For Quick Alerts
ALLOW NOTIFICATIONS  
For Daily Alerts

ಭೀಮ್ ಆ್ಯಪ್ ಮೂಲಕ ಹಣ ವರ್ಗಾವಣೆ ಹೇಗೆ?

ಭೀಮ್ ಆಪ್ ಅಂತರ್ಜಾಲವಿಲ್ಲದೆಯೂ ಕಾರ್ಯನಿರ್ವಹಿಸುತ್ತದೆ. ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಬಹುದಾಗಿದ್ದು, ಭೀಮ್ ಆಪ್ 9 ಭಾಷೆಗಳಲ್ಲಿ ಲಭ್ಯವಿದೆ.

By Siddu
|

ಭಾರತ್‌ ಇಂಟರ್ಫೇಸ್‌ ಫಾರ್‌ ಮನಿ(Bharat Interface For Money) ಇದರ ವಿಸ್ತೃತ ರೂಪ ಆಗಿದ್ದು, ರಾಷ್ಟ್ರೀಯ ಪಾವತಿ ನಿಗಮ 'ಭೀಮ್' ಆಪ್ ಅಭಿವೃದ್ಧಿ ಪಡಿಸಿದೆ. ಯುನಿಫೈಡ್ ಪೇಮೆಂಟ್ ಇಂಟರ್ಫೇಸ್(UPI) ಮತ್ತು ಅನ್‌ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಸರ್ವಿಸ್‌ ಡೇಟಾ(USSD) ವ್ಯವಸ್ಥೆಯಂತೆ ಪಾವತಿ ಮಾಡಬಹುದು. ಭೀಮ್ ಆಪ್ ಸ್ಮಾರ್ಟ್‌ಫೋನ್‌ ಮತ್ತು ಸಾಮಾನ್ಯ ಫೋನ್‌ಗಳ ಮೂಲಕ ಹಣ ಪಾವತಿ ಮಾಡುವ ಮತ್ತು ಸ್ವೀಕರಿಸುವ ಸೌಲಭ್ಯ ಹೊಂದಿದೆ.

ಭೀಮ್ ಆಪ್

ಭೀಮ್ ಆಪ್

ಭೀಮ್ ಆಪ್ ಅಂತರ್ಜಾಲವಿಲ್ಲದೆಯೂ ಕಾರ್ಯನಿರ್ವಹಿಸುತ್ತದೆ. ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಬಹುದಾಗಿದ್ದು, ಭೀಮ್ ಆಪ್ 9 ಭಾಷೆಗಳಲ್ಲಿ ಲಭ್ಯವಿದೆ. ಈ ಆಪ್ ಮೂಲಕ ಹಣ ರವಾನಿಸಲು ಆಧಾರ್ ಸಂಖ್ಯೆ ಕೂಡ ಬಳಸಬಹುದು. ಆದರೆ ಫಲಾನುಭವಿಗಳು ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸಂಪರ್ಕ ಹೊಂದಿರಬೇಕು.

ಹಣ ರವಾನೆ ಹೇಗೆ?

ಹಣ ರವಾನೆ ಹೇಗೆ?

* ಭೀಮ್ ಆಪ್ ಮೂಲಕ ಕೇವಲ ವ್ಯಕ್ತಿಯ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಹಣ ರವಾನೆ ಮಾಡಬಹುದು. ಇದು ಬಹಳ ಸುಲಭವಾದ ಹಣ ವರ್ಗಾವಣ ಮಾಡುವ ವ್ಯವಸ್ಥೆಯಾಗಿದೆ.
* ವರ್ಚುವಲ್ ಪೇಮೆಂಟ್ ವಿಳಾಸ ಮತ್ತು ಬ್ಯಾಂಕ್ ಖಾತೆ ಸಂಖ್ಯೆ ಮೂಲಕ ಕೂಡ ಹಣ ವರ್ಗಾವಯಿಸಬಹುದು.
VPA, ಮೊಬೈಲ್ ನಂಬರ್ ಮತ್ತು ಬ್ಯಾಂಕ್ ಖಾತೆ ಮೂಲಕ ಹಣ ಹೇಗೆ ಕಳುಹಿಸಬೇಕು ಎಂಬುದನ್ನು ಇಲ್ಲಿ ನೀಡಲಾಗಿದೆ.

1. ಮೊಬೈಲ್ ನಂಬರ್ ಮೂಲಕ

1. ಮೊಬೈಲ್ ನಂಬರ್ ಮೂಲಕ

* ಭೀಮ್ ಆಪ್ ತೆರೆದ ನಂತರ ಸೆಂಡ್ ಮನಿ ಆಪ್ಷನ್ ಆಯ್ಕೆ ಮಾಡಿ ವಿನಂತಿ ಕಳುಹಿಸಿ.
* ಮೊಬೈಲ್ ನಂಬರ್ ನಮೂದಿಸಿ
* ಸ್ವೀಕರಿಸುವವರ ಹೆಸರನ್ನು ಪರಿಶೀಲಿಸಿ ಕ್ಲಿಕ್ ಮಾಡಿ
* ಹಣ ವರ್ಗಾವಣೆಗಾಗಿ ಮೊತ್ತ ಮತ್ತು ರಿಮಾರ್ಕ್ ಕಾಲಂ ಭರ್ತಿ ಮಾಡಿ (PAY)ಪೇ ಮೇಲೆ ಕ್ಲಿಕ್ ಮಾಡಿ
* ಯುಪಿಐ ಪಿನ್ ಎಂಟ್ರಿ ಪುಟದಲ್ಲಿ ವ್ಯವಹಾರದ ವಿವರಗಳನ್ನು ಪರಿಶೀಲಿಸಿ
* ವ್ಯವಹಾರ ಯಶಸ್ವಿಯಾದ ನಂತರ ಸೂಚನೆ/ಸಂದೇಶ ಪಡೆಯುವಿರಿ

