ನ ಅಂಗ ಸಂಸ್ಥೆಯಾದ ಭಾರತಿ ಇನ್ಫ್ರಾ ಟೆಲ್ ನ ಶೇ. 10.3 ನ್ನು ಇತ್ತೀಚಿಗೆ ಮಾರಾಟ ಮಾಡಿ ಸುಮಾರು ಆರು ಸಾವಿರ ಕೋಟಿ ಹಣ ಸಂಗ್ರಹಿಸಿದೆ. ರಿಯಾಲ್ಟಿ ವಲಯದ ಕಂಪನಿ ಶೋಭಾ ಲಿಮಿಟೆಡ್ ಕಂಪನಿ ಷೇರಿನ ಬೆಲೆಯು ವಾರ್ಷಿಕ ಗರಿಷ್ಠದ ಹಂತದಲ್ಲಿದ್ದಾಗ ಪ್ರಮೋಟರ್ ಶೇ. 8.45 ಸ್ಟೇಕ್ ಸೇಲ್ ಮಾಡಿ ಪರಿಸ್ಥಿತಿಯ ಲಾಭ ಪಡೆದುಕೊಂಡಿರುತ್ತಾರೆ. ಮಣ್ಣಾಪುರಂ ಫೈನಾನ್ಸ್ ಪ್ರಮೋಟರ್ ತಮ್ಮ ಸ್ಟೇಕ್ ಮಾರಾಟ ಮಾಡಲಿದ್ದಾರೆಂಬ ಸುದ್ಧಿಯು ಷೇರಿನ ಬೆಲೆಯನ್ನು ಚುರುಕುಗೊಳಿಸಿತು. ಹೀಗೆ ಪ್ರಮುಖ ಕಂಪನಿಗಳಾದ ಡಿಎಲ್ಎಫ್, ಜಿಐಸಿ ಹೌಸಿಂಗ್, ಆಡ್ ಲ್ಯಾಬ್ಸ್ ಗಳು ಸಹ ಈ ದಿಶೆಯಲ್ಲಿ ಸಾಗಿದ್ದವು.

ಪ್ರಮೋಟರ್ ಮಾರಾಟ

ಪ್ರಮೋಟರ್ ಮಾರಾಟ

ಸಾಮಾನ್ಯವಾಗಿ ಪ್ರಮೋಟರ್ ಗಳು ತಮ್ಮ ಸ್ಟೇಕ್ ಹೆಚ್ಚಿಸಿಕೊಂಡಲ್ಲಿ ಅದು ಉತ್ತಮ ಬೆಳವಣಿಗೆ ಎಂದು ಪರಿಗಣಿಸಿ ಷೇರಿನ ಬೆಲೆ ಏರಿಕೆಯಾಗುವುದು. ಆದರೆ ಪ್ರಮೋಟರ್ ಮಾರಾಟ ಮಾಡಿದ ನಂತರ ಕೆಲವು ಏರಿಕೆಯನ್ನು ಕಂಡರೆ ಕೆಲವು ಭಾರಿ ಕುಸಿತಕ್ಕೊಳಗಾಗುವುವು. ಶೋಭಾ ಕಂಪನಿಯ ಸ್ಟೇಕ್ ಸೇಲ್ ನಂತರ ಭಾರಿ ಕುಸಿತಕ್ಕೊಳಗಾಯಿತು. ಆದರೆ ಕೋಟಕ್ ಮಹಿಂದ್ರಾ ಬ್ಯಾಂಕ್ ಷೇರಿನ ಬೆಲೆ ಏರಿಕೆ ಕಂಡಿದೆ. ಕಂಪನಿಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರೊಫೆಶನಲ್ಸ್ ಗಳನ್ನು ತರಲು ಸಹ ಕೆಲವೊಮ್ಮೆ ಪ್ರಮೋಟರ್ ಗಳು ಮಾರಾಟ ಮಾಡುವರು.

ಷೇರುಗಳಿಂದ ನಿರ್ಗಮನ
 

ಷೇರುಗಳಿಂದ ನಿರ್ಗಮನ

ಕಂಪನಿಯ ಪ್ರಮೋಟರ್ ಗಳು ಹೊಂದಿರುವ ಸ್ಟೇಕ್ ಅತಿ ಮುಖ್ಯ. ಕೆಲವು ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್, ಕಳಪೆ ಕಂಪೆನಿಗಳಲ್ಲಿ ಪ್ರಮೋಟರ್ ಸ್ಟೇಕ್ ಸಿಂಗಲ್ ಡಿಜಿಟ್ ಆಗಿ ಕಂಪನಿಯು 'ಹೆತ್ತವರಿಗೆ ಬೇಡವಾದ ಕೂಸು' ಎಂಬಂತಾಗಿದೆ. ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್, ಕಳಪೆ ಕಂಪೆನಿಗಳ ಪ್ರಮೋಟರ್ ಸ್ಟೇಕ್ ಕಡಿಮೆಯಾಗುತ್ತಾ ಬಂದಾಗ ಷೇರುಗಳಿಂದ ನಿರ್ಗಮಿಸುವುದೇ ಉತ್ತಮ. ಕಂಪನಿಗಳಾದ ಸಿದ್ದಾರ್ಥ ಬ್ಯುಸಿನೆಸ್ ಲಿ ಕಂಪನಿಯಲ್ಲಿ ಪ್ರವರ್ತಕರು ತಮ್ಮ ಸಂಪೂರ್ಣ ಸ್ಟೇಕ್ ಕರಗಿ ಸಂಪೂರ್ಣವಾಗಿ ಅದು ಸಾರ್ವಜನಿಕರಲ್ಲಿದೆ.

