For Quick Alerts
ALLOW NOTIFICATIONS  
For Daily Alerts

ವಿಲ್ ಪತ್ರ ಬರೆಯುವ ಮುನ್ನ ಇಲ್ಲೊಮ್ಮೆ ನೋಡಿ...

ವಿಲ್ ಪತ್ರ ಬರೆಸುವುದು ಅಷ್ಟು ಸುಲಭದ ಕೆಲಸವಲ್ಲ. ಅದರಲ್ಲಿ ಏನು ಸೇರಿಸಬೇಕು ಮತ್ತು ಏನು ಸೇರಿಸಬಾರದು ಎಂದು ನಿರ್ಧರಿಸುವುದು ಕಷ್ಟಸಾಧ್ಯ. ವಿಲ್ ಮಾಡಿಸುವಾಗ ಅದರ ನೋಂದಾವಣಿ ಮಾಡಿಸುವುದು ಬಹಳ ಮುಖ್ಯವಾದ ಸಂಗತಿ.

By Siddu
|

ವಿಲ್ ಪತ್ರ ಬರೆಸುವುದು ಅಷ್ಟು ಸುಲಭದ ಕೆಲಸವಲ್ಲ. ಅದರಲ್ಲಿ ಏನು ಸೇರಿಸಬೇಕು ಮತ್ತು ಏನು ಸೇರಿಸಬಾರದು ಎಂದು ನಿರ್ಧರಿಸುವುದು ಕಷ್ಟಸಾಧ್ಯ.

ವಿಲ್ ಮಾಡಿಸುವಾಗ ಅದರ ನೋಂದಾವಣಿ ಮಾಡಿಸುವುದು ಬಹಳ ಮುಖ್ಯವಾದ ಸಂಗತಿ. ನಿಮ್ಮ ಪ್ರೀತಿ ಪಾತ್ರರಿಗೆ ನಿಮ್ಮ ಆಸ್ತಿ ಯಾವುದೆ ಗೊಂದಲವಿಲ್ಲದೆ ಸೇರುವಂತವಾಗಲು ವಿಲ್ ಅತ್ಯಗತ್ಯ.

ನಮ್ಮಲ್ಲಿ ವಿಲ್ ಬಗ್ಗೆ ಇನ್ನೂ ಅನೇಕ ಜನರಿಗೆ ತಿಳಿದಿಲ್ಲ. ವಿಲ್ ನೋಂದಣಿ ಮಾಡಿಸದಿದ್ದರೆ ಅದಕ್ಕೆ ಯಾವುದೇ ಕಾನೂನು ಮಾನ್ಯತೆ ಇರುವುದಿಲ್ಲ. ವಿಲ್ ಮಾಡಿಸುವ ಮುನ್ನ ನಿಮ್ಮ ಎಲ್ಲ ಆಸ್ತಿಯ ಲೆಕ್ಕವನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ ನೋಂದಣಿ ಮಾಡಿಸಬೇಕಾಗುತ್ತದೆ.

ವಿಲ್ ಪತ್ರ ಬರೆಸುವ ಮುನ್ನ ನೀವು ಸೇರಿಸಲೇಬೇಕಾದ 7 ಪ್ರಮುಖ ಸಂಗತಿಗಳ ವಿವರ ಇಲ್ಲಿದೆ ನೋಡಿ...

ಹಂತ 1

ಹಂತ 1

ಹೆಸರು, ವಿಳಾಸ ಮತ್ತು ವಿಲ್ ಮೇಲೆ ಸಹಿ ಮಾಡಿರುವ ದಿನಾಂಕ ಸೇರಿದಂತೆ ಕೆಲ ಮೂಲಭೂತ ಅಂಶಗಳನ್ನು ತಪ್ಪದೆ ಸೇರಿಸಬೇಕು. ಇದು ನಿಮ್ಮ ಕೊನೆಯ ವಿಲ್ ಎಂದು ತಿಳಿದುಕೊಳ್ಳಬೇಕು. ಅಲ್ಲದೇ ಇದು ನಿಮ್ಮ ಹಿಂದಿನ ವಿಲ್ ಗಳ ಬದಲಿಗೆ ಬಳಸಲ್ಪಡುತ್ತದೆ. ಹೀಗಾಗಿ ವಿಲ್ ಮೇಲೆ ಸಹಿ ಮಾಡಿರುವ ದಿನಾಂಕವನ್ನು ಇನ್ನೊಮ್ಮೆ ಖಚಿತಪಡಿಸಿಕೊಳ್ಳುವುದು ಉತ್ತಮ.

ಹಂತ 2

ಹಂತ 2

ನಿಮ್ಮ ವಿಲ್ ನಲ್ಲಿರುವ ಸೂಚನೆ ಮತ್ತು ನಿರ್ಬಂಧನೆಗಳನ್ನು ಯಾರು ನೋಡಬಹುದು ಅಥವಾ ನಿರ್ವಹಿಸಬಹುದಾಗಿರುವ ವ್ಯಕ್ತಿಯನ್ನು ಹೆಸರಿಸಿ. ಏಕೆಂದರೆ ಆ ವ್ಯಕ್ತಿಯ ನಿಮ್ಮ ಕೊನೆ ಇಚ್ಛೆಯನ್ನು ಈಡೇರಿಸಿ ಕಾರ್ಯರೂಪಕ್ಕೆ ತರುವವರು. ಆ ವ್ಯಕ್ತಿ ಯಾವಾಗಲೂ ವಿಶ್ವಾಸಾರ್ಹ ಆಗಿರಬೇಕಾಗಿದ್ದು, ತನ್ನ ಕರ್ತವ್ಯವನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರಬೇಕು.