2. ಖಾತೆ ಸಂಖ್ಯೆ ಮತ್ತು IFSC ಮೂಲಕ

2. ಖಾತೆ ಸಂಖ್ಯೆ ಮತ್ತು IFSC ಮೂಲಕ

* ಭೀಮ್ ಆಪ್ ತೆರೆದ ನಂತರ ಸೆಂಡ್ ಮನಿ ಆಪ್ಷನ್ ಆಯ್ಕೆ ಮಾಡಿ ವಿನಂತಿ ಕಳುಹಿಸಿ.
* ಖಾತೆ ಸಂಖ್ಯೆ ಮತ್ತು IFSC ಮೂಲಕ ಹಣ ರವಾನೆಗಾಗಿ ಬಲಗಡೆ ಮೂಲೆಯಲ್ಲಿರುವ ಆಪ್ಷನ್ ಆಯ್ಕೆ ಮಾಡಿ
* ಖಾತೆ ಸಂಖ್ಯೆ ಮತ್ತು IFSC ಕೋಡ್ ನಮೂದಿಸಿದ ನಂತರ ಸ್ವೀಕರಿಸುವವರ ಹೆಸರನ್ನು ಪರಿಶೀಲಿಸಿ
* ಹಣ ವರ್ಗಾವಣೆಗಾಗಿ ಮೊತ್ತ ಮತ್ತು ರಿಮಾರ್ಕ್ ಕಾಲಂ ಭರ್ತಿ ಮಾಡಿ (PAY)ಪೇ ಮೇಲೆ ಕ್ಲಿಕ್ ಮಾಡಿ
* ಯುಪಿಐ ಪಿನ್ ಎಂಟ್ರಿ ಪುಟದಲ್ಲಿ ವ್ಯವಹಾರದ ವಿವರಗಳನ್ನು ಪರಿಶೀಲಿಸಿ
* ವ್ಯವಹಾರ ಯಶಸ್ವಿಯಾದ ಬಳಿಕ ಸೂಚನೆ/ಸಂದೇಶ ಪಡೆಯುವಿರಿ

3. ವರ್ಚುವಲ್ ಪೇಮೆಂಟ್ ಅಡ್ರೆಸ್(VPA)

3. ವರ್ಚುವಲ್ ಪೇಮೆಂಟ್ ಅಡ್ರೆಸ್(VPA)

* ಸ್ಮಾರ್ಟ್ಫೋನ್ ನಲ್ಲಿ ಭೀಮ್ ಆಪ್ ತೆರೆದು ಲಾಗಿನ್ ಆಗಿರಿ
* ಸೆಂಡ್ ಮನಿ ಆಪ್ಷನ್ ಆಯ್ಕೆ ಮಾಡಿ ವಿನಂತಿ ಕಳುಹಿಸಿ.
* ವರ್ಚುವಲ್ ಪೇಮೆಂಟ್ ಅಡ್ರೆಸ್(VPA) ನಮೂದಿಸಿ ಸ್ವೀಕರಿಸುವವರ ಹೆಸರನ್ನು ಪರಿಶೀಲಿಸಿ ಕ್ಲಿಕ್ ಮಾಡಿ
* ಹಣ ವರ್ಗಾವಣೆಗಾಗಿ ಮೊತ್ತ ಮತ್ತು ರಿಮಾರ್ಕ್ ಕಾಲಂ ಭರ್ತಿ ಮಾಡಿ (PAY)ಪೇ ಮೇಲೆ ಕ್ಲಿಕ್ ಮಾಡಿ
* ಯುಪಿಐ ಪಿನ್ ಎಂಟ್ರಿ ಪುಟದಲ್ಲಿ ವ್ಯವಹಾರದ ವಿವರಗಳನ್ನು ಪರಿಶೀಲಿಸಿ
* VPA ವಿಳಾಸ ಸರಿಯಾಗಿರಬೇಕು. ಯಾವಾಗ ಬೇಕಾದರೂ ಇದನ್ನು ಆಯ್ಕೆ ಮತ್ತು ಬದಲಾವಣೆ ಮಾಡಬಹುದು.
* ಯುಪಿಐ ಪಿನ್ ಎಂಟ್ರಿ ಪುಟದಲ್ಲಿ ವ್ಯವಹಾರದ ವಿವರಗಳನ್ನು ಪರಿಶೀಲಿಸಿ
* ವ್ಯವಹಾರ ಯಶಸ್ವಿಯಾದ ನಂತರ ಸೂಚನೆ/ಸಂದೇಶ ಪಡೆಯುವಿರಿ

English summary

How to transfer Money through BHIM App?

BHIM app would also work on feature phone without the internet. You can also check bank balance of the account. Now the BHIM app is available in nine different languages. You can choose your language for transactions.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X