ಹೂಡಿಕೆ ನಿರ್ಧಾರ

ಹೂಡಿಕೆ ನಿರ್ಧಾರ

ಅರ್ಣವ್ ಕಾರ್ಪೊರೇಷನ್ ಕಂಪನಿಯ ಪ್ರಮೋಟರ್ ಸ್ಟೇಕ್ ಕೇವಲ ಶೇ. 0.24 ಮಾತ್ರ ಉಳಿದಂತೆ ಎಲ್ಲಾ ಷೇರುಗಳು ಸಾರ್ವಜನಿಕರಲ್ಲಿದೆ. ಈ ಕಂಪನಿಯ ಷೇರಿನ ಬೆಲೆಯು ರೂ. 2.50 ಸಮೀಪದಲ್ಲಿದ್ದಾಗ ಹಲವಾರು ದಿಕ್ಕುಗಳಿಂದ ಈ ಷೇರು ಕೊಳ್ಳಲು ಹೆಚ್ಚಿನ ಶಿಫಾರಸುಗಳು ಮೊಬೈಲ್ ಗಳಿಗೆ ಬಂದಿದ್ದು, ಅದರಲ್ಲಿ ಕಂಪನಿಯು ಚಾನ್ನಲ್ ಒಂದು ಕಾರ್ಯಾರಂಭ ಮಾಡಲಿದ್ದು ಷೇರು ಮಲ್ಟಿ ಬ್ಯಾಗರ್ ಎಂದು ಸುದ್ಧಿ ಹರಡಲಾಯಿತು. ಆದರೆ ಷೇರಿನ ಬೆಲೆಯು ರೂ. 1.46 ರ ಸಮೀಪಕ್ಕೆ ಕುಸಿದಿದೆ. ಇಂತಹ ಅನಪೇಕ್ಷಿತ ಸಂದೇಶಗಳಿಗೆ ಹೆಚ್ಚಿನ ಮಾನ್ಯತೆ ನೀಡದೆ ಕಂಪನಿಗಳ ಯೋಗ್ಯತೆಯನ್ನಾಧರಿಸಿ ಹೂಡಿಕೆ ನಿರ್ಧರಿಸುವುದು ಉತ್ತಮ.

ಅಪಾರ ನಷ್ಟ

ಅಪಾರ ನಷ್ಟ

ಕೆಲವರಿಗೆ ಅಲ್ಪ ಬೆಲೆಯ ಷೇರು ಕೊಂಡಲ್ಲಿ ಹೆಚ್ಚಿನ ಸಂಖ್ಯೆ ಬರುತ್ತದೆ. ಷೇರಿನ ಬೆಲೆ ರೂ. 1ರಷ್ಟು ಏರಿಕೆ ಕಂಡಾಗ ಹೆಚ್ಚು ಲಾಭ ಬರುತ್ತದೆ ಎಂಬ ಕಲ್ಪನೆ ಇರುತ್ತದೆ. ಆದರೆ ಆ ಷೇರಿನ ಬೆಲೆ ರೂ. 1ರಷ್ಟು ಇಳಿಕೆ ಕಂಡರೆ ಅಪಾರವಾದ ಹಾನಿಯಾಗುವುದು ಎಂಬ ಅಂಶ ಗಮನದಲ್ಲಿರುವುದಿಲ್ಲ.

ಕಂಪನಿ ಆಯ್ಕೆ ಹೇಗೆ?

ಕಂಪನಿ ಆಯ್ಕೆ ಹೇಗೆ?

ಅಗ್ರಮಾನ್ಯ ಕಂಪನಿಗಳಾದ ಲಾರ್ಸನ್ ಅಂಡ್ ಟೋಬ್ರೋ, ಐಸಿಐಸಿಐ, ಐಟಿಸಿ ಗಳು ಸಂಪೂರ್ಣವಾಗಿ, ವೃತ್ತಿಪರರಿಂದ ನಿರ್ವಹಿಸಲ್ಪಡುತ್ತಿದ್ದು, ಈ ಕಂಪನಿಗಳಿಗೆ ಪ್ರಮೋಟರ್ ಗಳಿಲ್ಲ. ಅಂದರೆ ಕಂಪನಿಗಳ ಗಾತ್ರ, ಘನತೆ, ಚಾರಿತ್ರ್ಯ ಗಳನ್ನಾಧರಿಸಿ ಹೂಡಿಕೆ ಯೋಗ್ಯತೆಯನ್ನು ನಿರ್ಧರಿಸುವುದು ಒಳಿತು.

Read more about: stock share sensex
English summary

How promoter stake to be more influential element in the stock exchange?

promoter stake to be more influential element in the share market. Not only investors but management, central government also welcome Promoters.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X