ಹಂತ 3

ಹಂತ 3

ಭೋಗ್ಯಪತ್ರ ಹಕ್ಕು ಮತ್ತು ಆಸ್ತಿ ಯಾರಿಗೆ ಸೇರಬೇಕು ಎಂಬುದನ್ನು ಸ್ಪಷ್ಟವಾಗಿ ಹೇಳಿರಬೇಕು. ಅಥವಾ ಕೊಡುಗೆ ಎಂಬ ಹೆಸರಿನಲ್ಲೂ ನೀಡಿಕೆ ಮಾಡಬಹುದು. ನಿಮ್ಮ ಪೂರ್ವಜರಿಗೆ ಸೇರಿದ ಆಸ್ತಿಯನ್ನು ಕಾನೂನು ಬದ್ಧವಾಗಿ ವ್ಯಕ್ತಿಯೊಬ್ಬರಿಗೆ ನಾಮಕರಣ ಮಾಡಿ ನೀಡಬಹುದು.

ಹಂತ 4

ಹಂತ 4

ನೀವು ಷೇರುಗಳನ್ನು ಹೊಂದಿದ್ದರೆ ಅಥವಾ ಕಂಪನಿಯೊಂದರಲ್ಲಿ ಪಾಲುದಾರಿಕೆ ಹೊಂದಿದ್ದರೆ ಅಥವಾ ಕಂಪನಿಯ ಮಾಲೀಕರಾಗಿದ್ದರೆ ಸಹ ವಿಲ್ ಮಾಡಿಸಬಹುದು. ಪಾಲುದಾರಿಕೆಹೊಂದಿದ್ದರೆ ಕೆಲ ನಿಬಂಧನೆಗಳನ್ನು ಅನುಸರಿಸಬೇಕಾಗುತ್ತದೆ.

ಹಂತ 5

ಹಂತ 5

ಹಿಂದು ಅವಿಭಕ್ತ ಕುಟುಂಬಕ್ಕೆ ಸಂಬಂಧಿಸಿದ ಷೇರುಗಳಿದ್ದಲ್ಲಿ ವಿಲ್ ನಲ್ಲಿಯೇ ತಿಳಿಸಬೇಕಾಗುತ್ತದೆ. ಆಸ್ತಿ ಸಾಮಾಜಿಕವಾಗಿದ್ದಾಗಿರಲಿ, ವೈಯಕ್ತಿಕವಾಗಿದ್ದಾಗಿರಲಿ, ಸಾಲವಾಗಿರಲಿ-ಸಂಪತ್ತಾಗಿರಲಿ ಎಲ್ಲವನ್ನು ವಿಲ್ ನಲ್ಲಿ ಸ್ಪಷ್ಟವಾಗಿ ಬರೆಸಬೇಕಾಗುತ್ತದೆ.

ಹಂತ 6

ಹಂತ 6

ಸ್ಥಳೀಯ ಕಾನೂನಿಗೆ ಅನ್ವಯವಾಗಿ ವಿದೇಶದಲ್ಲಿ ಹೊಂದಿರುವ ಆಸ್ತಿಯನ್ನು ವಿಲ್ ನಲ್ಲಿ ಇಂಥವರಿಗೆ ನೀಡುತ್ತೇನೆ ಎಂದು ಬರೆಸಬಹುದು.

ಹಂತ 7

ಹಂತ 7

ಸಾಕು ಪ್ರಾಣಿ, ತೈಲ ವರ್ಣ ಚಿತ್ರಗಳು, ಇಲೆಕ್ಟ್ರಾನಿಕ್ ವಸ್ತುಗಳು, ಬೌಧ್ಧಿಕ ಆಸ್ತಿ, ಪುಸ್ತಕ, ಸಾಮಾಜಿಕ ಜಾಲತಾಣದ ಖಾತೆ, ವೈಯಕ್ತಿಕ ಸಾಮಗ್ರಿಗಳನ್ನು ಇಂಥವರಿಗೆ ನೀಡಬೇಕು ಎಂದು ವಿಲ್ ನಲ್ಲಿ ಬರೆಸಬೇಕು.

ಕೊನೆ ಮಾತು

ಕೊನೆ ಮಾತು

ಸರಳವಾಗಿ ಹೇಳಬೇಕೆಂದರೆ ವಿಲ್ ನಲ್ಲಿ ಸ್ಥಿರಾಸ್ತಿ ಮತ್ತು ಚರಾಸ್ತಿ ಎಲ್ಲವನ್ನು ಚಾಚೂ ತಪ್ಪದೇ ಸೇರಿಸಿರಬೇಕು. ಅದು ವಾಹನ, ಆಭರಣ, ನಗದು, ವಿಮಾ ಪಾಲಿಸಿ ಆಗಿರಬಹುದು. ಅಲ್ಲದೇ ಜಮೀನು, ನಿವೇಶನ, ಕಟ್ಟಡ, ಅಂಗಡಿ ಕೂಡ ಆಗಿರಬಹದು. ಹೀಗೆ ಎಲ್ಲವನ್ನೂ ಚಾಚೂ ತಪ್ಪದೆ ನಮೂದಿಸಿ ಇದರ ಜವಾಬ್ಧಾರಿ ನಿರ್ವಹಣೆಗೆ ನಂಬಿಕಸ್ತ ವ್ಯಕ್ತಿಯ ಹೆಸರಿಸಬೇಕು.

English summary

How to Write a Will: The 7 Things It Should Include

Writing a will can seem overwhelming for most people. It is hard to know what should be included and what should not. When you write a will, you also have the added stress of thinking about how your family and loved ones will survive without you in their lives.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X